»   » 'ಕಬಾಲಿ' ಚಿತ್ರಕ್ಕೆ ರಜನಿ ಪಡೆದುಕೊಂಡ ಸಂಭಾವನೆ ಎಷ್ಟು.?

'ಕಬಾಲಿ' ಚಿತ್ರಕ್ಕೆ ರಜನಿ ಪಡೆದುಕೊಂಡ ಸಂಭಾವನೆ ಎಷ್ಟು.?

Posted by:
Subscribe to Filmibeat Kannada

ಕಾಲಿವುಡ್ ನಟ ರಜನಿಕಾಂತ್ ಅವರ 'ಕಬಾಲಿ' ಇಷ್ಟರಮಟ್ಟಿಗೆ ಮಾಸ್ ಹಿಟ್ ಆಗಿ ದಾಖಲೆ ಕಲೆಕ್ಷನ್ ಮಾಡಿದೆ ಅಂದ್ರೆ, ಅವರು ಈ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದಿರಬಹುದು ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರುತ್ತೆ.

ಜೊತೆಗೆ 'ಕಬಾಲಿ' ಚಿತ್ರ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಬ್ರೇಕ್ ಕೊಟ್ಟ ಸಿನಿಮಾ ಅಂದರೂ ಖಂಡಿತ ತಪ್ಪಾಗಲ್ಲ. ಯಾಕೆಂದ್ರೆ 'ಲಿಂಗಾ' ಸಿನಿಮಾ ಬಿಡುಗಡೆಗೂ ಮುನ್ನ ತುಂಬಾ ಹೈಪ್ ಕ್ರಿಯೇಟ್ ಮಾಡಿ ಬಿಡುಗಡೆ ಆದ ನಂತರ ಮಕಾಡೆ ಮಲಗಿತ್ತು. ಜೊತೆಗೆ ಅಭಿಮಾನಿಗಳ ನಿರೀಕ್ಷೆಗೂ ಕೆ.ಎಸ್ ರವಿಕುಮಾರ್ ಬಕೆಟ್ ತಣ್ಣೀರು ಎರಚಿದ್ದರು.

ಈ ಬಾರಿ ದೇಶದಾದ್ಯಂತ 'ಕಬಾಲಿ' ಮೇನಿಯಾ ಆರಂಭ ಆದಾಗ ಮತ್ತೆ ರಜನಿ ಹವಾ ಶುರು ಆಯ್ತು ಅಂತ ಅಭಿಮಾನಿಗಳು ಖುಷಿಪಟ್ರು. ಆದ್ರೆ 'ಕಬಾಲಿ' ಕೂಡ ಪ್ರೇಕ್ಷಕರಿಗೆ ಅಷ್ಟೊಂದು ಖುಷಿ ಕೊಡದಿದ್ರೂ, ಬಾಕ್ಸಾಫೀಸ್ ನಲ್ಲಿ ಮಾತ್ರ ರುದ್ರತಾಂಡವ ಆಡಿತ್ತು, ಅನ್ನೋದಕ್ಕೆ ನಾಲ್ಕು ದಿನಗಳ ಕಲೆಕ್ಷನ್ ರಿಪೋರ್ಟ್ ಸಾಕ್ಷಿ.[4 ದಿನದ ಕಲೆಕ್ಷನ್: ರಜನಿ ಹಳೇ ದಾಖಲೆ ಮುರಿದ 'ಕಬಾಲಿ']

ಅದೆಲ್ಲಾ ಓಕೆ ಆದ್ರೆ 'ಕಬಾಲಿ' ಸಿನಿಮಾವನ್ನು ಪೂರ್ತಿ ಮಲೆಷ್ಯಾದಲ್ಲಿ ಬಹಳ ರಿಚ್ ಆಗಿ ಶೂಟ್ ಮಾಡಿದ್ದಾರೆ ಅಂತ ಅಂದಾಗ ರಜನಿಕಾಂತ್ ಅವರಿಗೆ ಎಷ್ಟು ಸಂಭಾವನೆ ಕೊಟ್ಟಿರಬಹುದು.

