»   » 'ಯು-ಟರ್ನ್' ನೋಡಿ ಥ್ರಿಲ್ಲಾದ ಪ್ರೇಕ್ಷಕರ ಟ್ವಿಟ್ಟರ್ ವಿಮರ್ಶೆ

'ಯು-ಟರ್ನ್' ನೋಡಿ ಥ್ರಿಲ್ಲಾದ ಪ್ರೇಕ್ಷಕರ ಟ್ವಿಟ್ಟರ್ ವಿಮರ್ಶೆ

Posted by:
Subscribe to Filmibeat Kannada

ಪವನ್ ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ 'ಯು-ಟರ್ನ್' ಇಂದು (ಮೇ 20) ಎಲ್ಲಾ ಕಡೆ ಅದ್ದೂರಿಯಾಗಿ ತೆರೆ ಕಂಡಿದೆ. ನಿನ್ನೆ (ಮೇ 19) ಭೂಮಿಕಾ ಚಿತ್ರಮಂದಿರದಲ್ಲಿ ಸಂಜೆ 7 ಘಂಟೆಗೆ ಚಿತ್ರದ ಪ್ರೀಮಿಯರ್ ಶೋ ನೋಡಿ ಬಂದಿರುವ ಸಿನಿರಸಿಕರು ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ವಿಮರ್ಶೆಗಳನ್ನು ವ್ಯಕ್ತಪಡಿಸಿದ್ದಾರೆ.

ಸಕತ್ ಥ್ರಿಲ್ಲರ್-ಮಿಸ್ಟರಿ ಆಧಾರಿತ 'ಯು-ಟರ್ನ್' ಸಿನಿಮಾದಲ್ಲಿ ನವ ಪ್ರತಿಭೆ ಶ್ರದ್ಧಾ ಶ್ರೀನಾಥ್, 'ರಂಗಿತರಂಗ' ಚಿತ್ರದ ಬೆಡಗಿ ರಾಧಿಕಾ ಚೇತನ್, ಹಾಲಿವುಡ್ ಖ್ಯಾತಿಯ ನಟ ರೋಜರ್ ನಾರಾಯಣನ್ ಮತ್ತು ಕನ್ನಡ ನಟ ದಿಲೀಪ್ ಕುಮಾರ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.['ಯು-ಟರ್ನ್' ಪ್ರೀಮಿಯರ್ ಶೋನಲ್ಲಿ ಪಾಲ್ಗೊಳ್ಳಿ ಉಚಿತ ಟೀ-ಶರ್ಟ್ ಪಡೆಯಿರಿ]


ನಿನ್ನೆ 'ಭೂಮಿಕಾ' ಚಿತ್ರಮಂದಿರದಲ್ಲಿ ನಡೆದ ಪ್ರೀಮಿಯರ್ ಶೋ ನಲ್ಲಿ ಚಿತ್ರಮಂದಿರದ ಮುಂದೆ ನೂಕು-ನುಗ್ಗಲು ಕಂಡುಬಂದಿದ್ದು, ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ಥ್ರಿಲ್ಲರ್ 'ಯು-ಟರ್ನ್' ಚಿತ್ರ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವಂತೆ ಮಾಡಿದೆ. ಮುಂದೆ ಓದಿ....


ಪ್ರೀಮಿಯರ್ ಶೋ ಹೌಸ್ ಫುಲ್

ಪ್ರೀಮಿಯರ್ ಶೋ ಹೌಸ್ ಫುಲ್

ಭೂಮಿಕಾ ಚಿತ್ರಮಂದಿರದಲ್ಲಿ ನಿನ್ನೆ ನಡೆದ ಪ್ರೀಮಿಯರ್ ಶೋ ಹೌಸ್ ಫುಲ್ ಆದ ಕಾರಣ ಸಿನಿಪೊಲಿಸ್ ನಲ್ಲೂ ಚಿತ್ರದ ಪ್ರೀಮಿಯರ್ ಶೋ ನಡೆಸಲಾಯಿತು.[ಇದೆಂತಹ ವಿಪರ್ಯಾಸ: ಕನ್ನಡ ಚಿತ್ರಗಳಿಗೆ ರಾಜಧಾನಿಯಲ್ಲೇ ಚಿತ್ರಮಂದಿರ ಇಲ್ಲ]


ಸಿನಿಲೋಕ ಟ್ವಿಟ್ಟರ್ ವಿಮರ್ಶೆ:

