twitter
    For Quick Alerts
    ALLOW NOTIFICATIONS  
    For Daily Alerts

    ವಿಕ್ರಮ್ ಸಂಭಾವನೆಯ ಅರ್ಧ ಮೊತ್ತ ಸೇರಿದ್ದು ಯಾರಿಗೆ?

    By ಜೇಮ್ಸ್ ಮಾರ್ಟಿನ್
    |

    ಶಂಕರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ವಿಮರ್ಶಕರ ಹಾಗೂ ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆ ನಡುವೆಯೂ ತಕ್ಕ ಮಟ್ಟಿಗೆ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ವಾರದಲ್ಲೇ ನೂರು ಕೋಟಿ ರು ಗಳಿಕೆ ಕ್ಲಬ್ ಸೇರಿದೆ. ಈ ನಡುವೆ ಈ ಚಿತ್ರದ ವಿಭಿನ್ನ ಪಾತ್ರಕ್ಕಾಗಿ ವಿಕ್ರಮ್ ಪಡೆದುಕೊಂಡ ಸಂಭಾವನೆಯಲ್ಲಿ ಅರ್ಧದಷ್ಟು ಮೊತ್ತವನ್ನು ವಿಶೇಷ ಚೇತನ ಮಕ್ಕಳಿಗೆ ಹಂಚಿದ್ದಾರೆ.

    ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದ ವಿಕ್ರಮ್ ಅವರು ಚಿತ್ರರಂಗಕ್ಕೆ ಬಂದು ಸ್ಟಾರ್ ಮೇಲೆ ತಮಗೆ ಸಿಗುವ ಸಂಭಾವನೆಯ ಸ್ವಲ್ಪ ಪಾಲು ಈ ರೀತಿ ಸದ್ವಿನಿಯೋಗ ಮಾಡುತ್ತಾ ಬಂದಿದ್ದಾರೆ. ಇದೇ ರೀತಿ ಐ ಚಿತ್ರಕ್ಕೆ ಪಡೆದ ಸಂಭಾವನೆಯ ಅರ್ಧಪಾಲು ವಿದ್ಯಾ ಸುಧಾ ಶಾಲೆಯ ಮಕ್ಕಳಿಗೆ ಸೇರಿದೆ ಎಂಬ ಸುದ್ದಿಯಿದೆ. ['ಐ' ಗೆ ವಿಮರ್ಶಕರ ಮಿಶ್ರ ಪ್ರತಿಕ್ರಿಯೆ]

    ವಿಶೇಷ ಚೇತನ ಮಕ್ಕಳನ್ನು ಹೊಂದಿರುವ ಈ ಶಾಲೆಯ ರಾಯಭಾರಿಯಾಗಿ ವಿಕ್ರಮ್ ಹಲವಾರು ಬಾರಿ ಸಹಾಯಾರ್ಥ ಶೋಗಳನ್ನು ನಡೆಸಿದ್ದು ಎಲ್ಲರಿಗೂ ಗೊತ್ತೇ ಇದೆ. ಮೂರು ವರ್ಷಗಳ ಕಾಲ ಒಂದೇ ಚಿತ್ರಕ್ಕಾಗಿ ಬಾಡಿ ಟೋನ್ ಮಾಡಿ, ವಿಶಿಷ್ಟ ಗೆಟ್ ಅಪ್ ನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಂದ ಸೈ ಎನಿಸಿಕೊಂಡಿರುವ ವಿಕ್ರಮ್ ಅವರ ದಾನ ಧರ್ಮದ ಬಗ್ಗೆ ಮುಂದೆ ಓದಿ...['ಐ' ವಿಮರ್ಶೆ: ತೆರೆಯ ಮೇಲೆ ಹೊಸ ವಿಕ್ರಮ]

    ಐ ಚಿತ್ರದ ಗಳಿಕೆ ಹೇಗಿದೆ?

    ಐ ಚಿತ್ರದ ಗಳಿಕೆ ಹೇಗಿದೆ?

    ತಮಿಳು ಭಾಷೆಯಲ್ಲಿ ಅಲ್ಲದೆ ತೆಲುಗಿಗೆ ಡಬ್ ಆದ ಚಿತ್ರ ಮೊದಲ ದಿನವೇ 9 ಕೋಟಿ ರು ಗಳಿಸಿತ್ತು. ಹಿಂದಿ ಭಾಷೆಯಲ್ಲಿ 6 ಕೋಟಿ ರು ಗಳಿಸಿದೆ. ಡಬ್ಬಿಂಗ್ ಆದ ಚಿತ್ರ ಗಳಿಕೆಯಲ್ಲಿ ಇದು ದೊಡ್ಡ ಮೊತ್ತ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ವಿಶ್ವದೆಲ್ಲೆಡೆಯ ಕಲೆಕ್ಷನ್ ಲೆಕ್ಕ ಹಾಕಿದರೆ ಮೊದಲ ವಾರದ ಒಟ್ಟು ಗಳಿಕೆ 100 ಕೋಟಿ ರು ದಾಟುತ್ತದೆ.

