»   » ಪವರ್ ಸ್ಟಾರ್ ಪುನೀತ್ ಜೊತೆ ತಮಿಳು ನಟ ಡಿಶುಂ ಡಿಶುಂ

ಪವರ್ ಸ್ಟಾರ್ ಪುನೀತ್ ಜೊತೆ ತಮಿಳು ನಟ ಡಿಶುಂ ಡಿಶುಂ

Written by: ಉದಯರವಿ
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ರಣವಿಕ್ರಮ' ಚಿತ್ರ ಕೇವಲ ಕರ್ನಾಟಕದ ಬಾಕ್ಸ್ ಆಫೀಸ್ ನಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಭರ್ಜರಿ ಸೌಂಡ್ ಮಾಡುತ್ತಿರುವ ಚಿತ್ರ. ಇದೀಗ ಅವರ ಮುಂದಿನ ಚಿತ್ರಗಳ ಬಗ್ಗೆಯೂ ಚಿತ್ರೋದ್ಯಮದಲ್ಲಿ ಭಾರಿ ನಿರೀಕ್ಷೆಗಳಿವೆ. ಮುಂಬರುವ ಎರಡು ವರ್ಷಗಳಲ್ಲಿ ಪುನೀತ್ ಕೈಯಲ್ಲಿ 7 ಚಿತ್ರಗಳಿವೆ ಎನ್ನುತ್ತವೆ ಮೂಲಗಳು.

ಅವುಗಳಲ್ಲಿ ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿಬರಲಿರುವ 'ದೊಡ್ಮನೆ ಹುಡುಗ' ಚಿತ್ರವೂ ಒಂದು. ಈ ಚಿತ್ರದ ಜೊತೆಗೆ ಎಂ.ಸರವಣನ್ ಅವರ ಚಿತ್ರವೂ ಒಟ್ಟಿಗೆ ಶುರುವಾಗಲಿದೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ ಪುನೀತ್ ಜೊತೆ ಫೈಟ್ ಮಾಡಲು ತಮಿಳುನಟ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. [ಸ್ಯಾಂಡಲ್ ವುಡ್ ನ ನಿಜವಾದ ಬೇಡಿಕೆಯ ನಟರಿವರು]

Tamil actor Arun Vijay To Debut In Sandalwood As Puneeth's Villain

'ಎನ್ನೈ ಅರಿಂದಾಲ್' ಖ್ಯಾತಿಯ ಅರುಣ್ ವಿಜಯ್ ಸ್ಯಾಂಡಲ್ ವುಡ್ ಗೆ ಅಡಿಯಿಡುತ್ತಿದ್ದು, ಪುನೀತ್ ಜೊತೆ ಡಿಶುಂ ಡಿಶುಂ ಆಕ್ಷನ್ ಗೆ ಸಜ್ಜಾಗಿದ್ದಾರೆ ಎನ್ನುತ್ತವೆ ಗಾಂಧಿನಗರ ಮೂಲಗಳು. ಅರುಣ್ ವಿಜಯ್ ಖಳನಟನಾಗಿ ಕನ್ನಡಕ್ಕೆ ಆಗಮಿಸುತ್ತಿರುವುದು ವಿಶೇಷ.

ಎಂ ಸರವಣನ್ ನಿರ್ದೇಶನದ ಚಿತ್ರ ಪುನೀತ್ ಅವರ 25ನೇ ಚಿತ್ರ ಎಂಬುದು ವಿಶೇಷ. ಇನ್ನು 'ರಣವಿಕ್ರಮ' ಚಿತ್ರ 25 ದಿನಗಳನ್ನು ಪೂರೈಸಿದ್ದು ಬಾಕ್ಸ್ ಆಫೀಸಲ್ಲಿ ಇನ್ನೂ ಸದ್ದು ಮಾಡುತ್ತಿರುವ ಚಿತ್ರ. ಮುಂಬರುವ ದಿನಗಳಲ್ಲಿ ಅಭಿಮಾನಿಗಳು ಪುನೀತ್ ಅವರ ಹೊಸಹೊಸ ಚಿತ್ರಗಳನ್ನು ನಿರೀಕ್ಷಿಸಬಹುದು.

English summary
According to the latest reports from Gandhinagara, Arun Vijay will share onscreen space with Puneeth aka Appu in untitled movie directed by Saravanan.
Please Wait while comments are loading...

Kannada Photos

Go to : More Photos