»   » ಕೃತಿಚೌರ್ಯ ಆರೋಪಿಸಿದವರನ್ನು ಉಪ್ಪಿ ಬೆಂಡೆತ್ತಿದ್ದು ಹೀಗೆ

ಕೃತಿಚೌರ್ಯ ಆರೋಪಿಸಿದವರನ್ನು ಉಪ್ಪಿ ಬೆಂಡೆತ್ತಿದ್ದು ಹೀಗೆ

Posted by:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ನನ್ನ ಕಥೆಯನ್ನು ಕದ್ದು ಚಿತ್ರ ಮಾಡಿದ್ದಾರೆಂದು ಕಥೆಕಟ್ಟಿದ್ದ ಬರಹಗಾರನ ನಿಜವಾದ ಬಣ್ಣ ಬಯಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಮಾಧ್ಯಮದಲ್ಲಿ ಬಂದ ಕೃತಿಚೌರ್ಯದ ಆರೋಪದ ನಂತರ ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪೇಂದ್ರ,ಬರಹಗಾರ ನಾಗೇಂದ್ರ ವಿರುದ್ದ ಕೆಂಡಾಮಂಡಲ ವಾಗಿದ್ದಾರೆ.

ಈ ಆರೋಪದ ಬಗ್ಗೆ ಪ್ರಿಯಾಂಕ ಉಪೇಂದ್ರ ಕೂಡಾ ಸಾಮಾಜಿಕ ತಾಣದಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ. (ಉಪೇಂದ್ರ ಮೇಲೆ ಕಥೆ ಕದ್ದ ಆರೋಪ)

ಬಿಡುಗಡೆಗೆ ಮುನ್ನ ಹೈಪ್ ಇರುವ ಚಿತ್ರಗಳು ಮತ್ತು ಬಿಡುಗಡೆಯ ನಂತರ ಯಶಸ್ವೀ ಪ್ರದರ್ಶನಗೊಳ್ಳುತ್ತಿರುವ ಚಿತ್ರಗಳ ಮೇಲೆ ಕಥೆ ಕದ್ದ ಆರೋಪ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ಉಪೇಂದ್ರ ನೋವು ವ್ಯಕ್ತ ಪಡಿಸಿದ್ದಾರೆ.

ಇದೆಲ್ಲಾ ದುಡ್ಡು ಮಾಡುವ ಹೊಸ ತಂತ್ರ ಎಂದಿರುವ ಉಪ್ಪಿ, ಇಂಥವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಚಲನಚಿತ್ರ ಮಂಡಳಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದು ಉಪ್ಪಿಯನ್ನು ಬ್ಲ್ಯಾಕ್ ಮೇಲ್ ಮಾಡುವ ತಂತ್ರವಾಗಿತ್ತೇ, ಮುಂದೆ ಓದಿ..

ಇಂಥವರ ವಿರುದ್ದ ಎಲ್ಲರೂ ಒಂದಾಗಬೇಕು

ಇಂಥವರ ವಿರುದ್ದ ಎಲ್ಲರೂ ಒಂದಾಗಬೇಕು

ಬಿಡುಗಡೆಗೆ ಸಿದ್ದವಾಗುತ್ತಿರುವ ಉಪ್ಪಿ 2 ಚಿತ್ರದ ಬಗ್ಗೆ ಈ ರೀತಿಯ ಸುಳ್ಳು ಆಪಾದನೆ ಮಾಡಲಾಗುತ್ತಿದೆ. ಈ ರೀತಿ ಬ್ಲ್ಯಾಕ್ ಮೇಲ್ ಮಾಡುವವರ ವಿರುದ್ದ ಚಿತ್ರೋದ್ಯಮ ಒಂದಾಗಬೇಕು - ಉಪೇಂದ್ರ

ಸೆಟ್ಲ್ ಮೆಂಟ್ ಮಾಡಿಸಿ

ಸೆಟ್ಲ್ ಮೆಂಟ್ ಮಾಡಿಸಿ

ಉಪ್ಪಿ2 ಚಿತ್ರದ ಕತೆ ನನ್ನದೆಂದಿದ್ದ ಹೇಳಿದ್ದ ವ್ಯಕ್ತಿ ಉಪೇಂದ್ರ ಜೊತೆ ಸೆಟ್ಲ್ ಮೆಂಟ್ ಮಾಡಿಸಿ,ಸುಮ್ಮನಾಗುತ್ತೇನೆ ಎಂದು ಪತ್ರಕರ್ತರೊಬ್ಬರ ಮೂಲಕ ಸಂಧಾನಕ್ಕೆ ಮುಂದಾಗಿದ್ದರು ಎನ್ನುವ ಸುದ್ದಿಯನ್ನು ವಿಜಯ ಕರ್ನಾಟಕ ಪ್ರಕಟಿಸಿದೆ.

