»   » ಸುದೀಪ್ 'ಕೋಟಿಗೊಬ್ಬ-2' ಪೋಸ್ಟರ್ ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್

ಸುದೀಪ್ 'ಕೋಟಿಗೊಬ್ಬ-2' ಪೋಸ್ಟರ್ ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್

Posted by:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕಾಲಿವುಡ್ ನ ಖ್ಯಾತ ನಿರ್ದೇಶಕ ಕೆ.ಎಸ್.ರವಿಕುಮಾರ್ ನಿರ್ದೇಶನದ 'ಕೋಟಿಗೊಬ್ಬ-2' ಚಿತ್ರದ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಅಪಾರ ನಿರೀಕ್ಷೆ ಇದೆ.

ಕೊನೆಯ ಹಂತದ ಚಿತ್ರೀಕರಣದಲ್ಲಿ ಬಿಜಿಯಾಗಿರುವ 'ಕೋಟಿಗೊಬ್ಬ-2' ಚಿತ್ರ ಹೇಗೆ ಮೂಡಿಬರುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕೂಡ ಕಾತರದಿಂದ ಕಾಯುತ್ತಿದ್ದಾರೆ. ['ಛೆ' ಸುದೀಪ್ ಅಭಿಮಾನಿಗಳಿಗೆ ಭಾರಿ ನಿರಾಸೆ ಆಗೋ ಸುದ್ದಿ]

ಅದರಲ್ಲೂ, ಈಗಾಗಲೇ ರಿಲೀಸ್ ಆಗಿರುವ ಟೀಸರ್ ನಲ್ಲಿ ಸುದೀಪ್ ಸೂಪರ್ ಆಕ್ಷನ್ ಮಾಡಿರುವುದರಿಂದ 'ಕೋಟಿಗೊಬ್ಬ-2' ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಹೀಗಿರುವಾಗಲೇ, ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ.

sudeep-starrer-kotigobba-2-posters-trends-in-twitter

ಸಖತ್ ಸ್ಟೈಲಿಶ್ ಆಗಿರುವ 'ಕೋಟಿಗೊಬ್ಬ-2' ಚಿತ್ರದ ಪೋಸ್ಟರ್ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್ ಆಗಿದೆ. 'ರೋರ್ಸ್ ಅಗೇನ್' ಎಂಬ ಅಡಿಬರಹದೊಂದಿಗೆ ಬಿಡುಗಡೆ ಆಗಿರುವ ಪೋಸ್ಟರ್ ಗಳು ಅಕ್ಷರಶಃ ಟ್ವಿಟ್ಟರ್ ನಲ್ಲಿ ಘರ್ಜಿಸುತ್ತಿದೆ.

ವಿಶೇಷ ಮಾದರಿಯ ಬೈಕ್ ಗಳನ್ನ ಬಳಸಿಕೊಂಡು ಅದ್ಧೂರಿ ಸೆಟ್ ನಲ್ಲಿ ಮೊನ್ನೆ ಮೊನ್ನೆಯಷ್ಟೇ 'ಕೋಟಿಗೊಬ್ಬ-2' ಚಿತ್ರದ ಸುದೀಪ್ ಇಂಟ್ರೊಡಕ್ಷನ್ ಹಾಡಿನ ಚಿತ್ರೀಕರಣ ನಡೆಯಿತು. ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡಿರುವ ಹಾಡಿನಲ್ಲಿ ಸುದೀಪ್ ನೀಡಿದ ಪೋಸ್ ಗಳೇ ಇಂದು ಟಾಪ್ ಟ್ರೆಂಡಿಂಗ್ ನಲ್ಲಿರುವ ಪೋಸ್ಟರ್ ಗಳು.

ಅಂದ್ಹಾಗೆ, 'ಕೋಟಿಗೊಬ್ಬ-2' ಚಿತ್ರದಲ್ಲಿ ಸುದೀಪ್ ಜೊತೆಗೆ ನಿತ್ಯಾ ಮೆನನ್, ಶರತ್ ಲೋಹಿತಾಶ್ವ, ನಾಸರ್, ಚಿಕ್ಕಣ್ಣ ಸೇರಿದಂತೆ ದೊಡ್ಡ ತಾರಾಬಳಗವಿದೆ. ಇನ್ನೊಂದು ಹಾಡಿನ ಚಿತ್ರೀಕರಣ ನಡೆದರೆ, 'ಕೋಟಿಗೊಬ್ಬ-2' ಕುಂಬಳಕಾಯಿ ಹೊಡೆದ ಹಾಗೆ. [ಸದ್ಯದಲ್ಲೇ 'ಕೋಟಿಗೊಬ್ಬ 2' ಚಿತ್ರದ ಬಿಡುಗಡೆ ದಿನಾಂಕ ಘೋಷಣೆ]

