»   » ಸುದೀಪ್, ಶಿವಣ್ಣ ನಡುವೆ ಹೊಸ ಟೈಟಲ್ ವಿವಾದ

ಸುದೀಪ್, ಶಿವಣ್ಣ ನಡುವೆ ಹೊಸ ಟೈಟಲ್ ವಿವಾದ

Written by: ಉದಯರವಿ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಟೈಟಲ್ ವಿವಾದ ಭುಗಿಲೆದ್ದಿದೆ. ಒಂದು ಕಡೆ ಕಿಚ್ಚ ಸುದೀಪ್, ಇನ್ನೊಂದು ಕಡೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಚಿತ್ರಕ್ಕೆ ಒಂದೇ ಹೆಸರಿನ ಶೀರ್ಷಿಕೆ ಘೋಷಣೆಯಾಗಿದ್ದು ಹೊದ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.

ಶುಕ್ರವಾರ (ಅ.10) ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೊಸ ಚಿತ್ರ 'ದಿ ಲೀಡರ್' ಘೋಷಣೆಯಾಗಿದೆ. ಒಂದು ವಾರದ ಹಿಂದಷ್ಟೇ ಸುದೀಪ್ ಅವರ ಹೊಸ ಚಿತ್ರ 'ದಿ ಲೀಡರ್' ಚಾಲನೆ ಪಡೆದುಕೊಂಡಿತ್ತು. ಮಿಲನ್ ಪ್ರಕಾಶ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. [ಸುದೀಪ್ ಹೊಸ ಚಿತ್ರಕ್ಕೆ ಮಿಲನ ಪ್ರಕಾಶ್ ಆಕ್ಷನ್ ಕಟ್]

Sudeep, Shivanna title controversy

ಒಂದೇ ಶೀರ್ಷಿಕೆಯಲ್ಲಿ ಇಬ್ಬರು ಸ್ಟಾರ್ ಗಳ ಚಿತ್ರ ಸೆಟ್ಟೇರಿದ್ದು ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಸುದೀಪ್ ಹಾಗೂ ಶಿವಣ್ಣ ನಡುವೆ ಬಹಳ ವರ್ಷಗಳಿಂದಲೂ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂಬ ಮಾತುಗಳಿಗೆ ಪುಷ್ಟಿ ನೀಡುವ ಹಲವಾರು ಘಟನೆಗಳು ನಡೆಯುತ್ತಿರುವುದು ಗೊತ್ತೇ ಇದೆ.

ಇದೀಗ ಇಬ್ಬರೂ ಒಂದೇ ಟೈಟಲ್ ನಲ್ಲಿ ಸಿನಿಮಾ ಮಾಡಲು ಹೊರಟಿರುವುದು ಇನ್ನಷ್ಟು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ. ಈ ಬಗ್ಗೆ ಸುದೀಪ್ ಚಿತ್ರದ ನಿರ್ಮಾಪಕರಾದ ರಘುರಾಮ್ ಅವರು ಮಾತನಾಡುತ್ತಾ, "ಮೂರು ವರ್ಷಗಳ ಹಿಂದೆಯೇ 'ದಿ ಲೀಡರ್' ಟೈಟಲನ್ನು ಫಿಲಂ ಚೇಂಬರ್ ನಲ್ಲಿ ರಿಜಿಸ್ಟರ್ ಮಾಡಿಸಿಕೊಂಡಿದ್ದೇವೆ. ಪ್ರತಿವರ್ಷ ನವೀಕರಣ ಮಾಡಿಸಿಕೊಂಡು ಬಂದಿದ್ದೇವೆ. ಶಿವಣ್ಣ ಅವರಿಗೆ ಈ ವಿಷಯ ಗೊತ್ತಿರಲಿಕ್ಕಿಲ್ಲ. ಒಂದು ವೇಳೆ ಗೊತ್ತಾದರೆ ಖಂಡಿತ ಅವರೇ ಈ ಗೊಂದಲಕ್ಕೆ ತೆರೆ ಎಳೆಯುತ್ತಾರೆ" ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. [ಡಾ.ಶಿವಣ್ಣ ಈಗ 'ದಿ ಲಿಡರ್' ಆಫ್ ಸ್ಯಾಂಡಲ್ ವುಡ್]

ಈ ಬಗ್ಗೆ ಶಿವಣ್ಣ ಚಿತ್ರದ ನಿರ್ಮಾಪಕರಾದ ಶಿವಪ್ಪ ಅವರು ಮಾತನಾಡುತ್ತಾ, "ತಮ್ಮ ಚಿತ್ರದ ಶೀರ್ಷಿಕೆ ಭಿನ್ನವಾಗಿದೆ. ಚಿತ್ರಕ್ಕೆ ನಾವು 'ದಿ ಲೀಡರ್ ಶಿವರಾಜ್ ಕುಮಾರ್' ಎಂದು ಹೆಸರಿಟ್ಟಿದ್ದೇವೆ. ಆದರೆ ಇನ್ನೂ ನೋಂದಾಯಿಸಿಕೊಂಡಿಲ್ಲ ಅಷ್ಟೇ" ಎಂದಿದ್ದಾರೆ.

ಒಟ್ಟಾರೆಯಾಗಿ ಈ ಹೊಸ ವಿವಾದ ಸುದೀಪ್ ಹಾಗೂ ಶಿವಣ್ಣ ಮಧ್ಯಪ್ರವೇಶದ ಮೂಲಕ ತಣ್ಣಗಾಗುತ್ತದೋ ಅಥವಾ ನಿರ್ಮಾಪಕರ, ನಿರ್ದೇಶಕರ ವಾದ ಪ್ರತಿವಾದಗಳಲ್ಲಿ ಇನ್ನಷ್ಟು ಗೊಂದಲದ ಗೂಡಾಗಿ ಪರಿಣಮಿಸುತ್ತದೋ ಎಂಬುದನ್ನು ಕಾದುನೋಡೋಣ.

English summary
The new title controversy arises in Sandalwood. Hat trick Hero Shivrajkumar and Sudeep are set up for another clash with similar titles. Sudeep and Shivanna movie titled as 'The Leader'.
Please Wait while comments are loading...

Kannada Photos

Go to : More Photos