twitter
    For Quick Alerts
    ALLOW NOTIFICATIONS  
    For Daily Alerts

    ಖಾಲಿ ಕ್ವಾರ್ಟರ್ ನಲ್ಲಿ ನನ್ನ ಪಾಲೇನು ಇಲ್ಲ, ಶರಣ್!

    By Rajendra
    |
    <ul id="pagination-digg"><li class="previous"><a href="/news/kannada-comedy-actor-sharan-interview-076818.html">« Previous</a>

    4. ಅಸ್ಮಿತಾ ಸೂದ್ ಹಾಗೂ ನಿಮ್ಮ ನಡುವಿನ ಕೆಮಿಸ್ಟ್ರಿ ಹೇಗೆ ವರ್ಕ್ ಔಟ್ ಆಗಿದೆ?
    ಇದೇ ಮೊದಲ ಸಲ ನಾನು ನಾಯಕಿ ಜೊತೆ ರೊಮ್ಯಾಂಟಿಕ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹಾಸ್ಯನಟನಾಗಿ ಬಳಿಕ ನಾಯಕ ನಟನಾಗಿ ಬೆಳೆದವನು ನಾನು. ಮರಸುತ್ತುವುದು, ಆನ್ ಸ್ಕ್ರೀನ್ ರೊಮ್ಯಾನ್ಸ್ ಇದೆಲ್ಲಾ ನನಗೆ ಹೊಸದಾಗಿತ್ತು. ಅಸ್ಮಿತಾ ಸೂದ್ ಅವರಿಗೆ ನಾನು ಥ್ಯಾಂಕ್ಸ್ ಹೇಳಬೇಕು. ಹೊಸಬನಾದ ನನ್ನನ್ನು ಒಂದು ಕಂಫರ್ಟಬಲ್ ಜೋನ್ ನಲ್ಲಿ ಇಟ್ಟಿದ್ದರು. ಈ ರೀತಿಯ ನಾಯಕಿ ಸಿಕ್ಕಿದ್ದು ನನ್ನ ಪಾಲಿಗೆ ತುಂಬಾ ತುಂಬಾ ಲಕ್ಕಿ ಎಂದೇ ಹೇಳಬೇಕು.

    ಅವರಲ್ಲಿ ತುಂಬಾನೇ ಡೆಡಿಕೇಷನ್ ಇತ್ತು. ಅವರಿಗೆ ಭಾಷೆ ಬರುತ್ತಿರಲಿಲ್ಲ. ಅವರ ಡೇಟ್ ಅಲ್ಲದಿದ್ದರೂ ಎರಡು ಮೂರು ದಿನಗಳ ಮುಂಚೆಯೇ ಬೆಂಗಳೂರಿಗೆ ಬಂದು ಲೈನ್ಸ್ ತಗೊಂಡು ಅದನ್ನು ಉರುಹಚ್ಚಿ, ಅದರ ಅರ್ಥ ತಿಳಿದುಕೊಂಡು ತಯಾರಿ ಮಾಡಿಕೊಂಡಿದ್ದರು. ಒಬ್ಬ ಸಹಾಯಕರನ್ನು ಬಳಸಿಕೊಂಡು ಭಾಷೆಯ ಗತ್ತನ್ನು ಕಲಿತರು. ಈ ಡೈಲಾಗ್ ಯಾವ ಸಂದರ್ಭದಲ್ಲಿ ಬರುತ್ತದೆ ಎಂಬ ವಿಚಾರಗಳನ್ನೆಲ್ಲಾ ತಿಳಿದುಕೊಳ್ಳುತ್ತಿದ್ದರು.

    5. ರಾಗಿಣಿ ಜೊತೆಗಿನ ಐಟಂ ಡಾನ್ಸ್ ಬಗ್ಗೆ?
    ಇದನ್ನು ಐಟಂ ನಂಬರ್ ಎಂದು ಹೇಳುವಂತಿಲ್ಲ. ಇದೊಂದು ಸ್ಪೆಷಲ್ ನಂಬರ್ ಹಾಡು. ಈ ಹಾಡು ತುಂಬಾ ಮುಖ್ಯವಾದ, ಬಹಳ ಮಹತ್ವವಾದಂತಹ ಒಂದು ಘಟ್ಟದಲ್ಲಿ ಬರುತ್ತದೆ. ಕೇವಲ ಈ ಹಾಡಿನಲ್ಲಿ ಮಾತ್ರ ರಾಗಿಣಿ ಪರದೆ ಮೇಲೆ ಇರುತ್ತಾರೆ. ಅವರದು ಕೇವಲ ಗೆಸ್ಟ್ ಅಪಿಯರೆನ್ಸ್ ಅಷ್ಟೇ. ಈ ಹಾಡು ತುಂಬಾ ಸೊಗಸಾಗಿ ಮೂಡಿಬಂದಿದೆ. ನಮ್ಮ ನಿರೀಕ್ಷೆಗಿಂತಲೂ ಚೆನ್ನಾಗಿ ಬಂದಿದೆ.

