»   » ಪ್ರೇಮಿಗಳು ಕೇಳಲೇಬೇಕಾದ ಜನಪ್ರಿಯ ನಟರ ಟಾಪ್ 12 ಪ್ರೇಮಗೀತೆಗಳು

ಪ್ರೇಮಿಗಳು ಕೇಳಲೇಬೇಕಾದ ಜನಪ್ರಿಯ ನಟರ ಟಾಪ್ 12 ಪ್ರೇಮಗೀತೆಗಳು

Posted by:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಅದೇಷ್ಟೋ ಪ್ರೇಮಕಥೆಗಳು ತೆರೆ ಮೇಲೆ ಬಂದು ಹೋಗಿವೆ. ಅದೇಷ್ಟೋ ವಿರಹ ಗೀತೆಗಳು ಕೇಳುಗರನ್ನ ರಂಜಿಸಿವೆ. ಆದ್ರೆ, ಕೆಲವೊಂದು ಹಾಡುಗಳು ಮಾತ್ರ ಸಂಗೀತ ಪ್ರಿಯರ ಕಿವಿಯಲ್ಲಿ ಗುಂಯ್ ಗುಟ್ಟುತ್ತಿರುತ್ತವೆ.

ಇನ್ನೂ ಪ್ರೇಮಿಗಳಿಗಾಗಿನೇ ಕನ್ನಡದಲ್ಲಿ ಕೆಲವೊಂದು ಪ್ರೇಮಗೀತೆಗಳು ಮೂಡಿ ಬಂದಿದ್ದು, ಈ ಹಾಡುಗಳನ್ನ ಬಹುತೇಕ ಎಲ್ಲ ಪ್ರೇಮಿಗಳು ಕೇಳೇ ಇರ್ತಾರೆ.[ಗುಲಾಬಿಗೆ ಗುಲಾಮನಾದ ಪ್ರೇಮ ಗೀತೆಗಳು ]

'ವ್ಯಾಲೆಂಟೈನ್ಸ್ ಡೇ' ವಿಶೇಷವಾಗಿ ಡಾ.ರಾಜ್, ಡಾ.ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಜನಪ್ರಿಯ ನಟರ 12 ಹಾಡುಗಳನ್ನ ಆಯ್ದು ನಿಮ್ಮ ಮುಂದೆ ಇಟ್ಟಿದ್ದೀವಿ. ಕೇಳಿ ಎಂಜಾಯ್ ಮಾಡಿ. ನಂತರ ನಿಮಗೆ ಇಷ್ಟವಾದ ಹಾಡುಗಳನ್ನ ಕಾಮೆಂಟ್ ಮೂಲಕ ನಮಗೆ ತಿಳಿಸಿ......

'ಐ ಲವ್ ಯೂ.....'

'ಐ ಲವ್ ಯೂ.....'

ಡಾ.ರಾಜ್ ಕುಮಾರ್ ಮತ್ತು ಮಂಜುಳ ಅಭಿನಯಿಸಿರುವ 'ನೀ ನನ್ನ ಗೆಲ್ಲಲಾರೆ' ಚಿತ್ರದ' ಐ ಲವ್ ಯೂ.....' ಹಾಡು ಪ್ರೇಮಿಗಳ ಫೆವರೇಟ್.

(ಲಿಂಕ್ ಕ್ಲಿಕ್ ಮಾಡಿ ಈ ಸಾಂಗ್ ಕೇಳಿ)

ಯುಗ ಯುಗಗಳೇ ಸಾಗಲಿ....

ಯುಗ ಯುಗಗಳೇ ಸಾಗಲಿ....

ವಿಷ್ಣುವರ್ಧನ್, ಖುಷ್ಬೂ ಕಾಣಿಸಿಕೊಂಡಿರುವ 'ಯುಗ ಯುಗಗಳೇ ಸಾಗಲಿ....' ಹಾಡು ಇಂದಿನ ಪ್ರೇಮಿಗಳ ನೆಚ್ಚಿನ ಹಾಡು. ತಮ್ಮ ಹುಡುಗಿಯನ್ನ ಮೆಚ್ಚಿಸಬೇಕು ಎಂದರೆ ಈ ಹಾಡೊಂದು ಸಾಕು.

(ಲಿಂಕ್ ಕ್ಲಿಕ್ ಮಾಡಿ ಈ ಸಾಂಗ್ ಕೇಳಿ)

ಒಲವಿನ ಉಡುಗೊರೆ....

