»   » ಟ್ವಿಟ್ಟರ್ ನಲ್ಲಿ ಹೊಸ ಹವಾ ಎಬ್ಬಿಸಿದ ಅಲ್ಲು ಅರ್ಜುನ್

ಟ್ವಿಟ್ಟರ್ ನಲ್ಲಿ ಹೊಸ ಹವಾ ಎಬ್ಬಿಸಿದ ಅಲ್ಲು ಅರ್ಜುನ್

Posted by:
Subscribe to Filmibeat Kannada

ಟಾಲಿವುಡ್ 'ಸ್ಟೈಲಿಶ್ ಸ್ಟಾರ್' ಅಲ್ಲು ಅರ್ಜುನ್ ಗಿಂದು ಹುಟ್ಟುಹಬ್ಬದ ಸಂಭ್ರಮ. 33ನೇ ವಸಂತಕ್ಕೆ ಕಾಲಿಟ್ಟಿರುವ ಅಲ್ಲು ಅರ್ಜುನ್, ಇಂದು ಅಭಿಮಾನಿಗಳೊಂದಿಗೆ ತಮ್ಮ ಬರ್ತಡೆಯನ್ನ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮೆಲ್ಲಾ ಫ್ಯಾನ್ಸ್ ಗೆ ಸೂಪರ್ ಗಿಫ್ಟ್ ನೀಡಿದ್ದಾರೆ.

ಟ್ವಿಟ್ಟರ್ ಲೋಕಕ್ಕೆ ಅಧಿಕೃತವಾಗಿ ಕಾಲಿಡುವ ಮೂಲಕ ಅಭಿಮಾನಿಗಳಿಗೆ ಹುಟ್ಟುಹಬ್ಬದಂದೇ ಇನ್ನಷ್ಟು ಹತ್ತಿರವಾಗಿದ್ದಾರೆ ಅಲ್ಲು ಅರ್ಜುನ್. ಬರ್ತಡೆ ದಿನವೇ ಟ್ವಿಟ್ಟರ್ ಗೆ ಎಂಟ್ರಿ ಕೊಡಬೇಕು ಅಂದುಕೊಂಡಿದ್ದ ಅರ್ಜುನ್, ಕಳೆದು ಎರಡು ದಿನಗಳಿಂದ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಕೌಂಟ್ ಡೌನ್ ನೀಡುತ್ತಿದ್ದರು. [ಸ್ಟೈಲಿಶ್ ಅಲ್ಲು ಅರ್ಜುನ್ ಜೊತೆ ಉಪ್ಪಿ ಖಡಕ್ ಪೋಸ್]

Tollywood Actor Allu Arjun makes official entry to Twitter today

ಕೇವಲ ಒಂದು ಗಂಟೆಯ ಹಿಂದೆಯಷ್ಟೇ ಮೊದಲ ಟ್ವೀಟ್ ಮಾಡುವ ಮೂಲಕ ಅಲ್ಲು ಅರ್ಜುನ್ ಟ್ವೀಟ್ ಹಕ್ಕಿ ಆಗಿದ್ದಾರೆ. ''ಇದು ಹೊಸ ಚ್ಯಾಪ್ಟರ್...ಸುಮ್ನೆ ಹೇಳಿ ಹಲ್ಲೋ....'' ಅಂತ ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಟ್ವಿಟ್ಟರ್ ನಲ್ಲಿ ತಮ್ಮೆಲ್ಲಾ ಅಪ್ಡೇಟ್ಸ್ ನೀಡುತ್ತೇನೆ ಅಂತ ಹೇಳುವ ವಿಡಿಯೋ ಕೂಡ ಅಪ್ ಲೋಡ್ ಮಾಡಿದ್ದಾರೆ.


ಟ್ವಿಟ್ಟರ್ ಗೆ ಅಡಿಯಿಡುತ್ತಿದ್ದಂತೆಯೇ, ಪವನ್ ಕಲ್ಯಾಣ್ ಮತ್ತು ಅಲ್ಲು ಸಿರೀಶ್ ರನ್ನ ಅಲ್ಲು ಅರ್ಜುನ್ ಫಾಲೋ ಮಾಡಿದ್ರೆ, ಒಂದು ಗಂಟೆಯ ಅವಧಿಯಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಮಂದಿ ಅಲ್ಲು ಅರ್ಜುನ್ ರನ್ನ ಫಾಲೋ ಮಾಡಿದ್ದಾರೆ. ಅದ್ರಲ್ಲಿ ಬಹುಭಾಷಾ ಬೆಡಗಿ ಪ್ರಿಯಾಮಣಿ ಕೂಡ ಒಬ್ರು.

Tollywood Actor Allu Arjun makes official entry to Twitter today

'ಸನ್ ಆಫ್ ಸತ್ಯಮೂರ್ತಿ' ಕೂಡ ಬಿಡುಗಡೆಯ ಹೊಸ್ತಿಲಲ್ಲಿದೆ. ಸಿನಿಮಾಗೆ ಆಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರ ನೀಡುತ್ತಿರುವ ಅಲ್ಲು ಅರ್ಜುನ್, ಈಗ ಟ್ವಿಟ್ಟರ್ ಗೆ ಎಂಟ್ರಿಕೊಟ್ಟು ಸಿನಿಮಾಗೆ ಮತ್ತಷ್ಟು ಬೂಸ್ಟ್ ನೀಡುತ್ತಿದ್ದಾರೆ. [ಅಲ್ಲು ಅರ್ಜುನ್-ಉಪೇಂದ್ರ ಚಿತ್ರದ ಸೊಗಸಾದ ಟೀಸರ್]

Tollywood Actor Allu Arjun makes official entry to Twitter today

ಅದೇನೇಯಿರಲಿ, ಅಲ್ಲು ಅರ್ಜುನ್ ಗೆ ಬರ್ತಡೆ ವಿಶ್ ಮಾಡ್ಬೇಕು...'ಸನ್ ಆಫ್ ಸತ್ಯಮೂರ್ತಿ' ಸಿನಿಮಾ ಬಗ್ಗೆ ತಿಳಿದುಕೊಳ್ಳಬೇಕು ಅಂದ್ರೆ @alluarjun ಹ್ಯಾಂಡಲ್ ಗೆ ಭೇಟಿ ಕೊಡಿ.

English summary
Tollywood Actor Allu Arjun has opened his official Twitter Account today (April 8th) on the occasion of his birthday. alluarjun is his Twitter Handle.
Please Wait while comments are loading...

Kannada Photos

Go to : More Photos