»   » ಉಪ್ಪಿ 2 ತಿಂದು ಥ್ರಿಲ್ ಆದ ಚಂದನವನದ ಸ್ಟಾರ್ಸ್

ಉಪ್ಪಿ 2 ತಿಂದು ಥ್ರಿಲ್ ಆದ ಚಂದನವನದ ಸ್ಟಾರ್ಸ್

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಈ ವರ್ಷ ಭರ್ಜರಿಯಾಗಿ ಅಪ್ಪಳಿಸಿದ 'ಉಪ್ಪಿ 2' ಎನ್ನುವ ಸುನಾಮಿ ಅಲೆಯೊಂದು ಇದೀಗ ಎಲ್ಲೆಡೆ ಬೀಸುತ್ತಿದೆ.

ಅಂದಹಾಗೆ ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿ-ಟ್ಟು' ಇದೀಗ ಸ್ಯಾಂಡಲ್ ವುಡ್ ನ ಬೇರೆ ಬೇರೆ ಸ್ಟಾರ್ ಗಳಿಗೂ ಸಖತ್ತಾಗೇ ಹಿಡಿಸಿದೆ. ಅನ್ನೋದಕ್ಕೆ ಒಂದೊಳ್ಳೆ ನಿದರ್ಶನ ಅಂದ್ರೆ, ನಿನ್ನೆ(ಆಗಸ್ಟ್ 19) ರಂದು ಸ್ಯಾಂಡಲ್ ವುಡ್ ನ ಕೆಲವು ಮಲ್ಟಿ ಸ್ಟಾರ್ ಗಳಿಗೆ ಉಪೇಂದ್ರ 'ಉಪ್ಪಿ-ಟ್ಟು' ಬಡಿಸಿದ್ದು, ಆಯ್ತು ಸಿನಿಪೊಲಿಸ್ ನಲ್ಲಿ ಸ್ಟಾರ್ ಗಳು 'ಉಪ್ಪಿ-ಟ್ಟು' ತಿಂದು ಸೂಪರ್ ಅಂದಿದ್ದು, ಆಯ್ತು. [ಉಪ್ಪಿ ಮೇನಿಯಾ ಕಂಡ ನಿರ್ಮಾಪಕಿ ಪ್ರಿಯಾಂಕಾ ರಿಯಾಕ್ಷನ್]


ಈ ಹಿಂದೆ ಅವರನ್ನು ಕಂಡರೆ ಇವರಿಗಾಗಲ್ಲ, ಇವರನ್ನು ಕಂಡರೆ ಅವರಿಗಾಗಲ್ಲ ಅನ್ನೋ ಎಲ್ಲಾ ಅಂತೆ-ಕಂತೆ ಪುರಾಣಗಳಿಗೆ ಫುಲ್ ಸ್ಟಾಪ್ ಇಟ್ಟ ಎಲ್ಲಾ ಸ್ಟಾರ್ ಗಳು ಒಂದಾಗಿ 'ಉಪ್ಪಿ 2' ಚಿತ್ರ ನೋಡುವ ಮೂಲಕ ಸ್ಟಾರ್ ವಾರ್ ಅನ್ನೋ ಪದವನ್ನೇ ಇಲ್ಲ ಅನ್ನಿಸಿಬಿಟ್ಟಿದ್ದಾರೆ.


ಎಲ್ಲೆಡೆ ಸಖತ್ ಪ್ರಚಾರ ಗಿಟ್ಟಿಸಿಕೊಂಡು ಗಾಂಧಿನಗರದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದ ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿ 2'. ಒಳ್ಳೆ ಗಳಿಕೆಯನ್ನು ಕೂಡ ಮಾಡಿದೆ.[ಏಯ್, ನೀನೊಬ್ನೆನಾ ಕುಡಿಯೋದು, ನಿನಗಿಂತ ಜಾಸ್ತಿ ಕುಡಿತೀವಿ!]