ಒಲವಿನ ಉಡುಗೊರೆ....

ಪ್ರೀತಿಸಿದವರಿಗೆ ಏನಾದರೂ ಉಡುಗೊರೆ ಕೊಡಬೇಕು ಎಂದಾಗ ಅಂಬರೀಶ್ ಅವರ 'ಒಲವಿನ ಉಡುಗೊರೆ....' ಹಾಡು ಕಾಡುವುದು ಮಾತ್ರ ಸುಳ್ಳಾಲ್ಲ.

(ಲಿಂಕ್ ಕ್ಲಿಕ್ ಮಾಡಿ ಈ ಸಾಂಗ್ ಕೇಳಿ)

ಜೊತೆ ಜೊತೆಯಲಿ.....

ಜೊತೆ ಜೊತೆಯಲಿ.....

ಪ್ರೇಮಿಗಳು ಜೀವನದುದ್ದಕ್ಕು ಜೊತೆಯಾಗಿರಬೇಕು ಎಂಬ ಆಸೆಯಿಂದ ಪ್ರೀತಿಸುತ್ತಾರೆ. ಆ ಸಂತೋಷದಲ್ಲಿ ನೆನಪಾಗುವುದು 'ಗೀತಾ' ಚಿತ್ರದ ಹಾಡು ಮಾತ್ರ. 'ಜೊತೆ ಜೊತೆಯಲಿ......' ಎನ್ನುತ್ತಾ ಜೊತೆಯಾಗಿ ಹೆಜ್ಜೆ ಹಾಕಬಹುದು.

(ಲಿಂಕ್ ಕ್ಲಿಕ್ ಮಾಡಿ ಈ ಸಾಂಗ್ ಕೇಳಿ)

ನೂರು ಜನ್ಮಕು.....

ನೂರು ಜನ್ಮಕು.....

ಪ್ರತಿಯೊಬ್ಬ ಪ್ರೇಮಿಯೂ ನೆನಪಿಸಿಕೊಳ್ಳುವ ಹಾಡು 'ಅಮೆರಿಕಾ ಅಮೆರಿಕಾ' ಚಿತ್ರದ ನೂರು ಜನ್ಮಕು, ನೂರಾರು ಜನ್ಮಕು....' ರಮೇಶ್ ಅರವಿಂದ್ ಅಭಿನಯಿಸಿದ್ದ ಈ ಹಾಡು ಕನ್ನಡ ಚಿತ್ರರಂಗದ ಆಲ್ ಟೈಮ್ ಎವರ್ ಗ್ರೀನ್ ಸಾಲುಗಳು.

(ಲಿಂಕ್ ಕ್ಲಿಕ್ ಮಾಡಿ ಈ ಸಾಂಗ್ ಕೇಳಿ)

ಉಸಿರೇ ಉಸಿರೇ...

ಉಸಿರೇ ಉಸಿರೇ...

'ಹುಚ್ಚ' ಚಿತ್ರದ ಉಸಿರೇ ಉಸಿರೇ...ಹಾಡು ಚಿತ್ರಪ್ರೇಮಿಗಳನ್ನ ಕಾಡಿದ ಹಾಡು. ಹಾಗೆ, ಯುವಕ-ಯುವತಿಯರನ್ನ ಕಾಡಿದ ಹಾಡು.

(ಲಿಂಕ್ ಕ್ಲಿಕ್ ಮಾಡಿ ಈ ಸಾಂಗ್ ಕೇಳಿ)

ನಿನ್ನಂದಲೇ....

ನಿನ್ನಂದಲೇ....

ಪುನೀತ್ ರಾಜ್ ಕುಮಾರ್ ಅಭಿನಯದ ಮಿಲನ ಸ್ಯಾಂಡಲ್ ವುಡ್ ಸೂಪರ್ ಹಿಟ್ ಸಿನಿಮಾ. ಈ ಚಿತ್ರದ 'ನಿನ್ನಂದಲೇ....'ಹಾಡು ಯುವ ಜನತೆಯ ಹೃದಯ ಕದ್ದಿತ್ತು.

(ಲಿಂಕ್ ಕ್ಲಿಕ್ ಮಾಡಿ ಈ ಸಾಂಗ್ ಕೇಳಿ)

ತಲೆ ಕೆಡುತೆ ಹುಡುಗಿ....

