twitter
    For Quick Alerts
    ALLOW NOTIFICATIONS  
    For Daily Alerts

    ಹೊಸ ಇತಿಹಾಸ ಬರೆದ ತುಳು ಚಿತ್ರ 'ಚಾಲಿಪೋಲಿಲು'

    By Rajendra
    |

    ಫೆಬ್ರವರಿ 7ರ ಶನಿವಾರ ತುಳು ಚಿತ್ರರಂಗದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನವಾಗಲಿದೆ. ಈವರೆಗೆ ಆಗದಂಥ ಒಂದು ಸಾಧನೆ, ದಾಖಲೆಗೆ ಈ ದಿನ ಸಾಕ್ಷಿಯಾಗುತ್ತಿದೆ. ಜಯಕಿರಣ ಫಿಲ್ಮ್ಸ್ ಲಾಂಛನದಡಿಯಲ್ಲಿ ಪ್ರಕಾಶ್ ಪಾಂಡೇಶ್ವರ ಅವರ ನಿರ್ಮಾಣದ, ವೀರೇಂದ್ರ ಶೆಟ್ಟಿ ಕಾವೂರು ನಿರ್ದೇಶನದ ಚಾಲಿಪೋಲಿಲು ಮೂರು ಟಾಕೀಸುಗಳಲ್ಲಿ ಶತದಿನಗಳ ಪ್ರದರ್ಶನ ಕಾಣುತ್ತಿರುವುದು ತುಳುನಾಡಿನ ಜನರೆಲ್ಲರೂ ಹೆಮ್ಮೆಪಡುವಂತೆ ಮಾಡಿದೆ.

    ಐದು ಟಾಕೀಸುಗಳಲ್ಲಿ 75 ದಿನಗಳ ಪ್ರದರ್ಶನ ಕಂಡಿರುವ ಇದು ತನ್ನ ದಾಖಲೆಯ ನಡಿಗೆಯನ್ನು ಮುಂದುವರಿಸುತ್ತಲೇ ಇದೆ. ಹಲವು ಪ್ರಥಮಗಳ ಸಿನಿಮಾವಾಗಿರುವ ಚಾಲಿಪೋಲಿಲು ಈಗ ಮಂಗಳೂರಿನ ಜ್ಯೋತಿ, ಪಿವಿಆರ್ ಮತ್ತು ಬಿಗ್ ಸಿನೆಮಾಗಳಲ್ಲಿ ಶತದಿನಗಳ ಪ್ರದರ್ಶನ ಕಾಣುತ್ತಿದೆ. [ಚಾಲಿಪೋಲಿಲು ಚಿತ್ರ ವಿಮರ್ಶೆ]

    ಆ ಪೈಕಿ ಪಿವಿಆರ್ ನಲ್ಲಿ ಇದೇ ಮೊದಲ ಬಾರಿ ಸಿನಿಮಾವೊಂದು ಶತದಿನಗಳನ್ನು ಪೂರೈಸಿದೆ. ಬಿಗ್ ಸಿನೆಮಾದಲ್ಲಿ ಈ ಹಿಂದೆ ಪ್ರಕಾಶ್ ರೈ ಅವರ 'ನಾನೂ ಮತ್ತು ನನ್ನ ಕನಸು' ಸಿನಿಮಾ ಶತದಿನಗಳ ಪ್ರದರ್ಶನ ನೀಡಿದೆ. ಈಗ ಚಾಲಿಪೋಲಿಲು ಅಲ್ಲಿ ನೂರು ದಿನ ಪ್ರದರ್ಶನ ಕಾಣುವ ಮೂಲಕ ಇಲ್ಲಿ ಶತದಿನಗಳ ಪ್ರದರ್ಶನ ಕಂಡ ಎರಡೂ ಸಿನಿಮಾಗಳ ರೂವಾರಿಗಳು ಪ್ರಕಾಶರು ಎಂಬುದು ಗಮನಾರ್ಹ ಸಂಗತಿಯಾಗಿದೆ.

