twitter
    For Quick Alerts
    ALLOW NOTIFICATIONS  
    For Daily Alerts

    2013ರ ಅತ್ಯಂತ ಯಶಸ್ವಿ ನಟ ನಿಮ್ಮ ಪ್ರಕಾರ ಯಾರು?

    By ಉದಯರವಿ
    |

    ಕನ್ನಡ ಚಿತ್ರೋದ್ಯಮದ ಮಟ್ಟಿಗೆ 2013ನೇ ವರ್ಷ ಹಲವು ಸಿಹಿಕಹಿ ಅನುಭವಗಳನ್ನು ಕೊಟ್ಟಿದೆ. ಕೆಲವು ನಟರು ಒಂದೇ ಒಂದು ತಿರುವಿಗಾಗಿ ಶತಾಯುಗತಾಯ ಪ್ರಯತ್ನಿಸಿದ್ದೂ ಉಂಟೂ. ಇನ್ನು ಕೆಲವರು ಆರಕ್ಕೇರದೆ ಮೂರಕ್ಕಿಳಿಯದ ಸ್ಥಿತಿಯಲ್ಲಿದ್ದಾರೆ.

    ಈ ವರ್ಷ ಸರಿಸುಮಾರು 130 ಚಿತ್ರಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಬಹುತೇಕ ಚಿತ್ರಗಳು ಆಕ್ಷನ್, ರೊಮ್ಯಾನ್ಸ್ ಕಥಾಹಂದರದವು. ಈ ವರ್ಷ ತೆರೆಕಂಡ ಬುಲ್ ಬುಲ್, ಬೃಂದಾವನ, ವರದನಾಯಕ ಹಾಗೂ ಬಚ್ಚನ್ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದವು.

    ಪ್ರಯೋಗಾತ್ಮಕ ಚಿತ್ರ ಲೂಸಿಯಾ, ಚಾರ್ಮಿನಾರ್ ಹಾಗೂ ಮೈನಾ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಗೆದ್ದವು. ಎರಡು ಚಿತ್ರಗಳ ಭರ್ಜರಿ ಯಶಸ್ಸಿನ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಈ ವರ್ಷದ ಅತ್ಯಂತ ಯಶಸ್ವಿ ನಟರಾಗಿ ಹೊರಹೊಮ್ಮಿದ್ದಾರೆ.[2013 ವರ್ಷ: ಕನ್ನಡ ಚಿತ್ರಗಳ ಪೋಸ್ಟ್ ಮಾರ್ಟಂ]

    ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್

    ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್

    ಸುಮಾರು ರು.12 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ 'ಬುಲ್ ಬುಲ್' ಚಿತ್ರ ರು.38.12 ಕೋಟಿ ಕಲೆಕ್ಷನ್ ಮಾಡಿದರೆ ಬೃಂದಾವನ ಚಿತ್ರದ ರೆಕಾರ್ಡ್ ಇನ್ನೂ ಇಂಟರೆಸ್ಟಿಂಗ್ ಆಗಿದೆ. ರು.10 ಚಿಲ್ಲರೆ ಕೋಟಿಯಲ್ಲಿ ನಿರ್ಮಿಸಿದ ಬೃಂದಾವನ ಚಿತ್ರ ಬಾಕ್ಸ್ ಆಫೀಸಲ್ಲಿ ರು.25.5 ಕೋಟಿ ಹಾಗೂ ಟಿವಿ ರೈಟ್ಸ್ ಮೂಲಕ ರು.5 ಕೋಟಿ ಗಳಿಸಿ ಇನ್ನೊಂದು ದಾಖಲೆ ನಿರ್ಮಿಸಿತು.

    ಬಾಕ್ಸ್ ಆಫೀಸಲ್ಲಿ ಸುದೀಪ್ ಚಿತ್ರಗಳ ಹವಾ

    ಬಾಕ್ಸ್ ಆಫೀಸಲ್ಲಿ ಸುದೀಪ್ ಚಿತ್ರಗಳ ಹವಾ

    ಅದೇ ರೀತಿ ಸರಿಸುಮಾರು ರು.10.5 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ 'ಬಚ್ಚನ್' ಚಿತ್ರ ಬಾಕ್ಸ್ ಆಫೀಸಲ್ಲಿ ರು.20 ಕೋಟಿ ಬಾಚಿದೆ. ಇನ್ನು ವರದನಾಯಕ ಚಿತ್ರ ರು.13 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಸುದೀಪ್ ಚಿತ್ರಗಳು ಕನ್ನಡ ಬಾಕ್ಸ್ ಆಫೀಸಲ್ಲಿ ಭಾರಿ ಸೌಂಡ್ ಮಾಡಿವೆ.

