twitter
    For Quick Alerts
    ALLOW NOTIFICATIONS  
    For Daily Alerts

    2014ರ ನಂ.1 ನಿರ್ದೇಶಕ ಯಾರು? ವೋಟ್ ಮಾಡಿ

    By ಜೇಮ್ಸ್ ಮಾರ್ಟಿನ್
    |

    2014ರ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ವೈವಿಧ್ಯಮಯ ಚಿತ್ರಗಳು ಬಂದರೂ ಸ್ವಮೇಕ್ ಗಳ ಸಂಖ್ಯೆ ಕಡಿಮೆಯಾಗಿ ಮತ್ತೆ ರಿಮೇಕ್ ರೀಮಿಕ್ಸ್ ಚಿತ್ರಗಳ ಹಾವಳಿಯೇ ಹೆಚ್ಚಾಯ್ತು. ಚಿತ್ರ ಇರಲಿ ಹಿಟ್ ಆಗಲಿ, ಬಿಡಲಿ ಬಾಕ್ಸಾಫೀಸ್ ನಲ್ಲಿ ತೋಪೆದ್ದು ಹೋಗಲಿ ಹೇಳಿಕೊಳ್ಳೋಕೆ ಒಂದಷ್ಟು ಯುವ ನಿರ್ದೇಶಕರು ಈ ವರ್ಷ ಸದ್ದು ಮಾಡಿದ್ದು ಒಳ್ಳೆ ಬೆಳವಣಿಗೆ

    ಚಿತ್ರ ಹಿಟ್ ಆದ ತಕ್ಷಣ ಅದರ ಕ್ರೆಡಿಟ್ ಸಾಮಾನ್ಯವಾಗಿ ಹೀರೋ ಅಥವಾ ಹೀರೋಯಿನ್ ಗೆ ಸೇರುತ್ತದೆ. ಆದರೆ, ಕಳೆದ ವರ್ಷದಿಂದ ಟ್ರೆಂಡ್ ಬದಲಾಗಿದ್ದು, ನಿರ್ದೇಶಕ ಯಾರು ಎಂದು ನೋಡಿಕೊಂಡು ಥೇಟರ್ ಗೆ ಜನ ಬರುವಷ್ಟರ ಮಟ್ಟಿಗೆ ನಮ್ಮ ಪ್ರೇಕ್ಷಕರು ಅಪ್ಡೇಟ್ ಆಗಿದ್ದಾರೆ.

    2014ರಲ್ಲಿ ಕಳೆದ ವರ್ಷದಂತೆ ಈ ವರ್ಷವೂ 110 ಚಿತ್ರಗಳ ಗಡಿ ದಾಟಲಾಗಿದೆ. ಗೆದ್ದ ಚಿತ್ರಗಳ ಸಂಖ್ಯೆ 20ಕ್ಕೂ ಕೂಡಾ ದಾಟುವುದಿಲ್ಲ. ಅದರೆ, ಚಿತ್ರ ಗೆದ್ದ ಮಾತ್ರಕ್ಕೆ ನಿರ್ದೇಶಕನೂ ಗೆದ್ದ ಎನ್ನಲು ಬರುವುದಿಲ್ಲ. ದಯಾಳ್ ಪದ್ಮನಾಭನ್ ಅವರ ಘರ್ಷಣೆ ಮೂಲಕ ಆರಂಭವಾಗಿ ವರ್ಷ 'ಕೋಲಾಹಲ' ದೊಂದಿಗೆ ಕೊನೆಗೊಳ್ಳುತ್ತದೆ. [ಉತ್ತಮ ನಿರ್ದೇಶಕನಿಗೆ ಮತ ಹಾಕಲು ಕ್ಲಿಕ್ ಮಾಡಿ]

