twitter
    For Quick Alerts
    ALLOW NOTIFICATIONS  
    For Daily Alerts

    ಅಮರಜೀವಿ ರಾಜ್ ಹಬ್ಬದಲ್ಲಿ ಕಿಚ್ಚ, ದಚ್ಚು ಮಾಡಿದ್ದೇನು?

    By ಹರಾ
    |

    ಒಬ್ರು ಹೆಸ್ರಲ್ಲೇ ಕಿಚ್ಚನ್ನ ಇಟ್ಕೊಂಡು ಗಾಂಧಿನಗರದಲ್ಲಿ ಕಿಚ್ಚನ್ನ ಹಚ್ಚಿಸ್ತಾಯಿರುವವರು, ಇನ್ನೊಬ್ಬರು ಸೆಂಚುರಿ ಬಾರಿಸಿ ಇಡೀ ಸ್ಯಾಂಡಲ್ ವುಡ್ ಗೆ ಕಿಂಗ್ ಆಗಿರುವವರು. ಇಬ್ರೂ ಒಂದ್ಕಾಲದಲ್ಲಿ ಪರಮಾಪ್ತರು. ಆದ್ರೆ ಮಧ್ಯದಲ್ಲಾದ ಸಣ್ಣ ಕಿರಿಕ್ ನಿಂದ ಇಲ್ಲಿವರೆಗೂ ಈ ಗಾಂಧಿನಗರದಲ್ಲಿ ಇಬ್ಬರನ್ನು ಒಂದು ಮಾಡೋಕೆ ಆಗುತ್ತಿಲ್ಲ.

    ನೀವು ಊಹಿಸಿದಂತೆ ನಾವು ಮಾತನಾಡುತ್ತಿರುವುದು ಕಿಚ್ಚ ಸುದೀಪ್ ಮತ್ತು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ದುಶ್ಮನಿ ಬಗ್ಗೆ. ಇಬ್ಬರ ನಡುವೆ ಇರುವ ವೈಮನಸ್ಸು ಎಂತದ್ದು ಅನ್ನುವುದು ಇಡೀ ಸ್ಯಾಂಡಲ್ ವುಡ್ ಗೆ ಗೊತ್ತಿದೆ. ಅದಕ್ಕೆ ಹಲವಾರು ಬಾರಿ ಪುರಾವೆಗಳೂ ಸಿಕ್ಕಿವೆ. [ಶಿವಣ್ಣ, ಕಿಚ್ಚ ನಡುವೆ ತಂದಿಟ್ಟ ವಿಘ್ನ ಸಂತೋಷಿಗಳಾರು?]

    ಅದೆಲ್ಲದಕ್ಕೂ ಬ್ರೇಕ್ ಹಾಕಿ, ಒಗ್ಗಟ್ಟಾಗಿ ಮುಂದಕ್ಕೆ ಹೋಗ್ಬೇಕು ಅನ್ನುವ ಜಾಯಮಾನ 'ದೊಡ್ಮನೆ' ಕುಟುಂಬಕ್ಕಿದೆ. ಆದ್ರೆ ಅದನ್ನ ಮಾಡುವುದಕ್ಕೆ 'ಕಿಚ್ಚು' ತುಂಬಿಕೊಂಡಿರುವ ಮನಸ್ಸು ರೆಡಿಯಿದ್ದ ಹಾಗೆ ಕಾಣುತ್ತಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಮೊನ್ನೆಯಷ್ಟೇ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆದ 'ಅಮರಜೀವಿ ಡಾ.ರಾಜ್ ಹಬ್ಬ'ದಲ್ಲಾದ ಘಟನೆ. [ಅಣ್ಣಾವ್ರ ನೆನಪಲ್ಲಿ ಮನರಂಜನಾ ಮಹಾಪೂರ]

    ಇಡೀ ಕನ್ನಡ ಚಿತ್ರರಂಗವೇ ಒಂದಾಗಿ ನಟಸಾರ್ವಭೌಮ ಡಾ.ರಾಜಣ್ಣನ ಸ್ಮರಣಾರ್ಥ ಅದ್ದೂರಿ ಮನರಂಜನಾ ಕಾರ್ಯಕ್ರಮ ನೀಡಿತು. ರೆಬೆಲ್ ಸ್ಟಾರ್ ಅಂಬರೀಶ್, ಸುಮಲತಾ, ಹಿರಿಯ ನಟಿ ಲೀಲಾವತಿ, ಕ್ರೇಜಿ ಸ್ಟಾರ್ ರವಿಚಂದ್ರನ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ನೃತ್ಯ ಪ್ರದರ್ಶನ ನೀಡಿದರು. [ಡಾ.ರಾಜ್ ಸ್ಮಾರಕ ಸಂಭ್ರಮಕ್ಕೆ ಕಿಚ್ಚ-ದರ್ಶನ್ ಡಾನ್ಸ್ ]

