twitter
    For Quick Alerts
    ALLOW NOTIFICATIONS  
    For Daily Alerts

    ಕಿತ್ತೂರು ರಾಣಿ ಚೆನ್ನಮ್ಮನಿಗೆ ಜನ್ಮದಿನದ ಶುಭಾಶಯಗಳು

    |

    ಬಹುಭಾಷಾ ತಾರೆ, ಅಭಿನಯ ಸರಸ್ವತಿ, ಬಿ ಸರೋಜದೇವಿ ಕನ್ನಡದ ಹಿರಿಯ ಚಲನಚಿತ್ರ ತಾರೆಯರಲ್ಲಿ ಒಬ್ಬರು. ಜನವರಿ ಏಳು, 1942ರಲ್ಲಿ ಜನಿಸಿದ ಸರೋಜಾದೇವಿಯವರಿಗೆ ಗುರುವಾರ (ಜ 7) 74ನೇ ಹುಟ್ಟುಹಬ್ಬದ ಸಂಭ್ರಮ.

    ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯನ್ನು ಬೆಳಗಿದ ಅಭಿನೇತ್ರಿ ಬಿ ಸರೋಜಾದೇವಿ ಈಗಿನ ಬೊಂಬೆಗಳ ನಾಡು ಚನ್ನಪಟ್ಟಣ ತಾಲ್ಲೂಕಿನ ದಶವಾರ ಗ್ರಾಮದ ಬಡಕುಟುಂಬದಲ್ಲಿ ಜನಿಸಿದವರು.

    ಬಾಲ್ಯದಿಂದಲೇ ಲಲಿತಕಲೆಗಳ ಬಗ್ಗೆ ಬಹಳ ಆಸಕ್ತಿ ಇದ್ದಂತ ಸರೋಜಾದೇವಿಯವರ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಹೊನ್ನಪ್ಪ ಭಾಗವತರು. ಬಿ ಸರೋಜಾದೇವಿ ಅಂದರೆ ಕನ್ನಡಿಗರಿಗೆ ನೆನಪಾಗುವುದು ಕಿತ್ತೂರು ರಾಣಿ ಚನ್ನಮ್ಮನ ಪಾತ್ರ. (ಕಿತ್ತೂರು ರಾಣಿ ಚೆನ್ನಮ್ಮ ಚಿತ್ರದ ಹಾಡಿಗೆ ಇಲ್ಲಿ ಕ್ಲಿಕ್ಕಿಸಿ)

    ಅರವತ್ತರ ದಶಕದಲ್ಲಿ ಬಂದ ಈ ಕಪ್ಪು-ಬಿಳುಪು ಚಿತ್ರದಲ್ಲಿ "ನಾನ್ಯಾಕೆ ಕೊಡಲಿ ಕಪ್ಪ.. " ಎಂದು ಬ್ರಿಟಿಷ್ ಅಧಿಕಾರಿಗಳ ಮುಂದೆ ಸರೋಜಾದೇವಿ ತೆರೆಮೇಲೆ ಅಬ್ಬರಿಸುತ್ತಿದ್ದ ದೃಶ್ಯ ಇಂದಿಗೂ ಪುಳಕ ಹುಟ್ಟಿಸುವಂತದ್ದು.

    ಹೊನ್ನಪ್ಪ ಭಾಗವತರ್ ಅವರ 'ಮಹಾಕವಿ ಕಾಳಿದಾಸ' ಚಿತ್ರದ ಮೂಲಕ 1955ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಬಿ. ಸರೋಜಾದೇವಿ ತಮ್ಮ ಅಭಿನಯ ಕೌಶಲದಿಂದ ಬಹುಬೇಗ ಚತುರ್ಭಾಷಾ ತಾರೆಯಾದವರು.

    ಡಾ ರಾಜಕುಮಾರ್, ಕಲ್ಯಾಣ್‌ಕುಮಾರ್, ಅಕ್ಕಿನೇನಿ ನಾಗೇಶ್ವರರಾವ್, ಉದಯ ಕುಮಾರ್, ಎನ್ಟಿಆರ್, ಎಂಜಿಆರ್, ಜೆಮಿನಿ ಗಣೇಶನ್, ಶಿವಾಜಿ ಗಣೇಶನ್, ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ಶಮ್ಮಿಕಪೂರ್, ಸುನಿಲ್ ದತ್ ಮುಂತಾದ ಮೇರು ಕಲಾವಿದರೊಂದಿಗೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ಬಿ ಸರೋಜಾ ದೇವಿ ನಟಿಸಿದ್ದಾರೆ.[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]

    Filmibeat.com wishes her many happy returns of the day

    ಡಾ. ರಾಜಕುಮಾರ್ ಪ್ರಮುಖ ಭೂಮಿಕೆಯಲ್ಲಿದ್ದ ಬಭ್ರುವಾಹನ ಚಿತ್ರದಲ್ಲಿ 'ಚಿತ್ರಾಂಗದೆ' ಪಾತ್ರದಲ್ಲಿ ಬಿ ಸರೋಜಾದೇವಿ ಮನೋಜ್ಞ ಅಭಿನಯ ನೀಡಿದ್ದರು. 161 ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಅತಿ ಹೆಚ್ಚು ಚಿತ್ರಗಳಲ್ಲಿ ನಾಯಕನಟಿಯಾಗಿ ಅಭಿನಯಿಸಿದ ದಾಖಲೆ ಇವರ ಹೆಸರಲ್ಲಿರುವುದು ವಿಶೇಷ.

    ಇವರ ಅಭಿನಯದ ಪ್ರಮುಖ ಚಿತ್ರಗಳೆಂದರೆ ಅಮರಶಿಲ್ಪಿ ಜಕಣಾಚಾರಿ, ಕಿತ್ತೂರು ರಾಣಿ ಚೆನ್ನಮ್ಮ, ಜಗಜ್ಯೋತಿ ಬಸವೇಶ್ವರ, ಭೂಕೈಲಾಸ, ಮಹಾಕವಿ ಕಾಳಿದಾಸ, ಬಭ್ರುವಾಹನ ಇತ್ಯಾದಿ...

    ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳನ್ನ ಸೇರಿ ಹಿಂದಿ ಮತ್ತು ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಅನೇಕ ಪ್ರಶಸ್ತಿಗಳನ್ನ ತನ್ನದಾಗಿಸಿ ಕೊಂಡಿರುವ ಬಹುಭಾಷಾ ನಟಿ ಬಿ ಸರೋಜಾದೇವಿಯವರು 74ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

    ಎಲ್ಲಾ ಸಿನಿರಸಿಕರ ಪರವಾಗಿ ಮತ್ತು ಒನ್ ಇಂಡಿಯಾ ಕನ್ನಡ, ಫಿಲ್ಮೀಬೀಟ್ ಪರವಾಗಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

    English summary
    Veteran Actor B Saroja Devi turns 74. Filmibeat.com wishes her many happy returns of the day.
    Thursday, January 7, 2016, 17:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X