twitter
    For Quick Alerts
    ALLOW NOTIFICATIONS  
    For Daily Alerts

    ಚಾಲಿಪೋಲಿಲು 200; ಸಚಿವ ಖಾದರ್ ಜೊತೆ ಸಂಭ್ರಮ

    By Mahesh
    |

    ಜಯಕಿರಣ ಫಿಲ್ಮ್ ಬ್ಯಾನರ್ ನಡಿ ತೆರೆ ಕಂಡಿರುವ ತುಳು ಹಾಸ್ಯಚಿತ್ರ ಚಾಲಿಪೊಲೀಲು ಇತ್ತೀಚೆಗೆ ಯಶಸ್ವಿಯಾಗಿ 200 ದಿನ ಪೂರೈಸಿದೆ. ತುಳು ಸಿನಿಮಾ ರಂಗದ 43 ವರ್ಷಗಳ ಇತಿಹಾಸದಲ್ಲಿ 52ನೇ ಸಿನಿಮಾ ಆಗಿ ಹೊರಬಂದಿರುವ ಈ ಚಿತ್ರ ಡಬ್ಬಲ್ ಸೆಂಚುರಿ ಸಂಭ್ರಮವನ್ನು ಮಂಗಳೂರಿನ 92.2ಬಿಗ್ ಎಫ್‍ಎಂ ಕಚೇರಿಯಲ್ಲಿ ಆಚರಿಸಿಕೊಂಡಿತು.

    ಕೇಕ್ ಕತ್ತರಿಸುವ ಮೂಲಕ ಸಮಾರಂಭದಲ್ಲಿ ಮಾತನಾಡಿದ ಕುಟುಂಬ ಮತ್ತು ಆರೋಗ್ಯ ಇಲಾಖೆ ಸಚಿವ ಯು.ಟಿ.ಖಾದರ್, ತುಳು ಬರಹಗಾರರು, ನಾಟಕಕಾರರ ಸತತ ಶ್ರಮದಿಂದ ತುಳು ಭಾಷೆಯ ಜೀವಂತಿಕೆ ಹೆಚ್ಚಿದೆ. ತುಳು ಸಿನಿಮಾರಂಗದಲ್ಲಿ ಚಾಲಿಪೋಲಿಲು ಸಿನಿಮಾ 200 ದಿನಗಳನ್ನು ಪೂರೈಸಿ ದಾಖಲೆ ನಿರ್ಮಿಸಿದೆ ಎಂದರು.

    ಭಾಷೆ ತಿಳಿದಿಲ್ಲದವರೂ ಚಿತ್ರನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ತುಳು ಭಾಷೆ ಹೆಗ್ಗಳಿಕೆ ಪಡೆದುಕೊಂಡಿರುವುದರ ಸಂಕೇತ. ಕರಾವಳಿಗೆ ಸೀಮಿತವಾಗದೆ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲೂ ಸಿನಿಮಾದ ಜನಪ್ರಿಯತೆ ಪಸರಿಸುತ್ತಿರುವ ಮೂಲಕ ತುಳುವಿಗೆ ಉತ್ತಮ ವೇದಿಕೆ ಸಜ್ಜಾಗುತ್ತಿದೆ ಎನ್ನುವ ಸಂದೇಶ ನೀಡಿದೆ ಎಂದು ಅಭಿಪ್ರಾಯಪಟ್ಟರು.

    ಕಡಿಮೆ ವೆಚ್ಚದಲ್ಲಿ ತಯಾರಿ ಭರ್ಜರಿ ಲಾಭ

    ಕಡಿಮೆ ವೆಚ್ಚದಲ್ಲಿ ತಯಾರಿ ಭರ್ಜರಿ ಲಾಭ

    ಚಾಲಿಪೋಲಿಲು ಸಿನಿಮಾ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಾಗಿದ್ದು 50 ದಿನದ ಪ್ರದರ್ಶನದ ವೇಳೆಗೆ 1.66 ಕೋಟಿ ರೂ.ಗೂ ಹೆಚ್ಚು ಗಳಿಕೆಯನ್ನು ಸಂಪಾದಿಸಿತ್ತು. ಮುಂಬೈ, ದೆಹಲಿ ಮತ್ತು ವಿದೇಶದಲ್ಲೂ ಸಿನಿಮಾ ಪ್ರದರ್ಶನಗೊಂಡಿದೆ.

