»   » ಕಿಚ್ಚ ಸುದೀಪ್ ಅಭಿನಯಕ್ಕೆ ಆಂಧ್ರ ಸರ್ಕಾರದಿಂದ 'ರಾಜ್ಯ ಪ್ರಶಸ್ತಿ'

ಕಿಚ್ಚ ಸುದೀಪ್ ಅಭಿನಯಕ್ಕೆ ಆಂಧ್ರ ಸರ್ಕಾರದಿಂದ 'ರಾಜ್ಯ ಪ್ರಶಸ್ತಿ'

Posted by:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಆಂಧ್ರ ಸರ್ಕಾರದಿಂದ ನೀಡುವ ಶ್ರೇಷ್ಠ 'ರಾಜ್ಯ ಪ್ರಶಸ್ತಿ' ಸಿಕ್ಕಿದೆ. 'ಈಗ' ಚಿತ್ರದ ನಟನೆಗಾಗಿ, 'ಅತ್ಯುತ್ತಮ ಖಳನಟ' ವಿಭಾಗದಲ್ಲಿ ಶ್ರೇಷ್ಠ 'ನಂದಿ ಅವಾರ್ಡ್' ಲಭಿಸಿದೆ.

ಆಂಧ್ರದ ಅಮರಾವತಿಯಲ್ಲಿ 2012ನೇ ಸಾಲಿನ ನಂದಿ ಪ್ರಶಸ್ತಿಯನ್ನ ಪ್ರಕಟ ಮಾಡಲಾಗಿದ್ದು, ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷೆ ನಟಿ ಜಯಸುಧಾ ಘೋಷಿಸಿದ್ದಾರೆ.

ಸುದೀಪ್ ಅಭಿನಯಕ್ಕೆ 'ನಂದಿ' ಅವಾರ್ಡ್

ಸುದೀಪ್ ಅಭಿನಯಕ್ಕೆ 'ನಂದಿ' ಅವಾರ್ಡ್

2012 ರಲ್ಲಿ ಬಿಡುಗಡೆಯಾಗಿದ್ದ 'ಈಗ' ಚಿತ್ರದ ನಟನೆಗಾಗಿ ಕನ್ನಡದ ಕಿಚ್ಚನಿಗೆ ಆಂಧ್ರ ಸರ್ಕಾರ ನೀಡುವ ಅತ್ಯುನ್ನತ 'ನಂದಿ' ಪ್ರಶಸ್ತಿ ಸಿಕ್ಕಿದೆ.

ಎಸ್.ಎಸ್.ರಾಜಮೌಳಿ ನಿರ್ದೇಶನದ 'ಈಗ'

ಎಸ್.ಎಸ್.ರಾಜಮೌಳಿ ನಿರ್ದೇಶನದ 'ಈಗ'

'ಈಗ'......ಎಸ್.ಎಸ್ ರಾಜಮೌಳಿ ನಿರ್ದೇಶನದ ಚಿತ್ರ. ತೆಲುಗು ನಟ ನಾನಿ ಮತ್ತು ಸಮಂತಾ ನಾಯಕ, ನಾಯಕಿಯಾಗಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಸುದೀಪ್ ವಿಲನ್ ಆಗಿ ಬಣ್ಣ ಹಚ್ಚಿದ್ದರು.

ಚೊಚ್ಚಲ ತೆಲುಗು ಚಿತ್ರದಲ್ಲಿಯೇ 'ನಂದಿ' ಗರಿ

ಚೊಚ್ಚಲ ತೆಲುಗು ಚಿತ್ರದಲ್ಲಿಯೇ 'ನಂದಿ' ಗರಿ

ತೆಲುಗು ಚಿತ್ರಲೋಕದಲ್ಲಿ ಅಭಿನಯಿಸಿದ ಮೊದಲ ಚಿತ್ರದಲ್ಲೇ 'ನಂದಿ ಪ್ರಶಸ್ತಿ' ಪಡೆದಿರುವುದು ನಿಜಕ್ಕೂ ವಿಶೇಷವೇ ಸರಿ. ಕನ್ನಡ, ಹಿಂದಿ, ತಮಿಳು, ತೆಲುಗು ಚಿತ್ರಗಳಲ್ಲಿ ಸುದೀಪ್ ಅಭಿನಯಿಸಿದ್ದಾರೆ. ಆದ್ರೆ, 'ಈಗ' ತೆಲುಗಿನಲ್ಲಿ ಕಿಚ್ಚ ಅಭಿನಯದ ಮೊದಲ ಸಿನಿಮಾ.

'ಈಗ' ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ

'ಈಗ' ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ

ಉಳಿದಂತೆ 2012ನೇ ಸಾಲಿನಲ್ಲಿ ಈಗ ಚಿತ್ರಕ್ಕೆ ಪ್ರಶ್ತಸ್ತಿಗಳು ಸುರಿಮಳೆಯಾಗಿದೆ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಿತ್ರಕಥೆ, ಸೇರಿದಂತೆ ಹಲವು ಪ್ರಶಸ್ತಿಗಳನ್ನ ಈಗ ಚಿತ್ರ ಗಳಿಸಿದೆ.

English summary
Prestigious Nandi Awards-2012-13 is announced. Kiccha Sudeep wins 'Best Villain' for 2012 Telugu Movie 'Eega'.
Please Wait while comments are loading...

Kannada Photos

Go to : More Photos