»   » ಲಿವ್ ಇನ್ ಸಂಬಂಧದ ಬಗ್ಗೆ ತಾಪ್ಸಿ ಮೌನ ಮಾತಾದಾಗ

ಲಿವ್ ಇನ್ ಸಂಬಂಧದ ಬಗ್ಗೆ ತಾಪ್ಸಿ ಮೌನ ಮಾತಾದಾಗ

Written by: ಉದಯರವಿ
Subscribe to Filmibeat Kannada

ತಮ್ಮ ಮೋಹಕ ಮೈಮಾಟದಿಂದ ಪ್ರೇಕ್ಷಕರನ್ನು ಸೆಳೆಯುತ್ತಿರುವ ತಾರೆ ತಾಪ್ಸಿ ಪನ್ನು. ಇತ್ತೀಚೆಗೆ ತೆರೆಕಂಡ 'ಕಾಂಚನಾ 2' ಚಿತ್ರದಲ್ಲಿ ಪ್ರೇಕ್ಷಕರಿಗೆ ಭಿನ್ನ ಅನುಭವ ನೀಡಿದ್ದರು. ಆ ಚಿತ್ರದಲ್ಲಿ ಪ್ರೇಕ್ಷಕರನ್ನು ಭಯಭೀತಗೊಳಿಸಿದ್ದರು ತಾಪ್ಸಿ.

ಈ ಬೆಡಗಿ ಮಾತಿಗೆ ಶುರುವಿಟ್ಟುಕೊಂಡರೆ ಎಲ್ಲೂ ಕಪಟ, ಡಾಂಬಿಕತೆ ಕಾಣಿಸುವುದಿಲ್ಲ. ಎಲ್ಲವೂ ನೇರ ದಿಟ್ಟ ನಿರಂತರ. ತನ್ನ ವೃತ್ತಿ ಬದುಕು, ಕಷ್ಟ ಸುಖ, ಸಹ ಜೀವನ, ಅಶ್ಲೀಲ ಚಿತ್ರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. [ಚಿತ್ರಗಳಲ್ಲಿ ತಾಪಸಿ ಪನ್ನು ರೂಪರಾಶಿ ಅನಾವರಣ]

ಎಲ್ಲರಂತೆ ಈ ಬೆಡಗಿಯೂ ದಕ್ಷಿಣದಲ್ಲಿ ನಂಬರ್ ಒನ್ ಪಟ್ಟಕ್ಕೇರಲು ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ. ಆದರೆ ಅವರ ಹೆಣಗಾಟವೆಲ್ಲಾ ಹೊಳೆಯಲ್ಲಿ ಹುಣೆಸೆಹಣ್ಣು ತೊಳೆದಂತಾಗುತ್ತಿದೆ. ವಾಣಿಜ್ಯ ಪ್ರಕಟಣೆಗಳ ಮೂಲಕ ಬಣ್ಣದ ಜಗತ್ತಿಗೆ ಅಡಿಯಿಟ್ಟ ತಾಪ್ಸಿ, ಇದೀಗ ತೆಲುಗು, ತಮಿಳಿನಲ್ಲಿ ಸಖತ್ ಬಿಜಿ.

ನಿರೀಕ್ಷಿತ ಪ್ರಮಾಣದಲ್ಲಿ ಗುರಿ ಮುಟ್ಟಲಿಲ್ಲ

ನಿರೀಕ್ಷಿತ ಪ್ರಮಾಣದಲ್ಲಿ ಗುರಿ ಮುಟ್ಟಲಿಲ್ಲ

ದಕ್ಷಿಣದ ಯುವ ನಟರೊಂದಿಗೆ ಅಭಿನಯಿಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ಗುರಿ ಮುಟ್ಟಲಿಲ್ಲ. 'ಛಷ್ಮೆ ಬಹದ್ದೂರ್' ಚಿತ್ರದ ಮೂಲಕ ಬಾಲಿವುಡ್ ಗೂ ಅಡಿಯಿಟ್ಟ ಈ ಗೊಂಬೆ ಅಭಿನಯದ 'ಬೇಬಿ' ಚಿತ್ರವೂ ಹಿಟ್ ಆಗಿದೆ.

