»   » ವರ್ಮಾ ವಿರುದ್ಧ ಕೇಸ್: 'ಕಿಲ್ಲಿಂಗ್ ವೀರಪ್ಪನ್'ಗೆ ಮತ್ತೊಂದು ಕಂಟಕ

ವರ್ಮಾ ವಿರುದ್ಧ ಕೇಸ್: 'ಕಿಲ್ಲಿಂಗ್ ವೀರಪ್ಪನ್'ಗೆ ಮತ್ತೊಂದು ಕಂಟಕ

Posted by:
Subscribe to Filmibeat Kannada

ಸದಾ ವಿವಾದಗಳನ್ನೇ ಮೈ ಮೇಲೆ ಎಳೆದುಕೊಳ್ಳುವ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾಗೆ ಬಿಡುಗಡೆ ಭಾಗ್ಯ ಯಾಕೋ ದೊರಕುವಂತೆ ಕಾಣುತ್ತಿಲ್ಲ. ಜೊತೆಗೆ ಒಂದರ ಮೇಲೆ ಒಂದು ಕಂಟಕಗಳು ಎದುರಾಗುತ್ತಲೇ ಇವೆ.

ಮೊನ್ನೆ ಮೊನ್ನೆ ವೀರಪ್ಪನ್ ಪತ್ನಿ ಮುತ್ತು ಲಕ್ಷ್ಮಿ ಅವರು ಸಿನಿಮಾ ಬಿಡುಗಡೆಗೆ ಕಂಟಕ ಆಗ್ತಾರ? ಅನ್ನೋವಷ್ಟರಲ್ಲಿ, ಚಿತ್ರತಂಡ ಹೇಗೋ ಆ ಸಮಸ್ಯೆಯಿಂದ ಪಾರಾಗಿತ್ತು. ಆದರೆ ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ.[ಪೊಲೀಸ್ ಇಲಾಖೆಗೆ 'ಕಿಲ್ಲಿಂಗ್ ವೀರಪ್ಪನ್' ಸ್ಪೆಶಲ್ ಶೋ]

ಈ ಬಾರಿ ಮಾದಪ್ಪ ಅನ್ನೋ ವ್ಯಕ್ತಿ ಚಿತ್ರದ ಮೇಲೆ ಕೇಸ್ ಹಾಕುವ ಮೂಲಕ ವೀರಪ್ಪನ್ ಬಿಡುಗಡೆಗೆ ಅಡ್ಡಗಾಲು ಹಾಕಿದ್ದಾರೆ. ತಮಿಳುನಾಡಿನ ಮಾದಪ್ಪ ಎಂಬುವವರು ಸಿಟಿ ಸಿವಿಲ್ ಕೋರ್ಟ್ ನಲ್ಲಿ ಚಿತ್ರದ ವಿರುದ್ಧ ದಾವೆ ಹೂಡಿದ್ದಾರೆ.

ದಾವೆಯಲ್ಲಿ ಚಿತ್ರದ ನಿರ್ಮಾಣ ಸಂಸ್ಥೆಯಾದ ಜಿ ಆರ್ ಫಿಲಂಸ್ ನ ಬಿ.ವಿ.ಮಂಜುನಾಥ್, ಬಿ.ವಿ ಸತೀಂದ್ರ, ಶಿವಪ್ರಕಾಶ್ ಫಿಲಂಸ್ ಮುಖ್ಯಸ್ಥ ರಘು ಆಚಾರ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಹೆಸರಿಸಲಾಗಿದೆ.[ಮುತ್ತುಲಕ್ಷ್ಮಿಯೊಂದಿಗೆ ಸಂಧಾನ: ಡಿ.11 ಕ್ಕೆ 'ಕಿಲ್ಲಿಂಗ್ ವೀರಪ್ಪನ್' ತೆರೆಗೆ?]

Varma's Killing Veerappan in trouble again

ಪ್ರಕರಣದ ದೂರನ್ನು ತುರ್ತಾಗಿ ವಿಚಾರಣೆ ಮಾಡುವಂತೆ ಮಾದಪ್ಪ ಪರ ವಹಿಸಿದ ವಕೀಲ ಎಸ್ ಉಮೇಶ್ ಮಾಡಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಪ್ರತಿವಾದಿಗೆ ತುರ್ತು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಡಿಸೆಂಬರ್ 29ಕ್ಕೆ ನಿಗದಿಪಡಿಸಿದೆ.

ವೀರಪ್ಪನ್ ಕಾರ್ಯಾಚರಣೆಯಲ್ಲಿ ಮಾದಪ್ಪ ಅವರು ಎಸ್ ಟಿ ಎಫ್ ಗೆ ಮಾಹಿತಿ ನೀಡುತ್ತಿದ್ದರು. ವೀರಪ್ಪನ್ ಚಲನವಲನಗಳ ಬಗ್ಗೆ ಅವರು ಕೊಟ್ಟ ಮಾಹಿತಿ ಕಾರ್ಯಾಚರಣೆಯಲ್ಲಿ ಬಹಳ ಸಹಾಯಕವಾಗಿದ್ದವು. ಇದೀಗ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾದಲ್ಲು ಮಾದಪ್ಪನನ್ನು ಹೋಲುವ ಪಾತ್ರವೊಂದನ್ನು ಸೃಷ್ಟಿಸಲಾಗಿದೆ.[ಮುತ್ತುಲಕ್ಷ್ಮಿ ಹೊಸ ವರಸೆ, ಮತ್ತೆ ವರ್ಮಾ, ವೀರಪ್ಪನ್ ಗೆ ಕಂಟಕ.! ]

ಆದರೆ ಇದರ ಬಗ್ಗೆ ಮಾದಪ್ಪ ಅವರ ಅನುಮತಿ ಪಡೆದಿಲ್ಲ. ಅಲ್ಲದೇ ಈ ಪಾತ್ರ ಹೇಗೆ ನಿರೂಪಿಸಿದ್ದಾರೋ ಗೊತ್ತಿಲ್ಲ. ಭವಿಷ್ಯದಲ್ಲಿ ಇದರಿಂದ ತನಗೆ ಪ್ರಾಣಾಪಾಯ ಒದಗಬಹುದು ಅನ್ನೋದು ಮಾದಪ್ಪ ಅವರ ಆತಂಕ.

ಒಟ್ನಲ್ಲಿ ಜನವರಿ 1 ಕ್ಕೆ ಸಿನಿಮಾ ಬಿಡುಗಡೆ ಎಂದು ಡೇಟ್ ಘೋಷಣೆ ಮಾಡಿರುವ ಚಿತ್ರತಂಡ ಇನ್ನೇನು ಮಾಡುತ್ತದೆ ಗೊತ್ತಿಲ್ಲ. ಆದರೆ 29ನೇ ತಾರೀಖು ವಿಚಾರಣೆ ಇರುವುದರಿಂದ ಆ ನಂತರ ಬಿಡುಗಡೆಯ ಕುರಿತು ಪಕ್ಕಾ ಮಾಹಿತಿ ಸಿಗಲಿದೆ.

English summary
A civil court has granted a stay on the release of the Kannada Movie 'Killing Veerappan' directed by Ram Gopal Varma. The suit was filed by Madappa.
Please Wait while comments are loading...

Kannada Photos

Go to : More Photos