twitter
    For Quick Alerts
    ALLOW NOTIFICATIONS  
    For Daily Alerts

    ಜಗ್ಗೇಶ್ ಬಾಯಲ್ಲಿ ಬ್ರಾಹ್ಮಣ V/S ಗೌಡ - ಟ್ವಿಟ್ಟರ್ ನಲ್ಲಿ ರಾದ್ಧಾಂತ.!

    By Harshitha
    |

    'ಉಪ್ಪಿ-2' ಚಿತ್ರದ 'ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್' ಹಾಡಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಬರೆದಿರುವ ಸಾಲುಗಳು ಕನ್ನಡ ಚಿತ್ರರಂಗದ ಇತರೆ ನಟರಿಗೆ ಟಾಂಗ್ ಕೊಟ್ಟಂತಿದೆ. ಕನ್ನಡದ ತಾರೆಯರನ್ನೇ ಉಪೇಂದ್ರ ಕಾಲೆಳೆದಿದ್ದಾರೆ.

    'ಇದು ರೋಗಗ್ರಸ್ತರ ಮನಸ್ಸಿನಂತಿದೆ' ಅಂತ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿ ಟ್ವಿಟ್ಟರ್ ಲೋಕದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದರು. ಜಗ್ಗೇಶ್ ವಿರುದ್ಧ ಉಪೇಂದ್ರ ಅಭಿಮಾನಿಗಳು ತಿರುಗಿ ಬಿದ್ದು, ಬಾಯಿಗೆ ಬಂದ ಹಾಗೆ ಟ್ವೀಟ್ ಮಾಡುತ್ತಿದ್ದಾರೆ. [ಟ್ವಿಟ್ಟರ್ ನಲ್ಲಿ ಜಗ್ಗೇಶ್ ವಿರುದ್ಧ ಉಪೇಂದ್ರ ಅಭಿಮಾನಿಗಳ ಯುದ್ಧ]

    ಜಗ್ಗೇಶ್ V/S ಉಪೇಂದ್ರ ಅಭಿಮಾನಿಗಳ ಕದನ ಟ್ವಿಟ್ಟರ್ ನಲ್ಲಿ ಎರಡನೇ ಹಂತಕ್ಕೆ ತಲುಪಿದೆ. ಹಾಡಿನಿಂದ ಶುರುವಾದ ರಗಳೆಯಲ್ಲಿ ಈಗ ಜಾತಿ ಭೇದ ಶುರುವಾಗಿದೆ. ಮುಂದೆ ಓದಿ.....

    ಟ್ವಿಟ್ಟರ್ ನಲ್ಲಿ ಅಬ್ಬರಿಸಿದ ಜಗ್ಗೇಶ್

    ಟ್ವಿಟ್ಟರ್ ನಲ್ಲಿ ಅಬ್ಬರಿಸಿದ ಜಗ್ಗೇಶ್

    'ಉಪ್ಪಿ-2' ಹಾಡು, ಉಪೇಂದ್ರ ಅವರ ಕಾಲೆಳೆಯುವ ಮನೋಭಾವವನ್ನ ಖಂಡಿಸಿರುವ ನಟ ಜಗ್ಗೇಶ್ 'ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್' ಹಾಡಿನ ವಿರುದ್ಧ ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದರು. ಇದರಿಂದ ಉಪ್ಪಿ ಫ್ಯಾನ್ಸ್ ಕೂಡ ವಾಗ್ವಾದಕ್ಕಿಳಿದಿದ್ದಾರೆ. ಇದೇ ವಾಗ್ವಾದದಲ್ಲಿ ಜಗ್ಗೇಶ್, ಜಾತಿ ಪಂಗಡವನ್ನ ಎಳೆದು ತಂದು ದೊಡ್ಡ ರಾದ್ಧಾಂತಕ್ಕೆ ನಾಂದಿ ಹಾಡಿದ್ದಾರೆ. [ಉಪೇಂದ್ರ ವಿರುದ್ಧ ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದ ಜಗ್ಗೇಶ್]

    ಬ್ರಾಹ್ಮಣ V/S ಗೌಡ.!

    ಬ್ರಾಹ್ಮಣ V/S ಗೌಡ.!

