twitter
    For Quick Alerts
    ALLOW NOTIFICATIONS  
    For Daily Alerts

    ನಟ ಟೈಗರ್ ಪ್ರಭಾಕರ್ 'ಕ್ರಿಶ್ಚಿಯನ್' ಆಗಿದ್ದೇ ತಪ್ಪಾಯ್ತಾ.?

    By Harshitha
    |

    ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದ, ಕಲಾಸೇವೆಗಾಗಿಯೇ ತಮ್ಮ ಇಡೀ ಜೀವನವನ್ನ ಮುಡಿಪಾಗಿಟ್ಟ ಕಲಾಕೇಸರಿ, ನಟ 'ಟೈಗರ್' ಪ್ರಭಾಕರ್. ನಾಯಕನಿಗೆ ಪ್ರತಿ ನಾಯಕನಾಗಿ, ಕ್ರೂರ, ಭೀಭತ್ಸ ರಸಗಳಿಗೆ ಅಧಿನಾಯಕನಾಗಿ ಮೆರೆದ ಪ್ರಭಾಕರ್, ಕನ್ನಡ ಚಿತ್ರರಂಗದ ಫಾರೆವರ್ ಟೈಗರ್! ಅಂತಹ ಹೆಬ್ಬುಲಿ ಚಿತ್ರರಂಗದಲ್ಲಿ ನಾಲ್ಕು ದಶಕಗಳ ಕಾಲ ಆರ್ಭಟಿಸಿತು.

    ಸಾಮಾನ್ಯ ಫೈಟರ್ ಆಗಿ ಬಣ್ಣದ ಬದುಕಿಗೆ ಕಾಲಿಟ್ಟ 'ಟೈಗರ್' ಪ್ರಭಾಕರ್, ಸ್ಟಂಟ್ ಮಾಸ್ಟರ್ ಆಗಿ ಬಡ್ತಿ ಪಡೆದು, ನಂತ್ರ ವಿಲನ್ ಆಗಿ, ಹೀರೋ ಆಗಿ ಮುಂದೆ ನಿರ್ದೇಶಕನಾಗಿ ಬೆಳೆದದ್ದೇ ಅಚ್ಚರಿಯ ಕಥೆ.

    ಕನ್ನಡ ಮಾತ್ರವಲ್ಲದೇ, ತೆಲುಗು ಮತ್ತು ತಮಿಳಿನಲ್ಲಿ ಬಹು ಬೇಡಿಕೆ ಕಂಡುಕೊಂಡಿದ್ದ 'ಟೈಗರ್' ಪ್ರಭಾಕರ್, ಕನ್ನಡ ಚಿತ್ರರಂಗದಲ್ಲಿ ಜಾತಿ ರಾಜಕಾರಣಕ್ಕೆ ಒಳಗಾಗಿದ್ರಾ? ಪ್ರಭಾಕರ್ ಅವರಿಗೆ ಅವಕಾಶಗಳು ಕೈತಪ್ಪಿತ್ತಾ.? ಸ್ಯಾಂಡಲ್ ವುಡ್ ನಲ್ಲಿ ಪ್ರಭಾಕರ್ ತುಳಿತಕ್ಕೆ ಒಳಗಾಗಿದ್ರಾ?

    ಈ ಪ್ರಶ್ನೆ ಮೂಡುವುದಕ್ಕೆ ಕಾರಣ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಅವರು ಬಹಿರಂಗವಾಗಿ ಆಡಿರುವ ಮಾತುಗಳು. ''ನನ್ನ ತಂದೆಯ ಜಾತಿ ನೋಡಿ, ಕನ್ನಡ ಚಿತ್ರರಂಗದವರು ಅವಕಾಶವನ್ನ ತಪ್ಪಿಸುತ್ತಿದ್ದರು'' ಅಂತ ವಿನೋದ್ ಪ್ರಭಾಕರ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ. ಮುಂದೆ ಓದಿ.....

    ''ನನ್ನ ತಂದೆ ತುಳಿತಕ್ಕೆ ಒಳಗಾಗಿದ್ದರು..!''

    ''ನನ್ನ ತಂದೆ ತುಳಿತಕ್ಕೆ ಒಳಗಾಗಿದ್ದರು..!''

