»   » ಉಪ್ಪಿ, ದರ್ಶನ್, ಶಿವಣ್ಣ ಬಾಳಲ್ಲಿ ಬಂದೇ ಬರುತಾವ ಕಾಲ

ಉಪ್ಪಿ, ದರ್ಶನ್, ಶಿವಣ್ಣ ಬಾಳಲ್ಲಿ ಬಂದೇ ಬರುತಾವ ಕಾಲ

Written by: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ಈ ವರ್ಷ ಅಂದರೆ 2015ನೇ ಇಸವಿ ಹಲವು ಸ್ಟಾರ್ ಗಳಿಗೆ ಬ್ರೇಕ್ ಕೊಡಬೇಕಿದೆ. ಕೊಡಬೇಕಿದೆ ಅಲ್ಲ ಕೊಡಲೇಬೇಕಿದೆ. ಯಾಕಂದ್ರೆ ಸೂಪರ್ ಸ್ಟಾರ್ ಗಳು ಇಂಡಿಯನ್ ಕ್ರಿಕೆಟ್ ಟೀಂನ ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್ ರ ಹಾಗೆ ಕಳೆದುಹೋಗೋ ಮೊದಲು ಒಂದಷ್ಟು ಗೆಲುವಿನ ಶತಕ ಬಾರಿಸಲೇಬೇಕು.

ಸತತ ಸೋಲುಗಳಿಂದ ಕಂಗೆಟ್ಟು ಫಾರ್ಮ್ ಕಳೆದುಕೊಂಡಿರೋ ರಿಯಲ್ ಸ್ಟಾರ್ ಉಪೇಂದ್ರ, ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೂರು ಸ್ಟಾರ್ ಗಳಿಗೆ ಈ ವರ್ಷ ಗೆಲುವು ಅನಿವಾರ್ಯ. ಚಾಲೆಂಜಿಂಗ್ ಸ್ಟಾರ್ ದರ್ಶನ್ 2013ರಲ್ಲಿ 'ಬುಲ್ ಬುಲ್' ನಂತರ ಗೆದ್ದಿಲ್ಲ. [ದರ್ಶನ್, ಕಿಚ್ಚ ಮತ್ತು ನನ್ನ ನಡುವೆ ತಂದಿಡಬೇಡಿ ಪ್ಲೀಸ್: ಯಶ್]

ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಕೂಡ 2013ರ 'ಭಜರಂಗಿ' ನಂತರ ಗೆಲುವಿನ ಸಂಭ್ರಮ ಕಂಡಿಲ್ಲ. ಇನ್ನು ರಿಯಲ್ ಸ್ಟಾರ್ ಉಪ್ಪಿ ಪಾಲಿಗೆ ಗೆಲುವು ಹಲವು ವರ್ಷಗಳಿಂದ ಮರೀಚಿಕೆಯಾಗಿದೆ. ಸದ್ಯ 'ಉಪ್ಪಿ-2' ಈ ವರ್ಷ ರಿಯಲ್ ಸ್ಟಾರ್ ಗೆಲುವಿನ ಅಕೌಂಟ್ ರೀ ಓಪನ್ ಮಾಡಬೇಕಿದೆ.

ಗೆಲುವಿನ ಪರೀಕ್ಷೆಗೆ ಹೊರಟಿರುವ ನವರಸನಾಯಕ

ಗೆಲುವಿನ ಪರೀಕ್ಷೆಗೆ ಹೊರಟಿರುವ ನವರಸನಾಯಕ

ಇನ್ನು ನವರಸನಾಯಕ ಜಗ್ಗೇಶ್ ಕೂಡ ಈ ವರ್ಷ 'ವಾಸ್ತುಪ್ರಕಾರ' ಚಿತ್ರದ ಮೂಲಕ ಗೆಲುವಿನ ಪರೀಕ್ಷೆ ಮಾಡ್ತಿದ್ದಾರೆ. ಈ ನಾಲ್ಕು ಸ್ಟಾರ್ ಗಳಲ್ಲಿ ಯಾರು ಗೆಲ್ತಾರೆ ಅನ್ನೋದು 2015ರಲ್ಲಿ ನಿರ್ಧಾರವಾಗಲಿದೆ.

