»   » 'ಕಿರಿಕ್' ಕೀರ್ತಿ ಮೇಲೆ ಕಿಡಿಗೇಡಿಗಳಿಂದ ಹಲ್ಲೆ.! ಅಷ್ಟಕ್ಕೂ 'ಆ' ರಾತ್ರಿ ನಡೆದದ್ದು ಏನು.?

'ಕಿರಿಕ್' ಕೀರ್ತಿ ಮೇಲೆ ಕಿಡಿಗೇಡಿಗಳಿಂದ ಹಲ್ಲೆ.! ಅಷ್ಟಕ್ಕೂ 'ಆ' ರಾತ್ರಿ ನಡೆದದ್ದು ಏನು.?

Posted by:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ 'ರನ್ನರ್ ಅಪ್' ಅಗಿ ಕರ್ನಾಟಕದ ಮೂಲೆ ಮೂಲೆಯಲ್ಲೂ ಜನಪ್ರಿಯತೆ ಗಳಿಸಿರುವ 'ಕಿರಿಕ್' ಕೀರ್ತಿ ಈಗ ಮತ್ತೆ 'ಕಿರಿಕ್'ನಿಂದಲೇ ಸದ್ದು ಮಾಡಿದ್ದಾರೆ.

ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ಶುಕ್ರವಾರ ತಡರಾತ್ರಿ 'ಕಿರಿಕ್' ಕೀರ್ತಿ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಸಾಲದಕ್ಕೆ ಕೀರ್ತಿ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟಕ್ಕೂ, ಶುಕ್ರವಾರ ರಾತ್ರಿ ನಡೆದದ್ದು ಏನು ಎಂಬುದರ ಸಂಪೂರ್ಣ ಚಿತ್ರಣ ಇಲ್ಲಿದೆ. ಓದಿರಿ....

'ಕಿರಿಕ್' ಆಗಲು ಕಾರಣ ಏನು.?

'ಕಿರಿಕ್' ಆಗಲು ಕಾರಣ ಏನು.?

ಅದು ಶುಕ್ರವಾರ ರಾತ್ರಿ ಸುಮಾರು 10 ಗಂಟೆ 15 ನಿಮಿಷ... 'ಕಿರಿಕ್' ಕೀರ್ತಿ ಹಾಗೂ ಅವರ ಗೆಳೆಯ ಮಂಜು ಮೈಸೂರಿನಿಂದ ವಾಪಸ್ ಕಾರಿನಲ್ಲಿ ಬರ್ತಿದ್ರು. ಬೆಂಗಳೂರು ವಿಶ್ವವಿದ್ಯಾನಿಲಯ (ಜ್ಞಾನಭಾರತಿ) ಆವರಣದೊಳಗೆ ಎಂಟ್ರಿಕೊಡುತ್ತಿದ್ದಂತೆಯೇ, ಇಬ್ಬರು ಯುವಕರು ರೋಡಲ್ಲಿ ಬೈಕ್ ನಿಲ್ಲಿಸಿಕೊಂಡು ಮಾತನಾಡುತ್ತಿದ್ದರಂತೆ. ಆಗ 'ಜಾಗ ಬಿಡಿ' ಎಂಬುದನ್ನು ಸೂಚಿಸಲು 'ಕಿರಿಕ್' ಕೀರ್ತಿ ಹಾರನ್ ಮಾಡಿದ್ದಾರೆ. ಅಷ್ಟಕ್ಕೆ 'ಕಿರಿಕ್' ಶುರು ಆಗಿದೆ.

ಹಾರನ್ ಮಾಡಿದ್ದಷ್ಟೇ...

ಹಾರನ್ ಮಾಡಿದ್ದಷ್ಟೇ...

ಹಾರನ್ ಮಾಡಿದ್ದಕ್ಕೆ ಆ ಇಬ್ಬರು ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಾಲದಕ್ಕೆ ಕಾರಿನ ಎರಡೂ ಬದಿಗೆ ಬಂದು ಕಿಟಕಿ ಗಾಜಿಗೆ ಕಲ್ಲು ತೂರಿ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ.