ತಲೆ ಕೆಡುತೆ ಹುಡುಗಿ....

ಸದ್ಯ, ಪಡ್ಡೆ ಹುಡುಗರೆಲ್ಲ ತಮ್ಮ ಹುಡುಗಿಯ ಹಿಂದೆ 'ತಲೆ ಕೆಡುತೆ ಹುಡುಗಿ' ಎಂದು ತಿರುಗಾಡುತ್ತಿದ್ದಾರೆ. ಇದಕ್ಕೆ ಕಾರಣ 'ಜಗ್ಗುದಾದ' ಚಿತ್ರದ ಈ ರೊಮ್ಯಾಂಟಿಕ್ ಹಾಡು.

(ಲಿಂಕ್ ಕ್ಲಿಕ್ ಮಾಡಿ ಈ ಸಾಂಗ್ ಕೇಳಿ)

ಪ್ರೀತ್ಸೆ ಪ್ರೀತ್ಸೆ.....

ಪ್ರೀತ್ಸೆ ಪ್ರೀತ್ಸೆ.....

ಅಂದು-ಇಂದು-ಎಂದೆಂದೂ ಹುಡುಗರು ಹೇಳೋದು ಇದೊಂದೆ ಸಾಲು 'ಪ್ರೀತ್ಸೆ ಪ್ರೀತ್ಸೆ.....' ಅಂತ. ಹೌದು, ಉಪೇಂದ್ರ ಅಭಿನಯಸಿದ್ದ ಪ್ರೀತ್ಸೆ ಚಿತ್ರದ ಈ ಹಾಡು ಪ್ರೇಮಿಗಳ ಪಾಲಿಗೆ ಪ್ರೇಮಗೀತೆ.

(ಲಿಂಕ್ ಕ್ಲಿಕ್ ಮಾಡಿ ಈ ಸಾಂಗ್ ಕೇಳಿ)

ಚೆಂದುಟಿಯ ಪಕ್ಕದಲಿ....

ಚೆಂದುಟಿಯ ಪಕ್ಕದಲಿ....

ಹುಡುಗರು, ತಮ್ಮ ಹುಡುಗಿಯನ್ನ ವರ್ಣನೆ ಮಾಡಬೇಕು ಅಂದ್ರೆ ಒಮ್ಮೆ ಡ್ರಾಮಾ ಚಿತ್ರದ 'ಚೆಂದುಟಿಯ ಪಕ್ಕದಲಿ...' ಹಾಡನ್ನ ಕೇಳಿ...

(ಲಿಂಕ್ ಕ್ಲಿಕ್ ಮಾಡಿ ಈ ಸಾಂಗ್ ಕೇಳಿ)

ಮಿಂಚಾಗಿ ನೀನು ಬರಲು.....

ಮಿಂಚಾಗಿ ನೀನು ಬರಲು.....

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಗಾಳಿಪಟ' ಚಿತ್ರದ 'ಮಿಂಚಾಗಿ ನೀನು ಬರಲು.....' ಹಾಡು ಪ್ರೇಮಿಗಳ ದಿನ ವಿಶೇಷವಾಗಿ ನೋಡಲೇಬೇಕಾದ ಹಾಡು.

(ಲಿಂಕ್ ಕ್ಲಿಕ್ ಮಾಡಿ ಈ ಸಾಂಗ್ ಕೇಳಿ)

ಇದು ನನ್ನ ನಿನ್ನ ಪ್ರೇಮಲೋಕ ಚಿನ್ನ....

ಇದು ನನ್ನ ನಿನ್ನ ಪ್ರೇಮಲೋಕ ಚಿನ್ನ....

ಪ್ರೇಮಗೀತೆಗಳು ಅಂದಾಕ್ಷಣ ಥಟ್ ಅಂತ ನೆನಪಾಗುವುದೇ ಪ್ರೇಮಲೋಕ ಚಿತ್ರದ 'ಇದು ನನ್ನ ನಿನ್ನ ಪ್ರೇಮಲೋಕ ಚಿನ್ನ...' ಹಾಡು.(ಈ ಲಿಂಕ್ ಕ್ಲಿಕ್ ಮಾಡಿ ಈ ಹಾಡು ಕೇಳಿ)

English summary
Top 12 Kannada Love Songs For Valentine's Day Special. watch Romantic Love songs
Please Wait while comments are loading...

Kannada Photos

Go to : More Photos