    ಇದರಲ್ಲಿ ಸುದೀಪ್-ದರ್ಶನ್ ಕೂಡ ಒಂದು ಹಾಡಿಗೆ ಪ್ರದರ್ಶನ ಮಾಡ್ಬೇಕಾಗಿತ್ತು. ಆದ್ರೆ ಅವರಿಬ್ಬರು ಮಾಡಿದ್ದೇ ಬೇರೆ. ಇಬ್ಬರು ಮಾಡಿದ ಘನಕಾರ್ಯಕ್ಕೆ, ಅಲ್ಲಿ ನರೆದಿದ್ದ ಸಾವಿರಾರು ಮಂದಿ ಧಿಕ್ಕಾರ ಕೂಗಿದರು. ಅಸಲಿಗೆ ಈ ಕುಚ್ಚಿಕ್ಕೂ ಗೆಳೆಯರು ಮಾಡಿದ ಅವಾಂತರ ಏನು, ಈ ಸ್ಲೈಡ್ ಗಳಲ್ಲಿ ಓದಿ.

     ವೇದಿಕೆ ಮೇಲೆ ಕುಚ್ಚಿಕ್ಕು ಗೆಳೆಯರ ದೌಲತ್ತು?

    ವೇದಿಕೆ ಮೇಲೆ ಕುಚ್ಚಿಕ್ಕು ಗೆಳೆಯರ ದೌಲತ್ತು?

    ಕನ್ನಡ ಚಿತ್ರರಂಗಕ್ಕೆ 'ಹಿರಿಯಣ್ಣ' ಅಂತ ಗೌರವದಿಂದ ಎಲ್ಲರೂ ತಲೆಬಾಗುತ್ತಿದ್ದದ್ದು ಡಾ.ರಾಜ್ ಕುಮಾರ್ ಒಬ್ಬರಿಗೆ ಮಾತ್ರ. ಅಂತಹ ಸರಳ, ಸಜ್ಜನ ವ್ಯಕ್ತಿಯ ಸ್ಮರಣಾರ್ಥ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮತ್ತು ದರ್ಶನ್ ರವರ ದೌಲತ್ತಿನ ಪ್ರದರ್ಶನ ನಡೆಯಿತು. 60 ವರ್ಷ ದಾಟಿರುವ ಹಿರಿಯ ನಟ-ನಟಿಯರೇ ಅನಾರೋಗ್ಯದಿಂದ ಬಳಲುತ್ತಿದ್ದರೂ, ಅಣ್ಣಾವ್ರಿಗೆ ಗೌರವ ಸಲ್ಲಿಸುವ ಸಲುವಾಗಿ ಹೆಜ್ಜೆ ಹಾಕಿದರು. ಆದ್ರೆ ಇನ್ನೂ ಗಟ್ಟಿಮುಟ್ಟಾಗಿರುವ ಕಿಚ್ಚ ಸುದೀಪ್ ಮತ್ತು ದರ್ಶನ್ ಮಾತ್ರ ಯಾರಿಗೂ, ಯಾವುದಕ್ಕೂ ಲೆಕ್ಕಿಸದೇ ಬರೀ ಕೈ ಬೀಸಿ, ಹಾಗೇ ಹೊರಟು ಹೋದರು.

    ನಟಸಾರ್ವಭೌಮನಿಗೆ ಅಪಮಾನ?

    ನಟಸಾರ್ವಭೌಮನಿಗೆ ಅಪಮಾನ?

    ಡಾ.ರಾಜ್ ಸ್ಮಾರಕ ಅನಾವರಣವಾದ ಖುಷಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಇದಾಗಿದ್ದರಿಂದ ಅಣ್ಣಾವ್ರು ಅಭಿನಯದ ಹಾಡುಗಳಿಗೆ ಮಾತ್ರ ನೃತ್ಯ ಪ್ರದರ್ಶನ ನೀಡಬೇಕಾಗಿತ್ತು. ಹಾಗೆ ಕಿಚ್ಚ ಸುದೀಪ್ ಮತ್ತು ದರ್ಶನ್ ಗೆ ರಾಜಣ್ಣನ 'ಅಪೂರ್ವ ಸಂಗಮ' ಚಿತ್ರದ 'ಭಾಗ್ಯ ಎನ್ನಲೇ..' ಹಾಡನ್ನ ನೀಡಲಾಗಿತ್ತು. ಆದ್ರೆ ಆ ಹಾಡಿಗೆ ಒಂದು ಹೆಜ್ಜೆ ಕೂಡ ಹಾಕದೇ ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಹೀಗೆ ಬಂದು ಹಾಗೇ ವೇದಿಕೆಯಿಂದ ಕಣ್ಮರೆಯಾಗಿ ಬಿಟ್ಟರು ಸುದೀಪ್ ಮತ್ತು ದರ್ಶನ್.

