twitter
    For Quick Alerts
    ALLOW NOTIFICATIONS  
    For Daily Alerts

    ಕೆ.ಬಾಲಚಂದರ್ ಮತ್ತು ಕನ್ನಡ ಚಿತ್ರಗಳ ಅಪೂರ್ವ ನಂಟು

    By Harshitha
    |

    ಆದು 60-70 ರ ದಶಕ, ಇಡೀ ದಕ್ಷಿಣ ಭಾರತದಲ್ಲೇ ತಮಿಳು ಚಿತ್ರಗಳನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ ಅಪೂರ್ವ ಕಾಲ. ಸಿನಿಮಾಗಳನ್ನ ಹೀಗೂ ಮಾಡಬಹುದು ಅಂತ ತಮ್ಮ ಅತ್ಯದ್ಭುತ ಚಿತ್ರಗಳಿಂದ ಇಡೀ ಚಿತ್ರರಂಗವನ್ನೇ ಚಿಕಿತಗೊಳಿಸಿದ್ದು ಮದ್ರಾಸಿನ ಪುಟ್ಟ ಹಳ್ಳಿಯ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಬಾಲಕ!

    ಖ್ಯಾತ ನಾಮ ನಟ-ನಟಿಯರೊಂದಿಗೆ ಯುವ ಪ್ರತಿಭೆಗಳಿಗೂ ಮಣೆ ಹಾಕಿ ಯಶಸ್ಸಿನ ಶಿಖರವೇರಿದ ಅಮರಶಿಲ್ಪಿ ನಿರ್ದೇಶಕ ಕೆ.ಬಾಲಚಂದರ್. ತಮಿಳು ಸಿನಿ ರಂಗದ ಸುವರ್ಣ ಯುಗಕ್ಕೆ ಕಾರಣಕರ್ತರಾದ ನಿರ್ದೇಶಕ ಕೆ.ಬಾಲಚಂದರ್ ಸ್ಯಾಂಡಲ್ ವುಡ್ ನಲ್ಲೂ ಒಂದ್ಕಾಲದಲ್ಲಿ ಜಾದೂ ಮಾಡಿದವರೇ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

    K Balachander
    ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಸೂಪರ್ ಡ್ಯೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಕೆ.ಬಾಲಚಂದರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು 1978 ರಲ್ಲಿ. ಅದಾಗಲೇ ತಮ್ಮ ವೃತ್ತಿ ಜೀವನದಲ್ಲಿ ಒಂದು ದಶಕ ಪೂರೈಸಿದ್ದ ನಿರ್ದೇಶಕ ಕೆ.ಬಾಲಚಂದರ್ 'ತಪ್ಪಿದ ತಾಳ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟರು. [ಭಾರತ ಸಿನಿ ರತ್ನ ಕೆ.ಬಾಲಚಂದರ್ ಗೆ ಟ್ವೀಟಿನ ಹಾರ]

    ತಮಿಳಿನ 'ತಪ್ಪು ತಾಳಂಗಳ್' ಚಿತ್ರವನ್ನೇ ಕನ್ನಡದಲ್ಲಿ 'ತಪ್ಪಿದ ತಾಳ' ಆಗಿ ತೆರೆಗೆ ತಂದ ಬಾಲಚಂದರ್, ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದರು. ಜೊತೆಗೆ, ಚಿತ್ರದಲ್ಲಿ ನಟಿಸಿದ್ದ ರಜನಿಕಾಂತ್ ಮತ್ತು ಸರಿತಾಗೂ ಉತ್ತಮ ಹೆಸರು ತಂದುಕೊಟ್ಟರು.

    balachander

    ಇದಾದ ಐದು ವರ್ಷಗಳ ಬಳಿಕ ಕೆ.ಬಾಲಚಂದರ್ ಮತ್ತೆ ಗಾಂಧಿನಗರದಲ್ಲಿ ಹೊಸ ಅಲೆ ಎಬ್ಬಿಸಿದ್ದು 'ಬೆಂಕಿಯಲ್ಲಿ ಅರಳಿದ ಹೂವು' ಚಿತ್ರದ ಮೂಲಕ. ಎಂಟು ವರ್ಷಗಳ ತಮ್ಮ ಹಳೆಯ 'ಅವಳ್ ಒರು ತೊಡರ್ ಕಥೈ' ಚಿತ್ರವನ್ನು ಕನ್ನಡದಲ್ಲಿ 'ಬೆಂಕಿಯಲ್ಲಿ ಅರಳಿದ ಹೂವು' ಚಿತ್ರವನ್ನಾಗಿ ಮಾಡಿ ಮತ್ತೊಮ್ಮೆ ಸಕ್ಸಸ್ ಸವಿ ಸವಿದರು ಬಾಲಚಂದರ್.

