twitter
    For Quick Alerts
    ALLOW NOTIFICATIONS  
    For Daily Alerts

    ದುರಂತ ಅಂತ್ಯ ಕಂಡ ಕನ್ನಡ ಚಿತ್ರಗಳು - 2

    |

    ಸುಖಾಂತ್ಯ ಮತ್ತು ದು:ಖಾಂತ್ಯ ಚಿತ್ರದ ಎರಡು ಮುಖಗಳು. ರಂಗಭೂಮಿಯನ್ನು ಅವಲಂಬಿಸಿ ಕನ್ನಡ ಚಿತ್ರರಂಗ ಆರಂಭವಾಗಿರುವುದು ಎಲ್ಲರಿಗೂ ತಿಳಿದುರುವ ವಿಚಾರ. 1934ರಲ್ಲಿ ತೆರೆಕಂಡ ಟಾಕಿ ಚಿತ್ರ ಸತಿ ಸುಲೋಚನದಿಂದ ಹಿಡಿದು ಇತ್ತೀಚೆಗೆ ಬಿಡುಗಡೆಗೊಂಡ ಚಿತ್ರಗಳವರೆಗೆ ಬಹಳಷ್ಟು ದುರಂತ ಅಂತ್ಯ ಕಾಣುವ ಕನ್ನಡ ಚಿತ್ರಗಳನ್ನು ನೋಡಿದ್ದೇವೆ, ಕೇಳಿದ್ದೇವೆ.

    ಕೆಲವೊಂದು ನಿರ್ದೇಶಕರ ಚಿತ್ರಗಳೆಂದರೆ ಅದು ಬ್ರ್ಯಾಂಡ್ ಟ್ರಾಜಿಡಿ ಚಿತ್ರಗಳಿಗೇ ಮೀಸಲು. ದುರಂತ ಚಿತ್ರಗಳನ್ನೇ ಇಷ್ಟ ಪಡುತ್ತಿದ್ದ ವರ್ಗಗಳೂ ಇದ್ದವು, ಈಗಲೂ ಇವೆ. ಅಂಥಹ ಒಂದಷ್ಟು ಪ್ರಮುಖ ಚಿತ್ರಗಳನ್ನು ಕಲೆ ಹಾಕಿ ಸರಣಿ ಲೇಖನದ ಮೂಲಕ ನಿಮ್ಮ ಮುಂದೆ ತರುವ ಪ್ರಯತ್ನವಿದು.

    ನಿಮ್ಮ ಗಮನಕ್ಕೆ ಬಂದ ಚಿತ್ರಗಳು ನಮ್ಮ ಗಮನಕ್ಕೆ ಬರದೇ ಇದ್ದ ಪಕ್ಷದಲ್ಲಿ ಅಂಥಹಾ ಚಿತ್ರಗಳ ಬಗ್ಗೆ ನಮಗೆ ತಿಳಿಸಲು ಕೋರುತ್ತಿದ್ದೇವೆ. ದುರಂತ ಅಂತ್ಯ ಕಾಣುವ ಹಳೆಯ/ಹೊಸ ಕನ್ನಡ ಚಿತ್ರಗಳ ಬಗ್ಗೆ ನಮ್ಮ ಒದುಗರಿಗೆ ತಿಳಿಸುವ ಸಣ್ಣ ಪ್ರಯತ್ನವಿದು.

    ದುರಂತ ಅಂತ್ಯ ಕಂಡ ಚಿತ್ರಗಳ ಸರಣಿಯ ಮೊದಲ ಲೇಖನವಿದು. ಸರಣಿ ಲೇಖನ ಇನ್ನೂ ಮುಂದುವರಿಯಲಿದೆ.

    ನೀವೂ ಒದಿ, ನಿಮ್ಮವರಿಗೂ ಒದಲು ಹೇಳಿ.

    ಸನಾದಿ ಅಪ್ಪಣ್ಣ

    ಸನಾದಿ ಅಪ್ಪಣ್ಣ

    ಬಿಡುಗಡೆಯಾದ ವರ್ಷ : 1977
    ನಿರ್ದೇಶಕ: ವಿಜಯ್
    ಸಂಗೀತ ನಿರ್ದೇಶಕ: ಜಿ ಕೆ ವೆಂಕಟೇಶ್
    ತಾರಾಗಣದಲ್ಲಿ : ಡಾ. ರಾಜಕುಮಾರ್, ಜಯಪ್ರದ, ಅಶೋಕ್
    ಜನಪ್ರಿಯ ಹಾಡು: ಕರೆದರು ಕೇಳದೆ ಸುಂದರನೇ ಏಕೆ
    ಕ್ಲೈಮ್ಯಾಕ್ಸ್ : ನಾಯಕ, ನಾಯಕಿಯ ಸಾವು