    ಡ್ಯಾನ್ಸ್ ಮಾಡುವುದಕ್ಕೆ ಆಲಸ್ಯ?

    ಡ್ಯಾನ್ಸ್ ಮಾಡುವುದಕ್ಕೆ ಆಲಸ್ಯ?

    ಹಿರಿಯ ನಟಿ ಲೀಲಾವತಿ, ನಟ ಅಂಬರೀಶ್, ಸುಮಲತಾ, ಚಂದ್ರಶೇಖರ್ ರಂತಹ ಹಿರಿಯ ಕಲಾವಿದರು ಹಿಂದೆಂದಿಗಿಂತಲೂ ಯಂಗ್ ಆಗಿ ಕುಣಿದು ಕುಪ್ಪಳಿಸಿದರು. ಆದ್ರೆ ಯ್ಯೂತ್ ಐಕಾನ್ ಆಗಿರುವ ಸುದೀಪ್ ಮತ್ತು ದರ್ಶನ್ ಗೆ ಅದೇನಾಗಿತ್ತೋ ದೇವರೇ ಬಲ್ಲ. ವೇದಿಕೆ ಮೇಲೆ ಡ್ಯಾನ್ಸರ್ ಗಳು ಕುಣಿಯುತ್ತಿದ್ದರೇ, ಅದಕ್ಕೆ ಕ್ಯಾರೆ ಅನ್ನದೇ ಜನರತ್ತ ಕೈಬೀಸಿ ನಿರ್ಗಮಿಸಿದರು. ನೃತ್ಯ ಮಾಡುವುದಕ್ಕೆ ಇಷ್ಟವಿಲ್ಲದಿದ್ದರೂ ಹಾಡು ಮುಗಿಯುವವರೆಗೆ ವೇದಿಕೆ ಮೇಲೆ ನಿಲ್ಲುವಷ್ಟು ಕನಿಷ್ಠ ತಾಳ್ಮೆ ಇಬ್ಬರಿಗೂ ಇರಲಿಲ್ಲ.

    ತಾಲೀಮು ನಡೆಸಿರಲಿಲ್ಲವೇ?

    ತಾಲೀಮು ನಡೆಸಿರಲಿಲ್ಲವೇ?

    ಮನರಂಜನಾ ಕಾರ್ಯಕ್ರಮಕ್ಕೂ ನಾಲ್ಕೈದು ದಿನಗಳ ಮುನ್ನ ಎಲ್ಲಾ ಕಲಾವಿದರು, ಉತ್ತಮ ಪ್ರದರ್ಶನ ನೀಡುವುದಕ್ಕೆ ತಾಲೀಮು ನಡೆಸುತ್ತಿದ್ದರು. ಆದ್ರೆ ರಿಹರ್ಸಲ್ಸ್ ಗೂ ಹಾಜರಾಗದೇ, ವೇದಿಕೆ ಮೇಲೂ ಹೆಜ್ಜೆ ಹಾಕದೇ ಸುದೀಪ್-ದರ್ಶನ್ ಅಸಡ್ಡೆ ತೋರಿರುವುದು ರಾಜಣ್ಣನಿಗೆ ಮಾಡಿರುವ ಅವಮಾನ ಅನ್ನುವುದು ಅಭಿಮಾನಿಗಳ ಭಾವನೆ.

    ಡ್ಯಾನ್ಸ್ ಬೇಡ, ಒಂದೆರಡು ಮಾತು ಬೇಡ್ವಾ?

    ಡ್ಯಾನ್ಸ್ ಬೇಡ, ಒಂದೆರಡು ಮಾತು ಬೇಡ್ವಾ?

    ಡ್ಯಾನ್ಸ್ ಕಲಿತು ಮಾಡುವಷ್ಟು ಪುರುಸೊತ್ತು ಇಬ್ಬರಿಗೆ ಇಲ್ಲವಾದರೂ, ಕಡೆ ಪಕ್ಷ ರಾಜಣ್ಣನ ಬಗ್ಗೆ ಒಂದೆರಡು ಮಾತುಗಳನ್ನಾದರೂ ಆಡಬಹುದಿತ್ತಲ್ಲಾ? ಆ ಕೆಲಸ ಮಾಡಿದ್ದರೆ ಜನರ ಮನಸ್ಸಲ್ಲಿ ಇಬ್ಬರಿಗೂ ಉತ್ತಮ ಸ್ಥಾನ ಸಿಗುತ್ತಿತ್ತು ಅನ್ನುವುದು ಸತ್ಯ.

    ಅಷ್ಟೊಂದು ಆತುರ ಯಾಕೆ?

