» 

ಉದಯ್ ಸಾವು ಆಘಾತಕಾರಿ: ಕಿಚ್ಚ ಸುದೀಪ್

Posted by:
 
Share this on your social network:
   Facebook Twitter Google+    Comments Mail

ತೆಲುಗು ಚಿತ್ರರಂಗ ಅಕ್ಷರಶಃ ಆಘಾತಕ್ಕೆ ಒಳಗಾಗಿದೆ. ವರ್ಷಾರಂಭದಲ್ಲೇ ಉದಯೋನ್ಮುಖ ನಟ ಉದಯ್ ಕಿರಣ್ ಅಗಲಿಕೆಯ ನೋವಿನಲ್ಲಿ ಮುಳುಗಿದೆ. ಹೈದರಾಬಾದಿನ ಶ್ರೀನಗರ ಕಾಲೋನಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡು ಉದಯ್ ಸಾವನ್ನಪ್ಪಿದ್ದು ಏಕೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮಾತ್ರವಲ್ಲ ಚಿತ್ರರಂಗದ ಗಣ್ಯರನ್ನು ಕಾಡುತ್ತಿದೆ.

'ಕಳೆದ ವಾರವಷ್ಟೇ ಬೆಂಗಳೂರಿಗೆ ಬಂದಿದ್ದಾಗ ಉದಯ್ ಜತೆ ಮಾತನಾಡಿದ್ದೆ. ಇದು ನಿಜಕ್ಕೂ ಶಾಕಿಂಗ್ ನ್ಯೂಸ್ ಎಂದು ಕಿಚ್ಚ ಸುದೀಪ್ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

ಪುಂಜಗುಟ್ಟದಲ್ಲಿರುವ ಫ್ಲಾಟ್ 402ರಲ್ಲಿ ನೆಲೆಸಿದ್ದ ಉದಯ್ ಕಿರಣ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದ ಮೇಲೆ ಸ್ನೇಹಿತರು ಹಾಗೂ ಪತ್ನಿ ವಿಶಿತಾ ಕೂಡಲೇ ಧಾವಿಸಿ ಬಂದಿದ್ದಾರೆ. ಆದರೆ, ಉದಯ್ ಉಳಿಸಿಕೊಳ್ಳಲು ಆಗದೆ ಪರಿತಪಿಸಿದ್ದಾರೆ.[ಉದಯ ಕಿರಣ್ ಆತ್ಮಹತ್ಯೆ]

ಪ್ರಕರಣ ದಾಖಲಿಸಿಕೊಂಡಿರುವ ಜ್ಯುಬಿಲಿ ಹಿಲ್ಸ್ ಪೊಲೀಸರು ಉದಯ್ ಅವರ ಫೋನ್ ಸಂದೇಶ, ಕರೆ ವಿವರಗಳನ್ನು ಪಡೆದು ತನಿಖೆ ಮುಂದುವರೆಸಿದ್ದಾರೆ. ಉದಯ್ ಅವರ ನಿವಾಸ ಹಾಗೂ ಅಪೋಲೋ ಆಸ್ಪತ್ರೆ ಬಳಿ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರ ದಂಡು ನೆರೆದಿದೆ.

ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಸಂತಾಪ ಸಂದೇಶ ತಿಳಿಸಿದ್ದಾರೆ. ಕೆಲ ಅಭಿಮಾನಿಗಳು ಚಿರಂಜೀವಿ ಅವರತ್ತ ಬೊಟ್ಟು ಮಾಡಿ ಅಮಾಯಕ ನಟನನ್ನು ಕೊಂದು ಬಿಟ್ಟೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಹರಿದು ಬಂದಿರುವ ಸಂದೇಶಗಳ ಸಂಗ್ರಹ ಮುಂದಿದೆ.

Topics: tollywood, death, twitter, sudeep, ಟಾಲಿವುಡ್, ಸಾವು, ಟ್ವಿಟ್ಟರ್, ಸುದೀಪ್

Kannada Photos

Go to : More Photos