ಅಂದಹಾಗೆ ಯಾರಪ್ಪ ಆ ಮಲ್ಟಿ ಸ್ಟಾರರ್ ಅಂತ ನೀವು ಯೋಚ್ನೆ ಮಾಡ್ತಿದ್ದೀರಾ, ಹಾಗಾದ್ರೆ ಈ ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ..


ಸ್ಯಾಂಡಲ್ ವುಡ್ ಸ್ಟಾರ್ ಕಮ್ ಡೈರೆಕ್ಟರ್ ರಮೇಶ್ ಅರವಿಂದ್ ವಿತ್ ಉಪೇಂದ್ರ

ಸ್ಯಾಂಡಲ್ ವುಡ್ ಸ್ಟಾರ್ ಕಮ್ ಡೈರೆಕ್ಟರ್ ರಮೇಶ್ ಅರವಿಂದ್ ವಿತ್ ಉಪೇಂದ್ರ

ಸ್ಯಾಂಡಲ್ ವುಡ್ ನ ಒಬ್ಬ ಗ್ರೇಟ್ ಆಕ್ಟರ್ ಕಮ್ ಡೈರೆಕ್ಟರ್ ರಮೇಶ್ ಅರವಿಂದ್ ಅವರು ಉಪೇಂದ್ರ ನಿರ್ದೇಶನದ 'ಉಪ್ಪಿ 2' ಚಿತ್ರವನ್ನು ನೋಡಿ ರಿಯಲ್ ಸ್ಟಾರ್ ಡಿಫರೆಂಟ್ ನಿರ್ದೇಶನಕ್ಕೆ ತಲೆದೂಗಿದ್ದಾರೆ. [ನಟ ನಿರ್ದೇಶಕ ರಮೇಶ್ ಅರವಿಂದ್ 'ಉಪ್ಪಿ-ಟ್ಟು' ರುಚಿ ನೋಡಿದ ಬಗೆ ತಿಳಿಯಲು ಈ ವಿಡಿಯೋ ನೋಡಿ.]


ನಟ-ನಿರ್ದೇಶಕ-ನಿರ್ಮಾಪಕ ಇಂದ್ರಜಿತ್ ಲಂಕೇಶ್

ನಟ-ನಿರ್ದೇಶಕ-ನಿರ್ಮಾಪಕ ಇಂದ್ರಜಿತ್ ಲಂಕೇಶ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಮಜಾ ಟಾಕೀಸ್' ರಿಯಾಲಿಟಿ ಶೋ ಕಾರ್ಯಕ್ರಮದ ಮುಖ್ಯ ನಿರ್ಮಾಪಕರಾದ ನಟ, ನಿರ್ದೇಶಕ, ಜೊತೆಗೆ ನಿರ್ಮಾಪಕರು ಆಗಿರುವ ಇಂದ್ರಜಿತ್ ಲಂಕೇಶ್ ಅವರು ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿ ನಿರ್ದೇಶಿಸಿರುವ 'ಉಪ್ಪಿ-ಟ್ಟು' ನೋಡಿ ಸೂಪರ್ ಎಂದಿದ್ದಾರೆ. [ಉಪ್ಪಿ2 ಗಳಿಕೆ: ಮೂರೇ ದಿನಕ್ಕೆ ಸಿಲ್ವರ್ ಜ್ಯುಬಿಲಿ ಪ್ಲಸ್]