    ನಾಲ್ಕು ದಶಕಗಳ ಕಾಲ ತೆರೆಮೇಲೆ ಹುಲಿಯಂತೆ ಘರ್ಜಿಸಿದ 'ಟೈಗರ್' ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ ತುಳಿತಕ್ಕೆ ಒಳಗಾಗಿದ್ದರು. ಹಾಗಂತ ಖುದ್ದು ಅವರ ಪುತ್ರ ವಿನೋದ್ ಪ್ರಭಾಕರ್ ಬಾಯ್ಬಿಟ್ಟಿದ್ದಾರೆ. ''ಚಿತ್ರರಂಗದ ಜನ ನಮ್ಮ ತಂದೆಯನ್ನ ತುಳಿಯುತ್ತಲೇ ಬಂದರು. ತುಳಿತಕ್ಕೊಳಗಾಗಿಯೇ ಬೆಳೆದವರು ಅವರು'' ಅಂತ ಅಭಿಮಾನಿಗಳ ಸಮ್ಮುಖದಲ್ಲಿ ವಿನೋದ್ ಪ್ರಭಾಕರ್ ಹೇಳಿದ್ರು. [ಹುಲಿ ಮರಿ ವಿನೋದ್ ಪ್ರಭಾಕರ್ ಸಂದರ್ಶನ!]

    ''ಪ್ರಭಾಕರ್ 'ಕ್ರಿಶ್ಚಿಯನ್'...ಬೇಡ...ಕಟ್ ಮಾಡಿ..!''

    ''ಪ್ರಭಾಕರ್ 'ಕ್ರಿಶ್ಚಿಯನ್'...ಬೇಡ...ಕಟ್ ಮಾಡಿ..!''

    ''ಕೆಲವೊಂದು ಕಡೆ ಸ್ಕ್ರಿಪ್ಟಿಂಗ್ ಆಗುತ್ತಿರುವಾಗ, ಈ ಪಾತ್ರ ಇಂಥವರಿಗೆ ಅಂತ ಸೆಲೆಕ್ಟ್ ಮಾಡುವಾಗ, ಪ್ರಭಾಕರ್ ಕ್ರಿಶ್ಚಿಯನ್. ಅವರು ಬೇಡ ಕಟ್ ಮಾಡಿ ಅಂತ ಹೇಳೋರು. ಜಾತಿ ನೋಡಿ ಚಾನ್ಸ್ ಕೊಡ್ತಿದ್ರು'' ಅಂತ ವಿನೋದ್ ಪ್ರಭಾಕರ್ ಹೇಳಿರುವುದು ಹೊಸ ವಿವಾದಕ್ಕೆ ನಾಂದಿ ಹಾಡಿದೆ.

    ''ಶಿಲುಬೆಯನ್ನ ತೆಗೆಯುವಂತೆ ಹೇಳುತ್ತಿದ್ದರು''

    ''ಶಿಲುಬೆಯನ್ನ ತೆಗೆಯುವಂತೆ ಹೇಳುತ್ತಿದ್ದರು''

    ''ಒಂದೊಂದು ಸಿನಿಮಾದಲ್ಲಿ ಶಿಲುಬೆ ಹಾಕೊಂಡಿರುವಾಗ ಅದನ್ನ ತೆಗೆಸುತ್ತಿದ್ದರು. ಆದ್ರೂ, ಎಷ್ಟೋ ಸಿನಿಮಾದಲ್ಲಿ ಶಿಲುಬೆ ಹಾಕಿಕೊಂಡೇ ಅಭಿನಯಿಸಿದ್ದಾರೆ. ಅದೇ ಶಿಲುಬೆಯನ್ನ ಈಗ ನಾನು ಧರಿಸಿದ್ದೀನಿ'' ಅಂತ ಕನ್ನಡ ಚಿತ್ರರಂಗದಲ್ಲಿ ನಡೆದ ಜಾತಿ ರಾಜಕಾರಣದ ಬಗ್ಗೆ ವಿನೋದ್ ಪ್ರಭಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ''ಒಂದು ಸ್ಟೇಟ್ ಅವಾರ್ಡ್ ಕೂಡ ಸಿಕ್ಕಿಲ್ಲ''