ಅಲ್ಲದೇ ಬರೀ 120 ಕೋಟಿ ರೂಪಾಯಿ ಬಜೆಟ್ ನಲ್ಲಿ ಎಲ್ಲವನ್ನೂ ಇಷ್ಟು ಚೆನ್ನಾಗಿ ಹೇಗೆ ನಿಭಾಯಿಸಿದ್ರು, ಅಂತ್ಹೆಲ್ಲಾ ನೂರಾರು ಪ್ರಶ್ನೆಗಳು ಎಲ್ಲರ ತಲೆಯಲ್ಲಿ ಓಡಾಡಬಹುದು. ಇದಕ್ಕೆಲ್ಲಾ ಉತ್ತರ ಕೆಳಗಿನ ಸ್ಲೈಡ್ಸ್ ಗಳಲ್ಲಿ..

'ಕಬಾಲಿ'ಗೆ ರಜನಿ ಪಡೆದ ಸಂಭಾವನೆ

'ಕಬಾಲಿ'ಗೆ ರಜನಿ ಪಡೆದ ಸಂಭಾವನೆ

ಮೂಲಗಳ ಪ್ರಕಾರ 'ಕಬಾಲಿ' ಚಿತ್ರದಲ್ಲಿ ನಟಿಸಲು, ವಿಶ್ವದ ಎರಡನೇ ಅತ್ಯಂತ ದುಬಾರಿ ನಟ ಅಂತಾನೇ ಖ್ಯಾತಿ ಪಡೆದಿರುವ ರಜನಿಕಾಂತ್ ಅವರು ಸುಮಾರು 50 ರಿಂದ 60 ಕೋಟಿ ರೂಪಾಯಿಯನ್ನು ಸಂಭಾವನೆಯಾಗಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.[ಬಾಕ್ಸಾಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಪುಡಿಗಟ್ಟಿದ 'ಕಬಾಲಿ']

'ಲಿಂಗಾ' ಚಿತ್ರಕ್ಕೆ ಪಡೆದ ಸಂಭಾವನೆ

'ಲಿಂಗಾ' ಚಿತ್ರಕ್ಕೆ ಪಡೆದ ಸಂಭಾವನೆ

ರಜನಿಕಾಂತ್ ಅವರು 'ಲಿಂಗಾ' ಚಿತ್ರದ ನಟನೆಗೂ ಸುಮಾರು 60 ಕೋಟಿ ರೂಪಾಯಿ ಪಡೆದಿದ್ದರು. 'ಕಬಾಲಿ' ಮತ್ತು 'ಲಿಂಗಾ' ಚಿತ್ರದ ಸಂಭಾವನೆ ಅಂಕಿ ಅಂಶ ನೋಡುತ್ತಿದ್ದರೆ, ರಜನಿ ಅವರ ಪ್ರತೀ ಚಿತ್ರದ ಸಂಭಾವನೆ ಒಂದೇ ರೇಂಜ್ ನಲ್ಲಿದೆ ಅಂತಾಯ್ತು. ಈ ಬಾರಿ ರಜನಿ ಅವರು ತಮ್ಮ ಸಂಭಾವನೆಯಲ್ಲಿ ಹೆಚ್ಚು-ಕಡಿಮೆ ಮಾಡಿಲ್ಲ.['ಲಿಂಗಾ' ಚಿತ್ರಕ್ಕೆ ರಜನಿಕಾಂತ್ ಸಂಭಾವನೆ ಅಷ್ಟೊಂದಾ!]