ಸೂಪರ್ ಸ್ಟಾರ್ ಗಳ ಆಟ ನಡೆಯಲಿಲ್ಲ

ಸೂಪರ್ ಸ್ಟಾರ್ ಗಳ ಆಟ ನಡೆಯಲಿಲ್ಲ

ಉಪೇಂದ್ರ ಅಭಿನಯದ ಎರಡು ಚಿತ್ರಗಳು ಬ್ರಹ್ಮ ಹಾಗೂ ಸೂಪರ್ ರಂಗ್ ಚಿತ್ರಗಳು 2014ರಲ್ಲಿ ತೆರೆಕಂಡಿದ್ದವು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಅಗ್ರಜ ಹಾಗೂ ಅಂಬರೀಶ್ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಲಿಲ್ಲ.

ಶಿವಣ್ಣ, ಜಗ್ಗೇಶ್ ಚಿತ್ರಗಳೂ ನಿರೀಕ್ಷೆ ಮೂಡಿಸಲಿಲ್ಲ

ಶಿವಣ್ಣ, ಜಗ್ಗೇಶ್ ಚಿತ್ರಗಳೂ ನಿರೀಕ್ಷೆ ಮೂಡಿಸಲಿಲ್ಲ

ಇನ್ನು ಶಿವರಾಜ್ ಕುಮಾರ್ ಅವರ ಆರ್ಯನ್, ಬೆಳ್ಳಿ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಸದ್ದು ಮಾಡಲಿಲ್ಲ. ನವರಸನಾಯಕ ಜಗ್ಗೇಶ್ ಅವರು ಕೂಲ್ ಗಣೇಶ, ಅಗ್ರಜ, ಸಾಫ್ಟ್ ವೇರ್ ಗಂಡ ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬಂದರೂ ಆ ಚಿತ್ರಗಳು ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ.

2015ರಲ್ಲಿ ಭರ್ಜರಿ ಚಿತ್ರಗಳು ಕಾದಿವೆ

2015ರಲ್ಲಿ ಭರ್ಜರಿ ಚಿತ್ರಗಳು ಕಾದಿವೆ

ಶಿವಣ್ಣನ ಬಾದ್ ಶಾ, ವಜ್ರಕಾಯ ಚಿತ್ರಗಳು 2015ರಲ್ಲಿ ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳು. ದರ್ಶನ್ ಅಭಿನಯಿಸುತ್ತಿರುವ ಐರಾವತ, ಜಗ್ಗು ದಾದಾ ಚಿತ್ರಗಳ ಮೇಲೆಯೂ ಅಪಾರ ನಿರೀಕ್ಷೆಗಳಿವೆ. ಉಪೇಂದ್ರ ಅವರ ಮಹತ್ವಾಕಾಂಕ್ಷಿ 'ಉಪ್ಪಿ 2' ಚಿತ್ರದ ಮೇಲಂತೂ ಸಿಕ್ಕಾಪಟ್ಟೆ ಹೋಪ್ಸ್ ಇದೆ.

2015ನೇ ವರ್ಷ ಇವರಿಗೆ ಗೆಲುವು ತಂದುಕೊಡುತ್ತಾ?

2015ನೇ ವರ್ಷ ಇವರಿಗೆ ಗೆಲುವು ತಂದುಕೊಡುತ್ತಾ?

ಒಟ್ಟಾರೆ ಈ ನಾಲ್ಕು ಮಂದಿ ಸ್ಟಾರ್ ಗಳಿಗೆ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಗೆಲುವು ಬೇಕೇಬೇಕಾಗಿದೆ. ಇಲ್ಲದಿದ್ದರೆ ಈ ಸ್ಟಾರ್ ಗಳಿಗೆ ಉಳಿಗಾಲವಿಲ್ಲ ಎಂಬಂತಹ ಪರಿಸ್ಥಿತಿ ಉದ್ಭವಿಸಿದೆ. 2015ನೇ ವರ್ಷ ಇವರಿಗೆ ಗೆಲುವು ತಂದುಕೊಡಲಿ. ಬಂದೇ ಬರುತಾವ ಕಾಲ ಮಂದಾರ ಕನಸನು ಕಂಡಂತ ಮನಸನು ಒಂದು ಮಾಡುವ ಸ್ನೇಹಜಾಲ.

English summary
Real Star Upendra, Challenging Star Darshan and Century Star Shivrajkumar is expecting a great break in the year 2015. In the last year these Sandalwood stars are not at all impressed the audience.
Please Wait while comments are loading...

Kannada Photos

Go to : More Photos