twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ಯಕ್ಕೆ ಅಡಿಯಿಟ್ಟ ನೀಲಿ ಪೋಲಿ ಚಿತ್ರ 'ಸಾರಿ ಟೀಚರ್'

    By Rajendra
    |

    ಪರಭಾಷೆಯ ಪೋಲಿ ಚಿತ್ರಗಳು ಆಗಾಗ ಕರ್ನಾಟಕದಲ್ಲಿ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಮಾಡಿಕೊಂಡು ಹೋಗುತ್ತಿರುವುದು ಗೊತ್ತೇ ಇದೆ. ಈಗ ಅಂತಹದ್ದೇ ಮತ್ತೊಂದು ಚಿತ್ರ ಆಂಧ್ರ ಪ್ರದೇಶದಿಂದ ಕರ್ನಾಟಕಕ್ಕೆ ಸದ್ದಿಲ್ಲದಂತೆ ಅಡಿಯಿಡುತ್ತಿದೆ.

    ಈ ಚಿತ್ರದ ಹೆಸರು 'ಸಾರಿ ಟೀಚರ್'. ಚಿತ್ರದ ಹಾಟ್ ಪೋಸ್ಟರ್ ಗಳು ಈಗಾಗಲೆ ಬೆಂಗಳೂರಿನ ಗೋಡೆಗಳನ್ನು ಅಲಂಕರಿಸಿವೆ. ಆಂಧ್ರದಲ್ಲೂ ಭಾರಿ ಸದ್ದು ಮಾಡುತ್ತಿರುವ ಚಿತ್ರವಿದು. ಶಿಕ್ಷಕರ ಗೌರವ, ಘನತೆಗಳನ್ನು ಈ ಚಿತ್ರ ಮಣ್ಣುಪಾಲು ಮಾಡುತ್ತಿದೆ ಎಂದು ಈಗಾಗಲೆ ಆಂಧ್ರದಾದ್ಯಂತ ಶಿಕ್ಷಕರು ಚಿತ್ರದ ವಿರುದ್ಧ ಸಿಡಿದೆದ್ದಿದ್ದಾರೆ.

    ಈ ಚಿತ್ರದ ಚಿತ್ರೀಕರಣನ್ನು ನಿಲ್ಲಿಸಬೇಕು ಎಂದು ಆಂಧ್ರದ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಆಂಧ್ರ ಶಿಕ್ಷಕರ ಸಮುದಾಯ ದೂರು ನೀಡಿದೆ. ಈ ಚಿತ್ರಕ್ಕೆ ಈ ಹಿಂದೆ 'ಐ ಲವ್ ಯೂ ಟೀಚರ್' ಎಂದು ಹೆಸರಿಡಲಾಗಿತ್ತು. ಈಗ ಚಿತ್ರದ ಶೀರ್ಷಿಕೆಯನ್ನು 'ಸಾರಿ ಟೀಚರ್' ಎಂದು ಬದಲಾಯಿಸಿದ್ದಾರೆ ಎಂದು ಶಿಕ್ಷಕರ ಸಂಘಟನೆ ಆರೋಪಿಸಿದೆ.

    ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪವಿತ್ರ ಸಂಬಂಧಕ್ಕೆ ಈ ಚಿತ್ರ ಧಕ್ಕೆ ತರುತ್ತಿದೆ. ಕೂಡಲೆ ಈ ಚಿತ್ರದ ಶೂಟಿಂಗ್ ನಿಲ್ಲಿಸಬೇಕು ಎಂದು ಶಿಕ್ಷಕರ ಸಂಘಟನೆ ಸೆನ್ಸಾರ್ ಹಾಗೂ ಮಾನವ ಹಕ್ಕುಗಳ ಆಯೋಗವನ್ನು ವಿನಂತಿಸಿಕೊಂಡಿದೆ.

    ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಕೊಟ್ಟಿರುವ ಯು/ಎ ಸರ್ಟಿಫಿಕೇಟನ್ನು ಹಿಂದಕ್ಕೆ ಪಡೆಯಬೇಕು. ಚಿತ್ರ ಬಿಡುಗಡೆಗೂ ಮುನ್ನ ಶಿಕ್ಷಕರು, ವಿದ್ಯಾರ್ಥಿಗಳು, ಯುವ ಸಂಘಟನೆಯ ಮುಖಂಡರು, ನ್ಯಾಯಮೂರ್ತಿಗಳು, ಮಾನವ ಹಕ್ಕುಗಳ ಆಯೋಗ ಹಾಗೂ ಬಾಲ ಸಂಘಟನೆಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.

    ಮಹಿಳೆಯರ ವ್ಯಕ್ತಿತ್ವವನ್ನು ಕೆಳಮಟ್ಟಕ್ಕೆ ಇಳಿಸುವ, ಗುರುಗಳ ಬಗ್ಗೆ ಅಗೌರವ ತೋರುವ 'ಸಾರಿ ಟೀಚರ್' ಚಿತ್ರವನ್ನು ಕೂಡಲೆ ಕೈಬಿಡಬೇಕು. ಅಶ್ಲೀಲ ಪೋಸ್ಟರ್ ಗಳನ್ನು ಕೂಡಲೆ ತೊಲಗಿಸಬೇಕು ಎಂದು ಮಹಿಳಾ ಸಂಘಟನೆಗಳೂ ಆಗ್ರಹಿಸಿವೆ.

    ಆರ್ಯಮನ್, ಕಾವ್ಯಾಸಿಂಗ್ ಚಿತ್ರದ ಹೀರೋ ಹೀರೋಯಿನ್. ಚಿತ್ರದ ಪ್ರೋಮೋಗಳಲ್ಲಿ, ಪೋಸ್ಟರ್ ಗಳಲ್ಲಿ ಟೀಚರ್ ಅಶ್ಲೀಲವಾಗಿ ತಮ್ಮ ಮೈಮಾಟವನ್ನು ಪ್ರದರ್ಶಿಸುತ್ತಿರುವ, ಪಾಠ ಮಾಡುತ್ತಿರುವ ದೃಶ್ಯಗಳಿವೆ. ಈ ಸಂಬಂಧ ಆಂಧ್ರ ಮಹಿಳಾ ಆಯೋಗ ಸೆನ್ಸಾರ್ ಮಂಡಳಿಯ ವಿವರಣೆ ಕೇಳಿದೆ. ಮುಂದೇನಾಗುತ್ತದೋ ಏನೋ ಗೊತ್ತಿಲ್ಲ. (ಏಜೆನ್ಸೀಸ್)

    English summary
    Andhra Pradesh United Teacher's Federation and All India Democratic Women's Association lodged a complaint movie against 'Sorry Teacher' movie. Teacher's Federation demanding a ban on an upcoming Telugu flick 'Sorry Teacher'.
    Wednesday, August 22, 2012, 13:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X