»   » ತಮಿಳು, ಮಲಯಾಳಂಗೆ ಉಳಿದವರು ಕಂಡಂತೆ

ತಮಿಳು, ಮಲಯಾಳಂಗೆ ಉಳಿದವರು ಕಂಡಂತೆ

Written by: ಉದಯರವಿ
Subscribe to Filmibeat Kannada

ಉಳಿದವರು ಕಂಡಂತೆ ಚಿತ್ರ ನಾನಾ ಕಾರಣಗಳಿಗಾಗಿ ಈ ವರ್ಷ ಸದ್ದು ಮಾಡಿದಂತಹ ಚಿತ್ರ. ಈ ಚಿತ್ರ ಗೊಂದಲ ಮೂಡಿಸುತ್ತದೆ ಎಂಬುದು ಕೆಲವರ ವಾದವಾದರೆ, ಅದ್ಭುತ ದೃಶ್ಯಕಾವ್ಯ ಎಂದು ಕೆಲವರು ಕೊಂಡಾಡಿದ್ದರು. ಒಟ್ಟಾರೆ ಮಿಶ್ರ ಪ್ರತಿಕ್ರಿಯೆಗೆ ಪಾತ್ರವಾದಂತಹ ಚಿತ್ರ.

ಇದೀಗ ಈ ಚಿತ್ರ ತಮಿಳು ಹಾಗೂ ಮಲಯಾಳಂ ಭಾಷೆಗೆ ರೀಮೇಕ್ ಆಗಲು ಹೊರಡುತ್ತಿದೆ. ಈಗಾಗಲೆ ಮಾತುಕತೆ ನಡೆದಿದ್ದು ಶೀಘ್ರದಲ್ಲೇ ಅಂತಿಮವಾಗಲಿದೆ ಎಂದಿದ್ದಾರೆ ಸ್ವತಃ ರಕ್ಷಿತ್ ಶೆಟ್ಟಿ. ಬಹಳ ದಿನಗಳಿಗೆ ಕನ್ನಡ ಚಿತ್ರಗಳ ಜನಪ್ರಿಯತೆ ಗಡಿದಾಟುತ್ತಿರುವುದು ನಿಜಕ್ಕೂ ಮೆಚ್ಚಬೇಕಾದ ಸಂಗತಿ. [ವಿಮರ್ಶೆ: ಪತ್ರಿಕೆಗಳು ಕಂಡಂತೆ 'ಉಳಿದವರು ಕಂಡಂತೆ']

Ulidavaru Kandante to remade in Tamil, Malayalam

ಈ ಚಿತ್ರವನ್ನು ರೀಮೇಕ್ ಮಾಡುತ್ತಿರುವವರು ಗಂಡುಗಲಿ ಕೆ ಮಂಜು. ಎರಡೂ ಭಾಷೆಗಳಲ್ಲಿ ಅವರೇ ರೀಮೇಕ್ ಸಾರಥ್ಯ ವಹಿಸಿರುವುದು ವಿಶೇಷ. ತಮಿಳಿನಲ್ಲಿ ಸ್ಟಾರ್ ನಟರೊಬ್ಬರು ಬಣ್ಣ ಹಚ್ಚಲಿದ್ದಾರೆ ಎಂಬುದು ಸದ್ಯದ ಮಾಹಿತಿ.

ಇನ್ನು ರಕ್ಷಿತ್ ಶೆಟ್ಟಿ ಅವರು ರಿಕ್ಕಿ ಚಿತ್ರದಲ್ಲಿ ಬಿಜಿಯಾಗಿದ್ದು ಅದಾದ ಬಳಿಕ 'ಯಕ್ಕ ರಾಜ ರಾಣಿ' ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ. ಬಳಿಕ ಸಿದ್ಲಿಂಗು ನಿರ್ದೇಶಕ ವಿಜಯ್ ಪ್ರಕಾಶ್ ಅವರ ಚಿತ್ರ ಸೆಟ್ಟೇರಲಿದೆ. ಇದರ ಜೊತೆಗೆ ಸುದೀಪ್ ಅವರಿಗಾಗಿ 'ಥಗ್ಸ್ ಆಫ್ ಮಾಲ್ಗುಡೀಸ್' ಎಂಬ ಚಿತ್ರ ನಿರ್ದೇಶಿಸಲಿದ್ದಾರೆ.

ಉಳಿದವರು ಕಂಡಂತೆ ಚಿತ್ರದ ವಿಶೇಷ ಎಂದರೆ ಈ ಚಿತ್ರಕ್ಕೆ ಎರಡು ತರಹದ ವಿಮರ್ಶೆಗಳು ವ್ಯಕ್ತವಾದವು. ಆರಂಭದಲ್ಲಿ ಉಳಿದವರು ಎಳೆದಂತೆ ಎಂಬ ಟೀಕೆಗೆ ಪಾತ್ರವಾದ ಚಿತ್ರ ಬಳಿಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಈ ಚಿತ್ರದ ಹೆಗ್ಗಳಿಕೆ.

English summary
Kannada movie Ulidavaru Kandante to remade in Tamil and Malayalam soon. The film received positive to mixed reviews from critics. The movie directed by Rakshit Shetty.
Please Wait while comments are loading...

Kannada Photos

Go to : More Photos