    ಬೆಂಕಿಯ ಬಲೆ

    ಬೆಂಕಿಯ ಬಲೆ

    ಬಿಡುಗಡೆಯಾದ ವರ್ಷ : 1983
    ನಿರ್ದೇಶಕ: ದೊರೈ ಭಗವಾನ್
    ಸಂಗೀತ ನಿರ್ದೇಶಕ: ರಾಜನ್ ನಾಗೇಂದ್ರ
    ತಾರಾಗಣದಲ್ಲಿ : ಅನಂತ್ ನಾಗ್, ಲಕ್ಷ್ಮಿ
    ಜನಪ್ರಿಯ ಹಾಡು: ಒಲಿದ ಜೀವ ಜೊತೆಗಿರಲು ಬಾಳು ಸುಂದರ
    ಕ್ಲೈಮ್ಯಾಕ್ಸ್ : ನಾಯಕನ ಸಾವು

    ಜೀವನಚಕ್ರ

    ಜೀವನಚಕ್ರ

    ಬಿಡುಗಡೆಯಾದ ವರ್ಷ : 1985
    ನಿರ್ದೇಶಕ: ಭಾರ್ಗವ
    ಸಂಗೀತ ನಿರ್ದೇಶಕ: ರಾಜನ್ ನಾಗೇಂದ್ರ
    ತಾರಾಗಣದಲ್ಲಿ : ಡಾ. ವಿಷ್ಣುವರ್ಧನ್, ರಾಧಿಕ, ಸಿ ಆರ್ ಸಿಂಹ
    ಜನಪ್ರಿಯ ಹಾಡು: ಆನಂದ ಆನಂದ, ನನ್ನವರು ಯಾರೂ ಇಲ್ಲ
    ಕ್ಲೈಮ್ಯಾಕ್ಸ್ : ನಾಯಕ, ನಾಯಕಿಯ ಸಾವು

    ರಂಗನಾಯಕಿ

    ರಂಗನಾಯಕಿ

    ಬಿಡುಗಡೆಯಾದ ವರ್ಷ :1981
    ನಿರ್ದೇಶಕ: ಪುಟ್ಟಣ್ಣ ಕಣಗಾಲ್
    ಸಂಗೀತ ನಿರ್ದೇಶಕ: ಎಂ ರಂಗರಾವ್
    ತಾರಾಗಣದಲ್ಲಿ : ಆರತಿ, ಅಂಬರೀಶ್, ಅಶೋಕ್
    ಜನಪ್ರಿಯ ಹಾಡು: ಕನ್ನಡ ನಾಡಿನ ರಸಿಕರ ಮನವ
    ಕ್ಲೈಮ್ಯಾಕ್ಸ್ : ನಾಯಕಿ ಆತ್ಮಹತ್ಯೆ

    ಭಾಗ್ಯವಂತರು

    ಭಾಗ್ಯವಂತರು

    ಬಿಡುಗಡೆಯಾದ ವರ್ಷ : 1977
    ನಿರ್ದೇಶಕ: ಭಾರ್ಗವ
    ಸಂಗೀತ ನಿರ್ದೇಶಕ: ರಾಜನ್ ನಾಗೇಂದ್ರ
    ತಾರಾಗಣದಲ್ಲಿ : ಡಾ. ರಾಜಕುಮಾರ್, ಸರೋಜಾ ದೇವಿ, ಅಶೋಕ್
    ಜನಪ್ರಿಯ ಹಾಡು: ಭಾಗ್ಯವಂತರು ನಾವೇ ಭಾಗ್ಯವಂತರು
    ಕ್ಲೈಮ್ಯಾಕ್ಸ್ : ನಾಯಕ, ನಾಯಕಿಯ ಸಾವು

    ಗೆಜ್ಜೆಪೂಜೆ

    ಗೆಜ್ಜೆಪೂಜೆ

    ಬಿಡುಗಡೆಯಾದ ವರ್ಷ: 1969
    ನಿರ್ದೇಶಕರು: ಎಸ್ ಆರ್ ಪುಟ್ಟಣ್ಣ ಕಣಗಾಲ್
    ಸಂಗೀತ ನಿರ್ದೇಶಕರು: ವಿಜಯ ಭಾಸ್ಕರ್
    ಪ್ರಮುಖ ತಾರಾಗಣದಲ್ಲಿ: ಕಲ್ಪನಾ, ಗಂಗಾಧರ್, ಲೀಲಾವತಿ
    ಜನಪ್ರಿಯ ಹಾಡು : ಪಂಚಮವೇದ ಪ್ರೇಮದ ನಾದ, ಗಗನವು ಎಲ್ಲೋ ಭೂಮಿಯು ಎಲ್ಲೋ
    ಕ್ಲೈಮ್ಯಾಕ್ಸ್: ಆತ್ಮಹತ್ಯೆಗೆ ಶರಣಾಗುವ ನಾಯಕಿ

