»   » ಸುದೀಪ್ ಬದುಕಿನ ಮೊದಲ ಅತ್ಯಂತ ದೊಡ್ಡ ಸಾಧನೆ ಇದು..!

ಸುದೀಪ್ ಬದುಕಿನ ಮೊದಲ ಅತ್ಯಂತ ದೊಡ್ಡ ಸಾಧನೆ ಇದು..!

Posted by:
Subscribe to Filmibeat Kannada

'ಮಾಣಿಕ್ಯ' ಹಾಗೂ 'ಅಪೂರ್ವ' ಚಿತ್ರಗಳ ನಂತರ ಕನ್ನಡದ ಮಲ್ಲ ವಿ.ರವಿಚಂದ್ರನ್ ಮತ್ತು ನಲ್ಲ ಸುದೀಪ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾ 'ಹೆಬ್ಬುಲಿ'.[ಕಿಚ್ಚ ಬಿಚ್ಚಿಟ್ಟ 'ಹೆಬ್ಬುಲಿ' ಹೇರ್ ಸ್ಟೈಲ್ ಕಹಾನಿ..!]

ಚಿತ್ರೀಕರಣ ಆರಂಭ ಆದಾಗಿನಿಂದಲೂ ಒಮ್ಮೆಯೂ ಪತ್ರಿಕಾಗೋಷ್ಠಿ ಕರೆಯದ 'ಹೆಬ್ಬುಲಿ' ಚಿತ್ರತಂಡ, ಮೊನ್ನೆಯಷ್ಟೇ ಒಂದು ಪ್ರೆಸ್ ಮೀಟ್ ಆಯೋಜಿಸಿತ್ತು. ಈ ವೇಳೆ ಮಾತನಾಡಿದ ಸುದೀಪ್ ತಮ್ಮ ಮೊದಲ ಸಾಧನೆಯೊಂದರ ಕುರಿತು ಮನಬಿಚ್ಚಿ ಮಾತನಾಡಿದರು.

ರವಿಚಂದ್ರನ್ ಕುರಿತು ಮಾತನಾಡಿದ ಸುದೀಪ್

ರವಿಚಂದ್ರನ್ ಕುರಿತು ಮಾತನಾಡಿದ ಸುದೀಪ್

"ರವಿ ಸರ್ ಡ್ರೀಮರ್. ಅವರ ಚಿತ್ರಗಳನ್ನು ನೋಡಿಕೊಂಡು ಬೆಳೆದವರು ನಾವು. ಅವರನ್ನು ಫಸ್ಟ್ ಟೈಮ್ ನೋಡಿದ್ದು ನಮ್ಮ ಅಕ್ಕನ ಮದುವೇಲಿ. ಅವರನ್ನು ನೋಡಲು ಅವತ್ತು ದಿನವಿಡೀ ಕಾಯುತ್ತಿದ್ವಿ. ಈಗಿನ ಸ್ಟೈಲ್ ನಲ್ಲೇ ಬಂದ್ರು. ಒಂದೇ ಕೈಯಲ್ಲಿ ಬೊಕೆ ಹಿಡ್ಕೊಂಡು ಬಂದೋರು ಹೀಗೆ ಕೊಟ್ಟು ಹಾಗೆ ಕಾರಲ್ಲಿ ಕುಳಿತು ಹೊರಟುಹೋದ್ರು. ಅವರನ್ನು ನೋಡೋ ಅವಕಾಶ ಅಷ್ಟೇ ಸಿಕ್ಕಿದ್ದು'' ಎಂದು ರವಿಚಂದ್ರನ್ ಅವರನ್ನು ಮೊದಲ ಸಲ ನೋಡಿದ ಬಗ್ಗೆ ಸುದೀಪ್ ನೆನಪಿಸಿಕೊಂಡರು.['ಹೆಬ್ಬುಲಿ' ಚಿತ್ರವನ್ನ ಎಲ್ಲರಿಗಿಂತ ಮೊದಲು ನೋಡುವ ಗೋಲ್ಡನ್ ಚಾನ್ಸ್ ಇಲ್ಲಿದೆ.!]

ಕನಸೊಂದು ಇತ್ತು

ಕನಸೊಂದು ಇತ್ತು

"ರವಿ ಸರ್ ಅವರೊಟ್ಟಿಗೆ ಎಲ್ಲೋ ಒಂದು ದಿನ ಸಿನಿಮಾ ಮಾಡುತ್ತೇವೆ ಎಂಬ ಕನಸು, ಬಹಳ ದೂರದ ಮಾತಾಗಿತ್ತು" - ಕಿಚ್ಚ ಸುದೀಪ್ ['ಹೆಬ್ಬುಲಿ' ಚಿತ್ರದ ಬಗ್ಗೆ ನಿರ್ದೇಶಕ ಕೃಷ್ಣ ಹೇಳಿದಿಷ್ಟು..]

ಸುದೀಪ್ ರವರ ಮೊದಲ ದೊಡ್ಡ ಸಾಧನೆ

ಸುದೀಪ್ ರವರ ಮೊದಲ ದೊಡ್ಡ ಸಾಧನೆ

"ನಮ್ಮ ಅಕ್ಕನ ಮದುವೇಲಿ ರವಿಚಂದ್ರನ್ ನೋಡಲು ದಿನವಿಡೀ ಕಾದಿದ್ದ ನನಗೆ, ಫಸ್ಟ್ ಟೈಮ್ ರವಿಚಂದ್ರನ್ ಅವರ ಮನೆಗೆ ಹೋಗಿ ಅವರೊಟ್ಟಿಗೆ ಕಾಫಿ ಕುಡಿದಿದ್ದು ನನ್ನ ಫಸ್ಟ್ ಅಚೀವ್ಮೆಂಟ್" -ಕಿಚ್ಚ ಸುದೀಪ್

ನನ್ನನ್ನು ಯಾವತ್ತೂ ಬೇರೆಯವನು ಅಂತ ನೋಡಿಲ್ಲ

ನನ್ನನ್ನು ಯಾವತ್ತೂ ಬೇರೆಯವನು ಅಂತ ನೋಡಿಲ್ಲ

"ರವಿ ಸರ್ ನನ್ನನ್ನು ಬೇರೆಯವರ ತರಹ ನೋಡಿಲ್ಲ. ಬೇರೆ ಮಗನ ತರಹ ನೋಡಿಲ್ಲ. ಒಬ್ಬ ಕಲಾವಿದನ ತರಹ ನೋಡೇ ಇಲ್ಲ. ಯಾರನ್ನು ಮೆಚ್ಚಿಸೋಕು ಅವರಿಗೆ ಮುಖವಾಡ ಹಾಕಿಕೊಳ್ಳಲು ಬರುವುದಿಲ್ಲ. ಅವರು ಹೇಗಿರುತ್ತಾರೆ, ಹೇಗಿರಬೇಕು ಅನ್ನೋದು ನಮ್ಮ ಮೇಲೆ ಡಿಪೆಂಡ್ ಆಗಿರುತ್ತೆ" ಎಂದು ರವಿಚಂದ್ರನ್ ಕುರಿತು ಸುದೀಪ್ ಮನದಾಳದ ಮಾತುಗಳನ್ನಾಡಿದರು.

English summary
Sudeep revealed his First achievement, while speaking about V.Ravichandran in 'Hebbuli' Movie press meet.
Please Wait while comments are loading...

Kannada Photos

Go to : More Photos