    ಅಷ್ಟೊಂದು ಆತುರ ಯಾಕೆ?

    ಕಿಚ್ಚ ಸುದೀಪ್ ಕಾಲಿವುಡ್ ನಲ್ಲಿ ಬಿಜಿಯಾಗಿದ್ದಾರೆ. ದರ್ಶನ್ ಕೈತುಂಬಾ ಚಿತ್ರಗಳಿವೆ. ಹೀಗಾಗಿ ಇಬ್ಬರಿಗೂ ಟೈಮ್ ಇಲ್ಲ ಅಂತ ಸಮರ್ಥಿಸಿಕೊಳ್ಳುವವರಿಗೆ, ವಾಣಿಜ್ಯ ಮಂಡಳಿ ಎರಡು ದಿನ ರಜೆ ಘೋಷಿಸಿತ್ತು ಅನ್ನುವುದು ನೆನಪಿರಲಿ. ಮನರಂಜನಾ ಕಾರ್ಯಕ್ರಮಕ್ಕೆ ತಾಲೀಮು ನಡೆಸುವುದಕ್ಕೆ ಚಿತ್ರರಂಗದ ಎಲ್ಲಾ ಕಾರ್ಯಗಳನ್ನ ಸ್ಥಗಿತಗೊಳಿಸಲಾಗಿತ್ತು. ಹೀಗಿದ್ದರೂ, ಒಂದು ಹಾಡಿಗೆ ನೃತ್ಯ ಮಾಡುವುದಕ್ಕೆ ಇಬ್ಬರಿಗೂ ಕಷ್ಟಸಾಧ್ಯ.!

    ಅಪೂರ್ವ ಸಂಗಮದಲ್ಲಿ ಇದೆಂಥ ಬಿರುಕು?

    ಅಪೂರ್ವ ಸಂಗಮದಲ್ಲಿ ಇದೆಂಥ ಬಿರುಕು?

    ಇದೇ ಸಮಯದಲ್ಲಿ ನಡೆದಿರುವ ಮತ್ತೊಂದು ಘಟನೆ ಅನೇಕರ ಕಣ್ಣರಳಿಸಿದೆ. ಎಲ್ಲರಿಗೂ ಗೊತ್ತಿರುವಂತೆ ಸುದೀಪ್-ದರ್ಶನ್ ಗಳಸ್ಯ ಕಂಠಸ್ಯ. ಇದೇ ಕಾರಣಕ್ಕೆ ರಾಜ್-ಶಂಕರ್ ನಾಗ್ ಒಟ್ಟಾಗಿ ನಟಿಸಿರುವ ಹಾಡನ್ನ ಸುದೀಪ್-ದರ್ಶನ್ ಗೆ ನೀಡಲಾಗಿತ್ತು. ಆದ್ರೆ ವೇದಿಕೆ ಮೇಲೆ ಇಬ್ಬರು ಹೇಗೆ ಹೆಜ್ಜೆ ಹಾಕಲಿಲ್ಲವೋ, ಹಾಗೆ ಒಂದಾಗಿ ಕಾಣಿಸಿಕೊಳ್ಳಲೂ ಇಲ್ಲ. ಹಾಡು ಶುರುವಾಗ್ತಿದ್ದಂತೆ ಮೊದಲು ಕಿಚ್ಚ ಸುದೀಪ್ ಏಕಾಂಗಿಯಾಗಿ ವೇದಿಕೆ ಮೇಲೆ ಬಂದು, ಜಸ್ಟ್ ಕೈಬೀಸಿ ಹೊರಟು ಹೋದರು. ನಂತ್ರ ಹಾಡು ಮುಗಿಯುವ ಹೊತ್ತಿಗೆ ಬುಲ್ಲೆಟ್ ಪ್ರಕಾಶ್ ಜೊತೆಗೆ ದರ್ಶನ್ ಎಂಟ್ರಿಕೊಟ್ಟು ಹಾಗೇ ಎಕ್ಸಿಟ್ ಆಗ್ಬಿಟ್ಟರು.

    ದರ್ಶನ್-ಸುದೀಪ್ ಮಧ್ಯೆ ಏನಾಗಿದೆ?

    ದರ್ಶನ್-ಸುದೀಪ್ ಮಧ್ಯೆ ಏನಾಗಿದೆ?

