»   » ಬಬ್ಬರ್ ಶೇರ್ ಆಗಿ 'ರನ್ನ' ಬರ್ತಿದ್ದಾನೆ ದಾರಿಬಿಡಿ

ಬಬ್ಬರ್ ಶೇರ್ ಆಗಿ 'ರನ್ನ' ಬರ್ತಿದ್ದಾನೆ ದಾರಿಬಿಡಿ

Written by: ಜೀವನರಸಿಕ
Subscribe to Filmibeat Kannada

'ರನ್ನ'ನ ರಂಗು ಸ್ಯಾಂಡಲ್ ವುಡ್ ನಲ್ಲಿ ನಿಧಾನಕ್ಕೆ ಶುರುವಾಗ್ತಿದೆ. ಕಿಚ್ಚನ "ಬಬ್ಬರ್ ಶೇರ್" ಹಾಡಿನ ತುಣುಕು ಯೂಟ್ಯೂಬ್ ನಲ್ಲಿ ಸೂಪರ್ ಹಿಟ್ಟಾಗಿದೆ. ರನ್ನನ ಮೇಕಿಂಗ್ ವಿಷಯದಲ್ಲಿ ಸ್ವತಃ ಸುದೀಪ್ ಮುತುವರ್ಜಿ ವಹಿಸಿದ್ದಾರೆ. ಹಾಗಾಗೀನೇ ಮೇಕಿಂಗ್ ಭರ್ಜರಿಯಾಗಿ ಮೂಡಿ ಬಂದಿದೆ.

ಬಿರುಗಾಳಿಯಂತೆ 'ರನ್ನ' ಥಿಯೇಟರ್ ಗಳಿಗೆ ಬರೋಕೆ ರೆಡಿಯಾಗಿದ್ದಾನೆ. ಮೇ 1ಕ್ಕೆ ರನ್ನನ ಎಂಟ್ರಿ ಬಹುತೇಕ ಖಚಿತ. ಕಾರ್ಮಿಕರ ದಿನಕ್ಕೆ ಸುದೀಪ್ ಅಂಡ್ ಟೀಂ ಚಿತ್ರವನ್ನ ತರೋಕೆ ಅಂತೀಮ ತಯಾರಿಯಲ್ಲಿದೆ. [ಊಹಾಪೋಹಗಳಿಗೆ ತೆರೆ ಎಳೆದ ಕಿಚ್ಚ ಸುದೀಪ್]


Sudeep's Ranna slated for release on 1st of May

ನಂದಕಿಶೋರ್ ನಿರ್ದೇಶನದ ಬಗ್ಗೆ ಕೂಡ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ವಿ ಹರಿಕೃಷ್ಣ ಹಾಡುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಹಿಂದೆ ಪವರ್ ಸ್ಟಾರ್ ಪುನೀತ್ ಅಭಿನಯದ 'ಅಣ್ಣಾಬಾಂಡ್' ಚಿತ್ರ 2012 ಮೇ 1ಕ್ಕೆ ಥಿಯೇಟರ್ ಗೆ ಎಂಟ್ರಿಕೊಟ್ಟಿತ್ತು.


ರನ್ನ ಚಿತ್ರಕ್ಕೆ 'ಬುಲ್ ಬುಲ್' ಖ್ಯಾತಿಯ ರಚಿತಾ ರಾಮ್ ನಾಯಕಿಯಾಗಿರುವ ಚಿತ್ರದಲ್ಲಿ ಅತ್ತೆ ಪಾತ್ರವನ್ನು "ಗೊಂಬೆ ಗೊಂಬೆ ಗೊಂಬೆ ನಿನ್ನ ಮುದ್ದಾಡಬೇಕು ನರಗೊಂಬೆ..." ಎಂದು ಕ್ರೇಜಿಸ್ಟಾರ್ ಜೊತೆ ಕುಣಿದಿದ್ದ ಮಧು ಅತ್ತೆ ಪಾತ್ರದಲ್ಲಿ ಅಭಿನಯಿಸಿದ್ದಾರೆ.


ಸರಿಸುಮಾರು ರು.20 ಕೋಟಿ ಬಜೆಟ್ ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ ಎಂ ಚಂದ್ರಶೇಖರ್. ಚಿತ್ರದ ಮುಖ್ಯಪಾತ್ರಗಳಲ್ಲಿ ದೇವರಾಜ್ ಹಾಗೂ ಪ್ರಕಾಶ್ ರೈ ಸಹ ಇದ್ದು ವಿ ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದೆ. ಸುಧಾಕರ್ ಎಸ್ ರಾಜು ಅವರ ಛಾಯಾಗ್ರಹಣ ಕೆ.ಎಂ. ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ. ಕಾರ್ಮಿಕರ ದಿನವನ್ನ ಎನ್ ಕ್ಯಾಶ್ ಮಾಡಿಕೊಳ್ಳೋಕೆ ಸುದೀಪ್ ಅಂಡ್ ಟೀಂ ರೆಡಿಯಾಗಿದೆ, ಸಿನಿಮಾ ನೋಡೋಕೆ ರೆಡಿಯಾಗಿ.

English summary
Sudeep lead movie 'Ranna' slated for release on 1st of May. Kannada action film directed by Nanda Kishore. The principal cast includes Kiccha Sudeep, Rachita Ram, Haripriya and Madhoo.
Please Wait while comments are loading...

Kannada Photos

Go to : More Photos