»   » ಕ್ಲಾರಿಫಿಕೇಷನ್! 'ದಿಲ್ ಕಾ ರಾಜಾ' ಚಿತ್ರದಲ್ಲಿಲ್ಲ ಹರಿಪ್ರಿಯಾ.!

ಕ್ಲಾರಿಫಿಕೇಷನ್! 'ದಿಲ್ ಕಾ ರಾಜಾ' ಚಿತ್ರದಲ್ಲಿಲ್ಲ ಹರಿಪ್ರಿಯಾ.!

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ಕ್ವೀನ್ ಆಗಿದ್ದ ರಮ್ಯಾ, ಮಂಡ್ಯ ಸಂಸದೆ ಆಗಿದ್ದೇ ತಡ ರಾಜಕೀಯ ರಂಗದಲ್ಲೇ ಬಿಜಿಯಾಗ್ಬಿಟ್ರು.

'ಮಾಜಿ ಸಂಸದೆ' ಪಟ್ಟ ಪಡೆದ ಮೇಲೆ ಲಂಡನ್ ಗೆ ಹಾರಿ ಹೋದ ರಮ್ಯಾ ಈಗ ಮರಳಿ ಮಂಡ್ಯಗೆ ಬಂದಿಳಿದಿದ್ದಾರೆ. ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ರಮ್ಯಾ ಹೇಳಿಕೆ ನೀಡಿರುವ ಪ್ರಕಾರ, ಇನ್ಮುಂದೆ ಅವರು ಬಣ್ಣ ಹಚ್ಚೋದು ಬಹುತೇಕ ಡೌಟೇ.

ರಮ್ಯಾ ಕಾಲ್ ಶೀಟ್ ಗಾಗಿ ಕಾದು ಕುಳಿತಿರುವ 'ದಿಲ್ ಕಾ ರಾಜಾ' ಚಿತ್ರತಂಡದವರೂ ಕೂಡ ಬೇರೆ ನಾಯಕಿ ಕರೆತರುವ ಬಗ್ಗೆ ಪ್ಲಾನ್ ಮಾಡಿದ್ದಾರೆ. ಇದಕ್ಕೆ ರಮ್ಯಾ ಕೂಡ ಚಕಾರ ಎತ್ತಿಲ್ಲ.

tweet-haripriya-clarifies-for-not-replacing-ramya-in-dil-ka-raja

'ನೀರ್ ದೋಸೆ' ಚಿತ್ರದಲ್ಲಿ ರಮ್ಯಾ ರವರನ್ನ ನಟಿ ಹರಿಪ್ರಿಯಾ ರೀಪ್ಲೇಸ್ ಮಾಡಿದಂತೆ, 'ದಿಲ್ ಕಾ ರಾಜಾ'ನಿಗೂ ಹರಿಪ್ರಿಯಾ ರಾಣಿ ಆಗ್ಬಹುದು ಅಂತ ಎಲ್ಲರೂ ಊಹಿಸಿದ್ದರು. [ರಮ್ಯಾ ಬೇಡ ಅಂದಿದ್ದು ಹರಿಪ್ರಿಯಾ ಪಾಲಾಯ್ತು.!]

tweet-haripriya-clarifies-for-not-replacing-ramya-in-dil-ka-raja

ಆದ್ರೆ, ಈ ಬಗ್ಗೆ ಹರಿಪ್ರಿಯಾ ನಿರಾಕರಿಸಿದ್ದಾರೆ. ''ದಿಲ್ ಕಾ ರಾಜಾ' ಚಿತ್ರದಲ್ಲಿ ನಾನು ನಟಿಸುತ್ತಿಲ್ಲ'' ಅಂತ ಹರಿಪ್ರಿಯಾ ಕ್ಲಾರಿಫಿಕೇಷನ್ ಟ್ವೀಟ್ ಮಾಡಿದ್ದಾರೆ.

''ದಿಲ್ ಕಾ ರಾಜಾ' ಚಿತ್ರತಂಡದಿಂದ ನನ್ನನ್ನ ಯಾರೂ ಭೇಟಿ ಮಾಡಿಲ್ಲ. ರಮ್ಯಾ ಅಭಿಮಾನಿ ಆಗಿ, ಅವರು ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದನ್ನು ನಾನು ಬಯಸುತ್ತೇನೆ. ಅವರು ಬಿಟ್ಟು ಹೋದ ಜಾಗ ತುಂಬಲು ಅಲ್ಲ'' ಅಂತ ಹರಿಪ್ರಿಯಾ ಟ್ವೀಟ್ ಮಾಡಿದ್ದಾರೆ.

ಅಲ್ಲಿಗೆ, 'ದಿಲ್ ಕಾ ರಾಜಾ' ಚಿತ್ರದ ರಾಣಿ ಹರಿಪ್ರಿಯಾ ಅಲ್ಲ ಅನ್ನೋದು ಕನ್ಫರ್ಮ್. ಮತ್ತಿನ್ಯಾರು ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

English summary
Kannada Actress Haripriya has taken her twitter account to clarify that she has not replaced Kannada Actress Ramya in Kannada Movie 'Dil Ka Raja'.
Please Wait while comments are loading...

Kannada Photos

Go to : More Photos