    ಸಿನಿಮಾ ನೋಡಿ ಖುಷಿಪಟ್ಟ ವಿದ್ಯಾರ್ಥಿಗಳು

    ಸಿನಿಮಾ ನೋಡಿ ಖುಷಿಪಟ್ಟ ವಿದ್ಯಾರ್ಥಿಗಳು

    ಚಾಲಿಪೋಲಿಲು ಉತ್ತಮ ಗುಣಮಟ್ಟ ಮತ್ತು ಉತ್ತಮ ಕಥೆ, ಸಂದೇಶ, ಹಾಸ್ಯದಿಂದ ಎಲ್ಲ ವರ್ಗದ ಜನರನ್ನೂ ಸೆಳೆದಂಥ ಒಂದು ಉತ್ಕೃಷ್ಟ ಮಟ್ಟದ ಸಿನಿಮಾ ಆಗಿದೆ. ಮಹಿಳೆಯರೂ, ಮಕ್ಕಳನ್ನೂ ಇದು ಸಿನಿಮಾ ಮಂದಿರಕ್ಕೆ ಸೆಳೆದಿದೆ. ಈಗಾಗಲೇ ಸುಮಾರು 18 ಶಾಲೆಗಳ ವಿದ್ಯಾರ್ಥಿಗಳು ಈ ಸಿನಿಮಾವನ್ನು ಜ್ಯೋತಿ ಚಿತ್ರಮಂದಿರದಲ್ಲಿ ವೀಕ್ಷಿಸಿ ಖುಷಿಪಟ್ಟಿದ್ದಾರೆ.

    ಎರಡು ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್

    ಎರಡು ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್

    ಬೆಂಗಳೂರು, ಮುಂಬಯಿ ಮಹಾನಗರದಲ್ಲಿ ಚಾಲಿಪೋಲಿಲು ಪ್ರದರ್ಶನ ಕಂಡಿದೆ. ಮುಂದಕ್ಕೆ ದೇಶದ ಬೇರೆ ಬೇರೆ ನಗರಗಳಲ್ಲಿ ಮತ್ತು ವಿದೇಶದಲ್ಲೂ ಪ್ರದರ್ಶನ ನೀಡಲಿದೆ. ಗಳಿಕೆಯಲ್ಲೂ ಚಾಲಿಪೋಲಿಲು ಸಿನಿಮಾ ಈಗಾಗಲೇ ಎರಡು ಕೋಟಿ ರೂಪಾಯಿಗೂ ಹೆಚ್ಚು ಸಂಪಾದಿಸಿದೆ. ತುಳು ಸಿನಿಮಾವೊಂದು ಏಕಕಾಲದಲ್ಲಿ ಮೂರು ಚಿತ್ರಮಂದಿರದಲ್ಲಿ ಶತದಿನೋತ್ಸವ ಆಚರಿಸುವುದು ಹೊಸದಾಖಲೆಯಾಗಿದೆ.

    ತುಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಚಿತ್ರ

    ತುಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಚಿತ್ರ

    ಈ ಚಿತ್ರದ ಬಳಿಕ ತುಳು ಚಿತ್ರರಂಗದ ಮೇಲೆ ಹೊಸ ಬೆಳಕು, ನಿರೀಕ್ಷೆ ಮೂಡಿದೆ ಎಂಬುದಕ್ಕೆ ಈ ಸಿನಿಮಾದ ಸಾಧನೆಯನ್ನು ಕಂಡು ಹಲವರು ಹೊಸ ಸಿನಿಮಾಗಳಿಗಾಗಿ ಟೈಟಲ್ ನೋಂದಣಿ ಮಾಡಿಕೊಂಡಿರುವುದು ಸಾಕ್ಷಿಯಾಗಿದೆ. ಅಲ್ಲದೆ ಈಗಾಗಲೇ ನೋಂದಣಿಯಾಗಿರುವ ಸಿನಿಮಾಗಳು ತಮ್ಮ ಚಿತ್ರೀಕರಣಗಳ ವೇಗವನ್ನೂ ಹೆಚ್ಚಿಸಿಕೊಂಡಿದೆ.