'ಲಿಂಗಾ' ವಿತರಣಾ ಹಕ್ಕು ದಾಖಲೆ ಮಾಡಿತ್ತು

'ಲಿಂಗಾ' ವಿತರಣಾ ಹಕ್ಕು ದಾಖಲೆ ಮಾಡಿತ್ತು

ಪಾ ರಂಜಿತ್ ನಿರ್ದೇಶನದ 'ಕಬಾಲಿ' ವಿತರಣಾ ಹಕ್ಕು ಹಾಗೂ ಸ್ಯಾಟಲೈಟ್ ನಿಂದ ಸುಮಾರು 200 ಕೋಟಿ ಗಳಿಕೆ ಮಾಡಿ ದಾಖಲೆ ಮಾಡಿದ್ರೆ, 'ಲಿಂಗಾ' ಸುಮಾರು 120 ಕೋಟಿ ರೂಪಾಯಿಯನ್ನು ವಿತರಣಾ ಹಕ್ಕಿನ ಮೂಲಕ ಗಳಿಕೆ ಮಾಡಿತ್ತು.

ಗ್ರಾಫಿಕ್ಸ್ ಬಳಸಲಾಗಿದೆ

ಗ್ರಾಫಿಕ್ಸ್ ಬಳಸಲಾಗಿದೆ

ಅಂದಹಾಗೆ 'ಕಬಾಲಿ' ಅರ್ಧ ಸಿನಿಮಾವನ್ನು ಮಲೇಷ್ಯಾದಲ್ಲಿ ಚಿತ್ರೀಕರಣ ಮಾಡಿರುವುದರಿಂದ ಈ ಚಿತ್ರಕ್ಕೆ ಭಾರಿ ವೆಚ್ಚವಾಗಿರಬಹುದು ಅಂತ ನೀವಂದುಕೊಂಡರೆ ನಿಮ್ಮ ಊಹೆ ಸುಳ್ಳು. ಯಾಕೆಂದರೆ ಅನಿವಾರ್ಯ ಎಂಬ ದೃಶ್ಯಗಳನ್ನು ಮಾತ್ರ ಮಲೇಷ್ಯಾದಲ್ಲಿ ಚಿತ್ರೀಕರಣ ಮಾಡಿದ್ದು ಬಿಟ್ಟರೆ, ಇನ್ನುಳಿದಂತೆ ಚೆನ್ನೈನ ಸ್ಟುಡಿಯೋದಲ್ಲಿ ಕ್ರೋಮೋ ಕೀ (ಗ್ರೀನ್ ಮ್ಯಾಟ್/ಪರದೆ) ಬಳಸಿ, ಗ್ರಾಫಿಕ್ಸ್ ಬಳಕೆ ಮಾಡಲಾಗಿದೆ.

ದುಬಾರಿ ಕಾರು, ಅಭಿಮಾನಿಗಳ ಗಿಫ್ಟ್

ದುಬಾರಿ ಕಾರು, ಅಭಿಮಾನಿಗಳ ಗಿಫ್ಟ್

ಚಿತ್ರದಲ್ಲಿ ರಜನಿಕಾಂತ್ ಬಳಕೆ ಮಾಡಿದ್ದ ದುಬಾರಿ ಕಾರು ಹಾಗೂ ಆಕ್ಷನ್ ಸೀಕ್ವೆನ್ಸ್ ಗಳಲ್ಲಿ ಬಳಕೆ ಮಾಡಿದ್ದ ಭಾರಿ ವಾಹನಗಳನ್ನು, ಮಲೇಷ್ಯಾದಲ್ಲಿದ್ದ ರಜನಿಕಾಂತ್ ಅವರ ಕಟ್ಟಾ ಅಭಿಮಾನಿಗಳು ಉಚಿತವಾಗಿ ಚಿತ್ರೀಕರಣಕ್ಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

English summary
The speculation is that, in 'Kabali' movie Rajinikanth gets Rs 50 to 60 crore salary. He is in the first position in the India film actors top list salary.
Please Wait while comments are loading...

Kannada Photos

Go to : More Photos