    ಜಗ್ಗೇಶ್ ಮಾಡಿರುವ ಹೊಸ ಟ್ವೀಟ್ ಇಲ್ಲಿದೆ ನೋಡಿ. ''ಕೆಲವೇ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಕೊಡುವೆ. ಇದು ಬ್ರಾಹ್ಮಣ ಪಲಾರಮಂದಿರದ ಊಟ ಮಾಡಿದ್ ದೇಹ ಅಲ್ಲಾ. ಉಪ್ಪಿನ್ ಕಾಯಲ್ಲಿ ಅನ್ನ ತಿಂದಿಲ್ಲ. ಬಾಡೂಟದ ದೇಹ'' ಅಂತ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. [ಗಾಂಧಿನಗರದ ಎಲ್ಲಾ 'ರಿಯಲ್' ನಟರ ಕಾಲೆಳೆದ ಉಪೇಂದ್ರ]

    ಜಾತಿ ಸೇರಿಸುವ ಅವಶ್ಯಕತೆ ಇತ್ತಾ?

    ಜಾತಿ ಸೇರಿಸುವ ಅವಶ್ಯಕತೆ ಇತ್ತಾ?

    ರಿಯಲ್ ಸ್ಟಾರ್ ಉಪೇಂದ್ರ ಬ್ರಾಹ್ಮಣ ಇರಬಹುದು. ಒಕ್ಕಲಿಗರಾಗಿರುವ ಜಗ್ಗೇಶ್ ಬಾಡೂಟ ತಿನ್ನಲೂಬಹುದು. ಆದ್ರೆ, ಯಾವುದೋ ಹಾಡಿನ ವಿಚಾರಕ್ಕೆ ಜಾತಿ ಪದ್ಧತಿ ಬಗ್ಗೆ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಈಗ ಎದ್ದಿರುವ ಪ್ರಶ್ನೆ.

    ಬ್ರಾಹ್ಮಣರನ್ನ ಕೆರಳಿಸಿದ ಟ್ವೀಟ್

    ಬ್ರಾಹ್ಮಣರನ್ನ ಕೆರಳಿಸಿದ ಟ್ವೀಟ್

    ಜಗ್ಗೇಶ್ ಮಾಡಿರುವ ಈ ಟ್ವೀಟ್ ಬ್ರಾಹ್ಮಣರನ್ನ ಮಾತ್ರ ಅಲ್ಲ. ಉಪೇಂದ್ರ ಅಭಿಮಾನಿಗಳ ಜೊತೆಗೆ ಎಲ್ಲರನ್ನೂ ಕೆರಳಿಸಿದೆ. ''ರಾಯರ ಭಕ್ತರಾಗಿ ಅದನ್ನ ತಿಂದವನು, ಇದನ್ನ ತಿಂದವನು ಅಂತ ಜಾತಿ ಭೇದಭಾವ ಮಾಡುವುದು ಸರಿಯಿಲ್ಲ'', ''ಜಾತಿ ಮಾತನ್ನ ಇಲ್ಲಿ ಸೇರಿಸಬಾರದಿತ್ತು. ಫಲಹಾರ ತಿಂದವರೇ ನಿಮ್ಮನ್ನ ಫುಲ್ ಟೈಮ್ ಹೀರೋ ಮಾಡಿದ್ದು ಮರೀಬೇಡಿ'' ಅಂತ ಕೆಲವರು ಜಗ್ಗೇಶ್ ಗೆ ತಿರುಗೇಟು ನೀಡಿದ್ದಾರೆ.

