»   » ದರ್ಶನ್ ಗೆ ನಂಬರ್ ಒನ್ ಸ್ಥಾನ ಕೊಟ್ಟ ಸುದೀಪ್

ದರ್ಶನ್ ಗೆ ನಂಬರ್ ಒನ್ ಸ್ಥಾನ ಕೊಟ್ಟ ಸುದೀಪ್

Posted by:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಯಾರು ನಂಬರ್ ಒನ್ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಕೊಡುವುದು ಕಷ್ಟ. ಅಭಿಮಾನಿಗಳ ಪಾಲಿಗೆ ಅವರ ಆರಾಧ್ಯ ನಟರೇ ನಂಬರ್ ಒನ್. ಆದರೆ ನಟ ಸುದೀಪ್ ಅವರು ನಂಬರ್ ಒನ್ ಸ್ಥಾನವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕೊಟ್ಟಿದ್ದಾರೆ.

ಕನ್ನಡ ಚಿತ್ರೋದ್ಯಮದಲ್ಲಿ ಸುದೀಪ್ ಮತ್ತು ದರ್ಶನ್ ಇಬ್ಬರೂ ಕುಚಿಕು ಕುಚಿಕು ಗೆಳೆಯರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ದರ್ಶನ್ ಅಭಿನಯದ 'ಬುಲ್ ಬುಲ್' ಚಿತ್ರ ಗೆದ್ದಿದೆ. ಈ ಬಗ್ಗೆ ಟ್ವೀಟಿಸಿರುವ ಸುದೀಪ್, "Congrats to the team of Bulbul for a wonderful success. I had predicted that my buddy was knocking the door of being # 1, Well "D,, was I wrong''? ಎಂದಿದ್ದಾರೆ.


ಒಂದೊಮ್ಮೆ ಚಾಲೆಂಚಿಂಗ್ ಸ್ಟಾರ್‍ ದರ್ಶನ್ ಮತ್ತು ಸುದೀಪ್ ನಾನೊಂದು ತೀರ ನೀನೊಂದು ತೀರ ಎಂಬಂತಿದ್ದರು. ಆದರೆ ಈಗ ಇಬ್ಬರ ನಡುವೆ ಒಳ್ಳೆ ಸ್ನೇಹ ಸಂಬಂಧವಿದೆ. ಅವರ ಚಿತ್ರ ಗೆದ್ದಾಗ ಇವರು, ಇವರು ಚಿತ್ರ ಗೆದ್ದಾಗ ಬೆನ್ನುತಟ್ಟುತ್ತಾ ಬರುತ್ತಿದ್ದಾರೆ.

ಈಗ ಬುಲ್ ಬುಲ್ ಚಿತ್ರದ ಬಗ್ಗೆ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಷ್ಟೇ. ಇದೇ ಸಂದರ್ಭದಲ್ಲಿ ಸುದೀಪ್ ಅವರ 'ಬಚ್ಚನ್' ಚಿತ್ರವೂ ಯಶಸ್ವಿಯಾಗಿ ಮುನ್ನುಗ್ಗಿದೆ. ಅಭಿಮಾನಿಗಳ ಪಾಲಿಗೆ ಇಬ್ಬರೂ ನಂಬರ್ ಒನ್ ನಟರೆ. ದರ್ಶನ್ ಸಹ ಸುದೀಪ್ ಅವರನ್ನು ಚಿನ್ನಾ ಎಂದು ಕರೆದು ಸ್ನೇಹಪರತೆಯನ್ನು ಮೆರೆದಿದ್ದಾರೆ. ಇಬ್ಬರ ಟ್ವಿಟ್ಟರ್ ಸಂದೇಶಗಳ ವಿನಿಮಯ ಮುಂದಿವೆ ನೋಡಿ. (ಏಜೆನ್ಸೀಸ್)

English summary
Actor Sudeep tweets about Darshan as "Congrats to the team of Bulbul for a wonderful success. I had predicted that my buddy was knocking the door of being # 1, Well "D,, was I wrong''?
Please Wait while comments are loading...

Kannada Photos

Go to : More Photos