twitter
    For Quick Alerts
    ALLOW NOTIFICATIONS  
    For Daily Alerts

    ನಕಲಿ ಅಪ್ಪ-ಅಮ್ಮನಿಗೆ ಬಲಿಯಾದೆ: ತಮಿಳು ನಟ ಧನುಷ್

    By Bharathkumar
    |

    ತಮಿಳು ನಟ ಧನುಷ್ ನಮ್ಮ ಮಗ ಎಂದು ಕೋರ್ಟ್‌ ಮೆಟ್ಟಿಲೇರಿದ್ದ ಮೇಲೂರಿನ ದಂಪತಿ ಗೆ ಧನುಷ್ ತಿರುಗೇಟು ನೀಡಿದ್ದಾರೆ. ಅರ್ಜಿ ವಿಚಾರಣೆ ವೇಳೆ ಮದ್ರಾಸ್ ಹೈಕೋರ್ಟ್ ನ ನ್ಯಾಯಪೀಠದ ಎದುರು ಹಾಜರಾಗಿದ್ದ ಧನುಶ್ ''ಸುಳ್ಳು ಪೋಷಕರ ಬ್ಲ್ಯಾಕ್ ಮೇಲ್ ಗೆ ನಾನು ಬಲಿ ಪಶುವಾಗಿದ್ದೇನೆ'' ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

    ಮಧುರೈ ಮೇಲೂರು ನಿವಾಸಿಗಳಾದ ಆರ್‌.ಕದಿರೇಸನ್ (60 ವರ್ಷ) ಮತ್ತು ಕೆ.ಮೀನಾಕ್ಷಿ (55 ವರ್ಷ) ಎಂಬುವರು ನಟ ಧನುಷ್ ತಮ್ಮ ಹಿರಿಯ ಮಗ, ಚಿತ್ರರಂಗ ಸೇರಿದ ಮೇಲೆ ನಮ್ಮನ್ನು ಮರೆತು ಬಿಟ್ಟಿದ್ದಾನೆ, ತಾವು ತುಂಬಾ ಕಷ್ಟದಲ್ಲಿದ್ದೇವೆ. ಅವರಿಂದ ಸಹಾಯ ಕೊಡಿಸುವಂತೆ ದಂಪತಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

    ಕೋರ್ಟ್ ಗೆ ಹಾಜರಾದ ಧನುಷ್

    ಕೋರ್ಟ್ ಗೆ ಹಾಜರಾದ ಧನುಷ್

    ಮೇಲೂರಿನ ದಂಪತಿಗಳು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮಧುರೈ ನ್ಯಾಯಾಲಯ ಖುದ್ದು ಧನುಷ್ ಅವರು ಕೋರ್ಟ್ ಗೆ ಹಾಜರಾಗಿದ್ದರು. ಈ ವೇಳೆ ಇವರು ನಕಲಿ ಅಪ್ಪ-ಅಮ್ಮ, ನನ್ನನ್ನ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

    ಇದು ಸುಳ್ಳು!

    ಇದು ಸುಳ್ಳು!

    ''ನಾನೊಬ್ಬ ಗೌರವಾನ್ವಿತ ನಟನಾಗಿದ್ದು, ಎಗ್ಮೋರೆಯ ಸರ್ಕಾರಿ ಮಕ್ಕಳ ಆಸ್ಪತ್ರೆಯಲ್ಲಿ ಜುಲೈ 28, 1983 ರಲ್ಲಿ ಜನಿಸಿದ್ದೇನೆ. ಕೃಷ್ಣಮೂರ್ತಿ ಮತ್ತು ವಿಜಯಲಕ್ಷ್ಮಿ ನನ್ನ ತಂದೆತಾಯಿ ಎಂದು ಧನುಷ್ ಸ್ಪಷ್ಟ ಪಡಿಸಿದ್ದಾರೆ. ನನ್ನ ಮೊದಲ ಹೆಸರು ವೆಂಕಟೇಶ್ ಪ್ರಭು. 2003 ರಲ್ಲಿ ಸಿನಿಮಾ ರಂಗ ಪ್ರವೇಶಿಸಿದ ನಂತರ ಧನುಷ್ ಕೆ.ರಾಜಾ ಎಂದು ಬದಲಾಯಿತು'' ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

