»   » ತೆಲುಗು ಇಂಡಸ್ಟ್ರಿಯತ್ತ 'ಲಾಸ್ಟ್ ಬಸ್' ಸಂಚಾರ ಶುರುವಾಗಿದೆ

ತೆಲುಗು ಇಂಡಸ್ಟ್ರಿಯತ್ತ 'ಲಾಸ್ಟ್ ಬಸ್' ಸಂಚಾರ ಶುರುವಾಗಿದೆ

Posted by:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಆದ ಹೊಸಬರ ಹಾರರ್ ಥ್ರಿಲ್ಲರ್ ಸಿನಿಮಾ 'ಲಾಸ್ಟ್ ಬಸ್' ಫ್ರೆಂಚ್ ಗೆ ಡಬ್ ಆಗುತ್ತಿದೆ ಎಂದು ಸುದ್ದಿಯಾದ ಬೆನ್ನಲ್ಲೇ ಇದೀಗ ತೆಲುಗು ಭಾಷೆಗೆ ರೀಮೇಕ್ ಆಗುತ್ತಿದೆ ಎಂದು ಸುದ್ದಿಯಾಗಿದೆ.

ಅಂದಹಾಗೆ ತೆಲುಗು ಭಾಷೆಗೆ ರೀಮೇಕ್ ಮಾಡಲು ರೀಮೇಕ್ ಹಕ್ಕನ್ನು ಖರೀದಿ ಮಾಡಿದವರು ತೆಲುಗು ನಿರ್ಮಾಪಕ ಮಹೇಶ್ವರ ರೆಡ್ಡಿ ಅವರು. ಎಲ್ಲವೂ ಅಂದುಕೊಂಡಂತೆ ಭರಭರನೇ ಸಾಗಿದರೆ ಸದ್ಯದಲ್ಲಿಯೇ 'ಲಾಸ್ಟ್ ಬಸ್' ತೆಲುಗಿನಲ್ಲಿ ಸಂಚರಿಸಲಿದೆ.


Telugu remake of Kannada movie 'Last Bus'

ಇನ್ನು ಈ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದರೂ ಕೂಡ ರಿಲೀಸ್ ಆದ ಒಂದೇ ವಾರಕ್ಕೆ ಮುಖ್ಯ ಚಿತ್ರಮಂದಿರದಿಂದ ಎತ್ತಂಗಡಿ ಆಗಿತ್ತು. ತದನಂತರ ಎರಡು ವಾರಗಳ ಬಳಿಕ ಮತ್ತೆ ಅದೇ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನಗೊಳ್ಳುತ್ತಿದೆ.[ಹಾರರ್-ಥ್ರಿಲ್ಲರ್ 'ಲಾಸ್ಟ್ ಬಸ್' ಗೆ ವಿಮರ್ಶಕರು ಜೈಕಾರ ಹಾಕಿದ್ರಾ?]


ಬಿಡುಗಡೆ ಸಂದರ್ಭದಲ್ಲಿ ಕೇವಲ ಎರಡು ಶೋ ಪಡೆದುಕೊಳ್ಳಲಷ್ಟೇ ಸಫಲವಾಗಿದ್ದ ಈ ಚಿತ್ರ ಇದೀಗ ಮೂರು ಶೋಗೆ ಬಂದಿದೆ. ಇದು 'ಲಾಸ್ಟ್ ಬಸ್' ಚಿತ್ರದ ಕಥೆ ಮತ್ತು ವ್ಯಥೆಯಾಗಿದೆ.


ಅಂದಹಾಗೆ ಇದೆಲ್ಲಾ ಕಥೆ ನಡೆದಿದ್ದು, ಹಾಗೂ ಮತ್ತೆ ಕರೆದು ಸಿನಿಮಾ ಹಾಕಿಸಿಕೊಂಡಿದ್ದು ಮಾತ್ರ 'ಅಭಿನಯ' ಚಿತ್ರಮಂದಿರ. ಮುಂದಿನ ವಾರಕ್ಕೆ ಭರ್ತಿ 50 ದಿನಗಳನ್ನು ಪೂರೈಸಲಿರುವ ಹೊಸಬರ 'ಲಾಸ್ಟ್ ಬಸ್' ವಾರದಿಂದ ವಾರಕ್ಕೆ ಥಿಯೇಟರ್ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದ್ದು, ಕಲೆಕ್ಷನ್ ಕೂಡ ತುಂಬಾ ಚೆನ್ನಾಗಿದೆ.


Telugu remake of Kannada movie 'Last Bus'

ಫೆಬ್ರವರಿ 26 ರಿಂದ ಚೆನ್ನೈ, ಕೊಚ್ಚಿನ್ ಮುಂತಾದೆಡೆ ಸುಮಾರು 10 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಜೊತೆಗೆ ಮಾರ್ಚ್ 5 ರಿಂದ ವಿದೇಶದಲ್ಲೂ ಬಸ್ ಸಂಚಾರ ಮಾಡಲಿದೆ.


ವಿದೇಶಗಳಲ್ಲಿ ಈಗಾಗಲೇ ಚಿತ್ರ ನೋಡಲು ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದ್ದು. ಬಹುತೇಕ ಮೊದಲ ಶೋ ಸೋಲ್ಡ್ ಔಟ್ ಆಗಿದೆ ಎಂಬುದು ನಿರ್ದೇಶಕ ಅರವಿಂದ್ ಅವರ ಸಂತಸದ ಮಾತು.

English summary
Kannada Horror Movie 'Last Bus' will be soon remade into Telugu Language. Directed by SD Aravind, Starring Kannada Actor Avinash Narasimharaju, Actress Manasa Joshi, Actor Prakash Belawadi in the lead role.
Please Wait while comments are loading...

Kannada Photos

Go to : More Photos