ಸ್ಯಾಂಡಲ್ ವುಡ್ ಸ್ಟಾರ್ 'ಉಗ್ರಂ' ಶ್ರೀಮುರಳಿ

ಸ್ಯಾಂಡಲ್ ವುಡ್ ಸ್ಟಾರ್ 'ಉಗ್ರಂ' ಶ್ರೀಮುರಳಿ

ಸ್ಯಾಂಡಲ್ ವುಡ್ ನ ಮತ್ತೊಬ್ಬ ಪ್ರತಿಭಾನ್ವಿತ ನಟ 'ಉಗ್ರಂ' ಖ್ಯಾತಿಯ ಶ್ರೀಮುರಳಿ ಅವರು ನಿನ್ನೆ ಬೆಂಗಳೂರಿನ ಸಿನಿಪೊಲಿಸ್ ಚಿತ್ರಮಂದಿರದಲ್ಲಿ 'ಉಪ್ಪಿ 2' ವೀಕ್ಷಿಸಿ "ಸರ್ ನೀವು ಸಖತ್ ಸೂಪರ್, ಅಮೇಜಿಂಗ್ ನಿಮ್ಮ ಕರೆಂಟ್ ಮೆದುಳಿಗೆ ಕರೆಂಟ್" ಅಂತ ಚಿತ್ರದ ಬಗ್ಗೆ ಹಾಗೂ ಉಪೇಂದ್ರ ಅವರ ನಿರ್ದೇಶನದ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. [ನಟ ಶ್ರೀ ಮುರಳಿ ಅಭಿಪ್ರಾಯ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ]


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ಸ್ಯಾಂಡಲ್ ವುಡ್ ನ ಮತ್ತೊಬ್ಬ ಸ್ಟಾರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ತಮ್ಮ ಮಗಳ ಮದುವೆಯ ಸಂಭ್ರಮ ಹಾಗೂ ಕೆಲಸಗಳ ನಡುವೆಯೂ ಉಪೇಂದ್ರ ಅವರ 'ಉಪ್ಪಿ 2' ಚಿತ್ರ ವೀಕ್ಷಿಸಿ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.[ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಅನಿಸಿಕೆ ನೋಡಲು ಈ ಲಿಂಕ್ ಕ್ಲಿಕ್ ಮಾಡಿ]


ಕನ್ನಡದ ಮೇರು ಕಾಮಿಡಿ ನಟ ಕಾಶೀನಾಥ್

ಕನ್ನಡದ ಮೇರು ಕಾಮಿಡಿ ನಟ ಕಾಶೀನಾಥ್

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಕಂಡ ಮೇರು ಕಾಮಿಡಿ ನಟ ಕಾಶೀನಾಥ್ ಅವರು ಕೂಡ ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿ-ಟ್ಟು' ವೀಕ್ಷಿಸಿ ತಾವು ಉಪೇಂದ್ರ ಅವರ ಫ್ಯಾನ್ ಅನ್ನೋದನ್ನ ಇ ಮೂಲಕ ತೋರಿಸಿಕೊಟ್ಟಿದ್ದಾರೆ. [ಹಾಸ್ಯ ನಟ ಕಾಶೀನಾಥ್ ಅಭಿಪ್ರಾಯ ತಿಳಿದುಕೊಳ್ಳಲು ಈ ವಿಡಿಯೋ ನೋಡಿ...]


ಸ್ಯಾಂಡಲ್ ವುಡ್ ಕಾಮಿಡಿ ಕಿಂಗ್ ನಟ ಶರಣ್

ಸ್ಯಾಂಡಲ್ ವುಡ್ ಕಾಮಿಡಿ ಕಿಂಗ್ ನಟ ಶರಣ್

ಕಾಮಿಡಿ ನಟನಾಗಿ ಚಿತ್ರರಂಗಕ್ಕೆ ಕಾಲಿರಿಸಿ ನಂತರ ಒಂದೊಂದೇ ಹಂತದಲ್ಲಿ ಮೇಲೇರಿದ ಕಾಮಿಡಿ ಕಿಂಗ್ ಶರಣ್ ಕೂಡ ನಿನ್ನೆ ಬೆಂಗಳೂರಿನ ಸಿನಿಪೊಲಿಸ್ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿ 'ನೀವು ಸೂಪರ್ ಸರ್' ಅಂದಿದ್ದಾರೆ.


English summary
Sandalwood Actors watched Upendra's 'Uppi 2' 'Unknown'. 'Uppi 2' feature Kannada actor Upendra, Actress Kristina Akheeva, Actress Parul Yadav in the lead role. The movie is directed by Upendra.
Please Wait while comments are loading...

Kannada Photos

Go to : More Photos