»   » 'ಕುರುಕ್ಷೇತ್ರ' ಚಿತ್ರದಲ್ಲಿ ಟಾಪ್-5 ನಟರು: ಸುದೀಪ್ ಕಡೆಯಿಂದ ಡೌಟ್ ಕ್ಲಿಯರ್!

'ಕುರುಕ್ಷೇತ್ರ' ಚಿತ್ರದಲ್ಲಿ ಟಾಪ್-5 ನಟರು: ಸುದೀಪ್ ಕಡೆಯಿಂದ ಡೌಟ್ ಕ್ಲಿಯರ್!

Posted by:
Subscribe to Filmibeat Kannada

ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್........ಇಷ್ಟು ಹೀರೋಗಳು ಒಂದೇ ಚಿತ್ರದಲ್ಲಿ ಅಭಿನಯಿಸಿದ್ರೆ ಹೇಗಿರುತ್ತೆ ಅಲ್ವಾ?

ಇಂತಾಹದೊಂದು ಸುದ್ದಿ ಕನ್ನಡ ಚಿತ್ರರಂಗದಲ್ಲಿ ಕೆಲವು ವರ್ಷಗಳಿಂದ ಹರಿದಾಡುತ್ತಿದೆ. ಆದ್ರೀಗ, ಈ ಚಿತ್ರದ ಬಗ್ಗೆ ಕಿಚ್ಚ ಸುದೀಪ್ ಮೊದಲ ಬಾರಿಗೆ ಮಾತನಾಡಿದ್ದಾರೆ. ಇಂತಹ ಚಿತ್ರವೊಂದು ಬರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸುದೀಪ್, ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಮುಂದೆ ಓದಿ......

ಮಹಾಭಾರತದ ಕಥೆಯಾಧರಿತ ಚಿತ್ರ

ಮಹಾಭಾರತದ ಕಥೆಯಾಧರಿತ ಚಿತ್ರ

ಮೂಲಗಳ ಪ್ರಕಾರ, ಒಂದೇ ಚಿತ್ರದಲ್ಲಿ ಕನ್ನಡದ ಟಾಪ್-5 ನಟರುಗಳಾದ ಸುದೀಪ್, ದರ್ಶನ್, ಉಪೇಂದ್ರ, ಪುನೀತ್ ರಾಜ್ ಕುಮಾರ್, ಯಶ್ ಒಟ್ಟಿಗೆ ಅಭಿನಯಿಸಲಿದ್ದಾರೆ. ಇದು ಮಹಾಭಾರತದ ಕಥೆಯನ್ನ ಹೊಂದಿದ್ದು, ಪಾಂಡವರ ಸುತ್ತಾ ಕಥೆ ಸಿದ್ದ ಮಾಡಲಾಗುತ್ತಿದೆಯಂತೆ.

ದೊಡ್ಡ ಸಾಹಸಕ್ಕೆ ಕೈ ಹಾಕಿರುವ ಮುನಿರತ್ನ

ದೊಡ್ಡ ಸಾಹಸಕ್ಕೆ ಕೈ ಹಾಕಿರುವ ಮುನಿರತ್ನ

ಇಂತಹದೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿರುವುದು ಕನ್ನಡದ ಖ್ಯಾತ ನಿರ್ಮಾಪಕ ಮುನಿರತ್ನ. 'ಕಠಾರಿವೀರ ಸುರಸುಂದರಾಂಗಿ', 'ರಕ್ತ ಕಣ್ಣೀರು' ಅಂತಹ ಅದ್ಧೂರಿ ವೆಚ್ಚದ ಚಿತ್ರಗಳನ್ನ ನಿರ್ಮಾಣ ಮಾಡಿರುವ ನಿರ್ಮಾಪಕ ಮುನಿರತ್ನ, ಹಲವು ದೊಡ್ಡ ಬಜೆಟ್ ಸಿನಿಮಾಗಳನ್ನ ವಿತರಣೆ ಕೂಡ ಮಾಡಿದ್ದಾರೆ. ಹೀಗಾಗಿ, ಕನ್ನಡದ ಟಾಪ್ ನಟರನ್ನ ಸೇರಿಸಿ 'ಕುರುಕ್ಷೇತ್ರ' ನಿರ್ಮಾಣ ಮಾಡಲು ಮುಂದಾಗಿದ್ದಾರೆ.

'ಕುರುಕ್ಷೇತ್ರ'ದಲ್ಲಿಲ್ಲ ಸುದೀಪ್!

'ಕುರುಕ್ಷೇತ್ರ'ದಲ್ಲಿಲ್ಲ ಸುದೀಪ್!

ಈ ಸುದ್ದಿಯನ್ನ ಗಮನಿಸಿದ ಕಿಚ್ಚ ಸುದೀಪ್, ಇಂತಹದೊಂದು ಚಿತ್ರ ಬಂದ್ರೆ ಖುಷಿಯಾಗುತ್ತೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅದ್ರೆ, ಇದು ಸದ್ಯದ ಮಟ್ಟಿಗೆ ಸುಳ್ಳು ಸುದ್ದಿ ಎಂದು ಟ್ವೀಟ್ ಮಾಡುವ ಮೂಲಕ 'ಕುರುಕ್ಷೇತ್ರ' ಚಿತ್ರದಲ್ಲಿ ನಾನಿಲ್ಲ ಎಂದು ಸ್ವಷ್ಟಪಡಿಸಿದ್ದಾರೆ.

