»   » ಅಕ್ಟೋಬರ್ ನಲ್ಲಿ ಅಬ್ಬರಿಸಲಿವೆ ಸ್ವಮೇಕ್ ಚಿತ್ರಗಳು

ಅಕ್ಟೋಬರ್ ನಲ್ಲಿ ಅಬ್ಬರಿಸಲಿವೆ ಸ್ವಮೇಕ್ ಚಿತ್ರಗಳು

Written by: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಸಿನಿಮಾಗಳು ಒಂದೊಳ್ಳೆ ಟೈಮ್ ನಲ್ಲಿ ರಿಲೀಸಾಗೋಕೆ ಕಾದು ಕುಳಿತಿವೆ. ಈಗ ಅಂತಹಾ ಒಳ್ಳೆಯ ಸಮಯ ಬಂದಂತೆ ತೋರುತ್ತಿದೆ. ಬಹು ನಿರೀಕ್ಷಿತ ಸ್ಟಾರ್ ಗಳ ಭರ್ಜರಿ ಸಿನಿಮಾಗಳು ಅಕ್ಟೋಬರ್ ತಿಂಗಳಲ್ಲಿ ಅಬ್ಬರಿಸೋಕೆ ಕಾದಿವೆ. ಅಚ್ಚರಿ ಅಂದ್ರೆ ಅವೆಲ್ಲವೂ ಸ್ವಮೇಕ್ ಸಿನಿಮಾಗಳು.

ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಇಲ್ಲಿಯವರೆಗೂ ಬಂದು ಗೆದ್ದ ಸಿನಿಮಾಗಳಲ್ಲಿ 'ಉಗ್ರಂ' ಒಂದು ಸ್ವಮೇಕ್ ಬಿಟ್ರೆ ಮಾಣಿಕ್ಯ, ಚಂದ್ರಲೇಖ, ದೃಶ್ಯ, ಒಗ್ಗರಣೆ ತರಹದ ಉಳಿದೆಲ್ಲವೂ ರೀಮೇಕ್ ಅನ್ನೋ ಹಣೆಪಟ್ಟಿ ಹೊತ್ತು ಹೊರಬಂದಿವೆ. ರೀಮೇಕ್ ಸಿನಿಮಾಗಳು ಗೆದ್ದರೆಷ್ಟು ಬಿಟ್ಟರೆಷ್ಟು ಅನ್ನೋ ವಾದ ಗಾಂಧಿನಗರದ ಸಾತ್ವಿಕರದ್ದು.

ಆದರೆ ಈ ಅಕ್ಟೋಬರ್ ನಲ್ಲಿ ಸ್ವಮೇಕ್ ಸಿನಿಮಾಗಳ ಸುರಿಮಳೆ. ಚಿತ್ರಪ್ರೇಮಿಗಳು ಹೆಮ್ಮೆಯಿಂದ ಕಾಲರ್ ಎತ್ತಿ ಖುಷಿಪಡೋ ಸಮಯ ಇದು. ನಮ್ಮದೇ ಭಾಷೆಯ ಕಥೆ ನಮ್ಮದೇ ನೆಲದ ಸಿನಿಮಾ ಅನ್ನಬಹುದಾದ ಸಮಯ. ಹಾಗಾದ್ರೆ ಆ ಸಿನಿಮಾಗಳ್ಯಾವುವು ಒಂದೊಂದಾಗಿ ನೋಡಿ ಆನಂದಿಸಿ ಸ್ಲೈಡ್ ರೀಲ್ ನಲ್ಲಿ.

ಮಹೇಶ್ ಸುಖಧರೆ ಅಂಬರೀಶ

ಮಹೇಶ್ ಸುಖಧರೆ ಅಂಬರೀಶ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ ಕನ್ನಡ ಮಣ್ಣಿನ ಕಥೆ 'ಅಂಬರೀಶ' ಅಕ್ಟೋಬರ್ ನಲ್ಲಿ ಥಿಯೇಟರ್ ಗಳಲ್ಲಿ ಹಬ್ಬ ನೀಡುತ್ತೆ. ದರ್ಶನ್ ಜೊತೆ ಪ್ರಿಯಾಮಣಿ, ರಚಿತಾರಾಮ್ ಜೋಡಿಯಾಗಿದ್ದು ಅಂಬರೀಶನ ಭೋರ್ಗರೆತ ಜೋರೇ ಇರುತ್ತೆ.