    ಪ್ರೇಕ್ಷಕರಿಗೆ ಕುತೂಹಲ ಕೆರಳಿಸಿದ ಚಿತ್ರ ನೀಡಿದವರು: ದಯಾಳ್ ಪದ್ಮನಾಭ (ಹಗ್ಗದ ಕೊನೆ), ಸುನಿ (ಬಹುಪರಾಕ್), ರಕ್ಷಿತ್ ಶೆಟ್ಟಿ (ಉಳಿದವರು ಕಂಡಂತೆ), ಪ್ರಶಾಂತ್ ನೀಲ್ (ಉಗ್ರಂ), ಪ್ರಕಾಶ್ ರೈ (ಒಗ್ಗರಣೆ), ಜೇಕಬ್ ವರ್ಗೀಸ್ (ಸವಾರಿ 2), ಪಿ ಶೇಷಾದ್ರಿ (ಡಿಸೆಂಬರ್ 1), ಹೇಮಂತ್ ಹೆಗ್ಡೆ (ನಿಂಬೆಹುಳಿ), ಓಂ ಪ್ರಕಾಶ್ ರಾವ್ (ಚಂದ್ರಲೇಖ), ಪಿ ವಾಸು (ದೃಶ್ಯ), ಆರ್ ಚಂದ್ರು (ಬ್ರಹ್ಮ). ಕೃಷ್ಣ (ಗಜಕೇಸರಿ), ಪ್ರೀತಂ ಗುಬ್ಬಿ(ದಿಲ್ ರಂಗೀಲ)

    ಗಲ್ಲಾ ಪೆಟ್ಟಿಗೆಯಲ್ಲಿ ಸೋತ ಚಿತ್ರದ ನಿರ್ದೇಶಕನನ್ನು ಕೂಡಾ ಮೆಚ್ಚಿದ ಉದಾಹರಣೆಗಳಿವೆ. ಒಟ್ಟಾರೆ 2014ರಲ್ಲಿ ನಿಮ್ಮ ಮೆಚ್ಚಿನ ನಿರ್ದೇಶಕ ಯಾರು ಎಂಬುದನ್ನು ತಪ್ಪದೇ ತಿಳಿಸಿ...

    ಕೃಷ್ಣ ಗಜಕೇಸರಿ

    ಕೃಷ್ಣ ಗಜಕೇಸರಿ

    ನಿರ್ದೇಶಕ ಯೋಗರಾಜ ಭಟ್ಟರ ಗರಡಿಯ ಛಾಯಾಗ್ರಾಹಕ ಕೃಷ್ಣ ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಸೈ ಎನಿಸಿಕೊಂಡರು. ಕೃಷ್ಣ ಅವರಿಗೆ ವಿಕ್ಟರಿ ಯಂಥ ಹಿಟ್ ಸಿನಿಮಾ ನೀಡಿರುವ ತರುಣ್ ಸುಧೀರ್ ಸಹಾಯಕರಾಗಿದ್ದರು. ಯೋಗರಾಜ ಭಟ್ ಅವರು ಕಥೆಗೆ ಸತ್ಯ ಹೆಗ್ಡೆ ಕ್ಯಾಮೆರಾ ವರ್ಕ್ ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ಟರ ಸಾಹಿತ್ಯಕ್ಕೆ. ರವಿವರ್ಮ ಸಾಹಸ, ಹರಿಕೃಷ್ಣ ಸಂಗೀತ ಎಲ್ಲವನ್ನೂ ಕೃಷ್ಣ ಸಮರ್ಥವಾಗಿ ನಿಭಾಯಿಸಿದರು.

    ಪ್ರಶಾಂತ್ ನೀಲ್ ಉಗ್ರಂ

    ಪ್ರಶಾಂತ್ ನೀಲ್ ಉಗ್ರಂ

    ಟ್ರೇಲರ್ ಮೂಲಕವೇ ಜನಮನ ಸೆಳೆದ ಉಗ್ರಂ ಚಿತ್ರ ಗಾಂಧಿನಗರದ ಸಿದ್ದಸೂತ್ರಗಳನ್ನು ಬದಿಗೊತ್ತಿ ತಾಂತ್ರಿಕತೆ, ವಿಭಿನ್ನ ನಿರೂಪಣೆ, ಪಂಚಿಂಗ್ ಡೈಲಾಗ್ ಮೂಲಕ ಚಿತ್ರ ಯಶಸ್ಸು ಗಳಿಸಿತು. ಹಣಗಳಿಕೆಗಿಂತ ಶ್ರೀಮುರಳಿಗೆ ಬೇಕಿದ್ದ ಬಿಗ್ ಬ್ರೇಕ್ ನೀಡಿದ ಚಿತ್ರ ಉಗ್ರಂ.

