»   » ಸಿಸಿಎಲ್ ಮ್ಯಾಚ್ ನಿಂದ ಕಿಚ್ಚ ಅವರಿಗೆ ಸಿಗುವ ಸಂಭಾವನೆ ಎಷ್ಟು

ಸಿಸಿಎಲ್ ಮ್ಯಾಚ್ ನಿಂದ ಕಿಚ್ಚ ಅವರಿಗೆ ಸಿಗುವ ಸಂಭಾವನೆ ಎಷ್ಟು

Posted by:
Subscribe to Filmibeat Kannada

ಕಳೆದ ಸುಮಾರು 5 ವರ್ಷಗಳಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯಾಟಗಳನ್ನು ಆಡಿಕೊಂಡೇ ಬಂದಿದ್ದಾರೆ. ಅದರಲ್ಲಿ ಎರಡು ಬಾರಿ ಭರ್ಜರಿ ಗೆಲುವು ಸಾಧಿಸಿ ಪ್ರಶಸ್ತಿ ಕೂಡ ಗೆದ್ದುಕೊಂಡಿದ್ದಾರೆ.

ಅದೆಲ್ಲಾ ಓಕೆ ಪ್ರತೀ ಬಾರಿ ಕಿಚ್ಚ ಸುದೀಪ್ ಮತ್ತು ಕರ್ನಾಟಕ ಬುಲ್ದೋಜರ್ಸ್ ತಂಡ ಸಿಸಿಎಲ್ ಪಂದ್ಯ ಆಡಿದಾಗಲೂ ಅವರಿಗೆ ಎಷ್ಟು ಸಂಭಾವನೆ ಸಿಗಬಹುದು ಎಂದು ನೀವು ಯೋಚನೆ ಮಾಡುತ್ತಿರಬೇಕಲ್ಲಾ.[ಶೆಟ್ರ 'ರಿಕ್ಕಿ'ಯಲ್ಲಿ ಕಿಚ್ಚ ಸುದೀಪ್ ಅವರ ಮಸ್ತ್ ಮ್ಯಾಜಿಕ್]

ಅಷ್ಟಕ್ಕೂ ಸಂಭಾವನೆ ಅಂತ ಏನೂ ಇಲ್ಲ, ನಾವು ಬರೀ ಸ್ನೇಹ-ಪ್ರೀತಿಗೆ ಮಾತ್ರ ಆಡೋದು ಅಂತ ಸ್ವತಃ ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ. ಬೇರೆ ಯಾರದ್ರು ಹೇಳಿದ್ರೆ ಇದನ್ನು ನಂಬಲು ಆಗುತ್ತಿರಲಿಲ್ಲ. ಆದರೆ ಶುಕ್ರವಾರ (ಜನವರಿ 22) ಸಿ.ಸಿ.ಎಲ್ ಪ್ರೆಸ್ ಮೀಟ್ ನಲ್ಲಿ ಸ್ವತಃ ಕಿಚ್ಚ ಅವರೇ ಈ ಮಾತನ್ನು ಬಹಿರಂಗವಾಗಿ ಹೇಳಿದ್ದಾರೆ.

'ನಾವು ಕಳೆದ 5 ವರ್ಷಗಳಿಂದ ಸಿಸಿಎಲ್ ಕ್ರಿಕೆಟ್ ಆಡುತ್ತಿದ್ದೇವೆ. ಇದು ಸತತ 6ನೇ ಬಾರಿ ಆಡುತ್ತಿರೋದು. ಕ್ರಿಕೆಟ್ ಆಡಿದ್ದಕ್ಕೆ ಸಂಭಾವನೆ ಏನೂ ಇಲ್ಲ. ನಾನು ಮತ್ತು ನಮ್ಮ ತಂಡದವರೆಲ್ಲ ಪ್ರೀತಿಗಾಗಿ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಾತಿಗೆ ಕಟ್ಟುಬಿದ್ದು ಆಡುತ್ತಿದ್ದೇವೆ ಎಂದು ಸುದೀಪ್ ನುಡಿದಿದ್ದಾರೆ.[2 ಕೋಟಿ ರೂ.ವೆಚ್ಚದಲ್ಲಿ ಸುದೀಪ್ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್]

ಜೊತೆಗೆ ಕರ್ನಾಟಕ ಬುಲ್ಡೋಜರ್ ತಂಡದ ನಾಯಕತ್ವದಿಂದ ಹಿಂದೆ ಸರಿಯುವ ಕುರಿತು ಮಾತನಾಡಿದ ಸುದೀಪ್ ಅವರು 'ಇಷ್ಟು ವರ್ಷ ನಾನು ಕ್ಯಾಪ್ಟನ್ ಆಗಿದ್ದೆ. ಈಗಾಗಲೇ ತಂಡದಲ್ಲಿ ಒಳ್ಳೆಯ ಆಟಗಾರರಿದ್ದಾರೆ. ಹಾಗಾಗಿ ಮುಂದಿನ ವರ್ಷದಿಂದ ನಾಯಕತ್ವವನ್ನು ಬೇರೆಯವರಿಗೆ ಬಿಟ್ಟುಕೊಡುವ ಬಗ್ಗೆ ಯೋಚಿಸುತ್ತಿದ್ದೇನೆ. ಈ ಕುರಿತಾಗಿ ತಂಡದ ಜೊತೆ ಮಾತನಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಸುದೀಪ್ ಅವರು ಸುದ್ದಿಗೋಷ್ಠಿಯಲ್ಲಿ ನುಡಿದಿದ್ದಾರೆ.

ಈ ಬಾರಿಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟಿ ಶರ್ಮಿಳಾ ಮಾಂಡ್ರೆ ಅವರು ಆಯ್ಕೆಯಾಗಿದ್ದು, ಶರ್ಮಿಳಾ ಮಾಂಡ್ರೆ ಸೇರಿದಂತೆ ಅಶೋಕ್ ಖೇಣಿ, ಸುದೀಪ್, ನಟ ಮಯೂರ್ ಪಟೇಲ್, ನಟ ರಾಹುಲ್, ನಟ ಪ್ರದೀಪ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

English summary
Is Sudeep all set to give up captaincy of Karnataka Bulldozers from next year? This is one question that is haunting everybody who attended the press meet of the Karnatak Bulldozers on Friday evening. Sudeep along with the members of Karnataka Bulldozers and Ashok Kheny were present during the launch press meet of the team.
Please Wait while comments are loading...

Kannada Photos

Go to : More Photos