ಶಿವಮಣಿ ಮೇಕಿಂಗ್ ಸಿಂಹಾದ್ರಿ

ಶಿವಮಣಿ ಮೇಕಿಂಗ್ ಸಿಂಹಾದ್ರಿ

ಸ್ಯಾಂಡಲ್ ವುಡ್ ಗೆ ಅಪರೂಪದ ಸಿನಿಮಾಗಳನ್ನ ಕೊಟ್ಟ ನಿರ್ದೇಶಕ ಶಿವಮಣಿ, ಒಂದು ಗ್ಯಾಪ್ ನ ನಂತರ ಮಾಡ್ತಿರೋ ಸಿನಿಮಾ 'ಸಿಂಹಾದ್ರಿ'. ಆಕ್ಷನ್ ಸೆಂಟಿಮೆಂಟ್ ಧಮಾಕಾ ಆಗಿರೋ ಸಿಂಹಾದ್ರಿ ಅಕ್ಟೋಬರ್ 2ಕ್ಕೆ ತೆರೆಗೆ ಬರ್ತಿದೆ.

ಶ್ರೀನಿವಾಸರಾಜು-ಉಪ್ಪಿ ಬಸವಣ್ಣ

ಶ್ರೀನಿವಾಸರಾಜು-ಉಪ್ಪಿ ಬಸವಣ್ಣ

'ದಂಡುಪಾಳ್ಯ' ಚಿತ್ರದ ನಂತರ ಶ್ರೀನಿವಾಸರಾಜು ನಿರ್ದೇಶನದ ಬಹು ನಿರೀಕ್ಷಿತ ಮತ್ತು ಬಹಳ ವಿವಾದಾತ್ಮಕ ಚಿತ್ರ 'ಬಸವಣ್ಣ' ಈ ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ತೆರೆಗೆ ಬರೋಕೆ ತಯಾರಾಗಿದೆ. ಉಪ್ಪಿಗೆ ರಾಗಿಣಿ ಜೋಡಿಯಾಗಿದ್ದು 'ಆರಕ್ಷಕ' ಚಿತ್ರದ ನಂತರ ಉಪೇಂದ್ರ-ರಾಗಿಣಿ ಜೋಡಿ ಮತ್ತೆ ಒಂದಾಗ್ತಿರೋ ಚಿತ್ರ ಇದು.

ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ

ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ' ಇತ್ತೀಚೆಗೆ ಕಲರ್ ಫುಲ್ ಟೀಸರ್ ಹೊರ ತಂದಿದ್ದು ದೀಪಾವಳಿಗೆ ಚಿತ್ರ ತೆರೆಗೆ ಬರೋ ಪ್ಲಾನ್ ನಲ್ಲಿದೆ. ಇಲ್ಲದಿದ್ರೆ ನವೆಂಬರ್ 1ಕ್ಕೆ ತೆರೆಗೆ ಬರೋದು ಪಕ್ಕಾ.

ಬಹಳಾ ಅದ್ದೂರಿ ಬಹದ್ದೂರ್

ಬಹಳಾ ಅದ್ದೂರಿ ಬಹದ್ದೂರ್

ಅದ್ಧೂರಿ ಸ್ಟಾರ್ ಧೃವ ಸರ್ಜಾ ಅಭಿನಯ 'ಬಹದ್ದೂರ್' ಚಿತ್ರ ಸದ್ಯದಲ್ಲೇ ತೆರೆಗೆ ಬರುತ್ತೆ. ಚಿತ್ರದ ಕಥೆ ಮೈಸೂರಿನಲ್ಲಿ ನಡೆದ ನೈಜ ಘಟನೆ. ರಾಧಿಕಾ ಪಂಡಿತ್-ಧೃವ ಸರ್ಜಾ ಎರಡನೇ ಬಾರಿ ಜೋಡಿಯಾಗಿರೋದ್ರಿಂದ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಬೆಳ್ಳಿ ಬರ್ತಿದೆ ಬೆಳ್ಳಿ ತೆರೆಗೆ

ಬೆಳ್ಳಿ ಬರ್ತಿದೆ ಬೆಳ್ಳಿ ತೆರೆಗೆ

ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಮತ್ತು ವಿನೋದ್ ಪ್ರಭಾಕರ್, ಒರಟ ಪ್ರಶಾಂತ್ ಮತ್ತಿತರರು ಅಭಿನಯದ ಬೆಳ್ಳಿ ಚಿತ್ರ ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರ್ತಿದೆ. ಶಿವರಾಜ್ ಕುಮಾರ್ ಗೆ ಕೃತಿ ಖರಬಂದ ಜೋಡಿಯಾಗಿದ್ದಾರೆ.

English summary
Series of Kannada swamake (Original) movies all set to release in Octorber 2014. Upendra's Basavanna, Darshan's Ambareesha, Shivrajkumar's Belli, Yash's Mr & Mrs Ramachari, Dhruva Sarja's Bahaddur all set to roars in October.
Please Wait while comments are loading...

Kannada Photos

Go to : More Photos