»   » ಲೈಫ್ ಉಪ್ಪಿ 2 ಗುರು, ಸಕತ್ ಕಿಕ್ ಕೊಡೋ ವಿಡಿಯೋ

ಲೈಫ್ ಉಪ್ಪಿ 2 ಗುರು, ಸಕತ್ ಕಿಕ್ ಕೊಡೋ ವಿಡಿಯೋ

Posted by:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿ 2' ಬಿಡುಗಡೆಗೆ ಕೌಂಟ್‌ಡೌನ್ ಆರಂಭವಾಗಿದೆ. ಇದೀಗ ಎಲ್ಲೆಡೆ 'ಉಪ್ಪಿಟ್ಟು' ಮೇನಿಯಾ ಶುರುವಾಗಿ ಸಾಮಾಜಿಕ ಜಾಲತಾಣಗಳಲ್ಲಿ 'ಉಪ್ಪಿ 2' ಭಾರಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ.

ಅಂದಹಾಗೆ ರಿಯಲ್ ಸ್ಟಾರ್ ಉಪೇಂದ್ರ ಅವರ ಕಟ್ಟಾ ಅಭಿಮಾನಿಯೊಬ್ಬ ತನ್ನ ಗೆಳೆಯರ ಬಳಗದೊಂದಿಗೆ ಸೇರಿ ಮಾಡಿರುವ 'ಲೈಫ್ ಉಪ್ಪಿ 2 ಗುರು' ಎಂಬ ಪ್ರಚಾರ ವಿಡಿಯೋ ಯೂಟ್ಯೂಬ್ ನಲ್ಲಿ ಹರಿದಾಡುತ್ತಿದ್ದು, ಸಖತ್ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.ಹಿತೇಶ್ ಅರಸ್ ಜೊತೆಗೆ ಇನ್ನಿತರೇ ಕೆಲವು ಟ್ಯಾಲೆಂಟ್ ಗಳು ಸೇರಿಕೊಂಡು ಮಾಡಿರುವ 'ಲೈಫ್ ಉಪ್ಪಿ 2 ಗುರು' ಉಪೇಂದ್ರ ಅವರ 'ಉಪ್ಪಿ 2' ಚಿತ್ರದ ಬಗ್ಗೆ ಪ್ರಚಾರ ವಿಡಿಯೋ ತಯಾರಿಸಲಾಗಿದೆ. [ಮಧ್ಯರಾತ್ರಿಯಲ್ಲಿ ಉಪ್ಪಿ2 ತಿನ್ನೋಕೆ ನೀವು ರೆಡಿನಾ?]


ಉಪೇಂದ್ರ ನಿರ್ದೇಶನ ಎಷ್ಟರಮಟ್ಟಿಗೆ ಅಭಿಮಾನಿಗಳಲ್ಲಿ ಪರಿಣಾಮ ಬೀರಿದೆ ಅಂದ್ರೆ ಇಡೀ 'ಉಪ್ಪಿ 2' ಚಿತ್ರದ ಬಗ್ಗೆ ಬೆಂಗಳೂರಿನ ಗಲ್ಲಿ-ಗಲ್ಲಿಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಅಷ್ಟರಮಟ್ಟಿಗೆ ಉಪ್ಪಿ ಮೇನಿಯಾ ಶುರುವಾಗಿದೆ.ರೈಲೈ ಸ್ಟೇಷನ್, ಬಸ್ ಸ್ಟಾಪ್, ಪಾರ್ಕ್, ಮಾರ್ಕೆಟ್, ಕಾಲೇಜು, ಸ್ಕೂಲ್, ಮೆಟ್ರೋ, ಜೊತೆಗೆ ಬೀದಿ ಬೀದಿಗಳಲ್ಲಿ 'ಉಪ್ಪಿಟ್ಟು' ಅಲೆ ಎಬ್ಬಿಸುತ್ತಿದೆ. ['ಉಪ್ಪಿ2', 'ಓಂ' ಉಪ್ಪಿ ಅಭಿಮಾನಿಗಳಿಗೆ ಈ ವಾರ ಹಬ್ಬ]


'ಉಪ್ಪಿ 2' ಚಿತ್ರದ 'ನೋ ಎಕ್ಸ್ ಕ್ಯೂಸ್ ಮಿ' ಚಿತ್ರದ ಹಾಡನ್ನು ಉಪೇಂದ್ರ ಅವರ ಅಭಿಮಾನಿ ಬಳಗದವರು ತುಂಬಾ ಚೆನ್ನಾಗಿ ಭಟ್ಟಿ ಇಳಿಸಿದ್ದಾರೆ. ಜೊತೆಗೆ ಪ್ರಚಾರ ವಿಡಿಯೋ ನಿರ್ದೇಶಕ ಹಿತೇಶ್ ಅರಸ್ ಅವರ ನಿರ್ದೇಶನದ ಜೊತೆಗೆ ಕ್ಯಾಮರ ವರ್ಕ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ.