    ''ಒಂದು ಸ್ಟೇಟ್ ಅವಾರ್ಡ್ ಕೂಡ ಸಿಕ್ಕಿಲ್ಲ''

    ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಪ್ರಭಾಕರ್ ಗೆ ಕರ್ನಾಟಕ ರಾಜ್ಯದಿಂದ ಒಂದು ಪ್ರಶಸ್ತಿ ಕೂಡ ಲಭಿಸಿಲ್ಲ. ಈ ಬಗ್ಗೆ ಕೂಡ ಬೇಸರ ಹೊರಹಾಕಿದ ಪ್ರಭಾಕರ್ ಪುತ್ರ ''ಅಪ್ಪ ತುಂಬಾ ಸಿನಿಮಾಗಳನ್ನ ಮಾಡಿದ್ದಾರೆ. ಒಂದು ಅವಾರ್ಡ್ ಕೂಡ ಬಂದಿಲ್ಲ ಅವ್ರಿಗೆ'' ಅಂತ ಹೇಳಿದ್ರು.

    ''ಅಪ್ಪನಂತೆ ನನ್ನನ್ನೂ ತುಳಿಯುತ್ತಿದ್ದಾರೆ''

    ''ಅಪ್ಪನಂತೆ ನನ್ನನ್ನೂ ತುಳಿಯುತ್ತಿದ್ದಾರೆ''

    ''ಕನ್ನಡ ಚಿತ್ರರಂಗದಲ್ಲಿ ನನ್ನ ತಂದೆಯನ್ನ ತುಳಿದಂತೆ ನನ್ನನ್ನೂ ತುಳಿಯುತ್ತಿದ್ದಾರೆ. ಆದ್ರೆ, ಅಭಿಮಾನಿಗಳ ಬೆಂಬಲ ಇರುವವರೆಗೂ ಯಾರೂ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. 'ಬೆಳ್ಳಿ' ಸಿನಿಮಾ ಫಸ್ಟ್ ಡೇ ಫಸ್ಟ್ ಶೋನಲ್ಲಿ ನನ್ನ ಎಂಟ್ರಿ ಆದಾಗ ಅಭಿಮಾನಿಗಳ ಶಿಳ್ಳೆ-ಚಪ್ಪಾಳೆ ನೋಡಿ ನನ್ನ ಕಣ್ಣಲ್ಲಿ ನೀರು ಬಂತು'' - ವಿನೋದ್ ಪ್ರಭಾಕರ್ [ವಿಷ್ಣುವರ್ಧನ್ ಪ್ರಶ್ನೆಗೆ ಜಯಮಾಲಾ ನೇರ ಉತ್ತರ]

    ಅಭಿಮಾನಿಗಳ ಸಂಘ ಉದ್ಘಾಟನೆಯಲ್ಲಿ ಅಳಲು

    ಅಭಿಮಾನಿಗಳ ಸಂಘ ಉದ್ಘಾಟನೆಯಲ್ಲಿ ಅಳಲು

    ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಇಷ್ಟೆಲ್ಲಾ ಅಳಲನ್ನ ತೋಡಿಕೊಂಡಿದ್ದು ಮಂಡ್ಯದಲ್ಲಿ. ಮಾರ್ಚ್ 30 ರಂದು ಮಂಡ್ಯದ ಕಲಾಮಂದಿರದಲ್ಲಿ ನಡೆದ 'ಟೈಗರ್ ಪ್ರಭಾಕರ್ ಅಭಿಮಾನಿಗಳ ಸಂಘದ ಉದ್ಘಾಟನಾ ಕಾರ್ಯಕ್ರಮ'ದಲ್ಲಿ ಅತಿಥಿಯಾಗಿ ಭಾಗವಹಿಸಿ ವಿನೋದ್ ಪ್ರಭಾಕರ್ ತಮ್ಮ ತಂದೆಗಾದ ನೋವನ್ನ ಹೊರಹಾಕಿದರು.

    English summary
    Kannada Actor Vinod Prabhakar makes a controversial statement on Caste Politics in Sandalwood. The Actor blamed Kannada Industry for making his father, Tiger Prabhakar to lose opportunity because he was a Christian. Vinod Prabhakar revealed this during the inauguration of 'Tiger Prabhakar Fan Club' in Mandya on March 30th.
    Thursday, April 2, 2015, 13:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X