»   » ಮೃತ ವಿಷ್ಣು ಅಭಿಮಾನಿಗೆ ಭಾರತಿ ಅವರಿಂದ 25 ಸಾವಿರ ಪರಿಹಾರ

ಮೃತ ವಿಷ್ಣು ಅಭಿಮಾನಿಗೆ ಭಾರತಿ ಅವರಿಂದ 25 ಸಾವಿರ ಪರಿಹಾರ

ವಿಷ್ಣುವರ್ಧನ್ ಅವರ ಅಭಿಮಾನಿಯೊಬ್ಬರು ನಾಗರಹಾವು ಸಿನಿಮಾ ನೋಡುವಾಗ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ

Written by: ಭರತ್ ಕುಮಾರ್
Subscribe to Filmibeat Kannada

ವಿಷ್ಣುವರ್ಧನ್ ಅವರ ನಾಗರಹಾವು ಚಿತ್ರದ ವೀಕ್ಷಣೆ ವೇಳೆ ಹೃದಯಾಘಾತದಿಂದ ಸಾವೀಗಿಡಾಗಿದ್ದ ವಿಷ್ಣು ಅಭಿಮಾನಿ ಸುಬ್ರಮಣಿ ಕುಟುಂಬಕ್ಕೆ ನಟಿ ಭಾರತಿ ವಿಷ್ಣುವರ್ಧನ್ ಅವರು 25 ಸಾವಿರ ರೂಪಾಯಿ ಸಹಾಯ ಧನ ನೀಡಿದ್ದಾರೆ.

ನಿನ್ನೆ (ಅಕ್ಟೋಬರ್ 14) ಜಯನಗರದ ಗರುಡ ಮಾಲ್ ನ 'ಸ್ವಾಗತ್' ಚಿತ್ರಮಂದಿರದಲ್ಲಿ 'ನಾಗರಹಾವು' ಸಿನಿಮಾ ನೋಡುತ್ತಿದ್ದ ವೇಳೆ 34 ವರ್ಷದ ಸುಬ್ರಮಣಿ ಆಲಿಯಾಸ್ ರಾಜು ಬಾಯ್ ಎಂಬುವವರು ಮೃತಪಟ್ಟಿದ್ದರು.


ಕಳೆದ ರಾತ್ರಿ ಸುಬ್ರಮಣಿ ಅವರ ಸಾವಿನ ವಿಷಯ ತಿಳಿದ ವಿಷ್ಣುವರ್ಧನ್ ಅವರ ಅಳಿಯ, ನಟ ಅನಿರುದ್ಧ್, ಸುಬ್ರಮಣಿಯವರ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದ್ದರು.


Vishnu Fan Died Of A Heart Attack

ಇಂದು ನಟಿ ಭಾರತಿ ವಿಷ್ಣುವರ್ಧನ್ ಸುಬ್ರಮಣಿ ಅವರ ಮನೆಗೆ ಭೇಟಿ ನೀಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸುಬ್ರಮಣಿ ಕುಟುಂಬದವರಿಗೆ 25 ಸಾವಿರ ರೂಪಾಯಿ ಚೆಕ್ ನೀಡಿ ಸಾಂತ್ವನ ಹೇಳಿದರು.


ವಿಷ್ಣು ವರ್ಧನ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಸುಬ್ರಮಣಿ ನಿನ್ನೆ ಮಧ್ಯಾಹ್ನ ಸ್ವಾಗತ್ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುತ್ತಿದ್ದರು. ಚಿತ್ರದ ಕ್ಲೈಮ್ಯಾಕ್ಸನ್ ನಲ್ಲಿ ಗ್ರಾಫಿಕ್ಸ್ ಬಳಸಿ ವಿಷ್ಣುವರ್ಧನ್ ಅವರನ್ನ ತೆರೆ ಮೇಲೆ ತರಲಾಗಿದೆ.['ನಾಗರಹಾವಿ'ನ ಬುಸುಗುಡುವಿಕೆಗೆ ವಿಮರ್ಶಕರ ಪ್ರತಿಕ್ರಿಯೆ ಏನು?]


Vishnu Fan Died Of A Heart Attack

ಈ ದೃಶ್ಯ ಚಿತ್ರದ ಕೊನೆಯ 10 ನಿಮಿಷ ಮೂಡುತ್ತದೆ. ಈ ವೇಳೆ ವಿಷ್ಣುವರ್ಧನ್ ಅವರು ತೆರೆ ಮೇಲೆ ಕಾಣಿಸಿಕೊಂಡಾಗ ಭಾವೋದ್ವೇಗಕ್ಕೆ ಒಳಗಾದ ಸುಬ್ರಮಣಿಗೆ ಎದೆ ನೋವು ಕಾಣಿಸಿಕೊಂಡು ಸ್ಥಳದಲ್ಲೆ ಕುಸಿದು ಬಿದ್ದಿದ್ದಾರೆ.['ನಾಗರಹಾವು' ವಿಮರ್ಶೆ: ಡಾ.ವಿಷ್ಣುವರ್ಧನ್ 201 ನಾಟೌಟ್ ]


ಕೂಡಲೆ ಪ್ರೇಕ್ಷಕರು ಆಸ್ವತ್ರೆಗೆ ರವಾನಿಸಲು ಮುಂದಾಗಿದ್ದಾರೆ. ಆದರೆ ಮಾರ್ಗ ಮಧ್ಯೆ ಸುಬ್ರಮಣಿ ಅಸುನೀಗಿದ್ದರು. ಸುಬ್ರಮಣಿ ಜಯನಗರ ಸೌಂತ್ ಎಂಡ್ ಸರ್ಕಲ್ ವೃತ್ತದ ಶಾಂತಿ ಚಿತ್ರಮಂದಿರದ ಹಿಂಭಾಗದಲ್ಲಿ ವಾಸವಾಗಿದ್ದರು. ಇಂದು ಅವರ ಅಂತ್ಯ ಸಂಸ್ಕಾರ ನಡೆಯಲಿದೆ.

English summary
yesterday (october 14) a diehard fan of vishnuvardhan, got so emotional that, he got heart attack and died, when seeing nagarahavu movie at swagath theater in garuda mall jayanagar.
Please Wait while comments are loading...

Kannada Photos

Go to : More Photos