    ಶತದಿನೋತ್ಸವ ಆಚರಿಸಿಕೊಂಡ ಸಿನಿಮಾಗಳು

    ಶತದಿನೋತ್ಸವ ಆಚರಿಸಿಕೊಂಡ ಸಿನಿಮಾಗಳು

    ಲೋ ಬಜೆಟ್ ಸಿನಿಮಾಗಳಾದ ಚಾರ್ಮಿನಾರ್ (ಪ್ರೇಮ್ ಕುಮಾರ್) , ಮೈನಾ (ಚೇತನ್) ಚಿತ್ರಗಳು ಶತದಿನೋತ್ಸವ ಆಚರಿಸಿಕೊಂಡಿವೆ. ಚಾರ್ಮಿನಾರ್ ರು.5.7 ಕೋಟಿ, ಮೈನಾ ರು.7 ಕೋಟಿ ಗಳಿಸಿತು.

    ಪ್ರಯೋಗಾತ್ಮಕ ಚಿತ್ರ ಲೂಸಿಯಾ ಹೊಸ ದಾಖಲೆ

    ಪ್ರಯೋಗಾತ್ಮಕ ಚಿತ್ರ ಲೂಸಿಯಾ ಹೊಸ ದಾಖಲೆ

    ಕ್ರೌಡ್ ಫಂಡೆಡ್ ಸಿನಿಮಾ ಲೂಸಿಯಾ (ನಾಯಕ ನಟ ಸತೀಶ್ ನೀನಾಸಂ) ಚಿತ್ರವನ್ನು ಸುಮಾರು ರು.90 ಲಕ್ಷದಲ್ಲಿ ನಿರ್ಮಿಸಲಾಗಿದೆ. ಪಿವಿಆರ್ ನಲ್ಲಿ ತೆರೆಕಂಡ ಈ ಚಿತ್ರ ರು.30 ಲಕ್ಷ ಲಾಭ ಮಾಡಿತು. ಟಿವಿ ರೈಟ್ಸ್ ನಲ್ಲೇ ಚಿತ್ರಕ್ಕೆ ರು.1 ಕೋಟಿ ಬಂದದ್ದು ವಿಶೇಷ.

    ರು.11 ಕೋಟಿ ಕಲೆಕ್ಷನ್ ಮಾಡಿದ ಟೋಪಿವಾಲಾ

    ರು.11 ಕೋಟಿ ಕಲೆಕ್ಷನ್ ಮಾಡಿದ ಟೋಪಿವಾಲಾ

    ಕಡಿಮೆ ಬಜೆಟ್ ನಲ್ಲಿ ತಯಾರಾದ ಅಟ್ಟಹಾಸ (ಕಿಶೋರ್) ಚಿತ್ರ ರು.5 ಕೋಟಿ ಮಾಡಿತು. ರಿಯಲ್ ಸ್ಟಾರ್ ಉಪೇಂದ್ರ ಅವರ ಟೋಪಿವಾಲಾ ಚಿತ್ರವನ್ನು ರು.7 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದ್ದು ಬಾಕ್ಸ್ ಆಫೀಸಲ್ಲಿ ರು.11 ಕೋಟಿ ಕಲೆಕ್ಷನ್ ಮಾಡಿತು.

    ಸೂಪರ್ ಹಿಟ್ ಚಿತ್ರವಾಗಿ ರಾಕಿಂಗ್ ಸ್ಟಾರ್ ಗೂಗ್ಲಿ

    ಸೂಪರ್ ಹಿಟ್ ಚಿತ್ರವಾಗಿ ರಾಕಿಂಗ್ ಸ್ಟಾರ್ ಗೂಗ್ಲಿ

    ಇನ್ನು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಗೂಗ್ಲಿ ಚಿತ್ರವನ್ನು ರು.4 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿದ್ದು ಬಾಕ್ಸ್ ಆಫೀಸಲ್ಲಿ ಒಟ್ಟಾರೆ ರು.15 ಕೋಟಿ ಬಾಚುವ ಮೂಲಕ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತು. ಈ ಚಿತ್ರದ ಸ್ಯಾಟಲೈಟ್ ರೈಟ್ಸ್ ಇನ್ನೊಂದು ದಾಖಲೆ ಮಾಡಿತು ಹತ್ತಿರಹತ್ತಿರ ರು.2 ಕೋಟಿಗೆ ಮಾರಾಟವಾಗಿದೆ.