    ಈಗಾಗಲೇ ಗಾಂಧಿನಗರದಲ್ಲಿ ಎದ್ದಿರುವ ಗುಲ್ಲಿನ ಪ್ರಕಾರ ದರ್ಶನ್ ಮತ್ತು ಸುದೀಪ್ ಮಧ್ಯೆ ಎಲ್ಲವೂ ಸರಿಯಿಲ್ಲ. ಮೊದಲಿನ ಹಾಗೆ ಅವರು ಕುಚ್ಚಿಕ್ಕೂ ಗೆಳೆಯರಲ್ಲ. ಆದ್ರೂ, ಟ್ವಿಟ್ಟರ್ ನಲ್ಲಿ ತಮ್ಮ ಸ್ನೇಹವನ್ನು ಸಮರ್ಥಿಸಿಕೊಂಡು 'ನಾವು ಚೆನ್ನಾಗಿದ್ದೀವಿ' ಅಂದಿದ್ದ ಈ ಗೆಳೆಯರು ಮೊನ್ನೆ ವೇದಿಕೆ ಮೇಲೆ ಬೇರೆಬೇರೆಯಾಗಿ ಬಂದು, ಬೇರೆಬೇರೆಯಾಗಿ ನಿರ್ಗಮಿಸಿದ್ದನ್ನ ನೋಡಿದ್ರೆ ಎಲ್ಲೋ ಎಡವಟ್ಟಾಗಿದೆ ಅನ್ನುವ ಅನುಮಾನ ಮೂಡುವುದು ಸಹಜ. [ಕುಚುಕು ಸ್ನೇಹಿತರ ನಡುವೆ ವಿರಸ: ಸುದೀಪ್ ಸ್ಪಷ್ಟನೆ]

    ಶಿವರಾಜ್ ಕುಮಾರ್ ಖುದ್ದಾಗಿ ಆಹ್ವಾನಿಸಿದ್ದರು

    ಶಿವರಾಜ್ ಕುಮಾರ್ ಖುದ್ದಾಗಿ ಆಹ್ವಾನಿಸಿದ್ದರು

    ಶಿವಣ್ಣ-ಸುದೀಪ್ ನಡುವೆ ದ್ವೇಷ ಇದೆಯೋ, ಇಲ್ಲವೋ. ಆದರೆ ಎಲ್ಲವನ್ನೂ ಪಕ್ಕಕ್ಕಿಟ್ಟು ದರ್ಶನ್ ಮತ್ತು ಸುದೀಪ್ ಗೆ ಶಿವಣ್ಣ ಖುದ್ದಾಗಿ ಆಹ್ವಾನ ನೀಡಿದ್ದರು. ಸಾಲದಕ್ಕೆ ಇಬ್ಬರೂ ಹಾಡಿಗೆ ನೃತ್ಯ ಮಾಡಬೇಕೆಂದು ಕೇಳಿಕೊಂಡಿದ್ದರಂತೆ. ಅದಕ್ಕೆ ಆಗ ಒಪ್ಪಿ, ಈಗ ವೇದಿಕೆ ಮೇಲೆ ಆಲಸ್ಯ ತೋರಿರುವುದು ಎಷ್ಟು ಸರಿ.

    ಧಿಕ್ಕಾರ ಕೂಗಿದ ಅಭಿಮಾನಿಗಳು

    ಧಿಕ್ಕಾರ ಕೂಗಿದ ಅಭಿಮಾನಿಗಳು

    ಸುದೀಪ್-ದರ್ಶನ್ ತೋರಿದ ಈ ವರ್ತನೆಗೆ, ಅರಮನೆ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಮಂದಿ ಧಿಕ್ಕಾರ ಕೂಗಿದ್ದಾರೆ. 'ಅಣ್ಣಾವ್ರಿಗೆ ಅಪಮಾನ ಮಾಡಿದ್ದಾರೆ' ಅಂತ ರೊಚ್ಚಿಗಿದ್ದ ಅಭಿಮಾನಿಗಳನ್ನ ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡಬೇಕಾಯ್ತು.

    ಇದು ಮೊದಲೇನಲ್ಲ.!

    ಇದು ಮೊದಲೇನಲ್ಲ.!

    ಸುದೀಪ್-ದರ್ಶನ್ ರವರ ಇಂತಹ ವರ್ತನೆ ಇದೇ ಮೊದಲೇನಲ್ಲ. ಡಬ್ಬಿಂಗ್ ವಿರುದ್ಧ ನಡೆದ ಚಳುವಳಿಯಲ್ಲಿ ದರ್ಶನ್ ಪ್ರತ್ಯಕ್ಷವಾಗಿದ್ದರು ಅನ್ನುವುದನ್ನು ಬಿಟ್ಟರೆ ಎಲ್ಲೂ ತುಟಿಕ್ ಪಿಟಿಕ್ ಅಂದಿರಲಿಲ್ಲ. ಆದ್ರೆ ಸುದೀಪ್ ಮಾತ್ರ 'ಕನ್ನಡಿಗರು' ಎಷ್ಟು ಮಂದಿ ಬಂದಿದ್ದಾರೆ ಅಂತ ವೇದಿಕೆ ಮೇಲೆ ನಿಂತು ಲೆಕ್ಕ ತೋರಿಸಿದರು. ಅದಕ್ಕೆ ಶಿವಣ್ಣನಿಂದ ಪ್ರತ್ತ್ಯುತ್ತರವೂ ಸಿಕ್ಕಿತು!