    ರಕ್ಷಿತ್ ಶೆಟ್ಟಿ ಉಳಿದವರು ಕಂಡಂತೆ

    ರಕ್ಷಿತ್ ಶೆಟ್ಟಿ ಉಳಿದವರು ಕಂಡಂತೆ

    ಚಿತ್ರಕಥೆಗೆ ತಕ್ಕ ಲೊಕೇಷನ್, ಭಾಷೆ(ತುಳು, ಕುಂದ್ರಾಪ, ಮಂಗಳೂರು ಕನ್ನಡ) ಬಳಕೆ, ನೇರ ರೀರೆಕಾರ್ಡಿಂಗ್ ಮಾಡಿದ ಪ್ರಪ್ರಥಮ ಕನ್ನಡ ಚಿತ್ರ, ಅದ್ಭುತ ಗ್ರಾಫಿಕ್, ಹಿನ್ನೆಲೆ ಸಂಗೀತ ಪಡೆದಿದ್ದ ಈ ಚಿತ್ರದ ಕಥಾ ನಿರೂಪಣೆ ಶೈಲಿ ವಿಭಿನ್ನವಾಗಿತ್ತು.

    ಆದರೆ, ಆಪ್ತವಾಗಿತ್ತು. ಆದರೆ, ಕರ್ನಾಟಕದ ಎಲ್ಲಾ ಭಾಗದ ಜನರನ್ನು ತಲುಪುವಲ್ಲಿ ಹೇಗೂ ವಂಚಿತವಾಯಿತು. ಚಿತ್ರ ಗಳಿಕೆಯಲ್ಲಿ ಸೋತರೂ ಕ್ಲಾಸಿಕ್ ಎನಿಸಿಕೊಂಡಿತು. ಗಾಂಧಿನಗರಕ್ಕೆ ಒಬ್ಬ ನಿರ್ದೇಶಕ ಸಿಕ್ಕಿದ್ದಂತಾಯಿತು.
    ಜೇಕಬ್ ವರ್ಗೀಸ್ ಸವಾರಿ 2

    ಜೇಕಬ್ ವರ್ಗೀಸ್ ಸವಾರಿ 2

    ಜೇಕಬ್ ವರ್ಗೀಸ್ ಅವರ ಈ ಹಿಂದಿನ 'ಸವಾರಿ' ಚಿತ್ರ ತೆಲುಗಿನ 'ಗಮ್ಯಂ' ರೀಮೇಕ್ ಆದರೂ ತನ್ನದೇ ಆದಂತಹ ನಿರೂಪಣಾ ಶೈಲಿ, ನಿರ್ವಹಣೆ ಹಾಗೂ ಪರಿಣಾಮಕಾರಿ ಕ್ಲೈಮ್ಯಾಕ್ಸ್ ನಿಂದ ಎಲ್ಲರ ಮನಗೆದ್ದಿತ್ತು.