ಕೀರ್ತಿ ಮೇಲೆ ಹಲ್ಲೆ

ಕೀರ್ತಿ ಮೇಲೆ ಹಲ್ಲೆ

ಇದನ್ನೆಲ್ಲ ಸಹಿಸದ 'ಕಿರಿಕ್' ಕೀರ್ತಿ ಮತ್ತು ಮಂಜು ಕಾರಿನಿಂದ ಕೆಳಗೆ ಇಳಿದಿದ್ದಾರೆ. ಆಗ ಆ ಇಬ್ಬರು ಹುಡುಗರು ಮಂಜು ರವರ ಬಟ್ಟೆ ಹರಿದು ಹೋಗುವಂತೆ ಥಳಿಸಿದ್ದಾರೆ. ಜೊತೆಗೆ ಕೀರ್ತಿ ಮೇಲೂ ಹಲ್ಲೆ ಮಾಡಿದ್ದಾರೆ.

ಯುವಕರ ಮೇಲೆ ಕಂಪ್ಲೇಂಟ್ ದಾಖಲು

ಯುವಕರ ಮೇಲೆ ಕಂಪ್ಲೇಂಟ್ ದಾಖಲು

ಗಲಾಟೆ ಜೋರಾಗುತ್ತಿದ್ದಂತೆಯೇ ಸಹಜವಾಗಿ ಜನ ಸುತ್ತುವರಿದ್ದಿದ್ದಾರೆ. ಆದ್ರೆ, ಪಾನಮತ್ತರಾಗಿದ್ದ ಆ ಇಬ್ಬರು ಹುಡುಗರು ಎಲ್ಲರಿಗೂ ಅವಾಚ್ಯ ಶಬ್ದಗಳ ಪ್ರಯೋಗ ಮಾಡಲು ಆರಂಭಿಸಿದರು. ಆಗ ರೊಚ್ಚಿಗೆದ್ದ ಜನರು ಆ ಇಬ್ಬರು ಯುವಕರಿಗೆ ಗೂಸಾ ಕೊಟ್ಟರು. ಜನರ ಸಹಾಯದಿಂದಲೇ ಆ ಇಬ್ಬರು ಯುವಕರನ್ನ ಪೊಲೀಸ್ ಠಾಣೆಗೆ ಕರೆದೊಯ್ದು 'ಕಿರಿಕ್' ಕೀರ್ತಿ ಕಂಪ್ಲೇಂಟ್ ಕೊಟ್ಟಿದ್ದಾರೆ.

'ಕಿರಿಕ್' ಕೀರ್ತಿ ಹೇಳುವುದೇನು.?

'ಕಿರಿಕ್' ಕೀರ್ತಿ ಹೇಳುವುದೇನು.?

''ರಾತ್ರಿಯಾದರೆ ಜ್ಞಾನಭಾರತಿ ಒಳಗೆ ಹೋಗೋಕೆ ಜನ ಯಾಕೆ ಹೆದರ್ತಾರೆ ಅಂತ ಈಗ ಅರ್ಥವಾಗ್ತಿದೆ. ಹೀಗೆ ಕಂಠಪೂರ್ತಿ ಕುಡಿದು ರಾತ್ರಿ ಅಷ್ಟು ಹೊತ್ತಲ್ಲಿ ಮಧ್ಯ ರಸ್ತೆಯಲ್ಲಿ ಬೈಕ್ ನಿಲ್ಲಿಸಿಕೊಳ್ಳೋ ಉದ್ದೇಶ ಏನು.? ತಕ್ಷಣ ಅವರನ್ನು ಪೊಲೀಸ್ ಸ್ಟೇಷನ್ ಗೆ ಕರೆದೊಯ್ದು ಕೇಸ್ ದಾಖಲಿಸಿ ಬಂದಿದ್ದೇನೆ. ನನಗಾದ ಅನುಭವ ಯಾರಾದರೂ ಮಹಿಳೆಯರಿಗಾಗಿದ್ರೆ.? ಕುಟುಂಬದ ಜೊತೆಗೆ ಹೋಗುತ್ತಿರುವವರಿಗೆ ಆಗಿದ್ರೆ.? ಆ ಜನರಹಿತ ಪ್ರದೇಶದಲ್ಲಿ ಯಾರ ಗಮನಕ್ಕೂ ಬರುತ್ತಲೇ ಇರಲಿಲ್ಲವೇನೋ.! ಆ ಯುವಕರ ತಪ್ಪಿಗೆ ಕಾನೂನು ರೀತಿಯಲ್ಲೇ ಶಿಕ್ಷೆ ಅನುಭವಿಸಲೇಬೇಕು'' ಎನ್ನುತ್ತಾರೆ 'ಕಿರಿಕ್' ಕೀರ್ತಿ

English summary
'Kirik' Keerthi has lodged complaint against two men who assaulted him on Friday night in Jnana Bharathi, Bangalore University Campus.
Please Wait while comments are loading...

Kannada Photos

Go to : More Photos