    ರಾಜ್ ಕಪ್ ನಲ್ಲಿ ಭಾಗವಹಿಸಲಿಲ್ಲ!

    ರಾಜ್ ಕಪ್ ನಲ್ಲಿ ಭಾಗವಹಿಸಲಿಲ್ಲ!

    'ಅಮರಜೀವಿಯ ಸವಿನೆನಪಿ'ನ ಕಾರ್ಯಕ್ರಮಕ್ಕೆ ಕಷ್ಟಪಟ್ಟು ಬಂದಂತಿರುವ ಸುದೀಪ್-ದರ್ಶನ್ ಈ ವರ್ಷದ ರಾಜ್ ಕಪ್ ನಲ್ಲೂ ಭಾಗವಹಿಸಿಲ್ಲ. ರಾಜ್ ಕಪ್ ನಲ್ಲಿ ಸುದೀಪ್ ಭಾಗವಹಿಸಲಿ ಅಂತ ವಾಣಿಜ್ಯ ಮಂಡಳಿಯಿಂದ ಅನೇಕ ನಿರ್ಮಾಪಕರು, ಸುದೀಪ್ ಬಳಿ ಮಾತುಕತೆ ನಡೆಸಿ, ಸಂಧಾನಕ್ಕೆ ಪ್ರಯತ್ನಿಸಿದರೂ ಸುದೀಪ್ ಮೈದಾನಕ್ಕೆ ಇಳಿಯಲಿಲ್ಲ.

    ರಾಜ್ ಸ್ಮಾರಕ ಮಾತ್ರ ಮಾಡಬೇಕಿತ್ತಾ?

    ರಾಜ್ ಸ್ಮಾರಕ ಮಾತ್ರ ಮಾಡಬೇಕಿತ್ತಾ?

    ರಾಜ್ ಸ್ಮಾರಕ ಅನಾವರಣ ಸಮಾರಂಭದ ಬಗ್ಗೆ ಗಾಂಧಿನಗರದಲ್ಲಿ ಸಂಭ್ರಮ ಗರಿಗೆದರುತ್ತಿದ್ದಂತೆ, ಸುದೀಪ್, ವಿಷ್ಣುವರ್ಧನ್ ಸ್ಮಾರಕದ ಬಗ್ಗೆ ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದರು. ಇದೀಗ ಅದೇ ಸ್ಮಾರಕ ಅನಾವರಣದ ಪ್ರಯುಕ್ತ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ತಮ್ಮ ವರ್ತನೆಯಿಂದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. [ವಿಷ್ಣು ಸ್ಮಾರಕದ ಬಗ್ಗೆ ಸುದೀಪ್ ಹೇಳಿದ್ದರಲ್ಲಿ ತಪ್ಪೇನಿದೆ?]

    ಶಿವಣ್ಣನ ಮೇಲೆ ಅಷ್ಟು ಕೋಪ ಯಾಕೆ?

    ಶಿವಣ್ಣನ ಮೇಲೆ ಅಷ್ಟು ಕೋಪ ಯಾಕೆ?

    ರಾಜ್ ಕಪ್ ವೇಳೆ ಯಾರೋ ಮೂರನೇ ವ್ಯಕ್ತಿಯಿಂದ ಕಿಚಾಯಿಸಿಕೊಂಡ ಕಿಚ್ಚ ಸುದೀಪ್ ಫೈನಲ್ ಪಂದ್ಯದಲ್ಲಿ ಯುದ್ಧಕ್ಕೆ ಇಳಿದುಬಿಟ್ಟರು. ರಾಘಣ್ಣ ಬಂದು ಮಧ್ಯ ಪ್ರವೇಶಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಶಿವಣ್ಣ ರಾಜ್ ಕಪ್ ಎತ್ತಿಹಿಡಿದ್ರು. ಅದಾದ ನಂತ್ರ ಶಿವಣ್ಣ ಮತ್ತೆ ಬ್ಯಾಟ್ ಹಿಡಿಲಿಲ್ಲ. ಸಿಸಿಎಲ್ ನಲ್ಲಿ ಸುದೀಪ್ ರದ್ದೇ ದರ್ಬಾರ್ ಆಗಿತ್ತು. ಆದ್ರೂ ಕೋಪವೇಕೆ ಅನ್ನುವುದು ಯಕ್ಷ ಪ್ರಶ್ನೆ.

    'ಆರ್ಯನ್'ನಲ್ಲೂ ಒಂದಾಗಲಿಲ್ಲ!

    'ಆರ್ಯನ್'ನಲ್ಲೂ ಒಂದಾಗಲಿಲ್ಲ!