ಕಲೆತು ಬೆರೆತು ಜೀವಿಸಿದರೆ ತಪ್ಪೇನು

ಕಲೆತು ಬೆರೆತು ಜೀವಿಸಿದರೆ ತಪ್ಪೇನು

ಸದ್ಯಕ್ಕೆ 'ರನ್ನಿಂಗ್ ಷಾದಿ ಡಾಟ್ ಕಾಮ್' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತಮ್ಮ ವೃತ್ತಿ ಹಾಗೂ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿರುವ ಈ ಬೆಡಗಿ. ಮದುವೆಯಾಗದೆ ಇಬ್ಬರೂ ಕಲೆತು ಬೆರೆತು ಜೀವಿಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

ಸಹ ಜೀವನವನ್ನು ಸಮರ್ಥಿಸಿಕೊಂಡ ತಾಪ್ಸಿ

ಸಹ ಜೀವನವನ್ನು ಸಮರ್ಥಿಸಿಕೊಂಡ ತಾಪ್ಸಿ

ಮದುವೆ ಬಳಿಕ ವಿಚ್ಛೇದನ ಪಡೆಯುವುದು, ಇಬ್ಬರು ಕುಟುಂಬಿಕರಿಗೂ ಸಾಕಷ್ಟು ತಲೆನೋವು, ತಾಪತ್ರಯ ತಪ್ಪಿದ್ದಲ್ಲ. ಆದರೆ ಮದುವೆಯಾಗದೆ ಸಹ ಜೀವನ ನಡೆಸುತ್ತಾ...ಇಷ್ಟವಾಗದಿದ್ದರೆ ದೂರವಾಗಬಹುದು. ಇದರಿಂದ ಯಾರಿಗೂ ತೊಂದರೆ ಇರಲ್ಲ ಎಂದು ಸಹಜೀವನವನ್ನು ಸಮರ್ಥಿಸಿಕೊಂಡಿದ್ದಾರೆ.

 ನಟಿಯರ ಅಶ್ಲೀಲ ಚಿತ್ರಗಳ ಬಗ್ಗೆ ಏನಂತೀರಿ?

ನಟಿಯರ ಅಶ್ಲೀಲ ಚಿತ್ರಗಳ ಬಗ್ಗೆ ಏನಂತೀರಿ?

ನಟಿಯರ ಅಶ್ಲೀಲ ಚಿತ್ರಗಳ ಬಗ್ಗೆ ಮಾತನಾಡುತ್ತಾ, ಬುದ್ಧಿ, ಜ್ಞಾನ ಇಲ್ಲದವರು ಮಾಡುವ ಕೆಲಸ ಅದು. ಕೇವಲ ಹೀರೋಯಿನ್ ಗಳನ್ನು ಅಶ್ಲೀಲವಾಗಿ ತೋರಿಸುವುದಷ್ಟೇ ಅಲ್ಲ. ಸಾಮಾನ್ಯ ಸ್ತ್ರೀಯರಿಗೂ ಭದ್ರತೆ ಇಲ್ಲದಂತಾಗಿದೆ. ಲೈಂಗಿಕ ಕಿರುಕುಳ ದೊಡ್ಡ ಸಮಸ್ಯೆಯಾಗಿದೆ. ಈ ರೀತಿಯ ಕೆಲಸಗಳನ್ನು ಮಾಡುವವರನ್ನು ಕಠಿಣವಾಗಿ ಶಿಕ್ಷಿಸಬೇಕು. ಅವರ ಅಂಗಾಂಗಗಳು ಕೆಲಸ ಮಾಡದಂತೆ ಮಾಡಬೇಕು. ಅದೇ ಅತ್ಯಾಚಾರಿಗಳಿಗೆ ಕೊಡಬಹುದಾದ ಸರಿಯಾದ ಶಿಕ್ಷೆ ಎಂದಿದ್ದಾರೆ.

ಮದುವೆ ಬಳಿಕ ಸಿನಿಮಾಗಳಿಗೆ ಗುಡ್ ಬೈ

ಮದುವೆ ಬಳಿಕ ಸಿನಿಮಾಗಳಿಗೆ ಗುಡ್ ಬೈ

ಇನ್ನು ಅಭಿನಯಿಸಿದ್ದು ಸಾಕು ಅನ್ನಿಸಿದರೆ ಆಗ ಮದುವೆ ಬಗ್ಗೆ ಯೋಚಿಸುತ್ತೇನೆ. ಏಕೆಂದರೆ ಮದುವೆ ಬಳಿಕ ಸಿನಿಮಾಗಳನ್ನು ಮಾಡಬೇಕೆಂಬ ಆಸೆ ಇಲ್ಲ ಎನ್ನುತ್ತಾರೆ ಈ ಬೆಡಗಿ.

English summary
Actress Taapsee Pannu alking about live in relationship. She says whts wrong with such type of relation. Her latest movie 'Kanchana 2' is running successfully in box office.
Please Wait while comments are loading...

Kannada Photos

Go to : More Photos