'ಕೋಟಿಗೊಬ್ಬ-2' ಚಿತ್ರದ ಪೋಸ್ಟರ್ಸ್ ಹಾಗೂ ಮೇಕಿಂಗ್ ಸ್ಟಿಲ್ಸ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ.....

'ಕೋಟಿಗೊಬ್ಬ-2' ಚಿತ್ರದ ನೂತನ ಪೋಸ್ಟರ್

'ಕೋಟಿಗೊಬ್ಬ-2' ಚಿತ್ರದ ಸ್ಟೈಲಿಶ್ ಪೋಸ್ಟರ್

ಸೂಪರ್ ಸ್ಟೈಲಿಶ್ ಲುಕ್ ನಲ್ಲಿ ಮಿಂಚಿದ್ದಾರೆ ಕಿಚ್ಚ ಸುದೀಪ್

'ಕೋಟಿಗೊಬ್ಬ-2' ಚಿತ್ರದ ಸುದೀಪ್ ಇಂಟ್ರೊಡಕ್ಷನ್ ಹಾಡಿನ ಚಿತ್ರೀಕರಣದಲ್ಲಿ ಕ್ಲಿಕ್ ಆಗಿರುವ ಫೋಟೋ

'ಕೋಟಿಗೊಬ್ಬ-2' ಚಿತ್ರದಲ್ಲಿ ಕಿಚ್ಚ ಸುದೀಪ್

ಸುದೀಪ್ ಜೊತೆ ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ

ಸುದೀಪ್ ಗೆ ಆಕ್ಷನ್ ಕಟ್ ಹೇಳುತ್ತಿರುವ ನಿರ್ದೇಶಕ ಕೆ.ಎಸ್.ರವಿಕುಮಾರ್

'ಕೋಟಿಗೊಬ್ಬ-2' ಚಿತ್ರದ ಮೇಕಿಂಗ್ ಫೋಟೋ

ಸುದೀಪ್ ಗೆ ಆಕ್ಷನ್ ಕಟ್ ಹೇಳುತ್ತಿರುವ ನಿರ್ದೇಶಕ ಕೆ.ಎಸ್.ರವಿಕುಮಾರ್

'ಕೋಟಿಗೊಬ್ಬ-2' ಚಿತ್ರದ ಮೇಕಿಂಗ್ ಫೋಟೋ

'ಕೋಟಿಗೊಬ್ಬ-2' ಚಿತ್ರದಲ್ಲಿ ಕಿಚ್ಚ ಸುದೀಪ್

'ಕೋಟಿಗೊಬ್ಬ-2' ಚಿತ್ರದ ಮೇಕಿಂಗ್ ಫೋಟೋ

'ಕೋಟಿಗೊಬ್ಬ-2' ಚಿತ್ರದ ಮೇಕಿಂಗ್ ಫೋಟೋ

'ಕೋಟಿಗೊಬ್ಬ-2' ಚಿತ್ರದ ಸ್ಟೈಲಿಶ್ ಪೋಸ್ಟರ್

'ಕೋಟಿಗೊಬ್ಬ-2' ಚಿತ್ರದಲ್ಲಿ ಸುದೀಪ್ ಗೆ ನಿತ್ಯಾ ಮೆನನ್ ನಾಯಕಿ

'ಕೋಟಿಗೊಬ್ಬ-2' ಚಿತ್ರದಲ್ಲಿ ಸುದೀಪ್ ಗೆ ನಿತ್ಯಾ ಮೆನನ್ ನಾಯಕಿ

'ಕೋಟಿಗೊಬ್ಬ-2' ಚಿತ್ರದ ಸ್ಟೈಲಿಶ್ ಪೋಸ್ಟರ್

English summary
Kannada Actor Sudeep starrer K.S.Ravikumar directorial Kannada Movie 'Kotigobba 2' posters are trending in Twitter. Check out the all new posters of 'Kotigobba 2' movie.
Please Wait while comments are loading...

Kannada Photos

Go to : More Photos