    ಚಿಯಾನ್ ದೇಣಿಗೆ ನೀಡುತ್ತಿರುವುದು ಇದೆ ಮೊದಲಲ್ಲ

    ಚಿಯಾನ್ ದೇಣಿಗೆ ನೀಡುತ್ತಿರುವುದು ಇದೆ ಮೊದಲಲ್ಲ

    ಮೊದಲೇ ಹೇಳಿದಂತೆ ಚಿತ್ರರಂಗದಲ್ಲಿ ಸಾಕಷ್ಟು ಸೈಕಲ್ ಹೊಡೆದು ಮೇಲಕ್ಕೆ ಬಂದಿರುವ ವಿಕ್ರಮ್ ಅವರಿಗೆ ತಾನೊಬ್ಬ ಸೆಲೆಬ್ರಿಟಿ ಎಂಬ ಅಹಂ ಇಲ್ಲ. ಬಹುಕಾಲದಿಂದಲೂ ಕಾಶಿ ಐ ಕೇರ್ ಜೊತೆ ಸಂಪರ್ಕ ಹೊಂದಿರುವ ವಿಕ್ರಮ್ ಅವರು ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಹಣ ಒದಗಿಸುತ್ತಿದ್ದಾರೆ.

    ಫ್ಯಾನ್ ಕ್ಲಬ್ ಗಳು ಹಾಗೂ ವಿಕ್ರಮ್ ಫೌಂಡೇಶನ್ ಬಡವ, ನಿರ್ಗತಿಕರ ಶಿಕ್ಷಣ, ಪುನರ್ವಸತಿ ಮುಖ್ಯವಾಗಿ ನೈಸರ್ಗಿಕ ವಿಕೋಪಕ್ಕೆ ತುತ್ತಾದ ಸಂತ್ರಸ್ತರಿಗೆ ನೆರವಾಗುತ್ತಿದೆ

    ಸಾಮಾಜಿಕ ಕಳಕಳಿಯುಳ್ಳ ನಟ

    ಸಾಮಾಜಿಕ ಕಳಕಳಿಯುಳ್ಳ ನಟ

    ಸಾಮಾಜಿಕ ಕಳಕಳಿಯುಳ್ಳ ನಟ ಎಂದೇ ಗುರುತಿಸಿಕೊಂಡಿರುವ ವಿಕ್ರಮ್ ಬಡತನ ನಿರ್ಮೂಲನೆ, ಮಹಿಳಾ ಮತ್ತು ಯುವ ಸಮುದಾಯ ಸಬಲೀಕರಣಕ್ಕಾಗಿ

    ಕರ್ಕಾ ಕಸಾದಾರ ಎಂಬ ಯೋಜನೆ ಮೂಲಕ ಸ್ಕೂಲ್ ಹಾಗೂ ಕಾಲೇಜುಗೆ ಅರ್ಧದಲ್ಲೇ ಗುಡ್ ಬೈ ಹೇಳಿದವರನ್ನು ಗುರುತಿಸಿ ಶಿಕ್ಷಣ ಒದಗಿಸುತ್ತಿದ್ದಾರೆ.

    ಇತ್ತೀಚೆಗೆ ಕೈಗೊಂಡ ಅಭಿಯಾನ

    ಇತ್ತೀಚೆಗೆ ಕೈಗೊಂಡ ಅಭಿಯಾನ

    ನೀರು ಉಳಿಸಿ ಉತ್ತಮ ಜೀವನ ಸಾಗಿಸಿ ಎಂಬ ಅಭಿಯಾನಕ್ಕೆ ದನಿ ನೀಡಿರುವ ವಿಕ್ರಮ್.. ಈ ಬಗ್ಗೆ ಪ್ರಚಾರ ನಡೆಸಿದ್ದಾರೆ.

    English summary
    According to the latest buzz, Chiyaan Vikram, whose latest release I(Ai) is setting box office on fire , has donated half of his salary earned from I to a school. It is not clear if his contributions were directed to Vidya Sudha, a school that houses special kids for which he is a brand ambassador or a charity school for poor.
    Wednesday, January 21, 2015, 18:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X