ಇಷ್ಟು ದಿನ ಎಲ್ಲಿದ್ದರು

ಇಷ್ಟು ದಿನ ಎಲ್ಲಿದ್ದರು

ಚಿತ್ರ ಬಿಡುಗಡೆಗೆ ಸಿದ್ದವಾಗಿದೆ, ಆಗಸ್ಟ್ ಹದಿನಾಲ್ಕರಂದು ರಿಲೀಸ್ ಮಾಡಬೇಕೆನ್ನುವ ಪ್ಲಾನ್ ಹಾಕಿಕೊಂಡಿದ್ದೇವೆ. ನಮ್ಮ ಮೇಲೆ ಆರೋಪ ಮಾಡುತ್ತಿರುವ ವ್ಯಕ್ತಿ ಇಷ್ಟು ದಿನ ಎಲ್ಲಿದ್ದರು - ಪ್ರಿಯಾಂಕ ಉಪೇಂದ್ರ ಪ್ರಶ್ನೆ.

ಬೆವರು ಸುರಿಸಿ ಚಿತ್ರ ನಿರ್ಮಿಸಿದ್ದೇವೆ

ಬೆವರು ಸುರಿಸಿ ಚಿತ್ರ ನಿರ್ಮಿಸಿದ್ದೇವೆ

ಉಪ್ಪಿ2 ಚಿತ್ರಕ್ಕೆ ಬೆವರು ಸುರಿಸಿ ದುಡಿದಿದ್ದೇವೆ, ಹಣ ಖರ್ಚು ಮಾಡಿದ್ದೇವೆ. ಕಥೆ ಕದ್ದಿದ್ದೇವೆಂದು ಆರೋಪಿಸಿದವರು ಇಷ್ಟು ದಿನ ಎಲ್ಲಿದ್ದರು, ಚಿತ್ರ ಬಿಡುಗಡೆಯ ಸಮಯದಲ್ಲಿ ಇವರು ಆರೋಪ ಮಾಡುತ್ತಿರುವುದರಿಂದ ಇವರ ನಿಜಬಣ್ಣ ಬಯಲಾಗುತ್ತಿದೆ ಎಂದು ಪ್ರಿಯಾಂಕ ಬೇಸರದ ಮಾತನ್ನಾಡಿದ್ದಾರೆ.

ಪೊಲೀಸರ ಮೊರೆ ಹೋಗುತ್ತೇನೆ

ಪೊಲೀಸರ ಮೊರೆ ಹೋಗುತ್ತೇನೆ

ನಾನು ಕಥೆ ಕದ್ದಿದ್ದೇನೇಂದು ಆರೋಪ ಮಾಡಿರುವ ವ್ಯಕ್ತಿಯನ್ನು ಇದುವರೆಗೂ ಭೇಟಿ ಮಾಡಿಲ್ಲ, ಆತ ಯಾರೆಂದು ನನಗೆ ಗೊತ್ತಿಲ್ಲ. ಸಿನಿಮಾ ಬಿಡುಗಡೆಯಾಗುತ್ತಿರುವ ಈ ಸಮಯದಲ್ಲಿ ಗೊಂದಲ ಹುಟ್ಟುಹಾಕುವುದು ಹಣಕ್ಕಾಗಿಯೇ. ನಾನು ಇವರ ವಿರುದ್ದ ಪೊಲೀಸರ ಮೊರೆ ಹೋಗುತ್ತೇನೆ - ಉಪೇಂದ್ರ.

ಏನಿದು ಆರೋಪ

ಏನಿದು ಆರೋಪ

ನಾನು ಉಪೇಂದ್ರ ಅವರಿಗೆ ಉಪೇಂದ್ರ ಚಿತ್ರದ ಮುಂದುವರಿದ ಭಾಗದ ಚಿತ್ರ ಮಾಡಬಹುದೆಂದು ಕಥೆಯನ್ನು ವಿವರಿಸಿದ್ದೆ.ಆ ಕಥೆಯನ್ನೇ ಆಧರಿಸಿ ಉಪ್ಪಿ2 ಚಿತ್ರ ತಯಾರಾಗುತ್ತಿದೆ. ಉಪ್ಪಿ ನನ್ನ ಕಥೆಯನ್ನು ಕದ್ದು ಚಿತ್ರ ಮಾಡಿದ್ದಾರೆಂದು ಬರಹಗಾರ ನಾಗೇಂದ್ರ ಎನ್ನುವವರು ಮಾಧ್ಯಮದ ಮುಂದೆ ಅಳಲು ತೋಡಿದ್ದರು.

English summary
Peeved with plagiarism charges against his upcoming movie Uppi 2, Upendra has expressed his wish to take legal action against the people making these allegations.
Please Wait while comments are loading...

Kannada Photos

Go to : More Photos