twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಕ್ಕೆ ಗ್ಯಾಂಗ್ ಸ್ಟರ್ ಆಗಿ ವಿನೋದ್ ಕಾಂಬ್ಳಿ ಎಂಟ್ರಿ

    By Rajendra
    |

    ಮಾಜಿ ಕ್ರಿಕೆಟಿಗ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಕುಚಿಕು ಗೆಳೆಯ ವಿನೋದ್ ಕಾಂಬ್ಳಿ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. 'ಬೆತ್ತನಗೆರೆ' ಚಿತ್ರದಲ್ಲಿ ಅವರದು ಗ್ಯಾಂಗ್ ಸ್ಟರ್ ಪಾತ್ರ. ಈಗಾಗಲೆ ಅವರು ಮೊದಲ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

    'ಸಿಲ್ಕ್ ಸಖತ್ ಹಾಟ್' ಚಿತ್ರದ ಅಕ್ಷಯ್ ಹಾಗೂ 'ದಿಲ್ ವಾಲಾ' ಸುಮಂತ್ ಶೈಲೇಂದ್ರ ಅವರ ಕಾಂಬಿನೇಷನಲ್ಲಿ ಬರುತ್ತಿರುವ ಚಿತ್ರ ಇದಾಗಿದೆ. ಚಿತ್ರದಲ್ಲಿ ಪ್ರಮುಖ ಆಕರ್ಷಣೆಯಾಗಿ ಕಾಂಬ್ಳಿ ಅವರು ಪಾತ್ರ ನಿಲ್ಲಲಿದೆ ಎನ್ನುತ್ತದೆ ಚಿತ್ರತಂಡ. ['ಬೆತ್ತನಗೆರೆ' ಎ ರಾ ಸ್ಟೋರಿ ಮೊದಲನೇ ಹಂತ ಫಿನಿಷ್!]

    ಕುಖ್ಯಾತ ರೌಡಿ ಬೆತ್ತನಗೆರೆ ಮಂಜನ ಪಾತ್ರವನ್ನು ಕಾಂಬ್ಳಿ ಪೋಷಿಸಿದ್ದಾರಂತೆ. ಇದೊಂದು ಭೂಗತಜಗತ್ತಿಗೆ ಸಂಬಂಧಿಸಿದ ಕಥೆ. ಈ ರೌಡಿಗಳ ಲೋಕಕ್ಕೆ ಯುವಜನರು ಬರಲೇಬಾರದು ಎಂಬ ಸಂದೇಶ ಚಿತ್ರದಲ್ಲಿದೆ.

    ಈ ಚಿತ್ರದ ನಿರ್ದೇಶಕರು ಬೆತ್ತೆನೆಗೆರೆ ಸ್ಥಳದ ವ್ಯಕ್ತಿ ಮೋಹನ್ ಗೌಡ ಬಿ.ಜಿ. 'ಬೆತ್ತೆನೆಗೆರೆ' ಸಿನಮಾಗೆ ಕಥೆ ಬರೆದು, ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. 'ಬೆತ್ತನಗೆರೆ' ಚಿತ್ರದ ಅಡಿಬರಹ 'ಎ ರಾ ಸ್ಟೋರಿ!' ಕ್ರೈಂ ಲೋಕದಲ್ಲಿ ತಿಳಿದ ವ್ಯಕ್ತಿ ಬೆತ್ತೆನೆಗೆರೆ ಸೀನ. ಸೀನನ ಸಹೋದರ ಮೋಹನ್ ಅವರೇ ಸಿನೆಮಾ ನಿರ್ದೇಶನದ ಜೊತೆಗೆ ಒಳಗಿನ ಕೆಲವು ಮನಮಿಡಿಯುಯ ಅಂಶಗಳನ್ನು ಹೇಳಲು ಹೊರಟಿದ್ದಾರೆ.

    ಇನ್ನು ಕಾಂಬ್ಳಿ ಅವರ ವಿಚಾರಕ್ಕೆ ಬಂದರೆ ದಕ್ಷಿಣ ಭಾರತದಲ್ಲಿ ಅವರು ಅಭಿನಯಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ಹಿಂದಿಯಲ್ಲಿ ಅನರ್ಥ್ ಹಾಗೂ ಪಲ್ ಪಲ್ ದಿಲ್ ಕೆ ಸಾಥ್ ಎಂಬ ಎರಡು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. (ಒನ್ಇಂಡಿಯಾ ಕನ್ನಡ)

    English summary
    Vinod Kambli is all set to make his debut in South movies through a Kannada movie 'Bettanagere,' apparently in the role of a gangster. The Kannada movie features new faces Akshay and Sumanth Shailendra as protagonists.
    Tuesday, June 10, 2014, 13:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X