    ಮೊದಲು ರಾಗಿಣಿ ಎಂದು ಅಂದುಕೊಂಡಿರಲಿಲ್ಲ. ಯಾಕೆಂದರೆ ಮುಂಚೂಣಿಯಲ್ಲಿರು ನಾಯಕಿ ಅವರು. ನಾಯಕ ನಟನಾಗಿ ಬದಲಾಗಿರುವ ನನ್ನಂತಹ ಒಬ್ಬ ಕಾಮಿಡಿಯನ್ ಗೆ ಹಾಗೂ ಹೊಸ ತಂಡಕ್ಕೆ ಬೆಂಬಲ ನೀಡಬೇಕು ಎಂಬ ಉದ್ದೇಶದಿಂದ ಸ್ವತಃ ಅವರೇ ಈ ಹಾಡಿಗೆ ಒಪ್ಪಿಗೆ ನೀಡಿದರು. ಇಮ್ರಾನ್ ಸರ್ದಾರಿಯಾ, ನಂದಕಿಶೋರ್ ಹಾಗೂ ನನ್ನ ಪ್ರೀತಿಗೆ ಮಣಿದು ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.

    6. ತಮ್ಮ ಚಿತ್ರಗಳಲ್ಲಿ ಕಾಮಿಡಿಗೆ ಇದ್ದಷ್ಟೇ ಒತ್ತು ಹಾಡುಗಳಿಗೆ ನೀಡಲಾಗುತ್ತಿದೆಯಲ್ಲಾ?
    ಇದಕ್ಕೆ ಸಂಗೀತದ ಮೇಲಿರುವ ಆಸಕ್ತಿಯೇ ಕಾರಣ. ಈ ಚಿತ್ರದ ಹಾಡುಗಳ ಅಷ್ಟೂ ಕ್ರೆಡಿಟ್ ಅರ್ಜುನ್ ಜನ್ಯ ಅವರಿಗೇ ಸಲ್ಲುತ್ತದೆ. ಹಾಗೆಯೇ ನಮ್ಮ ಡೈರೆಕ್ಟರ್ ಅವರಿಗೂ ಸೇರುತ್ತದೆ. ಈ ಚಿತ್ರದ ಹಾಡುಗಳ ವಿಚಾರದಲ್ಲಿ ಆಡಿಯೋ ಕಂಪನಿ ಮಾಲೀಕರಾದ ಮೋಹನ್ ಅವರಿಗೆ ತುಂಬಾ ತುಂಬಾ ಜವಾಬ್ದಾರಿ ಇತ್ತು. ಈ ತರಹದ ಒಂದು ತಂಡ ಸೇರಿಕೊಂಡಾಗ ಸಹಜವಾಗಿಯೇ ಈ ರೀತಿಯ ಸೊಗಸಾದ ಹಾಡುಗಳು ಮೂಡಿಬಂದಿವೆ. ಇದರಲ್ಲಿ ನನ್ನ ಕಾಂಟ್ರಿಬ್ಯೂಷನ್ ಏನೇನೂ ಇಲ್ಲ. ಇದೆಲ್ಲಾ ಸಂಗೀತ ನಿರ್ದೇಶಕ, ಗೀತಸಾಹಿತಿ ಯೋಗರಾಜ್ ಭಟ್, ವಿಜಯ ಪ್ರಕಾಶ್ ಅವರ ಭಾವಪೂರ್ವಕ ಕಂಠ ಇರಬಹುದು, ಅರ್ಜುನ್ ಜನ್ಯಾ ಅವರ ಸಂಗೀತ, ನಮ್ಮ ನಿರ್ದೇಶಕರು, ನಿರ್ಮಾಪಕರು ಪಾಲಷ್ಟೇ ಇರುವುದು. ಇದರಲ್ಲಿ ನನ್ನ ಪಾಲು ಏನೇನೂ ಇಲ್ಲ. ಈ ವಿಚಾರದಲ್ಲಿ ನಾನು ವೆರಿ ವೆರಿ ಲಕ್ಕಿ ಎಂದಷ್ಟೇ ಹೇಳುತ್ತೇನೆ.

    7. ಖಾಲಿ ಕ್ವಾಟ್ರು ಬಾಟ್ಲಿಯಂತೆ ಲೈಫು ಹಾಡಿನ ಮೇಕಿಂಗ್ ಹೇಗಿತ್ತು?
    ಈ ಹಾಡಿನ ಮೇಕಿಂಗ್ ಅಂತೂ ತುಂಬಾನೆ ಕೆಲಸ ತೆಗೆಸಿತು. ಈ ಹಾಡು ಪ್ರಮುಖವಾದಂತಹ ಸನ್ನಿವೇಶದಲ್ಲಿ ಬರುತ್ತದೆ. ಈ ಹಾಡಿನಲ್ಲಿ ನನ್ನ ಜೊತೆ ಸಾಧುಕೋಕಿಲ ಇರುತ್ತಾರೆ. ಈ ಹಾಡಿಗೆ ಸಮಂಜಸವಾಗಿರುವಂತಹ ಒಂದು ಸನ್ನಿವೇಶವದು. ಸಾಧುಕೋಕಿಲಾ ಅವರ ಜೊತೆಗೆ ಮೊಟ್ಟ ಮೊದಲ ಸಲ ನಾನು ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.

