»   » 'ಹೆಬ್ಬುಲಿ' ಬಗ್ಗೆ ಸುದೀಪ್ ಬರೆದುಕೊಂಡಿರುವ ಮನದಾಳದ ಮಾತುಗಳು...

'ಹೆಬ್ಬುಲಿ' ಬಗ್ಗೆ ಸುದೀಪ್ ಬರೆದುಕೊಂಡಿರುವ ಮನದಾಳದ ಮಾತುಗಳು...

Posted by:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರ ಈ ವಾರದಿಂದ ಚಿತ್ರಮಂದಿರಗಳಲ್ಲಿ ಘರ್ಜಿಸಲಿದೆ. 'ಹೆಬ್ಬುಲಿ' ಚಿತ್ರದ ಬಗ್ಗೆ ಅಭಿನಯ ಚಕ್ರವರ್ತಿ ಹಲವು ವಿಷಯಗಳನ್ನ ಹಂಚಿಕೊಂಡಿದ್ದಾರೆ. ಆದ್ರೆ, 'ಹೆಬ್ಬುಲಿ' ಬಗ್ಗೆ ತಮ್ಮ ಮನದಲ್ಲಿದ್ದ ಮಾತುಗಳನ್ನ ಇದುವರೆಗೂ ಎಲ್ಲೂ ಹೇಳಿಕೊಂಡಿರಲಿಲ್ಲ. ಇದೀಗ, ಕಿಚ್ಚನ ಮನದಲ್ಲಿದ್ದ ಸಂಗತಿಗಳು ಪದಗಳಾಗಿ ಹೊರಬಂದಿವೆ.[ಎಕ್ಸ್ ಕ್ಲೂಸಿವ್: ಕಿಚ್ಚ ಸುದೀಪ್ ರವರ 'ಹೆಬ್ಬುಲಿ' ಚಿತ್ರದ ಕಥೆ ಏನು.?]

ಹೌದು, ನಿರ್ದೇಶಕ ಕೃಷ್ಣ ಮತ್ತು ಸುದೀಪ್ ಅವರ ಮೊದಲ ಭೇಟಿ ಹೇಗಿತ್ತು? ನಿರ್ಮಾಪಕರ ಕೆಲಸ ಹೇಗಿತ್ತು? 'ಹೆಬ್ಬುಲಿ'ಯ ಜರ್ನಿ ಹೇಗಿತ್ತು ಎಂಬ ಅನುಭವವನ್ನ ತಮ್ಮ ಗೂಗಲ್ ಅಕೌಂಟ್ ನಲ್ಲಿ ತಮ್ಮದೇ ಪದಗಳಲ್ಲಿ ಸುದೀಪ್ ಬರೆದುಕೊಂಡಿದ್ದಾರೆ....ಮುಂದೆ ಓದಿ

ನಿರ್ದೇಶಕ ಕೃಷ್ಣ ಮೊದಲ ಸಲ ಭೇಟಿಯಾದಾಗ....

ನಿರ್ದೇಶಕ ಕೃಷ್ಣ ಮೊದಲ ಸಲ ಭೇಟಿಯಾದಾಗ....

ನಿದೇರ್ಶಕ ಕೃಷ್ಣ, ಸುದೀಪ್ ಅವರನ್ನ ಭೇಟಿ ಮಾಡಲು ಮೊದಲ ಸಲ ಮನೆಗೆ ಹೋಗಿದ್ದಾಗ, ಸುದೀಪ್ ಅವರು ಮೀಟಿಂಗ್ ನಲ್ಲಿದ್ದರಂತೆ. ಆಗ ಸುದೀಪ್ ಅವರ ಅಸಿಸ್ಟಂಟ್ ಬಂದು ''ಸರ್, ಕೃಷ್ಣ ಬಂದಿದ್ದಾರೆ'' ಎಂದರಂತೆ. ಅದಕ್ಕೆ ಸುದೀಪ್ ಅವರು ''ಸರಿ, ಮೀಟಿಂಗ್ ಮುಗಿಸಿ ಬರ್ತೀನಿ, ಕೂರಿಸು'' ಎಂದಿದ್ದರಂತೆ.[ಸುದೀಪ್ ಬದುಕಿನ ಮೊದಲ ಅತ್ಯಂತ ದೊಡ್ಡ ಸಾಧನೆ ಇದು..!]

'ಎಸ್' ಎಂಬ ಪದದಿಂದಲೇ 'ಹೆಬ್ಬುಲಿ' ಆಯ್ತು

'ಎಸ್' ಎಂಬ ಪದದಿಂದಲೇ 'ಹೆಬ್ಬುಲಿ' ಆಯ್ತು

ಮೀಟಿಂಗ್ ಮುಗಿಸಿ ಬಂದ ಸುದೀಪ್ ಅವರು, ನಿರ್ದೇಶಕ ಕೃಷ್ಣ ಅವರ ಬಳಿ ಬಂದ್ದರಂತೆ. ಆಗ, ಕೃಷ್ಣ ಅವರು ಸುದೀಪ್ ಅವರ ಬಳಿ '' Sir, Wanted to Ask if u would do a..... ಎಂದು ಹೇಳುತ್ತಿದ್ದಂತೆ, ಸುದೀಪ್ ಅವರು 'Yes' ಎಂದಿದ್ದರಂತೆ. ಆ 'Yes' ಎಂದಾಗ ಅವರ ಮುಖದಲ್ಲಿ ಆದ ಬದಲಾವಣೆ ಇಂದಿಗೂ ಮರೆಯಲು ಅಸಾಧ್ಯವೆಂದು ಸುದೀಪ್ ಬರೆದುಕೊಂಡಿದ್ದಾರೆ.['ಹೆಬ್ಬುಲಿ' ನೋಡೋಕು ಮುಂಚೆ, ನೀವು ತಿಳಿಯಬೇಕಾದ ಸಂಗತಿಗಳು]

ಕೃಷ್ಣ ಬಗ್ಗೆ ಸುದೀಪ್ ಬರೆದಿರುವುದು...

