»   » ತಂತ್ರಜ್ಞರಿಗೆ 'ರನ್ನ' ತಂಡದಿಂದ ಸೂಪರ್ ಸರ್ಪ್ರೈಸ್!

ತಂತ್ರಜ್ಞರಿಗೆ 'ರನ್ನ' ತಂಡದಿಂದ ಸೂಪರ್ ಸರ್ಪ್ರೈಸ್!

Written by: ಜೀವನರಸಿಕ
Subscribe to Filmibeat Kannada

ಯಾವುದೇ ಸಿನಿಮಾದಲ್ಲೂ ತೆರೆಮೇಲೆ ಮಿಂಚೋದು ನಟ ನಟಿಯರು ಮಾತ್ರ. ಇತ್ತೀಚೆಗೆ ಹೆಚ್ಚು ಅಂದ್ರೆ ಮೇಕಿಂಗ್ನಲ್ಲಿ ಚಿತ್ರದ ನಿರ್ದೇಶಕ, ಸಂಗೀತ ನಿರ್ದೇಶಕ ಮತ್ತು ಹಿನ್ನೆಲೆ ಹಾಡುಗಾರರು ಮಾತ್ರ ಕಾಣಿಸಿಕೊಳ್ತಾರೆ. ಆದ್ರೆ 'ರನ್ನ' ಚಿತ್ರ ತಂಡ ತಂತ್ರಜ್ಞರಿಗೆ ಸ್ಪೆಷಲ್ ಗಿಫ್ಟ್ ಕೊಡ್ತಿದೆ.

ಚಿತ್ರದ ಪ್ರತಿಯೊಬ್ಬ ತಂತ್ರಜ್ಞರ ಕುಟುಂಬವನ್ನೂ ಚಿತ್ರದ ಟೈಟಲ್ಕಾರ್ಡ್ ನಲ್ಲಿ ತೋರಿಸೋ ಪ್ಲಾನ್ ಮಾಡಿದೆ ನಿರ್ದೇಶಕ ನಂದಕಿಶೋರ್ ಅಂಡ್ ಕಿಚ್ಚ ಟೀಂ. ಚಿತ್ರ ಆರಂಭವಾಗ್ತಿದ್ದಂತೆ ಚಿತ್ರಕ್ಕಾಗಿ ಕೆಲಸ ಮಾಡಿದ ಅಷ್ಟೂ ತಂತ್ರಜ್ಞರ ಕುಟುಂದ ಚಿತ್ರ ತೆರೆಯಮೇಲೆ ಕಾಣಿಸಲಿದೆ. [ಸೂಪರ್ಸ್ಟಾರ್ಗಳ ಹೊಸ ಚಾಳಿ]


ಕೆಲವು ಸಿನಿಮಾಗಳು ಚಿತ್ರದಲ್ಲಿ ಕೆಲಸ ಮಾಡಿದ ತಂತ್ರಜ್ಞರನ್ನ ಒಂದು ಹಾಡಿನಲ್ಲಿ ತೋರಿಸುವ ಪ್ರಯತ್ನ ಮಾಡಿದ್ವು. ಆದ್ರೆ ಸ್ಟಾರ್ ಸಿನಿಮಾಗಳು ಈ ತರಹದ ವಿಷಯಗಳಲ್ಲಿ ತಲೆಕೆಡಿಸಿಕೊಳ್ಳೋದಿಲ್ಲ. ಆದ್ರೆ ರನ್ನ ಚಿತ್ರತಂಡ ಮಾತ್ರ ಈ ಪ್ರಯತ್ನ ಮಾಡ್ತಿದೆ.

ತೆಲುಗಿನ 'ಅತ್ತಾರೆಂಟಿಕಿ ದಾರೇದಿ' ರೀಮೇಕ್ ಚಿತ್ರವಾಗಿರೋ, ಕಿಚ್ಚ ಸುದೀಪ್, ರಚಿತಾರಾಮ್, ಹರಿಪ್ರಿಯ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರೋ 'ರನ್ನ' ಚಿತ್ರ 22ರಂದು ರಾಜ್ಯಾದ್ಯಂತ ತೆರೆಗೆ ಬರೋ ನಿರೀಕ್ಷೆಯಿದೆ. ಇದರ ಜೊತೆಗೆ ಶಿವರಾಜ್ ಕುಮಾರ್ ಅವರು ಬಹುನಿರೀಕ್ಷಿತ 'ವಜ್ರಕಾಯ' ಕೂಡ ತೆರೆಗೆ ಅಪ್ಪಳಿಸಲಿದೆ. ಇದು ರಿಮೇಕ್ ವರ್ಸಸ್ ಸ್ವಮೇಕ್. ಯಾವುದು ಗೆಲ್ಲುವುದೋ? ['ರನ್ನ' ಮೇ.22ಕ್ಕಾದರೂ ಬರಲಿದೆಯಾ?]

English summary
Nanda Kishore directorial ambitious Kannada movie 'Ranna' is ready to hit screen. The director has decided to honor the technicians and their family. Probably this is happening for the first time in Kannada film industry. Sudeep, Rachita Ram and Haripriya are in the lead.
Please Wait while comments are loading...

Kannada Photos

Go to : More Photos