»   » ಟ್ವಿಟ್ಟರ್ ನಲ್ಲಿ ಬ್ರಹ್ಮ ಉಪ್ಪಿ ಸೂಪರೋ ರಂಗಾ!

ಟ್ವಿಟ್ಟರ್ ನಲ್ಲಿ ಬ್ರಹ್ಮ ಉಪ್ಪಿ ಸೂಪರೋ ರಂಗಾ!

Posted by:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಬಟ್ಟಲ ಕಂಗಳ ಚೆಲುವೆ ಪ್ರಣೀತಾ ಅಭಿನಯಿಸಿರುವ ಬ್ರಹ್ಮ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಫೆಬ್ರವರಿ 7 ಸರಿಸುಮಾರು 250ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬ್ರಹ್ಮನ ಉತ್ಸವ ಜಾರಿಯಲ್ಲಿದೆ. ಹತ್ತು ಹಲವು ವಿಶೇಷಗಳನ್ನು ಹೊತ್ತು ಬಂದಿರುವ ಚಿತ್ರವನ್ನು ಯಶಸ್ವಿ ನಿರ್ದೇಶಕ ಆರ್ ಚಂದ್ರು ಅವರು ತಮ್ಮ ಹುಟ್ಟುಹಬ್ಬದ ದಿನದಂದೇ ಈ ಚಿತ್ರ ತೆರೆಗೆ ತಂದಿದ್ದು ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಚಿತ್ರ ರೂಪಿಸಿದ್ದಾರೆ.

ಆರ್ ಚಂದ್ರು ಅವರು ಈಗಾಗಲೆ ಸಕ್ಸಸ್ ಫುಲ್ ನಿರ್ದೇಶಕ ಎನ್ನಿಸಿಕೊಂಡವರು. ಇನ್ನು ಉಪ್ಪಿ ಏನು ಎಂಬುದು ಅವರ ಅಭಿಮಾನಿಗಳಿಗೆ ಗೊತ್ತೇ ಇದೆ. ಈ ಇಬ್ಬರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಭಾರಿ ಬಜೆಟ್ ಚಿತ್ರ ಇದಾಗಿದೆ. ಚಿತ್ರದ ಹಾಸ್ಯ ಸನ್ನಿವೇಶ, ಫೈಟ್ ,ಚೇಸಿಂಗ್, ಉಪ್ಪಿ ನಟನೆ, ಪ್ರಣೀತಾ ಕುಣಿತ, ಆರ್ ಚಂದ್ರು ಕಥೆಗೆ ನೀಡಿರುವ ಟ್ವಿಸ್ಟ್ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ನಮ್ಮ ಪ್ರತಿನಿಧಿ ಸದ್ಯಕ್ಕೆ ಚಿತ್ರ ವೀಕ್ಷಿಸುತ್ತಿದ್ದು, ವಿಮರ್ಶೆಗಾಗಿ ಕಾಯುತ್ತಿರಿ.. ಈಗ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಬ್ರಹ್ಮ ಚಿತ್ರದ ಟ್ರೆಂಡ್ ಹೇಗಿದೆ ನೋಡಿ...

ಟ್ವಿಟ್ಟರ್ ನಲ್ಲಿ ಬ್ರಹ್ಮ ಚಿತ್ರದ ಟ್ರೆಂಡ್ ಹೇಗಿದೆ ನೋಡಿ
  

ಟ್ವಿಟ್ಟರ್ ನಲ್ಲಿ ಬ್ರಹ್ಮ ಚಿತ್ರದ ಟ್ರೆಂಡ್ ಹೇಗಿದೆ ನೋಡಿ

ಇದು ತ್ರಿಭಾಷಾ ಚಿತ್ರವಾಗಿದ್ದರೂ ಸದ್ಯಕ್ಕೆ ತಮಿಳು ಹಾಗೂ ತೆಲುಗು ಚಿತ್ರಗಳಿಗೆ ಮೋಕ್ಷವಿಲ್ಲ. ಏಕೆಂದರೆ ಪೈರಸಿ ಆಗುತ್ತದೆ ಎಂಬ ಕಾರಣಕ್ಕೆ ತೆಲುಗು, ತಮಿಳು ಆವೃತ್ತಿಗಳನ್ನು ನಿಧಾನಕ್ಕೆ ಬಿಡುಗಡೆ ಮಾಡುವುದಾಗಿ ಚಂದ್ರು ಹೇಳಿದ್ದಾರೆ.