ಕೃಷ್ಣ ಬಗ್ಗೆ ಸುದೀಪ್ ಬರೆದಿರುವುದು...

ನಿರ್ದೇಶಕ ಕೃಷ್ಣ ಅವರು ಒಬ್ಬ ಅದ್ಭುತ ಮನಸ್ಸುಳ್ಳ ವ್ಯಕ್ತಿ. ಸದಾ ಹಸನ್ಮುಖಿಯಾಗಿರುವ ವ್ಯಕ್ತಿತ್ವ. ಪ್ರತಿಯೊಬ್ಬರು ಒಂದಲ್ಲ ಒಂದು ಕನಸನ್ನ ಹೊಂದಿರುತ್ತಾರೆ. ಅದು ನನಸಾದಾಗ ಅವರಿಗಾಗುವ ಸಂತೋಷವೇ ಬೇರೆ. ಅದೇ ರೀತಿ, ಕೃಷ್ಣ ಅವರು ನಮ್ಮ ಮನೆಗೆ ಬಂದಾಗ, 'ಹೆಬ್ಬುಲಿ' ಎಂಬ ಕನಸನ್ನ ಹೊತ್ತು ತಂದಿದ್ದರು. ಅದು ಈಗ ನನಸಾಗಿದೆ'' ಎಂದು ಕೃಷ್ಣ ಅವರ ಜೊತೆ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.['ಹೆಬ್ಬುಲಿ' ಚಿತ್ರದ ಬಗ್ಗೆ ನಿರ್ದೇಶಕ ಕೃಷ್ಣ ಹೇಳಿದಿಷ್ಟು..]

ನಿರ್ಮಾಪಕರ ಬಗ್ಗೆ ಸುದೀಪ್ ಮಾತು

ನಿರ್ಮಾಪಕರ ಬಗ್ಗೆ ಸುದೀಪ್ ಮಾತು

''ಕೃಷ್ಣ ಅವರ ಕನಸನ್ನ ನನಸಾಗುವಂತೆ ಮಾಡಿದ್ದು ನಿರ್ಮಾಪಕ ಉಮಾಪತಿ ಮತ್ತು ರಘುನಾಥ್. ಈ ಇಬ್ಬರು ಪರಿಶ್ರಮದ ಪ್ರತಿಫಲವೇ 'ಹೆಬ್ಬುಲಿ'. ಚಿತ್ರಕ್ಕೆ ಯಾವುದೇ ರೀತಿಯ ಕೊರತೆ ಆಗಬಾರದೆಂದು ಎಲ್ಲ ರೀತಿಯ ಪ್ರೀತಿ, ಹಾರೈಕೆಯನ್ನ ನೀಡಿದ್ದಾರೆ. ತುಂಬಾ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ'' ಎಂದು ನಿರ್ಮಾಪಕರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.['ಹೆಬ್ಬುಲಿ' ಸುದೀಪ್ ಬಗ್ಗೆ ರವಿಚಂದ್ರನ್ ಬಾಯಿಂದ ಉದುರಿದ ಮುತ್ತುಗಳಿವು..]

'ಹೆಬ್ಬುಲಿ' ಜರ್ನಿ ಸಖತ್ ಖುಷಿ ಕೊಟ್ಟಿದೆ

'ಹೆಬ್ಬುಲಿ' ಜರ್ನಿ ಸಖತ್ ಖುಷಿ ಕೊಟ್ಟಿದೆ

'ಹೆಬ್ಬುಲಿ' ಚಿತ್ರದ ಇಡೀ ಜರ್ನಿ ಸಖತ್ ಖುಷಿ ಕೊಟ್ಟಿದೆ. ಒಳ್ಳೆ ಕೆಲಸಗಾರರು ಸೇರಿ ಮಾಡಿರುವ ಸಿನಿಮಾ. ತುಂಬಾ ಪ್ರೀತಿಯಿಂದ ಎಲ್ಲರೂ, ಅವರವರ ಕೆಲಸವನ್ನ ಉತ್ತಮವಾಗಿ ನಿಭಾಯಿಸಿದ್ದಾರೆ.[ಎಲ್ಲೇ ಹೋದ್ರೂ ಸುದೀಪ್ 'ರನ್ನ' ನೆನೆಯದೇ ರವಿಶಂಕರ್ ಮಾತು ಮುಗಿಸೋಲ್ಲ.!]

ಲವ್ ಯೂ ಆಲ್....

ಲವ್ ಯೂ ಆಲ್....

'ಹೆಬ್ಬುಲಿ' ಚಿತ್ರಕ್ಕಾಗಿ ಪ್ರೀತಿಯಿಂದ ಕೆಲಸ ಮಾಡಿರುವ ಎಲ್ಲರಿಗೂ ಪ್ರೀತಿಯ ನನ್ನ ಧನ್ಯವಾದಗಳು''- ಇಂತಿ ನಿಮ್ಮ ಕಿಚ್ಚ....
ಸುದೀಪ್ ಬರೆದಿರುವ ಪತ್ರವನ್ನ ಓದಲು ಈ ಲಿಂಕ್ ಕ್ಲಿಕ್ ಮಾಡಿ

English summary
Kannada Actor Sudeep Shared Experience About Hebbuli in His Own Words. Hebbuli Will Releasing On February 23rd in all over karnataka. the movie Directed by Krishna.
Please Wait while comments are loading...

Kannada Photos

Go to : More Photos