»   » ಉಪ್ಪಿ2 ಎದುರು ಬುಗುರಿ ಆಡಲಿದ್ದಾರೆ ಗಣೇಶ್

ಉಪ್ಪಿ2 ಎದುರು ಬುಗುರಿ ಆಡಲಿದ್ದಾರೆ ಗಣೇಶ್

Posted by:
Subscribe to Filmibeat Kannada

ಗಾಂಧಿನಗರದಲ್ಲಿ ಆಗಸ್ಟ್ 14 ರಂದು ಒಂದು ಅದ್ಬುತ ನಡೆಯಲಿದೆ, ಅದೇನಪ್ಪಾ ಅಂದ್ರೆ ಸ್ಯಾಂಡಲ್ ವುಡ್ ಸ್ಟಾರ್ ನಟರಿಬ್ಬರ ನಡುವೆ ನಡೆಯಲಿರುವ ಮುಖಾಮುಖಿ ಗೆ ಇಡೀ ಕನ್ನಡ ಚಿತ್ರರಂಗ ಹಾಗೂ ಪ್ರೇಕ್ಷಕವರ್ಗ ಸಾಕ್ಷಿಯಾಗಲಿದೆ.

ಇದೇನಪ್ಪಾ ಅಂತಹ 8ನೇ ಅದ್ಭುತ ನಡೆಯಲಿದೆ ಅಂದುಕೊಂಡ್ರ, ಅದೇ ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳು ಆಗಸ್ಟ್ 14ರಂದು ತೆರೆ ಮೇಲೆ ಅಪ್ಪಳಿಸಲಿದ್ದು, ಅಭಿಮಾನಿಗಳು ಯಾರನ್ನು ಗೆಲ್ಲಿಸುತ್ತಾರೆ ಅನ್ನೋದು ಈಗ ಸದ್ಯದ ಪ್ರಶ್ನೆ. [ನರ್ತಕಿ ಚಿತ್ರಮಂದಿರದ ಮುಂದೆ 'ಉಪ್ಪಿ-2' ಸರ್ಕಸ್]ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ತಮ್ಮ 25ನೇ ಚಿತ್ರ 'ಬುಗುರಿ' ಯಾದರೆ, ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ತಮ್ಮ ಹೋಮ್ ಬ್ಯಾನರ್ ಅಡಿಯಲ್ಲಿ ತಾವೇ ನಿರ್ದೇಶಿಸಿ, ನಟಿಸುತ್ತಿರುವ ಚಿತ್ರ 'ಉಪ್ಪಿ 2'.


ಈಗಾಗಲೇ 'ಉಪ್ಪಿ 2' ಚಿತ್ರದ ಬಗ್ಗೆ ಗಾಂಧಿನಗರದ ಮಂದಿ ಭಾರಿ ಕುತೂಹಲದ ಜೊತೆಗೆ ಅಪಾರ ನಿರೀಕ್ಷೆ ಇಟ್ಟುಕೊಳ್ಳುವಷ್ಟರ ಮಟ್ಟಿಗೆ ಉಪೇಂದ್ರ ಅವರು ಸಸ್ಪೆನ್ಸ್ ಕ್ರಿಯೇಟ್ ಮಾಡಿದ್ದಾರೆ. ಇನ್ನೂ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಎಂ.ಡಿ.ಶ್ರೀಧರ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಮೂರನೇ ಚಿತ್ರವಾದುದರಿಂದ ಗಣಿಗೆ ತಮ್ಮ ಚಿತ್ರದ ಬಗ್ಗೆ ತುಂಬಾ ನೀರಿಕ್ಷೆಗಳಿವೆಯಂತೆ. [ಉಪ್ಪಿ Unknownu ನಾನೇಶ್ವರನಾದ ಟೀಸರ್ ನೋಡಿ]ಇದೀಗ ಸಮಸ್ಯೆ ಏನಪ್ಪಾ ಅಂದ್ರೆ ಈ ಎರಡು ಬಿಗ್ ಸ್ಟಾರ್ ಗಳ ಚಿತ್ರ ಹೀಗೆ ಏಕಕಾಲದಲ್ಲಿ ಅದೂ ಎದುರು-ಬದುರಾಗಿರುವ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಕನ್ನಡ ಪ್ರೇಕ್ಷಕರಿಂದ ಅದ್ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಅನ್ನೋದನ್ನ ಚಿತ್ರ ಬಿಡುಗಡೆ ದಿನ ನೋಡಬೇಕಿದೆ. [ಆಗಸ್ಟ್ 14ಕ್ಕೆ ತೆರೆಯ ಮೇಲೆ 'ಬುಗುರಿ' ಆಡಿಸಲಿರುವ ಚಿನ್ನದ ಹುಡುಗ]


ಅದೇನೇ ಇರಲಿ ಒಟ್ನಲ್ಲಿ ಈ ಎರಡು ಸ್ಟಾರ್ ಗಳ ಅಭಿಮಾನಿ ಸಂಘದವರು ಚಿತ್ರದ ಯಶಸ್ಸಿಗೆ ಕಾರಣರಾಗುತ್ತಾರಾ, ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕು.

English summary
Upendra and Ganesh are all set to fight it out at the box-office with their respective films, 'Uppi 2' and 'Buguri' slated to release on August 14th Independence day 2015.
Please Wait while comments are loading...

Kannada Photos

Go to : More Photos