    ಶಿವಣ್ಣ ನಟನೆಯ ಆರ್ಯನ್ ಸಿನಿಮಾಗೆ ವಾಯ್ಸ್ ವೋವರ್ ನೀಡಿದ್ದ ಸುದೀಪ್, ಅದು ಕೇವಲ ಡಿ.ರಾಜೇಂದ್ರ ಬಾಬುಗೆ ನೀಡಿರುವ ಗೌರವ ಅಂತ್ಹೇಳಿ, ಶಿವಣ್ಣ ಅಭಿಮಾನಿಗಳನ್ನ ಮತ್ತಷ್ಟು ಕೆರಳಿಸಿದ್ದರು.

    ಶಿವಣ್ಣನ ಮೇಲೆ ಓಕೆ. ರಾಜಣ್ಣ ಯಾಕೆ?

    ಶಿವಣ್ಣನ ಮೇಲೆ ಓಕೆ. ರಾಜಣ್ಣ ಯಾಕೆ?

    ಸುದೀಪ್ ಮತ್ತು ಶಿವಣ್ಣ ಮಧ್ಯೆ ಅದೇನೇ ಇರಬಹುದು. ಆದ್ರೆ ಸುದೀಪ್ ಮತ್ತು ದರ್ಶನ್ ಗೆ ರಾಜ್ ಕುಮಾರ್ ಮಾಡಬಾರದ್ದು ಏನು ಮಾಡಿದ್ದರು? ಕನ್ನಡ ಚಿತ್ರರಂಗಕ್ಕೆ ಅಗಾಧ ಸೇವೆ ಸಲ್ಲಿಸಿರುವ ಈ ಅದ್ಭುತ ಕಲಾವಿದನಿಗೆ, ಕಲಾವಿದರೇ ಆಗಿರುವ ಸುದೀಪ್-ದರ್ಶನ್ ಕೊಡುವ ಮರ್ಯಾದೆ, ತೋರುವ ಆಲಸ್ಯ ಸಹನೀಯವಲ್ಲ ಅನ್ನುವುದು ಅನೇಕ ಅಭಿಮಾನಿಗಳ ಅಭಿಪ್ರಾಯ

    ರಜನಿ, ಚಿರು, ಉಪ್ಪಿಗಿಂತ ಮಿಗಿಲಾ?

    ರಜನಿ, ಚಿರು, ಉಪ್ಪಿಗಿಂತ ಮಿಗಿಲಾ?

    ಹಾಗ್ನೋಡಿದರೆ ಸೂಪರ್ ಸ್ಟಾರ್ ರಜನಿಕಾಂತ್, ಮೆಗಾ ಸ್ಟಾರ್ ಚಿರಂಜೀವಿ, ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಬಿಜಿ ಶೆಡ್ಯೂಲ್ ಮಧ್ಯೆಯೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರು ಮನರಂಜನಾ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕದೇ ಇದ್ದರೂ, ರಾಜಣ್ಣನಿಗೆ 'ನುಡಿ' ನಮನವನ್ನು ಸಲ್ಲಿಸಿದರು. ಇವರೆಲ್ಲರಿಗಿಂತಲೂ ಸುದೀಪ್-ದರ್ಶನ್ ಮಿಗಿಲಾದರೇ..

    ದರ್ಶನ್ ಗೆ ಏನಾಗಿದೆ?

    ದರ್ಶನ್ ಗೆ ಏನಾಗಿದೆ?

    ಸುದೀಪ್ ಮತ್ತು ಶಿವಣ್ಣ ನಡುವೆ ವೈಮನಸ್ಯ ಇದೆ ಅಂತಾದರೂ, ದರ್ಶನ್ ಗೂ ಅದಕ್ಕೂ ಏನು ಸಂಬಂಧ. ಅವರಾದರೂ ಹಿರಿಯರಿಗೆ ಗೌರವ ಸಲ್ಲಿಸಬಹುದಿತ್ತಲ್ಲವೇ? ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಅದೇ ರಾಜಣ್ಣನಿಗೆ ಆಪ್ತರಾಗಿದ್ದರು ಅನ್ನುವುದನ್ನು ದರ್ಶನ್ ಮರೆತುಬಿಟ್ಟರೇ? ಇದಕ್ಕೆಲ್ಲಾ ಉತ್ತರ ಸಹವಾಸ ದೋಷ ಅನ್ನುತ್ತಿದೆ ಗಾಂಧಿನಗರ.

    ಎಲ್ಲವೂ ಊಹಾಪೂಹ ಅಷ್ಟೇ!

    ಎಲ್ಲವೂ ಊಹಾಪೂಹ ಅಷ್ಟೇ!