    ಈ ಬಾರಿಯೂ ಅವರು ತಮ್ಮ 'ಸವಾರಿ 2' ಚಿತ್ರದ ಮೇಲೆ ಅದೇ ರೀತಿಯ ಹಿಡಿತ ಸಾಧಿಸಿರುವುದನ್ನು ಕಾಣಬಹುದು. ಚಿತ್ರದ ಮೊದಲರ್ಧದಲ್ಲಿ ಕಥೆ ವೇಗ ಪಡೆದುಕೊಳ್ಳದಿದ್ದರೂ ಪ್ರೇಕ್ಷಕರಿಗೆ ಖಂಡಿತ ಬೋರಂತೂ ಆಗಲಿಲ್ಲ. ಚಿತ್ರ ಗೆಲ್ಲಲಿಲ್ಲ. ಅದರೆ, ಜೇಕಬ್ ನಿರ್ದೇಶನದಲ್ಲಿ ಅಂಥಾ ಹುಳುಕೇನು ಕಾಣಲಿಲ್ಲ.
    ಸುನಿ ಬಹುಪರಾಕ್

    ಸುನಿ ಬಹುಪರಾಕ್

    ಶ್ರೀನಗರ ಕಿಟ್ಟಿ ಹೇಳುವಂತೆ ಮೂರು ಶೇಡ್ ಗಳುಳ್ಳ ಪಾತ್ರ ನನ್ನದು. ಇಪ್ಪತ್ತು, ಇಪ್ಪತ್ತೈದರಿಂದ ಹಿಡಿದು ಎಪ್ಪತ್ತೈದರವರೆಗಿನ ಜರ್ನಿ ನೋಡಬಹುದು. ಬದುಕಿನಲ್ಲಿ ಪ್ರತಿಯೊಂದನ್ನೂ ಗೆಲ್ಲಲೇಬೇಕು. ಹೇಗಾದರೂ ಆಗಲಿ ಗೆಲ್ಲಲೇಬೇಕು ಎಂಬ ಉದ್ದೇಶ ಇಟ್ಟುಕೊಂಡಿರುವಂತಹ ಪಾತ್ರ.ಈ ರೀತಿಯ ಅಂತರಾರ್ಥ, ಸನ್ನಿವೇಶ ಇರುವಂತಹ ಚಿತ್ರ ಬಂದಿಲ್ಲ. ಅದರೆ, ಚಿತ್ರದ ನಿರೂಪಣೆಗೇ ಜನರಿಗೆ ಹೆವಿ ಎನಿಸಿದ ಕಾರಣ ಚಿತ್ರ ಗೆಲ್ಲಲಿಲ್ಲ. ಹಾಡುಗಳು ಹೆಚ್ಚು ಸದ್ದು ಮಾಡಲಿಲ್ಲ.

    ಡಿಸೆಂಬರ್ 1 ಪಿ ಶೇಷಾದ್ರಿ

    ಡಿಸೆಂಬರ್ 1 ಪಿ ಶೇಷಾದ್ರಿ

    ಉತ್ತರ ಕರ್ನಾಟಕದ ಭಾಗದಲ್ಲಿ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ ಯೋಜನೆ ಜಾರಿಗೊಂಡಾಗ ನಡೆದ ಒಂದು ಪ್ರಸಂಗದ ಬಗ್ಗೆ ದಿನಪತ್ರಿಕೆಯೊಂದರಲ್ಲಿ ವರದಿ ಬಂದಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರದ ಕಥೆ ಹೆಣೆಯಲಾಗಿದೆ. ರೊಟ್ಟಿ ದೇವಕ್ಕ ಎಂಬ ಹೆಣ್ಮಗಳು ತನ್ನ ಸಂಸಾರ ನಿಭಾಯಿಸುವ ಬಗೆ, ಸಿಎಂ ಗ್ರಾಮ ವಾಸ್ತವ್ಯಕ್ಕೂ ಮುನ್ನ ಹಾಗೂ ನಂತರದ ಪರಿಸ್ಥಿತಿ, ಇಡೀ ಗ್ರಾಮ ಈ ಕುಟುಂಬವನ್ನು ಕಾಣುವ ರೀತಿಯನ್ನು ಚಿತ್ರಿಸಲು ಯತ್ನಿಸಲಾಗಿದೆ.

    English summary
    Here, we are giving an opportunity for our readers to choose the best Kannada movie director of the year 2014 from the list. Follow the slideshow to see the list and vote for your favourite director.
    Friday, December 26, 2014, 18:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X