»   » ಶಿವಣ್ಣ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಕಿಚ್ಚ

ಶಿವಣ್ಣ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಕಿಚ್ಚ

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ನಿನ್ನೆ(ಅಕ್ಟೋಬರ್ 6) ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಮುಂಜಾನೆ ವ್ಯಾಯಾಮ ಮಾಡುವ ವೇಳೆ ಬಲ ಭುಜ ಭಾಗದಲ್ಲಿ ನೋವು ಕಾಣಿಸಿಕೊಂಡ ಪರಿಣಾಮ ಶಿವಣ್ಣನಿಗೆ ECG ಮತ್ತು ಆಂಜಿಯೋಗ್ರಾಮ್ ಮಾಡಲಾಯ್ತು.

ಇದೀಗ ಶಿವಣ್ಣ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, 'ಇದೀಗ ನಾನು ಎಲ್ಲರ ಹಾರೈಕೆಯಿಂದ ತುಂಬಾನೇ ಆರೋಗ್ಯವಾಗಿದ್ದೇನೆ, ನನಗೆ ಯಾವುದೇ ರೀತಿಯ ತೊಂದರೆ ಇಲ್ಲ, ಇವತ್ತು ಸಂಜೆ ಅಥವಾ ನಾಳೆ ಬೆಳಗ್ಗೆ ಡಿಸ್ಚಾರ್ಜ್ ಮಾಡ್ತೀವಿ ಎಂದು ಡಾಕ್ಟರ್ ಹೇಳಿದ್ದಾರೆ.['ನಾನು ಚೆನ್ನಾಗಿದ್ದೇನೆ...ನೀವೆಲ್ಲಾ ಮನೆಗೆ ಹೋಗಿ' ಎಂದ ಶಿವು]

ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ. ನನ್ನ ಎಲ್ಲಾ ಸ್ಯಾಂಡಲ್ ವುಡ್ ನ ಮಿತ್ರರು ಬಂದು ನನ್ನನ್ನು ವಿಚಾರಿಸಿದ್ದಾರೆ, ಸುದೀಪ್ ಅವರು ದೂರವಾಣಿ ಕರೆ ಮಾಡಿ ನನ್ನೊಂದಿಗೆ ಮಾತಾಡಿದ್ದಾರೆ, ಎಂದು ಸ್ವತಃ ಶಿವಣ್ಣ ಅವರೇ ಟಿವಿ9 ಕನ್ನಡ ವಾಹಿನಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.[ಶಿವಣ್ಣ ಆರೋಗ್ಯದ ಬಗ್ಗೆ ಪತ್ನಿ ಗೀತಾ ಉವಾಚ]

ಇನ್ನು ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಅನಾರೋಗ್ಯದ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ದೂರವಾಣಿ ಮೂಲಕ ವಿಚಾರಿಸಿದರು, ಜೊತೆಗೆ ಶಿವಣ್ಣ ಅವರು ಆದಷ್ಟು ಬೇಗ ಗುಣಮುಖರಾಗಿ ಮನೆಗೆ ಹಿಂತಿರುಗಲಿ ಎಂದು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಹಾರೈಸಿದ್ದಾರೆ.

"ನಾನು ಗೀತಕ್ಕ ಮತ್ತು ಶಿವಣ್ಣ ಅವರೊಂದಿಗೆ ಮಾತನಾಡಿದ್ದೇನೆ, ಈಗ ಶಿವಣ್ಣ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಅವರು ಸಂಪೂರ್ಣವಾಗಿ ಗುಣಮುಖರಾಗಿ ಹಿಂತಿರುಗುತ್ತಾರೆ. ನಮ್ಮ ಶಿವಣ್ಣ ಕಲ್ಲು ಬಂಡೆ ಇದ್ದಂತೆ, ಅವರು ಮತ್ತೆ ಅದೇ ಉತ್ಸಾಹದೊಂದಿಗೆ ಹಿಂತಿರುಗುತ್ತಾರೆ. ಶಿವಣ್ಣ ಅವರ ಮೇಲೆ ನಿಮ್ಮೆಲ್ಲರ ಪ್ರೀತಿ ಸದಾ ಹೀಗೆ ಇರಲಿ" ಎಂದು ಅಭಿಮಾನಿಗಳಿಗೆ ಸುದೀಪ್ ಟ್ವೀಟ್ ಮೂಲಕ ತಿಳಿಸಿದ್ದಾರೆ.[ಹ್ಯಾಟ್ರಿಕ್ ಹೀರೋ ಹಾರ್ಟ್ ಅಟ್ಯಾಕ್ ಸುದ್ದಿ ಕೇಳಿ ಅಂಬರೀಶ್ ಶಾಕ್!]

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿನ್ನೆ (ಅಕ್ಟೋಬರ್ 6) ರಾತ್ರಿ ಹೊತ್ತು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ಶಿವಣ್ಣ ಅವರ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ಸ್ಯಾಂಡಲ್ ವುಡ್ ಸ್ಟಾರ್ ಗಳಾದ ತಾರಾ, ಸುಧಾರಾಣಿ, ಕ್ರೇಜಿಸ್ಟಾರ್ ರವಿಚಂದ್ರನ್, ಲವ್ಲೀ ಸ್ಟಾರ್ ಪ್ರೇಮ್, ದುನಿಯಾ ವಿಜಿ, ರಾಕ್ ಲೈನ್ ವೆಂಕಟೇಶ್, ಜೋಗಿ ಪ್ರೇಮ್, ರಕ್ಷಿತಾ ಮುಂತಾದವರು ಆಸ್ಪತ್ರೆಗೆ ಆಗಮಿಸಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕ್ಷೇಮ ವಿಚಾರಿಸಿದ್ದಾರೆ.

English summary
After proper treatment, Kannada Actor Shivarajkumar is absolutely fit and fine. Kannada Actor Sudeep has expressed his wishes hearing the news of Kannada Actor Shivarajkumar has suffered heart attack.
Please Wait while comments are loading...

Kannada Photos

Go to : More Photos