    ಸಚಿವ ಖಾದರ್ ರಿಂದ ಶುಭ ಹಾರೈಕೆ

    ಸಚಿವ ಖಾದರ್ ರಿಂದ ಶುಭ ಹಾರೈಕೆ

    ಚಾಲಿಪೋಲಿಲು ಚಿತ್ರತಂಡದ ಜೊತೆಗೆ ಬಿಗ್ ಎಫ್ ಎಂ ಕಚೇರಿಯಲ್ಲಿ ಕೇಕ್ ಕತ್ತರಿ ಸಂಭ್ರಮ ಹಂಚಿಕೊಂಡ ಸಚಿವ ಯುಟಿ ಖಾದರ್ ಅವರು ನಂತರ ಆರ್ ಜೆಗಳ ಜೊತೆ ಕುಳಿತು ಚಿತ್ರದ ಬಗ್ಗೆ ಮಾತನಾಡಿದರು.

    ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಮಾತನಾಡಿ

    ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಮಾತನಾಡಿ

    ಚಿತ್ರ ಎಲ್ಲಾ ಭಾಷೆಯ ಜನರಿಗೂ ಮೆಚ್ಚುಗೆಯಾಗಿದ್ದು ಬಹುದೊಡ್ಡ ಸಂಗತಿ. ನಿರೀಕ್ಷೆಗೂ ಮೀರಿ ಹೊಸ ದಾಖಲೆಯತ್ತ ಮುನ್ನುಗ್ಗುತ್ತಿರುವುದು ತುಳು ಕಲಾಭಿಮಾನಿಗಳಿಂದ ಸಾಧ್ಯವಾಗಿದೆ ಎಂದರು.

    ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಮಾತನಾಡಿ,

    ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಮಾತನಾಡಿ,

    ಮೇ22ರಿಂದ ಪ್ರಭಾತ್ ಚಿತ್ರಮಂದಿರ ಹಾಗೂ ಮೇ27ರಂದು ಬಹರೈನ್ ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 5 ಸಿನಿಮಾ ಮಂದಿರಗಳಲ್ಲಿ ಚಿತ್ರ ಕೇಜ್ ಮುಂದುವರೆದಿದೆ. ಮಂಗಳೂರಿನ ಜ್ಯೋತಿ, ಬಿಗ್ ಸಿನಿಮಾ, ಪಿವಿಆರ್, ಬಿ.ಸಿ. ರೋಡಿನ ನಕ್ಷತ್ರ ಮತ್ತು ಉಡುಪಿಯ ಕಲ್ಪನಾ ಥಿಯೇಟರ್ ಗಳಲ್ಲಿ ಉತ್ತಮ ಕಲೆಕ್ಷನ್ ಬಂದಿದೆ ಎಂದರು.

    ಬಿಗ್‍ಎಫ್‍ಎಂನ ಸಿಬ್ಬಂದಿಗಳು ಅಚ್ಚರಿ

    ಬಿಗ್‍ಎಫ್‍ಎಂನ ಸಿಬ್ಬಂದಿಗಳು ಅಚ್ಚರಿ

    ಚಾಲಿಪೋಲಿಲು ತುಳು ಚಿತ್ರವಾದರೂ ಎಲ್ಲಾ ಬಗೆಯ ಪ್ರೇಕ್ಷಕ ವರ್ಗಕ್ಕೆ ಇಷ್ಟವಾದ ಕಾರಣ ಈ ಮಟ್ಟದ ದೊಡ್ದ ಯಶಸ್ಸು ಸಿಕ್ಕಿದೆ ಎಂದು ಆರ್ ಜೆ ರಾಕೇಶ್ ಅಭಿಪ್ರಾಯ್ಪಟ್ಟರು. ಬಿಗ್‍ಎಫ್‍ಎಂನ ಸಿಬ್ಬಂದಿಗಳಾದ ಶಿಲ್ಪ, ಜೋಯೆಲ್, ರಾಕೇಶ್, ಕಿರಣ್ ಉಪಸ್ಥಿತರಿದ್ದರು.

    English summary
    Tulu movie 'Chaali Polilu' celebrates successful 200 days at the theaters. The industry popularly called as Coastalwood has been producing 3-5 movies annually. In the recent years with the increased interest and good fan following the number of yearly releases has been raised.
    Thursday, May 21, 2015, 14:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X