    ಶರಪಂಜರ

    ಶರಪಂಜರ

    ಬಿಡುಗಡೆಯಾದ ವರ್ಷ: 1971
    ನಿರ್ದೇಶಕರು: ಎಸ್ ಆರ್ ಪುಟ್ಟಣ್ಣ ಕಣಗಾಲ್
    ಸಂಗೀತ ನಿರ್ದೇಶಕರು: ವಿಜಯ ಭಾಸ್ಕರ್
    ಪ್ರಮುಖ ತಾರಾಗಣದಲ್ಲಿ: ಕಲ್ಪನಾ, ಗಂಗಾಧರ್, ಲೀಲಾವತಿ, ಶಿವರಾಂ
    ಜನಪ್ರಿಯ ಹಾಡು : ಕಾವೇರಿ ಕೊಡಗಿನ ಕಾವೇರಿ, ಉತ್ತರ ಧ್ರುವದಿನ್ ದಕ್ಷಿಣ ಧ್ರುವಕೂ
    ಕ್ಲೈಮ್ಯಾಕ್ಸ್: ಮಾನಸಿಕ ಅಸ್ವಸ್ಥತೆಗೆ ಪುನ: ಒಳಗಾಗುವ ನಾಯಕಿ

    ಸಾಕ್ಷಾತ್ಕಾರ

    ಸಾಕ್ಷಾತ್ಕಾರ

    ಬಿಡುಗಡೆಯಾದ ವರ್ಷ: 1971
    ನಿರ್ದೇಶಕರು: ಎಸ್ ಆರ್ ಪುಟ್ಟಣ್ಣ ಕಣಗಾಲ್
    ಸಂಗೀತ ನಿರ್ದೇಶಕರು: ಎಂ ರಂಗರಾವ್
    ಪ್ರಮುಖ ತಾರಾಗಣದಲ್ಲಿ: ಡಾ. ರಾಜಕುಮಾರ್, ಜಮುನಾ, ಪೃಥ್ವಿರಾಜ್ ಕಪೂರ್, ಬಾಲಕೃಷ್ಣ
    ಜನಪ್ರಿಯ ಹಾಡು : ಜನ್ಮ ಜನ್ಮದ ಅನುಭಂದ, ಒಲವೇ ಜೀವನ ಸಾಕ್ಷಾತ್ಕಾರ
    ಕ್ಲೈಮ್ಯಾಕ್ಸ್: ನಾಯಕಿಯ ಸಾವು

    ಕಸ್ತೂರಿ ನಿವಾಸ

    ಕಸ್ತೂರಿ ನಿವಾಸ

    ಬಿಡುಗಡೆಯಾದ ವರ್ಷ: 1971
    ನಿರ್ದೇಶಕರು: ದೊರೈ ಭಗವಾನ್
    ಸಂಗೀತ ನಿರ್ದೇಶಕರು: ಜಿ ಕೆ ವೆಂಕಟೇಶ್
    ಪ್ರಮುಖ ತಾರಾಗಣದಲ್ಲಿ: ಡಾ. ರಾಜಕುಮಾರ್, ಜಯಂತಿ, ಆರತಿ, ಅಶ್ವಥ್
    ಜನಪ್ರಿಯ ಹಾಡು : ಆಡಿಸಿ ನೋಡು ಬೀಳಿಸಿ ನೋಡು, ನೀ ಬಂದು ನಿಂತಾಗ ನಿಂತು ನೀ ನಕ್ಕಾಗ
    ಕ್ಲೈಮ್ಯಾಕ್ಸ್: ನಾಯಕ ದಿವಾಳಿಯಾಗಿ ದೇಶಾಂತರಕ್ಕೆ

    ನಾಗರಹಾವು

    ನಾಗರಹಾವು

    ಬಿಡುಗಡೆಯಾದ ವರ್ಷ: 1972
    ನಿರ್ದೇಶಕರು: ಎಸ್ ಆರ್ ಪುಟ್ಟಣ್ಣ ಕಣಗಾಲ್
    ಸಂಗೀತ ನಿರ್ದೇಶಕರು: ವಿಜಯ ಭಾಸ್ಕರ್
    ಪ್ರಮುಖ ತಾರಾಗಣದಲ್ಲಿ: ವಿಷ್ಣುವರ್ಧನ್, ಆರತಿ, ವೈಶಾಲಿ ಕಾಸರವಳ್ಳಿ, ಅಶ್ವಥ್, ಲೀಲಾವತಿ
    ಜನಪ್ರಿಯ ಹಾಡು : ಹಾವಿನ ದ್ವೇಷ ಹನ್ನೆರೆಡು ವರುಷ, ಬಾರೆ..ಬಾರೇ ಚಂದದ ಚಲುವಿನ ತಾರೆ
    ಕ್ಲೈಮ್ಯಾಕ್ಸ್: ನಾಯಕ, ನಾಯಕಿ, ಚಾಮಯ್ಯ ಮೇಷ್ಟ್ರ ಸಾವು

    English summary
    Tragedy ending Kannada movies series. 
    Friday, March 8, 2013, 18:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X