    ಅರ್ಜಿ ವಜಾಗೊಳಿಸಲು ಮನವಿ

    ಅರ್ಜಿ ವಜಾಗೊಳಿಸಲು ಮನವಿ

    ಈ ಹಿಂದೆ ನಟಿ ಶ್ರೀದೇವಿ ವಿರುದ್ಧ ಕೂಡ ಇದೇ ರೀತಿಯ ಸುಳ್ಳು ಕೇಸು ದಾಖಲಾಗಿತ್ತು, ಇಂತಹ ಪ್ರಕರಣಗಳಲ್ಲಿ ಖುದ್ದು ಹಾಜರಾತಿಗೆ ನ್ಯಾಯಾಲಯ ಸೂಚಿಸುವ ಮೊದಲು ಪ್ರಕರಣದ ಸತ್ಯಾಸತ್ಯತೆಯನ್ನು ಅರಿಯಬೇಕು, ಜೊತೆಗೆ ದೂರನ್ನು ವಜಾಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

    ಮೇಲೂರಿನ ದಂಪತಿಯ ಆರೋಪವೇನು?

    ಮೇಲೂರಿನ ದಂಪತಿಯ ಆರೋಪವೇನು?

    ಮಧುರೈ ಮೇಲೂರು ನಿವಾಸಿಗಳಾದ ಆರ್‌.ಕದಿರೇಸನ್ (60 ವರ್ಷ) ಮತ್ತು ಕೆ.ಮೀನಾಕ್ಷಿ (55 ವರ್ಷ) ಎಂಬುವರು ನಟ ಧನುಷ್ ತಮ್ಮ ಹಿರಿಯ ಮಗ, ಅವನು ಚಿತ್ರರಂಗ ಸೇರಿದ ಮೇಲೆ ನಮ್ಮನ್ನು ಮರೆತು ಬಿಟ್ಟಿದ್ದಾನೆ, ತಾವು ತುಂಬಾ ಕಷ್ಟದಲ್ಲಿದ್ದು, ಆತನಿಂದ ಸಹಾಯ ಕೊಡಿಸುವಂತೆ ದಂಪತಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಸಾಕ್ಷಿ ಎಂಬಂತೆ ಮೇಲೂರಿನ ದಂಪತಿಗಳು ಧನುಷ್ ಅವರ ಚಿಕ್ಕ ವಯಸ್ಸಿನ ಫೋಟೋಗಳು ಎನ್ನಲಾಗುತ್ತಿರುವ ಎರಡು ಭಾವಚಿತ್ರಗಳನ್ನ ನ್ಯಾಯಾಲಯದ ಮುಂದಿಟ್ಟಿದ್ದರು.

    ಫೆಬ್ರವರಿ 8ಕ್ಕೆ ವಿಚಾರಣೆ

    ಫೆಬ್ರವರಿ 8ಕ್ಕೆ ವಿಚಾರಣೆ

    ಸದ್ಯ, ಇಬ್ಬರಿಂದಲೂ ಪ್ರಾಥಮಿಕ ಮಾಹಿತಿ ಪಡೆದಿರುವ ನ್ಯಾಯಾಲಯ ಮುಂದಿನ ವಿಚಾರಣೆಯನ್ನ ಫೆಬ್ರವರಿ 8 ಕ್ಕೆ ಮುಂದೂಡಲಾಗಿದೆ.

    English summary
    Tamil Actor Dhanush denied the couple's paternity claim and sought the high court to quash the proceedings in the trial court. Two months ago, R Kathiresan (65) of Madurai and his wife Meenakshi (53) filed a case in the judicial magistrate court in Melur
    Thursday, January 26, 2017, 19:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X