»   » ಒಂದೇ ಚಿತ್ರದಲ್ಲಿ ಶಿವಣ್ಣ, ಅಪ್ಪು: ನಿರ್ಮಾಪಕರ ನಡುವೆ ಫೈಟ್

ಒಂದೇ ಚಿತ್ರದಲ್ಲಿ ಶಿವಣ್ಣ, ಅಪ್ಪು: ನಿರ್ಮಾಪಕರ ನಡುವೆ ಫೈಟ್

Posted by:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆಯಾಗಿ ನಟಿಸಲಿದ್ದಾರೆನ್ನುವ ಸುದ್ದಿ ಈ ವರ್ಷದ ಆರಂಭದಲ್ಲಿ ಸುದ್ದಿಯಾಗಿತ್ತು.

ನಂತರ ಇಬ್ಬರೂ ಸ್ಟಾರ್ ನಟರು ತಮ್ಮ ತಮ್ಮ ಚಿತ್ರದಲ್ಲಿ ಬ್ಯೂಸಿಯಾದ ನಂತರ ಈ ಸುದ್ದಿ ಅಷ್ಟು ಚರ್ಚೆಗೆ ಗ್ರಾಸವಾಗಿರಲಿಲ್ಲ. ಈಗ ಈ ಸುದ್ದಿಗೆ ಮತ್ತೆ ಜೀವ ಬಂದಿದೆ.

ಆದರೆ ಈ ಚಿತ್ರವನ್ನು ಯಾರು ನಿರ್ಮಿಸ ಬೇಕು ಎನ್ನುವ ಬಗ್ಗೆ ಕನ್ನಡದ ಇಬ್ಬರು ಪ್ರಮುಖ ನಿರ್ಮಾಪಕರ ನಡುವೆ ಗೊಂದಲ ಉಂಟಾಗಿದೆ.

ಭಾರೀ ಬಜೆಟಿನ ಚಿತ್ರ ಇದಾಗಿದ್ದು, ಸಾಹಸ ನಿರ್ದೇಶಕ ರವಿ ವರ್ಮಾ ಚಿತ್ರವನ್ನು ನಿರ್ದೇಶಿಸುವುದು ಬಹುತೇಕ ಖಚಿತವಾಗಿದೆ.

ಸದ್ಯ, ರವಿ ವರ್ಮಾ ಹೈದರಾಬಾದಿನಲ್ಲಿ ನಂದಮೂರಿ ಬಾಲಕೃಷ್ಣ ಅವರ ತೆಲುಗು ಚಿತ್ರವೊಂದರಲ್ಲಿ ತೊಡಗಿಸಿಕೊಂಡಿರುವುದರಿಂದ ಇದಾದ ಮೇಲಷ್ಟೇ ಚಿತ್ರದ ಮುಂದಿನ ನಡೆ ಅಂತಿಮವಾಗಲಿದೆ.

ಜನವರಿಯಲ್ಲಿ ಸುದ್ದಿ ಹೊರಬಿದ್ದಿತ್ತು

ಜನವರಿಯಲ್ಲಿ ಸುದ್ದಿ ಹೊರಬಿದ್ದಿತ್ತು

ಜನವರಿಯಲ್ಲಿ ಶಿವಣ್ಣ ಮತ್ತು ಅಪ್ಪು ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿತ್ತು. ಜೊತೆಗೆ ಈ ಚಿತ್ರ ಜಯಣ್ಣ ಕಂಬೈನ್ಸ್ ಬ್ಯಾನರಡಿಯಲಿ ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸಲಿದ್ದಾರೆಂದು ವರದಿಯಾಗಿತ್ತು.

ಕನಕಪುರ ಶ್ರೀನಿವಾಸ್

ಕನಕಪುರ ಶ್ರೀನಿವಾಸ್

ಈಗ ಈ ಚಿತ್ರದ ನಿರ್ಮಾಪಕರ ಬಗ್ಗೆ ಗೊಂದಲ ಉಂಟಾಗಿದ್ದು ಕನ್ನಡದ ಮತ್ತೊಬ್ಬ ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಈ ಚಿತ್ರವನ್ನು ತನ್ನ ಒಡೆತನದ ಆರ್ ಎಸ್ ಪ್ರೊಡಕ್ಷನ್ ಬ್ಯಾನರಿನಲ್ಲಿ ನಿರ್ಮಿಸುತ್ತೇನೆಂದು ಹೇಳಿರುವುದು.

ಜಯಣ್ಣ ಹೇಳಿಕೆ

ಜಯಣ್ಣ ಹೇಳಿಕೆ

ಶ್ರೀನಿವಾಸ್ ಅವರು ಯಾಕೆ ಈ ರೀತಿಯ ಹೇಳಿಕೆಯನ್ನು ನೀಡಿದರು ಎಂದು ನನಗೆ ತಿಳಿಯುತ್ತಿಲ್ಲ. ಅಪ್ಪು ಮತ್ತು ಶಿವಣ್ಣ ಒಂದೇ ಚಿತ್ರದಲ್ಲಿ ನಟಿಸುತ್ತಿರುವ ಚಿತ್ರವನ್ನು ನಾನೇ ನಿರ್ಮಿಸುತ್ತಿದ್ದೇನೆ. ರವಿ ವರ್ಮಾ ಅವರ ಬಳಿಯೂ ಈ ಬಗ್ಗೆ ಮಾತುಕತೆ ನಡೆಸಿದ್ದೇನೆಂದು ಜಯಣ್ಣ ಹೇಳಿದ್ದಾರೆ.

ಭಾರೀ ಬಜೆಟಿನ ಚಿತ್ರ

ಭಾರೀ ಬಜೆಟಿನ ಚಿತ್ರ

ಸುಮಾರು ಮೂವತ್ತು ಕೋಟಿ ರೂಪಾಯಿ ವೆಚ್ಚದ ಭಾರೀ ಬಜೆಟಿನ ಚಿತ್ರ ಇದಾಗಿದ್ದು, ಹಾಗಾಗಿ ಈ ಚಿತ್ರ ನಿರ್ಮಾಣದಿಂದ ಜಯಣ್ಣ ಹಿಂದೆ ಸರಿದಿದ್ದಾರೆ ಎನ್ನುವ ಗಾಳಿಸುದ್ದಿ ಹರಿದಾಡುತ್ತಿತ್ತು.

ರವಿ ವರ್ಮಾ ಹೇಳಿದ್ದೇನು

ರವಿ ವರ್ಮಾ ಹೇಳಿದ್ದೇನು

ನನ್ನ ಪ್ರಾಜೆಕ್ಟಿಗೆ ಬಹಳಷ್ಟು ನಿರ್ಮಾಪಕರು ಮುಂದೆ ಬರುತ್ತಿರುವುದು ಸಂತೋಷದ ವಿಚಾರ. ಚಿತ್ರದ ಶೂಟಿಂಗ್ ಬರುವ ವರ್ಷದಲ್ಲಿ ಆರಂಭವಾಗಲಿದೆ. ನನ್ನ ಮೊದಲ ಆದ್ಯತೆ ಜಯಣ್ಣ ಎಂದು ರವಿ ವರ್ಮಾ ಸ್ಪಷ್ಟ ಪಡಿಸಿದ್ದಾರೆ.

English summary
Two producers fight for Shiva Rajkumar and Puneeth Rajkumar together acting movie.
Please Wait while comments are loading...

Kannada Photos

Go to : More Photos