    1984ರಲ್ಲಿ 'ಎರಡು ರೇಖೆಗಳು', 1985ರಲ್ಲಿ 'ಮುಗಿಲ ಮಲ್ಲಿಗೆ' ಮತ್ತು 1986 ರಲ್ಲಿ 'ಸುಂದರ ಸ್ವಪ್ನಗಳು' ಚಿತ್ರಗಳನ್ನು ತೆರೆಗೆ ತರುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಬ್ಲಾಕ್ ಬಸ್ಟರ್ ಸೀರೀಸ್ ಗಳನ್ನ ನೀಡಿದ ಖ್ಯಾತಿ ಬಾಲಚಂದರ್ ಗೆ ಸಲ್ಲಬೇಕು.

    balachander

    ಕನ್ನಡದಲ್ಲಿ ಒಟ್ಟು ಐದು ಚಿತ್ರಗಳನ್ನು ನಿರ್ದೇಶಿಸಿರುವ ಕೆ.ಬಾಲಚಂದರ್, ಅದೆಲ್ಲವೂ ತಮ್ಮ ಸೂಪರ್ ಹಿಟ್ ತಮಿಳು ಚಿತ್ರಗಳ ರೀಮೇಕ್ ಅನ್ನುವುದು ಗಮನಿಸಬೇಕಾದ ಅಂಶ.

    ಇವೆಲ್ಲದರೊಂದಿಗೆ ಅಪ್ಪಟ ಕನ್ನಡದ ಪ್ರತಿಭೆಗಳಾದ ರಮೇಶ್ ಅರವಿಂದ್, ತಾರಾ, ಪ್ರಕಾಶ್ ರಾಜ್, ಶೃತಿ ಮುಂತಾದ ಅನೇಕ ಕಲಾವಿದರನ್ನ ತಮಿಳು ಸಿನಿ ಅಂಗಳಕ್ಕೆ ಪರಿಚಯಿಸಿದವರು ಇದೇ ಬಾಲಚಂದರ್. [ಚಿತ್ರಗಳಲ್ಲಿ ಸಿನಿಬ್ರಹ್ಮ 'ಕೆಬಿ' ಸಾರ್ ಗೆ ರಜನಿ ನಮನ]

    balachander

    ವರ್ಷಗಳ ನಂತ್ರ ಬಣ್ಣದ ಬದುಕಿನಿಂದ ಕೊಂಚ ದೂರ ಉಳಿದಿದ್ದ ಕೆ.ಬಾಲಚಂದರ್, ಕನ್ನಡಿಗ ರಮೇಶ್ ಅರವಿಂದ್ ನಿರ್ದೇಶಿಸುತ್ತಿರುವ 'ಉತ್ತಮ ವಿಲನ್' ಚಿತ್ರದಲ್ಲಿ ಈ ವರ್ಷ ಸಕ್ರಿಯರಾಗಿದ್ದರು.

    ಕಲೆಗೆ ಭಾಷೆಯ ಅಡ್ಡಿಯಿಲ್ಲ ಅನ್ನುವ ಮಾತಿದೆ. ಆ ಮಾತಿಗೆ ತಕ್ಕಂತೆ ಐದು ಭಾಷೆಗಳಲ್ಲಿ ಸಿನಿಮಾಗಳನ್ನು ನಿರ್ದೇಶಿಸಿ ಸೈ ಅನಿಸಿಕೊಂಡಿರುವ ಕೆ.ಬಾಲಚಂದರ್ ಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. (ಫಿಲ್ಮಿಬೀಟ್ ಕನ್ನಡ)

    English summary
    Veteran Director K.Balachander, who breathed his last due to Heart-attack had great ties with Kannada Film Industry. Here is the report on K.Balachander's connection with Sandalwood.
    Sunday, December 28, 2014, 13:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X