'ಜರ್ನಲಿಸ್ಟ್ ಪಾತ್ರದಲ್ಲಿ ಶ್ರದ್ಧಾ ಶ್ರೀನಾಥ್ ಪ್ರಶಂಸನೀಯ ಪಾತ್ರ ವಹಿಸಿ ಗೆದ್ದಿದ್ದಾರೆ. ನಟನೆ ಕೂಡ ತುಂಬಾ ಚೆನ್ನಾಗಿದೆ. ಥ್ರಿಲ್ಲರ್ ಜೊತೆಗೆ ಅತ್ಯುತ್ತಮ ಸ್ಕ್ರೀನ್ ಪ್ಲೇ. ಟಾಪ್ ಕ್ಲಾಸ್ ವರ್ಕ್. ರೇಟಿಂಗ್: 3.5/5.[ಬಿಡುಗಡೆಗೂ ಮುನ್ನ ಸದ್ದು ಮಾಡುತ್ತಿದೆ ಪವನ್ ರ 'ಯು-ಟರ್ನ್']


ಕನ್ನಡ ಚಿತ್ರಗಳು

ಭೂಮಿಕ ಮತ್ತು ಸಿನಿಪೊಲಿಸ್ ನಲ್ಲಿ 'ಯು-ಟರ್ನ್' ಪ್ರೀಮಿಯರ್ ಶೋ ಮುಗಿದಿದೆ. ಎಲ್ಲಾ ಕಡೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಸೀಟಿನ ತುದಿಗೆ ತಂದು ಕೂರಿಸುವ ಥ್ರಿಲ್ಲರ್ ಸಿನಿಮಾ.


ಅಭಿಮಾನಿ ಪವನ್ ಕೆ ಪಾಂಡೆ

ಮ್ಮ್...ನನಗನ್ನಿಸುವ ಮಟ್ಟಿಗೆ ಈ ಸಿನಿಮಾ ದೆಹಲಿ ಸಿ.ಎಂಗೆ ರಿಲೇಟೆಡ್ ಅಂತೆನಿಸುತ್ತಿದೆ' ಎಂದು ಯು-ಟರ್ನ್ ಸಿನಿಮಾ ನೋಡಿ ಟ್ವೀಟ್ ಮಾಡಿದ್ದಾರೆ.


ಶಶಿ ಪ್ರಸಾದ್ ಎಸ್.ಎಂ

'ಯು-ಟರ್ನ್' ಎಲ್ಲಾ ಡ್ರೈವಿಂಗ್ ಮಯ' ಎಂದು ವಿಮರ್ಶಕ ಶಶಿಪ್ರಸಾದ್ ಟ್ವೀಟ್ ಮಾಡಿದ್ದಾರೆ.


'ಯು-ಟರ್ನ್' ಸಬ್ಸ್ಕ್ರೈಬ್ ಬರಹಗಾರ ಮನೀಶ್

"ನಿರ್ದೇಶಕ ಪವನ್ ಕುಮಾರ್ ಅವರು ಕನ್ನಡ ಚಿತ್ರವನ್ನು ಎಲ್ಲಿಗೋ ತೆಗೆದುಕೊಂಡು ಹೋಗಿದ್ದಾರೆ. ಮೈಂಡ್ ಬ್ಲೋಯಿಂಗ್ ನಿರ್ದೇಶಕ ಥ್ರಿಲ್ಲಿಂಗ್ ಮಾಸ್ಟರ್ ಪೀಸ್ ಸಿನಿಮಾ ನೀಡಿದ್ದಾರೆ. ಇಡೀ ಸಿನಿಮಾ ಸುಂದರವಾಗಿ ಮೂಡಿಬಂದಿದೆ. ಎಲ್ಲರೂ ಸಿನಿಮಾ ಎಂಜಾಯ್ ಮಾಡುತ್ತಾ ಸೀಟಿನ ತುದಿಗೆ ಬಂದು ಕೂರುತ್ತಾರೆ. ಪ್ರತೀ ಕ್ಷಣ ಎಲ್ಲರಿಗೂ ಮುಂದೇನು? ಮುಂದೇನು? ಅನ್ನುವ ಕುತೂಹಲ ಮೂಡುತ್ತದೆ" ಎಂದು ಮನೀಶ್ ಮೊದಲ ವಿಮರ್ಶೆ ವ್ಯಕ್ತಪಡಿಸಿದ್ದಾರೆ.


ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

ಕನ್ನಡ ಚಿತ್ರ 'ಯು-ಟರ್ನ್' ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್ ಆಗಿದೆ.


English summary
Kannada movie 'U Turn' directed by 'Lucia' fame director Pawan Kumar released today (May 20th) and got overwhelming response all over Karnataka. Actress Shraddha Srinath, Kannada Actress Radhika Chetan, Actor Dilip Raj, Actor Roger Narayan in the lead role. Here is the first day first show craze, tweets, audience response.
Please Wait while comments are loading...

Kannada Photos

Go to : More Photos