'ಲಾಂಗ್ ತಯಾರಾದ್ಮೇಲೆ ನಾನ್ ಕೊಟ್ಟೆ, ನೀನ್ ಕೊಟ್ಟೆ, ನಾನ್ ಹಿಡಿದೆ, ನೀನ್ ಹಿಡಿದೆ, ಅಲ್ಲಾ. ಲಾಂಗ್ ಬಿಸಿ ಕುಲುಮೆಲೀ ಹಾಕಿ ತಯಾರು ಮಾಡಿದ್ದು, ಯಾರು ಮರೆತಿಲ್ಲ. ನೋ ಎಕ್ಸ್ ಕ್ಯೂಸ್ ಮಿ ಪ್ಲೀಸ್'. ಅನ್ನುವ ಹಾಡನ್ನು ಸಖತ್ತಾಗಿ ವಿಡಿಯೋದಲ್ಲಿ ತಂದಿದ್ದಾರೆ. [ಟ್ರೆಂಡ್ ಸೆಟ್ಟರ್ ಉಪೇಂದ್ರ ನಿರ್ದೇಶನದ 'ಉಪ್ಪಿ2' ಆಡಿಯೋ ವಿಮರ್ಶೆ]ಒಟ್ನಲ್ಲಿ ಹಾಡಿನಲ್ಲಿ ಇರುವ ಎಲ್ಲಾ ಡೈಲಾಗ್ ಗಳನ್ನು ನಾಜೂಕಾಗಿ ಉಪ್ಪಿ ಅಭಿಮಾನಿಗಳು ಡಬ್ ಸ್ಮಾಷ್ ಮಾಡಿದ್ದಾರೆ ಅಂದ್ರೂ ತಪ್ಪಾಗ್ಲಿಕ್ಕಿಲ್ಲ.


ಮನೇಲೇ ಮಾಡಿ ತಿನ್ನುವ 'ಉಪ್ಪಿಟ್ಟು' ಭಾರಿ ಟೇಸ್ಟ್ ಅಂತ ಉಪ್ಪಿ ಹಾಡಿನ ಮೂಲಕ ಹೇಳಿರುವುದನ್ನು ಯಥವತ್ತಾಗಿ ಅಭಿಮಾನಿಗಳು ಪಾಲಿಸಿದ್ದಾರೆ.


ಒಟ್ಟಾರೆ ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳ ತನಕ 'ಉಪ್ಪಿಟ್ಟು' ಹವಾ ಕ್ರಿಯೇಟ್ ಮಾಡುತ್ತೆ ಅಂದ್ರೆ ಸ್ವಲ್ಪ ಮಟ್ಟಿಗೆ ಯೋಚನೆ ಮಾಡುವ ವಿಚಾರನೇ, ಅಸಲಿ ಉಪೇಂದ್ರ ಅವರ ಚಿತ್ರದಲ್ಲಿ ಅದೇನು ವಿಶೇಷ ಇರಬಹುದು ಅಂತ.ಸದ್ಯಕ್ಕೆ ಈ ಡಿಫರೆಂಟ್ ಪ್ರಚಾರ ವಿಡಿಯೋ ಬಿಡುಗಡೆ ಮಾಡಿದ ಹಿತೇಶ್ ಅರಸ್ ಅವರು ಉಪೇಂದ್ರ ಅವರ ಕಟ್ಟಾ ಅಭಿಮಾನಿಯಾಗಿದ್ದು, ಉಪ್ಪಿ ಅವರನ್ನು 'ಬಾಸ್' ಅಂತಾ ಅಂದುಕೊಂಡಿದ್ದಾರಂತೆ. [ಗಾಂಧಿನಗರದ ಎಲ್ಲಾ 'ರಿಯಲ್' ನಟರ ಕಾಲೆಳೆದ ಉಪೇಂದ್ರ]


ಮಾತ್ರವಲ್ಲದೇ ಹಿತೇಶ್ ಹಾಗೂ ವಿಡಿಯೋ ಹೊರತಂದ ಇಡೀ ತಂಡ ಉಪೇಂದ್ರ ಅವರನ್ನು ಭೇಟಿಯಾಗಿದ್ದು, ರಿಯಲ್ ಸ್ಟಾರ್ ನಿಂದ ಉತ್ತಮ ಪ್ರಶಂಸೆ ಕೂಡ ಗಳಿಸಿಕೊಂಡು ಜೊತೆಗೆ ಉಪೇಂದ್ರ ಅವರ ಜೊತೆ ಮುಂದಿನ ಪ್ರಾಜೆಕ್ಟ್ ಗೆ ಅವಕಾಶ ಕೂಡ ಗಿಟ್ಟಿಸಿಕೊಂಡಿದ್ದಾರೆ.


ಹಿತೇಶ್ ಅರಸ್ ಹಾಗೂ ಉಪ್ಪಿ ಅಭಿಮಾನಿ ಬಳಗ ಮಾಡಿರುವ 'ಲೈಫ್ ಉಪ್ಪಿ 2 ಗುರು' ಪ್ರಚಾರ ವಿಡಿಯೋ ಇಲ್ಲಿದೆ ನೋಡಿ...ಅಂತೂ ಇಂತೂ ಎಲ್ಲಾ ಅಭಿಮಾನಿಗಳು ಸೇರಿಕೊಂಡು 'ಉಪ್ಪಿ 2' ಚಿತ್ರಕ್ಕೆ ಭರ್ಜರಿ ಪ್ರಚಾರ ಒದಗಿಸುವ ಜೊತೆಗೆ ರಿಯಲ್ ಸ್ಟಾರ್ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಒಟ್ನಲ್ಲಿ ಉಪ್ಪಿ ಇಸ್ ಗಾಡ್, ಉಪ್ಪಿ ಇಸ್ ಗ್ರೇಟ್, 'ಉಪ್ಪಿಟ್ಟು' ಸೂಪರ್ ಗುರು.

English summary
Uppi 2 craze grips Sandalwood Check Fan made publicity video titled as Lifeu Uppi 2 Guru. 'Uppi 2' features Kannada actor Upendra, Kannada actress Parul Yadav, Actress Kristina Akheeva in the lead role. The movie is directed by Upendra.
Please Wait while comments are loading...

Kannada Photos

Go to : More Photos