»   » ಕಡೆಗೂ ಕನ್ನಡಕ್ಕೆ ಅಡಿಯಿಟ್ಟ ತ್ರಿಷಾ ಕೃಷ್ಣನ್

ಕಡೆಗೂ ಕನ್ನಡಕ್ಕೆ ಅಡಿಯಿಟ್ಟ ತ್ರಿಷಾ ಕೃಷ್ಣನ್

Posted by:
Subscribe to Filmibeat Kannada

ಕಡೆಗೂ ಮೋಹಕ ಬೆಡಗಿ ತ್ರಿಷಾ ಕೃಷ್ಣನ್ ಕನ್ನಡಕ್ಕೆ ಅಡಿಯಿಟ್ಟಿದ್ದಾರೆ. ಆಕೆ ಅಭಿನಯಿಸುತ್ತಿರುವ ಚೊಚ್ಚಲ ಕನ್ನಡ ಚಿತ್ರದ ಹೆಸರು 'ರಮ್' (RUM). ಇದೊಂದು ತ್ರಿಭಾಷಾ ಚಿತ್ರವಾಗಿದ್ದು ಕನ್ನಡ ಸೇರಿದಂತೆ ತೆಲುಗು, ತಮಿಳಿನಲ್ಲೂ ಚಿತ್ರ ಏಕಕಾಲಕ್ಕೆ ಸೆಟ್ಟೇರಲಿದೆ.

ಅಂದಹಾಗೆ ಜನವರಿ 2013ಕ್ಕೆ ಸೆಟ್ಟೇರಲಿರುವ ಈ ಚಿತ್ರದ ಟೈಟಲ್ RUM (ರಂಭೆ ಊರ್ವಶಿ ಮೇನಕೆ). ಇದೊಂದು ಮಹಿಳಾ ಪ್ರಧಾನ ಚಿತ್ರವಂತೆ. ಚಿತ್ರದ ಪಾತ್ರವರ್ಗದಲ್ಲಿ ಯಾರ್‍ಯಾರು ಇದ್ದಾರೆ ಎಂಬುದನ್ನು ಚಿತ್ರತಂಡ ಇನ್ನೂ ಸುಳಿವು ಬಿಟ್ಟುಕೊಟ್ಟಿಲ್ಲ.

ಟಾಲಿವುಡ್ ಟಾಪ್ ನಿರ್ಮಾಪಕರಲ್ಲಿ ಒಬ್ಬರಾದ ಎಂ.ಎಸ್.ರಾಜು ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಈ ಹಿಂದೆಯೂ ಕನ್ನಡದಲ್ಲಿ ಅಭಿನಯಿಸುವಂತೆ ಬಹಳಷ್ಟು ಆಫರ್ ಗಳು ಬಂದಿದ್ದವಂತೆ. ಆದರೆ ಯಾವುದಕ್ಕೂ ಸಹಿ ಹಾಕಿರಲಿಲ್ಲ ಎಂದಿದ್ದಾರೆ ತ್ರಿಷಾ.

ಬಹುಶಃ ಆಕೆಗೆ ಕಥೆ ಇಷ್ಟವಾಗಲಿಲ್ಲವೋ ಅಥವಾ ಕೇಳಿದಷ್ಟು ಸಂಭಾವನೆ ಸಿಗಲಿಲ್ಲವೋ ಕಾರಣ ಸ್ಪಷ್ಟವಾಗಿ ಗೊತ್ತಿಲ್ಲ. ಈಗ ಕನ್ನಡ ಚಿತ್ರಕ್ಕೆ ಸಹಿಹಾಕಿರುವ ತ್ರಿಷಾ ಈ ಬಗ್ಗೆ ಮಾತನಾಡುತ್ತಾ, ಕಲಾವಿದರಿಗೆ ಭಾಷೆ ಯಾವುದಾದರೇನು. ಅವರಿಗೆ ಭಾಷೆಯ ಹಂಗಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆಯೇ ತ್ರಿಷಾ ಕನ್ನಡ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿತ್ತು. ಅದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಸಿಎಂ (ಕಾಮನ್ ಮ್ಯಾನ್) ಚಿತ್ರ ಎಂಬ ಸುದ್ದಿ ಇತ್ತು. ಈ ಚಿತ್ರಕ್ಕಾಗಿ ರು.80 ಲಕ್ಷ ಸಂಭಾವನೆಯನ್ನೂ ತ್ರಿಷಾ ಅವರಿಗೆ ನೀಡಲಾಗಿದೆ ಎನ್ನಲಾಗಿತ್ತು. ಬಳಿಕ ಆ ಚಿತ್ರದ ಕಥೆ ಏನಾಯಿತೋ ಏನೋ ಗೊತ್ತಿಲ್ಲ. (ಏಜೆನ್ಸೀಸ್)

English summary
Trisha Krishnan, one of the top actresses in South Indian film industries, is finally making her debut in Sandalwood. The 29-year-old is ready to enter Kannada films with bang in a trilingual film.
Please Wait while comments are loading...

Kannada Photos

Go to : More Photos