    8 ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಚಾಲಿಪೋಲಿಲು

    8 ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಚಾಲಿಪೋಲಿಲು

    ಹಲವಾರು ನಟ, ನಟಿಯರ ಭವಿಷ್ಯಕ್ಕೆ ಚಾಲಿಪೋಲಿಲು ಹೊಸ ರೂಪ ನೀಡಿದೆ ಎಂಬುದು ಚಿತ್ರತಂಡಕ್ಕೆ ಹೆಮ್ಮೆಯ ಸಂಗತಿ. ಇತ್ತೀಚೆಗೆ ಮಂಗಳೂರಿನ ಫೋರಂ ಮಾಲ್ ನಲ್ಲಿ ನಡೆದ ತುಳು ಚಿತ್ರೋತ್ಸವ 2014ರ ವಿಭಾಗದಲ್ಲಿ ಚಾಲಿಪೋಲಿಲು 8 ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ತನ್ನ ಸಾಧನೆಗೆ ಒಂದು ಅಧಿಕೃತ ಮನ್ನಣೆಯನ್ನು ಗಳಿಸಿಕೊಂಡಿದೆ.

    ಗುಣಮಟ್ಟದ ಹಾಸ್ಯ, ಉತ್ತಮ ನಿರ್ದೇಶನದ ಚಿತ್ರ

    ಗುಣಮಟ್ಟದ ಹಾಸ್ಯ, ಉತ್ತಮ ನಿರ್ದೇಶನದ ಚಿತ್ರ

    ಬಂದರೆ ಇಂಥ ಸಿನಿಮಾಗಳು ಬರಬೇಕು ಎಂದು ಪ್ರೇಕ್ಷಕರಿಂದ ಮುಕ್ತಕಂಠದಿಂದ ಹೊಗಳಲ್ಪಟ್ಟ ಇದು ತನ್ನ ಗುಣಮಟ್ಟದ ಹಾಸ್ಯ, ಉತ್ತಮ ನಿರ್ದೇಶನ, ಅತ್ಯುತ್ತಮ ಕ್ಯಾಮರಾ...ಅತ್ಯುತ್ತಮ ಸಂಗೀತ ಮುಂತಾದ ಹಲವಾರು ಉತ್ತಮ ಅಂಶಗಳನ್ನು ಹೊಂದಿದೆ.

    ಅನೇಕ ಕಲಾವಿದರಿಗೆ ಹೊಸ ಇಮೇಜ್ ಕೊಟ್ಟ ಚಿತ್ರ

    ಅನೇಕ ಕಲಾವಿದರಿಗೆ ಹೊಸ ಇಮೇಜ್ ಕೊಟ್ಟ ಚಿತ್ರ

    ದೇವದಾಸ್ ಕಾಪಿಕಾಡ್, ನವೀನ್ ಡಿ.ಪಡೀಲ್, ಭೋಜರಾಜ ವಾಮಂಜೂರು, ಅರವಿಂದ್ ಬೋಳಾರ್, ಸುಂದರ ರೈ ಮಂದಾರ, ಚೇತನ್ ರೈ, ಲಕ್ಷ್ಮಣ್ ಕುಮಾರ್ ಮಲ್ಲೂರು, ದಿವ್ಯಾಶ್ರೀ, ಸುರೇಂದ್ರ ಬಂಟ್ವಾಳ್, ಅರ್ಜುನ್ ಕಾಪಿಕಾಡ್ ಸಹಿತ ಅನೇಕ ಕಲಾವಿದರಿಗೆ ಈ ಸಿನಿಮಾ ಹೊಸ ಇಮೇಜನ್ನು ತಂದುಕೊಟ್ಟಿದೆ. ಉತ್ಪಲ್ ನಯನಾರ್ ಅವರ ಛಾಯಾಗ್ರಹಣ, ವಿ.ಮನೋಹರ್ ಅವರ ಸಂಗೀತ, ಮಣಿಕಾಂತ್ ಕದ್ರಿಯವರ ಹಿನ್ನೆಲೆ ಸಂಗೀತ ಸಿನಿಮಾದ ಯಶಸ್ಸಿಗೂ ಕಾರಣವಾಗಿದೆ.

    English summary
    Tulu movie Chaali Polilu all set to completes 100 days in three theaters. The movie is pure family oriented film. The movie produced by Prakash Pandeshwar under the banner Jayakirana Films. Veerendra Shetty Kavoor is the story writer, lyricist and director.
    Wednesday, February 4, 2015, 15:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X