    ಈ ಎಲ್ಲಾ ಸನ್ನಿವೇಶಗಳು ಕೇವಲ ಕಾಕತಾಳೀಯ. ಎಲ್ಲವೂ ಊಹಾಪೋಹಗಳಷ್ಟೇ ಅಂತ ಸುದೀಪ್ ಆಗಾಗ ಸ್ಪಷ್ಟನೆ ನೀಡುತ್ತಾರೆ. ಹಾಗಾಗುತ್ತಿದೆ ಅನ್ನುವುದು ಮನದಟ್ಟಾದಾಗ ಅಂತಹ ಘಟನೆಗಳಿಗೆ ಸುದೀಪ್ ಪದೇ ಪದೇ ಆಸ್ಪದ ಕೊಡುವುದೇಕೆ. ಅಂತಹ ವರ್ತನೆಗಳನ್ನು ಸುದೀಪ್ ಏಕೆ ಮರುಕಳಿಸುತ್ತಾರೆ, ಅನ್ನುವುದರ ಬಗ್ಗೆ ಅವರೇ ಉತ್ತರಿಸಬೇಕು.

    ಏನಾದರೂ ಮುಂದೆ ಸಾಗದು..!

    ಏನಾದರೂ ಮುಂದೆ ಸಾಗದು..!

    ''ಏನಾಗಲಿ ಮುಂದೆ ಸಾಗು ನೀ...''ಅಂತ ತಮ್ಮ ಸಿನಿಮಾದಲ್ಲಿ ತತ್ವ-ವೇದಾಂತ ಹೇಳುವ ಸುದೀಪ್ ಹಳೆಯದ್ದನ್ನೆಲ್ಲಾ ಬಿಟ್ಟು ಮುಂದಕ್ಕೆ ಮಾತ್ರ ಬರುತ್ತಿಲ್ಲ. ಸುದೀಪ್-ಶಿವಣ್ಣರವರನ್ನ ಒಟ್ಟಾಗಿ ಅಂಟಿಸುವ ಕಾರ್ಯ 'ರೋಸ್' ಚಿತ್ರತಂಡ ಮಾಡಿತ್ತು. ಆದ್ರೆ 'ಆರ್ಯನ್' ಬರುವಷ್ಟರಲ್ಲಿ ಮತ್ತೆ ಬಿರುಕು ಎದ್ದುಕಂಡಿತು.

    'ರಾಜ್ ಕಪ್' ನಿಂದ 'ರಾಜ್ ಸ್ಮಾರಕ'ದವರೆಗೆ...

    'ರಾಜ್ ಕಪ್' ನಿಂದ 'ರಾಜ್ ಸ್ಮಾರಕ'ದವರೆಗೆ...

    ಮೂರು ವರ್ಷಗಳ ಹಿಂದೆ ರಾಜ್ ಸ್ಮರಣಾರ್ಥ ನಡೆದ 'ರಾಜ್ ಕಪ್' ನಲ್ಲಿ ಹತ್ತಿಕೊಂಡ ಕಿಚ್ಚು 'ಅಮರಜೀವಿಯ ನೆನಪಿ'ನ ಕಾರ್ಯಕ್ರಮದಲ್ಲೂ ಆರಲಿಲ್ಲ ಅನ್ನುವುದು ಅಭಿಮಾನಿಗಳ ನಿರಾಶೆಗೆ ಕಾರಣವಾಗಿದೆ.

    ಸ್ಯಾಂಡಲ್ ವುಡ್ ಒಂದಾಗಿದೆ..!

    ಇಷ್ಟೆಲ್ಲಾ ಕಿರಿಕಿರಿ ನಡುವೆ ಯಾರ ಮಧ್ಯೆಯೂ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇಡೀ ಸ್ಯಾಂಡಲ್ ವುಡ್ ಒಂದಾಗಿರುವುದು ಹೆಮ್ಮೆಯ ಸಂಗತಿ ಅಂತ ಸುಮಲತಾ ಅಂಬರೀಶ್, ದರ್ಶನ್, ಶಿವರಾಜ್ ಕುಮಾರ್, ಅರ್ಜುನ್ ಸರ್ಜಾ ಒಟ್ಟಾಗಿ ತೆಗೆಸಿಕೊಂಡಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಆದ್ರೆ, ಅದ್ರಲ್ಲಿ ಸುದೀಪ್ ಇಲ್ಲ! ಅನ್ನುವುದು ಗಮನಿಸಬೇಕಾದ ಅಂಶ.

    English summary
    Actor Kichcha Sudeep and Challenging Star Darshan have created a new controversy in Dr.Raj Memorial Inauguration Cultural Night. Both the actors were supposed to dance in the cultural event. But the actors din't dance and never bothered to speak even a word about Kannada thespian Dr.Rajkumar. This enraged the audience in the cultural event.
    Monday, December 1, 2014, 12:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X