»   » ತುಳು ಚಿತ್ರ 'ಅರ್ಜುನ್ ವೆಡ್ಸ್ ಅಮೃತ' ಧ್ವನಿಸುರುಳಿ ಬಿಡುಗಡೆ

ತುಳು ಚಿತ್ರ 'ಅರ್ಜುನ್ ವೆಡ್ಸ್ ಅಮೃತ' ಧ್ವನಿಸುರುಳಿ ಬಿಡುಗಡೆ

Written by: ಒನ್ಇಂಡಿಯಾ ಪ್ರತಿನಿಧಿ
Subscribe to Filmibeat Kannada

ಬೆದ್ರ 9 ಕ್ರಿಯೇಷನ್ಸ್ ಲಾಂಛನದಲ್ಲಿ ರಘುಶೆಟ್ಟಿ ನಿರ್ದೇಶನದಲ್ಲಿ ತಯಾರಾದ 'ಅರ್ಜುನ್ ವೆಡ್ಸ್ ಅಮೃತ' ತುಳು ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಮಾರ್ಚ್ 18 ರಂದು ಮಂಗಳೂರಿನ ಪುರಭವನದಲ್ಲಿ ಜರುಗಿತು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಅವರು ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಿ, ''ತುಳು ಸಿನಿಮಾರಂಗಕ್ಕೆ ಈಗ ಪರ್ವಕಾಲ. ಬಹಳಷ್ಟು ಸಿನಿಮಾಗಳು ಇಲ್ಲಿ ತಯಾರಾಗುತ್ತಿದೆ. ಉತ್ತಮ ಸಂದೇಶ ಇರುವ ಚಿತ್ರಗಳು ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗುತ್ತಿದೆ. ಸಿನಿಮಾಗಳು ಗುಣಮಟ್ಟವನ್ನು ಕಾಯ್ದುಕೊಂಡು ಇಲ್ಲಿಯ ಆಚಾರ-ವಿಚಾರ, ಸಂಸ್ಕೃತಿಯತ್ತ ಗಮನಹರಿಸುವಂತಾಗಲಿ'' ಎಂದರು.

Tulu Movie 'Arjun weds Amrutha' audio release

ಸಮಾರಂಭದಲ್ಲಿ ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಸ್ವರ್, ಕಿಶೋರ್.ಡಿ.ಶೆಟ್ಟಿ, ಮಿಫ್ಟ್ ಕಾಲೇಜಿನ ಎಂ.ಜಿ.ಹೆಗ್ಡೆ, 'ಅರ್ಜುನ್ ವೆಡ್ಸ್ ಅಮೃತ' ಚಿತ್ರದ ಸಂಗೀತ ನಿರ್ದೇಶಕರಾದ ಸುಮಾ.ಎಲ್.ಎನ್.ಶಾಸ್ತ್ರಿ, ನಿರ್ದೇಶಕ ರಘು ಶೆಟ್ಟಿ, ನಟ ಅನೂಪ್ ಸಾಗರ್, ನಟಿ ಆರಾಧ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಿನಿಮಾಕ್ಕೆ ಸಾಹಿತ್ಯ ರಚಿಸಿದ ಲೋಕು ಕುಡ್ಲ, ರಾಜೇಶ್ ಶೆಟ್ಟಿ, ದಾಮೋದರ ದೊಂಡೊಲೆ, ನೃತ್ಯ ನಿರ್ದೇಶಕರಾದ ತರುಣ್, ಕಿರಣ್ ರಾಜ್, ಸಂಗೀತ ನಿರ್ದೇಶಕಿ ಸುಮಾ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಸ್ವರ್ಣ ಸುಂದರ್, ಮಧು ಸುರತ್ಕಲ್, ಭೋಜರಾಜ ವಾಮಂಜೂರು, ಪಿ.ಶ್ರೀಧರ್ ಹಾಘೂ ಚಿತ್ರದ ಕಲಾವಿದರು, ತಂತ್ರಜ್ಞರು ಉಪಸ್ಥಿತರಿದ್ದರು. ಅನುರಾಗ್ ಕಾರ್ಯಕ್ರಮ ನಿರ್ವಹಿಸಿದರು.

English summary
Tulu Movie 'Arjun weds Amrutha' audio was released in Mangaluru on March 18th.
Please Wait while comments are loading...

Kannada Photos

Go to : More Photos