ಕಿಚ್ಚನ ಕಡೆಯಿಂದ ಡೌಟ್ ಕ್ಲಿಯರ್!

ಕಿಚ್ಚನ ಕಡೆಯಿಂದ ಡೌಟ್ ಕ್ಲಿಯರ್!

''ಇದು ನೋಡುವುದಕ್ಕೆ ಚೆನ್ನಾಗಿದೆ. ಇದೊಂದತರ ಮ್ಯಾಜಿಕ್ ಕಾಂಬಿನೇಷನ್. ಆದ್ರೆ, ಸದ್ಯಕ್ಕೆ ಈ ಸುದ್ದಿ ಸುಳ್ಳು. ನಾನು ಶಿವರಾಜ್ ಕುಮಾರ್ ಅವರ ಜೊತೆ 'ದಿ ವಿಲನ್' ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ'' ಎಂದು ಟ್ವೀಟ್ ಮಾಡಿದ್ದಾರೆ.

ಐದು ಜನರನ್ನ ಕರೆತರುವ ವಿಶ್ವಾಸ!

ಐದು ಜನರನ್ನ ಕರೆತರುವ ವಿಶ್ವಾಸ!

ಈ ಪ್ರಾಜೆಕ್ಟ್ ಗಾಗಿ ನಿರ್ಮಾಪಕರು ಈ ಐದು ನಟರ ಜೊತೆ ಮಾತನಾಡಿದ್ದರೋ ಇಲ್ವೋ ಗೊತ್ತಿಲ್ಲ. ಆದ್ರೆ, ಪೂರ್ತಿ ವಿಶ್ವಾಸದಲ್ಲಿರುವ ನಿರ್ಮಾಪಕರು, ಖಂಡಿತಾ ಟಾಪ್ ನಟರ ಜೊತೆಯಲ್ಲಿಯೇ ಈ ಸಿನಿಮಾ ಮಾಡಲಿದ್ದಾರೆ ಎನ್ನುತ್ತಿವೆ ಮೂಲಗಳು.

ಪ್ರಿ-ಪ್ರೊಡಕ್ಷನ್ ನಲ್ಲಿ 'ಕುರುಕ್ಷೇತ್ರ'!

ಪ್ರಿ-ಪ್ರೊಡಕ್ಷನ್ ನಲ್ಲಿ 'ಕುರುಕ್ಷೇತ್ರ'!

ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಮಾಹಿತಿಯ ಪ್ರಕಾರ, 'ಕುರುಕ್ಷೇತ್ರ' ಚಿತ್ರಕ್ಕೆ ಸಂಬಂಧಪಟ್ಟಂತೆ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆಯಂತೆ. ಆದ್ರೆ, ಈ ಚಿತ್ರವನ್ನ ಯಾರು ನಿರ್ದೇಶನ ಮಾಡಲಿದ್ದಾರೆ? ಯಾವ ಕಲಾವಿದರು ಅಭಿನಯಿಸಲಿದ್ದಾರೆ ಎಂಬುದನ್ನ ಇದುವರೆಗೂ ಎಲ್ಲೂ ಬಹಿರಂಗವಾಗಿಲ್ಲ.

ಈ ಚಿತ್ರಕ್ಕಾಗಿ ಕಾದಿದೆ ಚಿತ್ರಜಗತ್ತು!

ಈ ಚಿತ್ರಕ್ಕಾಗಿ ಕಾದಿದೆ ಚಿತ್ರಜಗತ್ತು!

ಈ ಸುದ್ದಿಯನ್ನ ಕೇಳಿದ ಅಭಿಮಾನಿಗಳಂತೂ ಈ ಸಿನಿಮಾ ಆದಷ್ಟೂ ಬೇಗ ಬರಲಿ. ಈ ಚಿತ್ರದ ಮೂಲಕ ಎಲ್ಲ ನಟರನ್ನ ಒಂದೇ ಚಿತ್ರದಲ್ಲಿ ನೋಡಬಹುದು ಎಂಬ ಆಸೆಯಿಂದ ಕಾಯುತ್ತಿದ್ದಾರೆ. ಸ್ಯಾಂಡಲ್ ವುಡ್ ಬೆಳ್ಳಿತೆರೆಯಲ್ಲಿ ಆದಷ್ಟೂ ಬೇಗ 'ಕುರುಕ್ಷೇತ್ರ' ಬರುತ್ತಾ ಅಂತ ಕಾದುನೋಡಬೇಕಿದೆ.

English summary
Kannada Actor Kiccha Sudeep Gives Clarity About Upcoming Movie 'Kurukshetra'. According to source Producer Munirathna will Planning to Do A Movie With Sudeep, Darshan, Yash, Puneeth Rajkumar, Upendra in all One Movie.
Please Wait while comments are loading...

Kannada Photos

Go to : More Photos