  

ಮೈಸೂರಿನಲ್ಲಿ ಉಪೇಂದ್ರನ ಚಿತ್ರದ ಹಬ್ಬ

ಮೈಸೂರಿನ ರಾಜ್ ಕಮಲ್ ಚಿತ್ರಮಂದಿರದಲ್ಲಿ ಉಪೇಂದ್ರನ ಚಿತ್ರದ ಹಬ್ಬ

  

ಬ್ರಹ್ಮ ಟೈಟಲ್ ಕಾರ್ಡ್ ವಿಭಿನ್ನವಾಗಿದೆ

ಆರ್ ಚಂದ್ರು ಅವರು ಬ್ರಹ್ಮ ಚಿತ್ರದ ಟೈಟಲ್ ಕಾರ್ಡ್ ಕೂಡಾ ವಿಭಿನ್ನವಾಗಿ ತೋರಿಸಿದ್ದಾರೆ. ಇನ್ನೊಂದು ವಿಷಯ ಸೆನ್ಸಾರ್ ಮಂಡಳಿ ಅನುಮತಿಯಂತೆ ಬ್ರಹ್ಮ ಟೈಟಲ್ ಬದಲಾಯಿಸಲಾಗಿದೆ.

  

ಹುಬ್ಬಳ್ಳಿ ಧಾರಾವಾಡ ವಲಯದಲ್ಲೂ ಬ್ರಹ್ಮನ ಉತ್ಸವ

ಹುಬ್ಬಳ್ಳಿ ಧಾರಾವಾಡ ವಲಯದಲ್ಲೂ ಬ್ರಹ್ಮನ ಉತ್ಸವ ಜಾರಿಯಲ್ಲಿದ್ದು 50-60 ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

  

ಬ್ರಹ್ಮ ಯಮನಾಗಿ ಬಿಟ್ಟ ಹೇಗೆ ದ್ವಿತೀಯಾರ್ಧದಲ್ಲಿ

ಬ್ರಹ್ಮ ಯಮನಾಗಿ ಬಿಟ್ಟ ಹೇಗೆ ದ್ವಿತೀಯಾರ್ಧದಲ್ಲಿ ನೋಡಬೇಕು. ಮಲೇಷಿಯಾದಲ್ಲಿ ಫ್ಲಾಶ್ ಬ್ಲಾಕ್ ಸೀನ್ ಚಿತ್ರೀಕರಿಸಲಾಗಿದೆ. ಹಾಡು, ಕುಣಿತ ಸೂಪರ್ ಆಗಿದೆ.

  

ರಿಯಲ್ ಸ್ಟಾರ್ ಅಭಿಮಾನಿಗಳಿಂದ ಉಡುಗೊರೆ

ಬ್ರಹ್ಮ ಚಿತ್ರದಲ್ಲಿನ ಉಪೇಂದ್ರ ಅವರ ಗೆಟ್ ಅಪ್ ನೋಡಿಕೊಂಡು ಅಭಿಮಾನಿಯೊಬ್ಬರು ಕಳಿಸಿರುವ ಚಿತ್ರವನ್ನು ಉಪ್ಪಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

  

ಚಿತ್ರದ ಮೊದಲಾರ್ಧಕ್ಕೆ ಫ್ಯಾನ್ಸ್ ಫುಲ್ ಫಿದಾ

ರಂಗಾಯಣ ರಘು ಕಾಮಿಡಿ ಪಂಚ್ ಗೆ ಬಿದ್ದು ಬಿದ್ದು ನಗಾಡಿದ ಪ್ರೇಕ್ಷಕರು, ಒಟ್ಟಾರೆ ಚಿತ್ರದ ಮೊದಲಾರ್ಥ ಸೂಪರ್

  

ಬ್ರಹ್ಮ ದಿ ಲೀಡರ್ ಸಂಪೂರ್ಣ ನಿರಾಶೆ

ಉಪೇಂದ್ರ ಅವರ ಬ್ರಹ್ಮ ದಿ ಲೀಡರ್ ಸಂಪೂರ್ಣ ನಿರಾಶೆಜನಕವಾಗಿದೆ ಎಂದಿರುವ ಶಶಿಪ್ರಸಾದ್

  

ಉಪ್ಪಿ ಸ್ಟೈಲಿಷ್ ಡೈಲಾಗ್ ಗಳು ಮಾತ್ರ ಮಿಸ್

ಉಪ್ಪಿ ಅವರ ಟ್ರೇಡ್ ಮಾರ್ಕ್ ಉದ್ದುದ್ದಾ ಸ್ಟೈಲಿಷ್ ಡೈಲಾಗ್ ಗಳು ಮಾತ್ರ ಮಿಸ್ ಅದು ಬಿಟ್ಟರೆ ಚಿತ್ರ ನೋಡಲಡ್ಡಿಯಿಲ್ಲ. ಪಕ್ಕಾ ಕಮರ್ಷಿಯಲ್ ಚಿತ್ರ

English summary
Twitter trend on Real Star Upendra's Brahma movie. It is a historical drama romance film directed by R. Chandru and produced by Manjunath Babu. The film spanning four generations, from the 16th to the 21st century, features an original soundtrack by Gurukiran
Please Wait while comments are loading...

Kannada Photos

Go to : More Photos