twitter
    For Quick Alerts
    ALLOW NOTIFICATIONS  
    For Daily Alerts

    ಕರವೇಯ ನಾರಾಯಣಗೌಡರೀಗ 'ಕನ್ನಡ ಸಾಮ್ರಾಟ್'

    By ವೀರಕಪುತ್ರ ಶ್ರೀನಿವಾಸ
    |

    ಡಾ.ವಿಷ್ಣುವರ್ಧನ ಸೇನಾ ಸಮಿತಿಯು ಕಳೆದ ನಾಲ್ಕು ದಶಕಗಳಿಂದ ನಾಡು ನುಡಿ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ತಮಗೆ ತಿಳಿದಿದೆ. ಡಾ.ವಿಷ್ಣು ಅವರ ಹಾಕಿಕೊಟ್ಟ ಹಾದಿಯಲ್ಲಿಯೇ ಸಾಗುತ್ತಿರುವ ಈ ಸಂಘಟನೆಯು ಈ ತಿಂಗಳ ನವೆಂಬರ್ ನಿಂದ "ಕನ್ನಡ ಸಾಮ್ರಾಟ್" ಎಂಬ ಪ್ರಶಸ್ತಿಯನ್ನು ಕನ್ನಡ ಚಳವಳಿಗಾರರಿಗೆ ಪ್ರತಿ ವರ್ಷವೂ ನೀಡಲು ನಿರ್ಧರಿಸಿದೆ.

    ಡಾ.ವಿಷ್ಣು ಅವರು ಸದಾ ಒಂದು ಮಾತನ್ನು ಹೇಳುತ್ತಿದ್ದರು, "ಕನ್ನಡಿಗರಲ್ಲಿ ಅಡಗಿರುವ ಅಭಿಮಾನ, ಶೌರ್ಯ ಇವನ್ನೆಲ್ಲಾ ಹೊರತರುವ ನಾಯಕ ನಮಗೆ ಬೇಕು. ನಾಡಿನ ನೆಲ-ಜಲಗಳಿಗೆ ಆತಂಕವಿರುವ ಹಿನ್ನೆಲೆಯಲ್ಲಿ ಕನ್ನಡಿಗರನ್ನೆಲ್ಲಾ ನಿದ್ದೆಯಿಂದ ಎಬ್ಬಿಸುವಂತಹ ದಿಟ್ಟ ನಾಯಕತ್ವದ ವ್ಯಕ್ತಿ ಕರ್ನಾಟಕಕ್ಕೆ ಬೇಕು". [ಡಾ.ವಿಷ್ಣು ಸ್ಮಾರಕಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳು]

    Kannada Samrat award to Narayana Gowda
    ಬಹುಶಃ ಡಾ.ವಿಷ್ಣು ಅವರು ಇವತ್ತು ನಮ್ಮೊಂದಿಗಿದ್ದಿದ್ದರೆ ಅಂತಹ ವ್ಯಕ್ತಿ 'ಟಿ.ಎ.ನಾರಾಯಣಗೌಡ'ರು ಎಂಬುದನ್ನು ಹೀಗಾಗಲೇ ಬಹಳ ಹೆಮ್ಮೆಯಿಂದ ಹೇಳಿರುತ್ತಿದ್ದರು. ಕನ್ನಡಿಗರನ್ನು ನೆಲ-ಜಲದ ವಿಷಯದಲ್ಲಿ ಬೃಹತ್ ಪ್ರಮಾಣದಲ್ಲಿ ಒಗ್ಗೂಡಿಸಿದ ಏಕೈಕ ವ್ಯಕ್ತಿ ಟಿ.ಎ.ನಾರಾಯಣಗೌಡರು ಎಂಬುದನ್ನು ಯಾರೂ ಅಲ್ಲಗಳೆಯಲಾರರು.

    ಕನ್ನಡ ಚಳವಳಿಗಳಿಗೆ ಹೊಸ ಹುರುಪನ್ನು ನೀಡಿದ ಅವರು, ನೆಲ-ಜಲದ ರಕ್ಷಣೆಗೆ ಪ್ರಾಣ, ಕುಟುಂಬ ಎಲ್ಲವನ್ನೂ ಪಣಕ್ಕಿಟ್ಟು ಹೋರಾಡಿದ್ದು ಕನ್ನಡಿಗರೆಂದೂ ಮರೆಯಲಾರರು. ಕನ್ನಡನಾಡಿನ ಹೆಮ್ಮೆಯ ಪ್ರತೀಕವಾಗಿರುವ ಇವರನ್ನು ಡಾ.ವಿಷ್ಣುವರ್ಧನ ಸೇನಾ ಸಮಿತಿಯು ನವೆಂಬರ್ ತಿಂಗಳಿನಲ್ಲಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅದ್ದೂರಿ ಸಮಾರಂಭವನ್ನೇರ್ಪಡಿಸಿ 'ಕನ್ನಡ ಸಾಮ್ರಾಟ್' ಪ್ರಶಸ್ತಿಯನ್ನು ನೀಡಿ ಗೌರವಿಸಬೇಕೆಂದು ಡಾ.ವಿಷ್ಣು ಸೇನಾ ಸಮಿತಿಯು ತೀರ್ಮಾನಿಸಿದೆ.

    ಈ ಸಂಬಂಧ ಟಿ.ಎ.ನಾರಾಯಣಗೌಡರನ್ನು ಭೇಟಿ ಮಾಡಿದ ಡಾ.ವಿಷ್ಣುವರ್ಧನ ಸೇನಾ ಸಮಿತಿ ತಂಡವು ಅವರಿಗೆ ಹೂಗುಚ್ಛವಿತ್ತು ಆಹ್ವಾನವನ್ನು ನೀಡಿದರು. ತಂಡದಲ್ಲಿ ಪಿ.ಸರವಣ, ಮಂಜುನಾಥ್, ಪ್ರತಾಪ್, ಯದುನಂದನ್, ಅರ್ಜುನ್, ಜಗದೀಶ್, ಆನಂದರಾಚ್ ಮತ್ತು ಧನಂಜಯ್ ಹಾಜರಿದ್ದರು. ಈ ಕಾರ್ಯಕ್ರಮವ ಕಿಮ್ಸ್ ಆಸ್ಪತ್ರೆ ಆವರಣದಲ್ಲಿರುವ 'ಕುವೆಂಪು ಕಲಾಕ್ಷೇತ್ರ'ದಲ್ಲಿ ನವೆಂಬರ್ 23ರಂದು ಬೆಳಿಗ್ಗೆ 11.00ಕ್ಕೆ ಹಮ್ಮಿಕೊಳ್ಳಲಾಗಿದೆ. (ಲೇಖಕರು: ಗೌರವ ಕಾರ್ಯದರ್ಶಿ, ಕುವೆಂಪುನಗರ ಕನ್ನಡ ಸಾಹಿತ್ಯ ಪರಿಷತ್ತು)

    English summary
    TA Narayana Gowda, President of Karnataka Rakshana Vedike, to receive 'Kannada Samrat' award by Dr. Vishnu Sena Samithi on 23rd November, 2014 at Kuvempu Kalakshetra, Bangalore. Vishnu Sena Samithi has been observing Karnataka Rajyotsava since several years and has been promoting Kannada culture and language through various activities.
    Saturday, October 25, 2014, 11:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X