    ರು.10 ಕೋಟಿ ಬಾಚಿದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ

    ರು.10 ಕೋಟಿ ಬಾಚಿದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ

    ಇನ್ನು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ (ರಕ್ಷಿತ್ ಶೆಟ್ಟಿ) ಚಿತ್ರ ಗಮನಸೆಳೆಯಿತು. ಈ ಚಿತ್ರ ಬಾಕ್ಸ್ ಆಫೀಸಲ್ಲಿ ರು.10 ಕೋಟಿ ಕಲೆಕ್ಷನ್ ಮಾಡಿದರೆ ಸ್ಯಾಟಲೈಟ್ ರೈಟ್ಸ್ ನಲ್ಲಿ ರು.2 ಕೋಟಿ ದುಡ್ಡು ಮಾಡಿತು. ಹೊಸಬರ ಜಮಾನಾಗೆ ಈ ಚಿತ್ರ ನಾಂದಿ ಹಾಡಿತು.

    ಎಲ್ಲರ ಮೆಚ್ಚುಗೆಗೆ ಪಾತ್ರವಾದ ಜಟ್ಟ

    ಎಲ್ಲರ ಮೆಚ್ಚುಗೆಗೆ ಪಾತ್ರವಾದ ಜಟ್ಟ

    ಬಿ.ಎಂ.ಗಿರಿರಾಜ್ ನಿರ್ದೇಶನದ 'ಜಟ್ಟ' (ಕಿಶೋರ್) ಚಿತ್ರ ಎಲ್ಲರ ಮೆಚ್ಚುಗೆಗೆ ವ್ಯಕ್ತವಾಗಿದ್ದು ಈ ವರ್ಷದ ವಿಶೇಷಗಳಲ್ಲಿ ಒಂದು. ಸುಕೃತಾ ವಾಗ್ಲೆ, ಕಿಶೋರ್ ಅವರ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

    ವಿಕ್ಟರಿ ಚಿತ್ರಕ್ಕೂ ಬಾಕ್ಸ್ ಆಫೀಸಲ್ಲಿ ಭಾರಿ ಗೆಲುವು

    ವಿಕ್ಟರಿ ಚಿತ್ರಕ್ಕೂ ಬಾಕ್ಸ್ ಆಫೀಸಲ್ಲಿ ಭಾರಿ ಗೆಲುವು

    ಇನ್ನು ನಂದಕಿಶೋರ್ ನಿರ್ದೇಶನದ ಹಾಸ್ಯ ನಟ ಶರಣ್ ಅಭಿನಯದ 'ವಿಕ್ಟರಿ' ಚಿತ್ರವೂ ಬಾಕ್ಸ್ ಆಫೀಸಲ್ಲಿ ಗೆಲುವು ಸಾಧಿಸಿದ ಚಿತ್ರ. ರಾಜಹುಲಿ, ಆಟೋರಾಜ, ಲಕ್ಷ್ಮಿ, , ಚಂದ್ರ ಚಿತ್ರಗಳಿಗೆ ಈ ವರ್ಷ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು.

    ಎಲ್ಲಾ ದಾಖಲೆಗಳನ್ನು ಮುರಿಯುವತ್ತ ಭಜರಂಗಿ

    ಎಲ್ಲಾ ದಾಖಲೆಗಳನ್ನು ಮುರಿಯುವತ್ತ ಭಜರಂಗಿ

    ಇನ್ನು ಈಗಷ್ಟೇ ತೆರೆಕಂಡು ಭರ್ಜರಿ ಯಶಸ್ಸಿನತ್ತ ಓಡುತ್ತಿರುವ 'ಭಜರಂಗಿ' ವರ್ಷಾಂತ್ಯಕ್ಕೆ ಇನ್ನೊಂದು ದಾಖಲೆ ಬರೆಯಲಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 105ನೇ ಚಿತ್ರ ಬಹುಶಃ ಎಲ್ಲಾ ದಾಖಲೆಗಳನ್ನು ಅಳಿಸಬಹುದು. ದರ್ಶನ್, ಸುದೀಪ್ ಅವರ ಚಿತ್ರಗಳ ದಾಖಲೆಯನ್ನು ಮುರಿಯಲೂ ಬಹುದು.

    English summary
    The Kannada film industry, which churned out roughly 130 films this year, produced maximum hits in the action and romance genre. Challenging Star Darshan's Bul Bul and Brindavana, while Kichcha Sudeep starrer Varadanayaka and Bachchan emerged as the year's biggest hits. The films such as Lucia, Charminar and Mynaa enjoyed commercially successful run at the ticket counters.
    Thursday, December 19, 2013, 13:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X