    ಇಡೀ ಹಾಡಿನಲ್ಲಿ ನಾವಿಬ್ಬರೇ ಕಾಣಿಸಿಕೊಳ್ಳುತ್ತೇವೆ. ಪ್ಯಾರ್ ಗೆ ಆಗ್ಬಿಟ್ಟೈತೆ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದ ಮುರಳಿ ಮಾಸ್ಟರ್ ಈ ಹಾಡನ್ನು ನೃತ್ಯ ಸಂಯೋಜನೆ ಮಾಡಿದ್ದಾರೆ. ಒಂದು ಸೆಟ್ ನಲ್ಲಿ ಈ ಹಾಡನ್ನು ಮಾಡಿದೆವು. ಈ ಹಾಡನ್ನು ಚಿತ್ರೀಕರಿಸಬೇಕಾದರೆ ಸಿಕ್ಕಾಪಟ್ಟೆ ಗೊಂದಲ ಇತ್ತು. ಒಂದಷ್ಟು ವರ್ಷನ್ ಗಳನ್ನು ಮಾಡಿದ ಬಳಿಕ ಕೊನೆಯದಾಗಿ ಓಕೆ ಮಾಡಿದೆವು. ಈ ಮಟ್ಟದಲ್ಲಿ ಹಿಟ್ ಆಗುತ್ತದೆ ಎಂದು ನಾವು ಯಾರೂ ಭಾವಿಸಿರಲಿಲ್ಲ. ಒಂದು ಒಳ್ಳೆಯ ಹಾಡು ಆಗುತ್ತದೆ ಎಂದು ಎಣಿಸಿದ್ದೆವು. ಆದರೆ ಈ ಮಟ್ಟದಲ್ಲಿ ಬ್ಲಾಸ್ಟಿಂಗ್ ಹಿಟ್ ಆಗುತ್ತದೆ ಎಂಬುದು ನಮ್ಮ ಕಲ್ಪನೆಯಲ್ಲೇ ಇರಲಿಲ್ಲ.

    8. ಮುಂದೆ ಯಾವ ರೀತಿಯ ಪಾತ್ರಗಳನ್ನು ಮಾಡಲು ಇಚ್ಛಿಸುತ್ತೀರಾ?
    ಇದರಲ್ಲಿ ನನ್ನ ಆಯ್ಕೆ ಎಂಬುದು ತುಂಬಾ ಕಡಿಮೆ. ಆ ರೀತಿಯ ಪಾತ್ರಗಳು ಬರಬೇಕು ಅಷ್ಟೇ. ಒಳ್ಳೊಳ್ಳೆಯ ಕಥೆಗಳು ಬರಬೇಕು. ಸದ್ಯಕ್ಕೆ ಜಯಲಲಿತಾ ಎಂಬ ಒಂದು ಚಿತ್ರ ಮಾಡುತ್ತಿದ್ದೇನೆ. ಈಗಾಗಲೆ ಅದರ ಫೋಟೋಗಳು ಬಿಡುಗಡೆಯಾಗಿದ್ದು ಒಂದಷ್ಟು ಚರ್ಚೆಗೂ ಗ್ರಾಸವಾಗಿವೆ. ಇಡೀ ಚಿತ್ರದಲ್ಲಿ ಭಾಗಶಃ ನಾನು ಅದೇ ಗೆಟಪ್ ನಲ್ಲಿರುತ್ತೇನೆ. ಚಿತ್ರದ ಆ ಪಾತ್ರವೇ ಹೀರೋ ಹಿರೋಯಿನ್ ಎಲ್ಲವೂ. ಇದರಲ್ಲಿ ಮುಖ್ಯ ಗೆಟಪ್ ಸಹ ಇರುತ್ತದೆ. ಆದರೆ ಇಡೀ ಚಿತ್ರವನ್ನು ಆವರಿಸಿಕೊಳ್ಳುವ ಪಾತ್ರವದು. ನನ್ನ ಮಟ್ಟಿಗೆ ತೀರಾ ವಿಭಿನ್ನವಾದ ರೋಲ್. ಇದೂ ಅಷ್ಟೇ ಕಾಮಿಡಿ ಚಿತ್ರ. ನನ್ನ ಆಯ್ಕೆ, ಒತ್ತು ಕಾಮಿಡಿಗೇ ಇರುತ್ತದೆ.

    <ul id="pagination-digg"><li class="previous"><a href="/news/kannada-comedy-actor-sharan-interview-076818.html">« Previous</a>

    English summary
    Read an interview with Kannada comedy Star Sharan. "I am still the Sharan who entertained with my comic timing. I am not a hero smashing cars and jumping from building to building. I am a hero who can make people laugh". The film Victory stars actor Sharan and actress Asmita Sood in lead roles. This is the second movie in which actor Sharan will be seen playing the lead role.
    Thursday, August 22, 2013, 19:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X