    ಟ್ವಿಟ್ಟರ್ ನಲ್ಲಿ ರಾದ್ದಾಂತ

    ಟ್ವಿಟ್ಟರ್ ನಲ್ಲಿ ರಾದ್ದಾಂತ

    ''ದ್ವೇಷ ಇದ್ದರೆ ಉಪೇಂದ್ರ ಅವರಿಗೆ ಬೈಯ್ಯಬೇಕು. ಅದು ಬಿಟ್ಟು ಇಡೀ ಪಂಗಡಕ್ಕೆ ಬೈಯ್ಯುವುದು ಸರಿಯಿಲ್ಲ'', ''ಬ್ರಾಹ್ಮಣ ಫಲಹಾರ ಮಂದಿರದಲ್ಲಿ ಊಟ ಮಾಡಿದವರು ಎಂತಹ ಬಾಡೂಟ ಮಾಡಿದವರನ್ನೂ ಈ ತರಹ ತಲೆ ಕೆಡಿಸಿಕೊಳ್ಳೋ ಹಾಗೆ ಮಾಡ್ತಾರೆ'' ಅನ್ನುವ ಪ್ರತಿಕ್ರಿಯೆ ಜಗ್ಗೇಶ್ ಮಾಡಿರುವ ಟ್ವೀಟ್ ಗೆ ಲಭ್ಯವಾಗಿದೆ.

    ಜಾತಿ ಚರ್ಚೆ ಬೇಡ

    ಜಾತಿ ಚರ್ಚೆ ಬೇಡ

    ''ವೈಯುಕ್ತಿಕ ಜಗಳಕ್ಕೆ ಜಾತಿ ಎಳೆಯುವುದು ಎಷ್ಟು ಸರಿ'', ''ಜನ ನಿಮ್ಮ ಟ್ವೀಟ್ ಗಳನ್ನ ನೋಡುತ್ತಿದ್ದಾರೆ. ನಿಮ್ಮ ಇಮೇಜ್ ನ ನೀವೇ ಡ್ಯಾಮೇಜ್ ಮಾಡಿಕೊಳ್ತಿದ್ದೀರಾ'', ''ತಾವು ಎಲ್ಲಿ ಬೇಕಾದರೂ ಊಟ ಮಾಡಿ, ಆದ್ರೆ ಮಧ್ಯೆ ಜಾತಿ ಉಸಾಬರಿ ಯಾಕೆ. ಇಂತಹ ಹೇಳಿಕೆಗಳು ಶೋಭೆ ತರುವಂಥದ್ದಲ್ಲ'' ಅಂತ ಕೆಲವರು ರಿಪ್ಲೈ ಮಾಡಿದ್ದಾರೆ.

     ''ಜಗ್ಗೇಶ್ ಗೆ ನಾಚಿಕೆಯಾಗ್ಬೇಕು.!''

    ''ಜಗ್ಗೇಶ್ ಗೆ ನಾಚಿಕೆಯಾಗ್ಬೇಕು.!''

    ಜಾತಿ ಭೇದ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡಿದ್ದೇ ತಡ. ಕೆಲವರಂತೂ ಮುಖ ಮೂತಿ ನೋಡಿ ಜಗ್ಗೇಶ್ ರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

    ''ಗೌಡನೇ..! ಆದರೆ ಉಪ್ಪಿ ಫ್ಯಾನ್''

    ''ಗೌಡನೇ..! ಆದರೆ ಉಪ್ಪಿ ಫ್ಯಾನ್''

    ಜಾತಿ ಪರಿಣಾಮ ಟ್ವಿಟ್ಟರ್ ನಲ್ಲಿ ಎದ್ದಿರುವ ಸುನಾಮಿ ಹವಾ ಹೀಗಿದೆ ನೋಡಿ...

    ರಣರಂಗವಾಗಿದೆ ಟ್ವಿಟ್ಟರ್

    ರಣರಂಗವಾಗಿದೆ ಟ್ವಿಟ್ಟರ್

    ಜಗ್ಗೇಶ್ ಹಾರಿಸುತ್ತಿರುವ ಒಂದೊಂದು ಬುಲೆಟ್ ಗೂ ಟ್ವಿಟ್ಟರ್ ನಲ್ಲಿ ಕೌಂಟರ್ ಸಿಗುತ್ತಿದೆ. ಇದಕ್ಕೆ ಮುಕ್ತಿ ಎಂದೋ...ದೇವರೇ ಬಲ್ಲ.

    English summary
    Kannada Actor Jaggesh has commented about Brahmins in relation with Upendra and 'Uppi-2' song 'No excuse me please'. Jaggesh tweet on Brahmin v/s Gowda has created a storm in Twitter.
    Tuesday, July 21, 2015, 14:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X